ನಿಮ್ಮ ಎಲ್ಲ ರೀತಿಯ ಕಷ್ಟಗಳು ನಿವಾರಣೆ ಮಾಡುವ ನರಸಿಂಹ ಸ್ವಾಮಿ ಈ ಕ್ಷೇತ್ರದಲ್ಲಿದ್ದಾರೆ

0
852

ಈ ಕ್ಷೇತ್ರದಲ್ಲಿರುವ ನರಸಿಂಹಸ್ವಾಮಿ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಅಂದರೆ ಸಾವಿರದ ನೂರನೇ ದಶಕದಲ್ಲಿ ಹೊಯ್ಸಳರ ರಾಜ ವಿಷ್ಣುವರ್ಧನನು ಇಲ್ಲಿನ ಪ್ರಾಂತ್ಯವನ್ನು ಆಳುತ್ತಿದ್ದನು. ಆತನಿಗೆ ತಾನು ಮಲಗಿದ್ದಾಗ ತನ್ನ ಸ್ವಪ್ನದಲ್ಲಿ ಒಂದು ಅಶರೀರ ವಾಣಿ ಕೇಳಿ ಬಂತು. ಆ ಅಶರೀರ ವಾಣಿಯಲ್ಲಿ ಕಂಡ ನರಸಿಂಹ ದೇವರು ವಿಷ್ಣುವರ್ಧನನಿಗೆ ಒಂದು ವಿಚಾರವನ್ನು ತಿಳಿಸುತ್ತಾರೆ. ಅಹೋಬಿಲ ಕ್ಷೇತ್ರದಲ್ಲಿ ದುಷ್ಟನಾಗಿ ಎಲ್ಲರನ್ನೂ ಕಾಟಕೊಡುತ್ತಿದ್ದ ಹಿರಣ್ಯಕಶಿಪುವನ್ನು ನಾನು ಸಂಹಾರ ಮಾಡಿದ್ದೇನೆ ಹಾಗು ಈಗಿರುವ ನರಸಿಂಹ ಸ್ವಾಮಿಯು ನೆಲೆಸಿರುವ ಕದರೀಪುರದಲ್ಲಿ ತಾನು ಮೂರು ಗಳಿಗೆ ಕಾಲ ನೆಲಸಿದ್ದಾಗಿ ನರಸಿಂಹಸ್ವಾಮಿಗಳು ವಿಷ್ಣುವರ್ಧನ ಮಹಾರಾಜನ ಕನಸಿನಲ್ಲಿ ಅಶರೀರ ವಾಣಿಯಲ್ಲಿ ಬಂದು ಅವನಿಗೆ ತಿಳಿಸುತ್ತಾರೆ. ಈ ಕನಸು ಕಂಡ ವಿಷ್ಣುವರ್ಧನ ಮಹಾರಾಜನು ತಡಮಾಡದೆ ಮರುದಿನವೇ ಕದರೀಪುರದಲ್ಲಿರುವ ಒಂದು ಸ್ಥಳವನ್ನು ಶೋಧನೆ ಮಾಡಿಸಿ ಪವಿತ್ರವಾದ ಸಾಲಿಗ್ರಾಮದ ಶಿಲೆಯಲ್ಲಿ ನಿಂತ ಲಕ್ಷ್ಮೀನರಸಿಂಹ ಸ್ವಾಮಿಯ ದರ್ಶನವನ್ನು ಮಾಡಿದನಂತೆ.

