ಹೀಗೆ ಮಾಡಿದ್ರೆ ಮೈಗ್ರೈನ್ ಸಮಸ್ಯೆ ಯಾವತ್ತು ಬರಲ್ಲ

0
559

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಒತ್ತಡ ಕೆಲಸ ಜವಾಬ್ದಾರಿ ಸುತ್ತಾಟ ಜಂಜಾಟ ಇವುಗಳಿಂದ ತಲೆ ನೋವು ಎಂಬುದು ಹೆಚ್ಚುತ್ತಿದೆ ಈ ತಲೆನೋವು ಬರಲು ಇಂತಿದ್ದೆ ಕಾರಣ ಇದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ ಅದರೆ ಒಮ್ಮೆ ತಲೆನೋವು ಕಾಣಿಸಿಕೊಂಡರೆ ಅದರಿಂದ ಹೊರ ಬರುವುದು ಕೂಡ ಅಷ್ಟು ಸುಲಭವಲ್ಲ ಅದರಲ್ಲೂ ಮೈಗ್ರೇನ್ ತಲೆನೋವು ಬಂದರೆ ಆ ನೋವನ್ನು ಹೇಳುವುದಕ್ಕೆ ಸಾಧ್ಯವಿಲ್ಲ. ಕೆಲವರಿಗೆ ಈ ಮೈಗ್ರೇನ್ ತಲೆನೋವು ಬಂದರೆ ಅದು ಗುಣ ಆಗಲು ಸುಮಾರು 3 ರಿಂದ 4 ದಿನ ಆದರೂ ಬೇಕಾಗುತ್ತದೆ ಜೊತೆಗೆ ಇದಕ್ಕೆ ಮಾತ್ರೆಗಳ ಸೇವನೆ ಮಾಡಿದರೆ ಅದರಿಂದ ಅಡ್ಡ ಪರಿಣಾಮ ಕೂಡ ಉಂಟಾಗುವ ಸಾಧ್ಯತೆ ಇರುತ್ತದೆ ಜೊತೆಗೆ ಈ ಮಾತ್ರೆಗಳನ್ನು ಸೇವಿಸಿದರೆ ಕ್ಷಣಕ್ಕೆ ತಲೆನೋವು ಗುಣವಾಗಬಹುದು ಆದರೆ ಮತ್ತೆ ಅದು ಕಾಣಿಸಿಕೊಳ್ಳುತ್ತದೆ.

ಅದಕ್ಕಾಗಿ ಈ ಮೈಗ್ರೇನ್ ತಲೆನೋವನ್ನು ಬೇಗ ಗುಣ ಪಡಿಸಿಕೊಳ್ಳಲು ಸುಲಭ ನೈಸರ್ಗಿಕ ಔಷಧಿಯನ್ನು ಬಳಸಿದರೆ ಸುಲಭವಾಗಿ ಮೈಗ್ರೇನ್ ತಲೆನೋವನ್ನು ಗುಣಪಡಿಸಿಕೊಳ್ಳಬಹುದು ಹಾಗಾದರೆ ಅದು ಹೇಗೆ ಎಂದು ನೋಡೋಣ ಬನ್ನಿ. ನಿಂಬೆ ಹಣ್ಣು ಇದು ಹಲವಾರು ಸಮಸ್ಯೆಗಳಿಗೆ ರಾಮಬಾಣ ಅದಕ್ಕಾಗಿ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ಅರ್ಧಕ್ಕೆ ಕಟ್ ಮಾಡಿ ಒಂದು ಗ್ಲಾಸ್ ನೀರಿಗೆ ಹಿಂಡಿ ಅದಕ್ಕೆ ಸ್ವಲ್ಪ ಸೈನ್ಧವ ಲವಣವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಕುಡಿದರೆ ಮೈಗ್ರೇನ್ ತಲೆನೋವು ಬೇಗ ಗುಣ ಆಗುತ್ತದೆ.

