ಹೊಟ್ಟೆಯಲ್ಲಿ ಜೀರ್ಣಕ್ರಿಯೆ ಸರಿ ಆಗಿ ಆಗಲಿಲ್ಲ ಅಂದ್ರೆ ವಾಂತಿ ತಲೆನೋವು ಹೊಟ್ಟೆ ನೋವು ವಾಕರಿಕೆ ಸಮಸ್ಯೆಗಳು ಬರುತ್ತೆ

0
622

ನಾವು ಸೇವಿಸಿದ ಆಹಾರ ಜೀರ್ಣ ಆಗುವುದು ಜೀರ್ಣಕ್ರಿಯೆ ನಾವು ಸೇವಿಸಿದ ಆಹಾರ ಸರಿಯಾಗಿ ಜೀರ್ಣ ಆಗಲಿಲ್ಲ ಎಂದರೆ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಈ ಜೀರ್ಣ ಕ್ರಿಯೆ ಹೆಚ್ಚಾಗಿ ಯಾವ ಸಂದರ್ಭದಲ್ಲಿ ಆಗುತ್ತದೆ ಎಂದರೆ ಸರಿಯಾದ ಆಹಾರ ಕ್ರಮ ಇಲ್ಲವಾಗಿರುವ ಸಂದರ್ಭದಲ್ಲಿ ಜೀರ್ಣಕ್ರಿಯೆಯಾ ಸಮಸ್ಯೆ ಹೆಚ್ಚುತ್ತದೆ ಈ ಜೀರ್ಣ ಕ್ರಿಯೆ ಸಮಸ್ಯೆ ಬಂದರೆ ವಾಂತಿ. ತಲೆನೋವು ಹೊಟ್ಟೆ ನೋವು ವಾಕರಿಕೆ ಸಮಸ್ಯೆಗಳು ಕಾಣಿಸುತ್ತದೆ. ನಾವು ಈ ಸಮಸ್ಯೆ ಬಂದರೆ ಹಾಗೇ ಬಿಡುವಂತಿಲ್ಲ ಈ ಲಕ್ಷಣಗಳು ನಮಗೆ ಕಂಡರೆ ಅದಕ್ಕೆ ಸಂಬಂಧಪಟ್ಟಂತೆ ಒಂದಿಷ್ಟು ಮನೆ ಮದ್ದು ಮಾಡಿಕೊಂಡರೆ ಸೂಕ್ತ ಇಲ್ಲವಾದಲ್ಲಿ ದೊಡ್ಡ ಪರಿಣಾಮ ಎದುರಿಸುವ ಸಮಯ ಬಂದರು ಬರಬಹುದು. ಸಾಕಷ್ಟು ಜನರು ಜೀರ್ಣಕ್ರಿಯೆ ಸರಿ ಆಗಲಿ ಎಂದು ಎಷ್ಟೋ ರೀತಿಯ ಮಾತ್ರೆಗಳು ತೆಗೆದುಕೊಳ್ಳುತ್ತಾರೆ ಆದರೆ ಆ ಮಾತ್ರೆಗಳು ನಿಜಕ್ಕೂ ಎಷ್ಟು ಸೇಫ್ ಅನ್ನೋದು ದೊಡ್ಡ ಪ್ರಶ್ನೆ.

ಈ ಜೀರ್ಣಕ್ರಿಯೆ ಸಮಸ್ಯೆಯನ್ನು ಗುಣ ಪಡಿಸಿಕೊಳ್ಳಲು ತುಂಬಾ ಸುಲಭ ವಿಧಾನ ಎಂದರೆ ಯೋಗಾಸಾನ ಈ ಯೋಗ ಎಂಬುದು ಮನುಷ್ಯನ ಹಲವಾರು ಸಮಸ್ಯೆಗಳಿಗೆ ಇದು ರಾಮ ಬಾಣ ಇದ್ದಂತೆ ಪ್ರತಿದಿನ ಯೋಗ ಮಾಡುವುದರಿಂದ ಹಲವಾರು ರೀತಿಯ ರೋಗ ರುಜಿನಗಳು. ಮನಸ್ಸಿನ ಒತ್ತಡಗಳು ಎಲ್ಲವನ್ನು ಕೂಡ ಸುಲಭವಾಗಿ ಗುಣಪಡಿಸಿಕೊಳ್ಳಲು ಒಳ್ಳೆಯ ವಿಧಾನ. ಹಾಗೆಯೆ ನಿತ್ಯ ಯೋಗವನ್ನು ಮಾಡುವುದರಿಂದ ಜೀರ್ಣಕ್ರಿಯೆ ಸಮಸ್ಯೆಯನ್ನು ಕೂಡ ದೂರ ಮಾಡಿಕೊಳ್ಳಬಹುದು ನಿತ್ಯ ಯೋಗ ಮಾಡುವುದರಿಂದ

