ಶಿವನ ಪವಾಡಗಳ ಬಗ್ಗೆ ತಪ್ಪದೇ ತಿಳಿಯಿರಿ

0
530

ಸರಿಸುಮಾರು ಸಾವಿರದ ಇನ್ನೂರು ವರ್ಷ ಹಳೆಯ ದೇವಾಲಯ ಇಲ್ಲಿದೆ. ಇಲ್ಲಿರುವ ಈ ದೇವಾಲಯ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ಅಂದರೆ ಸಾವಿರದ ಇನ್ನೂರು ವರ್ಷಗಳ ಹಿಂದೆ ನಿರ್ಮಾಣವಾಗಿದೆ ಎಂಬುದು ಇತಿಹಾಸ ಹೇಳುತ್ತದೆ. ಈ ದೇವಾಲಯದ ಪಕ್ಕದಲ್ಲಿಯೇ ಒಂದು ವಿಶಾಲವಾದ ಕೆರೆಯಿದೆ. ಅದಕ್ಕಾಗಿ ಈ ದೇವಾಲಯವನ್ನು ಕಟ್ಟೆ ಬಸವೇಶ್ವರ ದೇವಸ್ಥಾನ ಎಂದು ಕರೆಯುತ್ತಾರೆ. ಅಂದಿನ ಕಲ್ಯಾಣ ಚಾಲುಕ್ಯರ ಕಾಲದಲ್ಲೇ ಈ ದೇವಾಲಯವು ಅತ್ಯಂತ ಪ್ರಸಿದ್ಧಿಯನ್ನು ಹೊಂದಿತ್ತು. ಈಗಲೂ ಸಹ ಚಾಲುಕ್ಯರ ವಾಸ್ತು ಶೈಲಿಯಲ್ಲಿ ಈ ದೇವಾಲಯ ಇದೆ. ಈ ದೇವಾಲಯದಲ್ಲಿರುವ ಬಾಗಿಲುಗಳಾಗಿರಲಿ ಅಥವಾ ಇಲ್ಲಿನ ಸ್ತಂಭಗಳು ಮತ್ತು ಇಲ್ಲಿನ ಗೋಡೆ ಶಿಲ್ಪಗಳಿಂದ ಕೂಡಿದ್ದು ನಿಜಕ್ಕೂ ಪ್ರವಾಸಿಗರ ಕಣ್ಮನ ಸೆಳೆಯುತ್ತಿದೆ.

ಈ ಒಂದು ಮುಖಮಂಟಪ ಸುಖವಾಸಿ ಭುವನೇಶ್ವರಿ ಅಂತರಾಳ ಹಾಗು ಗರ್ಭಗೃಹ ಗಳನ್ನೊಳಗೊಂಡ ಈ ದೇವಾಲಯದ ಕಂಬಗಳಲ್ಲಿ ಸುಂದರವಾದ ಕಲಾತ್ಮಕ ಕೆತ್ತನೆಗಳಿವೆ. ಕಂಬದಲ್ಲಿರುವ ಕೆತ್ತನೆಗಳು ನಮ್ಮ ಮನಸೂರೆಗೊಳ್ಳುತವೆ. ಈ ದೇವಾಲಯವನ್ನು ಸದ್ಯಕ್ಕೆ ಪ್ರಾಚ್ಯ ವಸ್ತುಶಾಸ್ತ್ರ ಇಲಾಖೆ ಒಂದು ಸುರಸಂರಕ್ಷಿತ ಇಲಾಖೆ ಎಂದು ಘೋಷಣೆ ಮಾಡಿದೆ. ಈ ದೇಗುಲವನ್ನು ನೋಡಲು ಪ್ರತಿನಿತ್ಯ ನೂರಾರು ಜನ ಆಗಮಿಸುತ್ತಾರೆ. ಹಾಗೆಯೇ ದೇಗುಲದ ಸುತ್ತಮುತ್ತ ಉದ್ಯಾನವನವನ್ನು ಕೂಡ ಸ್ಥಾಪನೆ ಮಾಡಿದ್ದಾರೆ. ಈ ದೇವಾಲಯದಲ್ಲಿ ಪ್ರತಿವರ್ಷ ಜನವರಿ ಫೆಬ್ರವರಿ ತಿಂಗಳಿನಲ್ಲಿ ಬ್ರಹ್ಮರಥೋತ್ಸವವೂ ಕೂಡ ನಡೆಯುತ್ತದೆ. ಇಲ್ಲಿನ ಜನಕ್ಕೆ ಇದು ಕಟ್ಟೆ ಬಸವೇಶ್ವರ ರಥೋತ್ಸವ ಎಂದೇ ಖ್ಯಾತಿ ಪಡೆದಿದೆ. ಇಲ್ಲಿರುವ ಕಲ್ಲೇಶ್ವರ ಅಂದರೆ ಸಾಕ್ಷಾತ್ ಶಿವನು ಅಂದಿನ ಚಾಲುಕ್ಯರ ಕಾಲದಲ್ಲಿ ಸಾಕಷ್ಟು ಪ್ರಸಿದ್ಧಿಯನ್ನು ಹೊಂದಿದ್ದನು. ಅಂದಿನ ಚಾಲುಕ್ಯರ ಕಾಲದಲ್ಲಿ ಇದ್ದ ಸ್ಥಳೀಯ ಜನರಿಗೆ ಈ ಕಲ್ಲೇಶ್ವರ ಆರಾಧ್ಯ ದೈವವಾಗಿದ್ದನು ಎಂದು ಇತಿಹಾಸ ಪುಟಗಳಲ್ಲಿ ನಾವು ಕಾಣಬಹುದು. ಹಾಗೆ ಇಲ್ಲಿರುವ ಕೆಲವು ಶಾಸನಗಳಲ್ಲಿ ನಮಗೆ ಅಂದಿನ ಗತವೈಭವವನ್ನು ಇಂದು ಸಾರುತ್ತಿದೆ. ಸರಿಸುಮಾರು ಸಾವಿರದ ಇನ್ನೂರು ವರ್ಷಗಳಿಂದ ಈ ದೇಗುಲ ತನ್ನದೇ ಆದ ವಿಶೇಷ ಶೈಲಿಯನ್ನು ಕಾಪಾಡಿಕೊಂಡು ಬಂದಿದೆ.