ಸೈನ್ಧವ ಲವಣ ಇದು ಹಿಮಾಲಯದ ಸಮುದ್ರದ ಉಪ್ಪುಇದು ದೇಹದಲ್ಲಿನ ಕ್ಷಾರೀಯ ಅಂಶವನ್ನು ಸಮತೋಲನಗೊಳಿಸುತ್ತದೆ. ರೋಗ ನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಸ್ನಾಯು ಸೆಳೆತವನ್ನು ತಡೆಗಟ್ಟುತ್ತದೆ. ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ. ರಕ್ತದೊತ್ತಡವನ್ನು ಸ್ಥಿರಗೊಳಿಸುತ್ತದೆ. ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಪೋಷಕಾಂಶಗಳ ಹೀರಿಕೊಳ್ಳುವಿಕೆಗೆ ಸಹಾಯ ಮಾಡುತ್ತದೆ .ಹಾಗೆಯೇ ನಿಂಬೆ ರಸ ಇದರಲ್ಲಿ ಪೊಟ್ಯಾಸಿಯಮ್ ಹೆಚ್ಚಾಗಿರುತ್ತದೆ ಇದರಲ್ಲಿ ಇರುವ ಅಗತ್ಯ ಖನಿಜವು ಒತ್ತಡಕ್ಕೆ ಸಂಬಂಧಿಸಿದ ತಲೆನೋವನ್ನು ಕಡಿಮೆ ಮಾಡುತ್ತದೆ. ಮೈಗ್ರೇನ್ ಸಂಭವಿಸುವುದಕ್ಕೆ ಪ್ರಮುಖ ಕಾರಣಗಳಲ್ಲಿ ಪೊಟ್ಯಾಸಿಯಮ್ ಕೊರತೆ ಕೂಡ ಒಂದು ಆದ್ದರಿಂದ ಈ ಜ್ಯೂಸ್ ಅನ್ನು ಕುಡಿಯುವುದರಿಂದ ಮೈಗ್ರೇನ್ ತಲೆನೋವು ಬೇಗ ಗುಣ ಆಗುತ್ತದೆ.

ಹಸಿ ಶುಂಠಿಯ ಕಷಾಯವನ್ನು ಮಾಡಿಕೊಂಡು ಕುಡಿಯುವುದರಿಂದ ಕೂಡ ಮೈಗ್ರೇನ್ ತಲೆನೋವು ಗುಣ ಆಗುತ್ತದೆ. ಒಣದ್ರಾಕ್ಷಿ ಹಾಗೂ ಬಾದಾಮಿಯನ್ನು ರಾತ್ರಿ ಹೊತ್ತು ನೀರಿನಲ್ಲಿ ನೆನೆಹಾಕಿ ಅದನ್ನು ಬೆಳಿಗ್ಗೆ ಜಗಿದು ತಿನ್ನುವುದರಿಂದ ಕೂಡ ಮೈಗ್ರೇನ್ ತಲೆ ನೋವು ಬೇಗ ಗುಣ ಆಗುತ್ತದೆ. ಹಾಗಾಗಿ ಮೈಗ್ರೇನ್ ತಲೆನೋವು ಕಾಣಿಸಿಕೊಂಡ ತಕ್ಷಣ ಈ ಮೇಲಿನ ನೈಸರ್ಗಿಕ ಔಷಧಿಯನ್ನು ತೆಗೆದುಕೊಳ್ಳುವುದರಿಂದ ತುಂಬಾ ಸುಲಭವಾಗಿ ಮೈಗ್ರೇನ್ ತಲೆನೋವನ್ನು ಗುಣ ಪಡಿಸಿಕೊಳ್ಳಬಹುದು. ಮೈಗ್ರೈನ್ ಎಂಬುದು ನಾವೇ ತಂದುಕೊಳ್ಳುವ ಖಾಯಿಲೆ ಆಗಿದೆ ಆದರೆ ನಮ್ಮ ಜೀವನದಲ್ಲಿ ಒಂದಿಷ್ಟು ಬದಲಾವಣೆ ಮಾಡಿಕೊಂಡರೆ ಖಂಡಿತ ಇದನ್ನು ಶಾಶ್ವತವಾಗಿ ಹಂತ ಹಂತವಾಗಿ ಕಡಿಮೆ ಮಾಡಿಕೊಳ್ಳಲು ಸಾಧ್ಯ ಆಗಲಿದೆ. ಈ ಆರೋಗ್ಯ ಲೇಖನ ಮರೆಯದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗಲಿ.

LEAVE A REPLY

Please enter your comment!
Please enter your name here