ಮನಸ್ಸಿನಲ್ಲಿ ಉಂಟಾಗುವ ಒತ್ತಡವನ್ನು ಯೋಗ ನಿವಾರಿಸುತ್ತದೆ. ಯೋಗವು ಜೀರ್ಣಕಾರಿ ವ್ಯವಸ್ಥೆಯನ್ನು ಸರಿಪಡಿಸುತ್ತದೆ. ಜೀರ್ಣಕಾರಿ ಅಂಗಗಳ ಭಾಗಕ್ಕೆ ಮಸಾಜ್ ಮಾಡಿದರೆ ರಕ್ತದ ಹರಿವು ಮತ್ತು ಆಮ್ಲಜನಕದ ಸರಬರಾಜು ಹೆಚ್ಚುತ್ತದೆ. ಪಾರ್ಶ್ವತಾಡಾಸನ ಅರ್ಧಚಕ್ರಾಸನ ಪಾದಹಸ್ತಾಸನ ಕಟಿಚಕ್ರಾಸನ, ಬದ್ಧಕೋಣಾಸನ ಜಾನುಶೀರ್ಷಾಸನ ಮಂಡೂಕಾಸನ ಸುಪ್ತವೀರಾಸನ ಸರ್ವಾಂಗಾಸನ ಹಲಾಸನ ಶೀರ್ಷಾಸನ ವಕ್ರಾಸನ ಅರ್ಧಮತ್ಸ್ಯೇಂದ್ರಾಸನ, ಮತ್ಸ್ಯಾಸನ. ಬೆಳಿಗ್ಗೆ ಸೂರ್ಯನಮಸ್ಕಾರ ಮಾಡಬೇಕು ಜೊತೆಗೆ ಅಪಾನಮುದ್ರೆ ಪ್ರಾಣಮುದ್ರೆ ಚಿನ್ಮುದ್ರೆ ಮಾಡಬೇಕು

ಜೀರ್ಣ ಕ್ರಿಯೆ ಸಮಸ್ಯೆ ಆಗಬಾರದು ಎಂದರೆ ಆಹಾರವನ್ನು ಹಸಿವು ಆದಾಗ ಮಾತ್ರ ಸೇವಿಸಬೇಕು. ಆಹಾರ ಸೇವಿಸುವಾಗ ತುಟಿ ಮುಟ್ಟಿ ಆಹಾರವನ್ನು ಚೆನ್ನಾಗಿ ಜಗಿದು ಸೇವಿಸಬೇಕು ಆಹಾರದಲ್ಲಿ ಸೊಪ್ಪು ತರಕಾರಿಯನ್ನು ಹೆಚ್ಚು ಬಳಸಬೇಕು ಆಹಾರ ಸೇವಿಸಿ ಸ್ವಲ್ಪ ಸಮಯದ ನಂತರ ನೀರು ಕುಡಿಯಬೇಕು. ಮಲಬದ್ಧತೆ ಸಮಸ್ಯೆ ಇರುವವರು ಬೆಳಗ್ಗೆ ಏಳುವ ಎರಡು ಗಂಟೆ ಮುಂಚೆ ಎರಡರಿಂದ ನಾಲ್ಕು ಗ್ಲಾಸ್ ಶುದ್ಧ ನೀರನ್ನು ಕುಡಿಯಬೇಕು ಅದರಲ್ಲೂ ಸ್ವಲ್ಪ ಬಿಸಿ ಇರುವ ನೀರನ್ನು ಕುಡಿಯಬೇಕು. ಖಾಲಿ ಹೊಟ್ಟೆಗೆ ಮೇಲಿಂದ ನೀರು ಬಂದಾಗ ಕರುಳಿನಲ್ಲಿರುವ ಗಟ್ಟಿಯಾದ ಬೇಡದ ವಸ್ತುಗಳು ಮೃದುವಾಗಿ ಹೊರಗೆ ಬರಲು ಸಹಾಯವಾಗುತ್ತದೆ. ಹಾಗಾಗಿ ನಿತ್ಯ ಯೋಗ ಮಾಡುವ ಮೂಲಕ ಜೀರ್ಣ ಕ್ರಿಯೆಯ ಸಮಸ್ಯೆಯನ್ನು ಗುಣಪಡಿಸಿಕೊಳ್ಳಬಹುದು. ಈ ಲೇಖನ ಮರೆಯದೇ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here