ನಿಜಕ್ಕೂ ಇಂತಹ ದೇವಾಲಯಗಳು ನಮ್ಮ ರಾಜ್ಯದಲ್ಲಿರುವುದು ಅದನ್ನು ನಮ್ಮ ಕರ್ನಾಟಕ ಸರಕಾರ ನಿರ್ವಹಣೆ ಮಾಡುತ್ತಿರುವುದು ಖುಷಿಯ ವಿಚಾರ ಆಗಿದೆ. ಈ ರೀತಿಯ ಅನೇಕ ದೇವಾಲಯಗಳು ಇರಬಹುದು. ಆದರೆ ಒಂದೊಂದು ದೇವಾಲಯದಲ್ಲಿಯೂ ಕೂಡ ಒಂದೊಂದು ವಿಶೇಷ ಶಕ್ತಿಯಿದೆ ಹಾಗು ವಿಶೇಷವಾದ ಆಕರ್ಷಣೆಗಳಿಂದ ಕೂಡಿಕೊಂಡಿದೆ. ನಮ್ಮ ಕನ್ನಡ ನಾಡಿನಲ್ಲಿ ಲಕ್ಷಾಂತರ ದೇವಾಲಯಗಳು ಇರಬಹುದು ಆದರೆ ಅದೆಲ್ಲವೂ ನಿನ್ನೆ ಮೊನ್ನೆ ಕಟ್ಟಿದ್ದು ಆಗಿರಬಹುದು. ಆದರೆ ಸರಿಸುಮಾರು ಸಾವಿರಾರು ವರ್ಷಗಳಿಂದ ತನ್ನದೇ ಆದ ಶೈಲಿಯನ್ನು ಹಾಗು ತನ್ನದೇ ಆದ ಶಕ್ತಿಯನ್ನು ಹೊಂದಿರುವಂತ ಕೆಲವೇ ಕೆಲವು ದೇವಾಲಯಗಳಲ್ಲಿ ಇದು ಕೂಡ ಒಂದು ಎಂದರೆ ತಪ್ಪಾಗಲಾರದು. ಈ ದೇವಾಲಯಕ್ಕೆ ಹೋಗುವ ಮಾರ್ಗ ಬಳ್ಳಾರಿ ಜಿಲ್ಲೆಯ ಹಡಗಲಿಯ ನೈರುತ್ಯಕ್ಕೆ ಹತ್ತಾರು ಕಿಲೋಮೀಟರ್ ದೂರದಲ್ಲಿರುವ ಊರೇ ಹಿರೇ ಹಡಗಲಿ. ಈ ಊರಿನಲ್ಲಿರುವ ಅತ್ಯದ್ಭುತವಾದ ದೇವಾಲಯವೇ ಕಟ್ಟೆ ಬಸವೇಶ್ವರ ದೇವಸ್ಥಾನ. ನೀವು ಯಾವಾಗಲಾದರೂ ಬಳ್ಳಾರಿ ಜಿಲ್ಲೆಯ ಸಮೀಪಕ್ಕೆ ಹೋದರೆ ಖಂಡಿತಾ ಈ ದೇವಾಲಯಕ್ಕೆ ಹೋಗಿ ಬನ್ನಿ ಹಾಗೆ ಅಲ್ಲಿರುವ ಕಲ್ಲೇಶ್ವರ ಸ್ವಾಮಿಯ ಆಶೀರ್ವಾದವನ್ನು ಪಡೆಯಿರಿ. ಖಂಡಿತಾ ನಿಮಗೆ ಜೀವನದಲ್ಲಿ ಶುಭವಾಗಲಿದೆ. ನಿಮ್ಮ ಜೀವನದಲ್ಲಿ ಆರ್ಥಿಕ ಸಮಸ್ಯೆಗಳು ಇದ್ಯ? ತುಂಬಾ ಸಮಸ್ಯೆಗಳಲ್ಲಿ ಇದ್ದೀರಾ ಹಾಗಾದ್ರೆ ಒಮ್ಮೆ ಕರೆ ಮಾಡಿರಿ ಪರಿಹಾರ ನಿಶ್ಚಿತವಾಗಿ ದೊರೆಯಲಿದೆ. 96111 90 444

LEAVE A REPLY

Please enter your comment!
Please enter your name here