ಹಾಗೆಯೇ ದೇಗುಲವನ್ನು ನಿರ್ಮಾಣಮಾಡಿ ಸರಿಸುಮಾರು ಮೂವತ್ತು ಎಕರೆ ಅಷ್ಟು ಒಂದು ಜಮೀನನ್ನು ಆ ಒಂದು ಪ್ರಾಂತ್ಯವನ್ನು ದೇವರಿಗೆ ಬಿಟ್ಟುಕೊಟ್ಟನಂತೆ. ಈ ದೇಗುಲಕ್ಕೆ ವಿಶೇಷವಾದ ಸ್ಥಾನಮಾನವನ್ನು ನೀಡಲಾಗಿದೆ. ಹಾಗು ಈ ದೇಗುಲ ಸಾಕಷ್ಟು ಪವಾಡಗಳನ್ನು ಮಾಡುತ್ತಿದೆ. ಇಲ್ಲಿ ನೆಲೆಸಿರುವ ಲಕ್ಷ್ಮೀನರಸಿಂಹ ಸ್ವಾಮಿಯು ಸಾಲಿಗ್ರಾಮದ ಶಿಲೆಯಾಗಿದ್ದು ಇಲ್ಲಿ ಸ್ವತಃ ನರಸಿಂಹದೇವರೆ ಪ್ರಾಣ ಪ್ರತಿಷ್ಠಾಪನೆ ಹೊಂದಿದ್ದಾರೆ ಎಂಬುದು ಇಲ್ಲಿ ಗ್ರಾಮದಲ್ಲಿರುವ ಪ್ರತಿಯೊಬ್ಬರ ಮಾತಾಗಿದೆ. ಈ ನರಸಿಂಹ ದೇವರಿಗೆ ಉಗ್ರಂ ವೀರಂ ಮಹಾ ವಿಷ್ಣುಮ್ ಜ್ವಲಂತಮ್ ಸರ್ವತೋಮುಖಂ ನರಸಿಂಹಮ್ ಬೀಷಣಂ ಭದ್ರಂ ಮೃತ್ಯುಮ್ ಮೃತ್ಯುಮ್ ನಮಾಮ್ಯಹಂ. ಎಂಬ ಶ್ಲೋಕವನ್ನು ಪಠಿಸುತ್ತಾ ದೇವರ ಬಳಿ ಪ್ರಾಥನೆ ಮಾಡಿದರೆ ನಮ್ಮ ಇಷ್ಟಸಿದ್ಧಿ ಕಾರ್ಯಗಳು ಎಲ್ಲವೂ ಸಹ ಬಹುಬೇಗನೆ ನೆರವೇರುತ್ತದಂತೆ. ಇಲ್ಲಿಗೆ ಬರುವ ಭಕ್ತರು ಮೊದಲು ಲಕ್ಷ್ಮೀನರಸಿಂಹ ಸ್ವಾಮಿಯನ್ನು ಕಾಣದೆ ಅಲ್ಲೇ ತುಸು ದೂರದಲ್ಲಿರುವ ಕಂಬದ ಬಳಿಹೋಗಿ ಮೊದಲು ಪೂಜೆಯನ್ನು ಸಲ್ಲಿಸಿ ಪ್ರದಕ್ಷಿಣೆ ಮಾಡಿ ನಂತರ ತಮ್ಮ ಕಷ್ಟಸುಖಗಳನ್ನು ಎಲ್ಲವನ್ನು ಸಹ ಕಂಬಕ್ಕೆ ಹೇಳಿಕೊಂಡು ನಂತರ ಲಕ್ಷ್ಮೀ ನರಸಿಂಹ ಸ್ವಾಮಿಯ ದರ್ಶನವನ್ನು ಪಡೆಯುವುದು ವಾಡಿಕೆ.

ಹೀಗೆ ಮಾಡುವುದರಿಂದ ಅವರಿಗೆ ಬಂದಿರುವ ಎಲ್ಲಾ ರೀತಿಯ ಕಷ್ಟಗಳು ಮತ್ತು ಸಮಸ್ಯೆಗಳು ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ. ಹೀಗೆ ಕಾಲ ಕಳೆದಂತೆ ಮೊಘಲರ ಸಾಮ್ರಾಜ್ಯ ಸ್ಥಾಪನೆಯಾದಾಗ ಮೊಘಲರು ಸಾಕಷ್ಟು ಹಿಂದೂ ದೇವಾಲಯಗಳನ್ನು ನಾಶಪಡಿಸುತ್ತಿದ್ದರು. ಅದೇ ಸಮಯದಲ್ಲಿ ಈ ದೇವಾಲಯವನ್ನು ರಕ್ಷಣೆ ಮಾಡಲು ಅಲ್ಲಿನ ಗ್ರಾಮದ ಎಷ್ಟೋ ಜನರು ಮಣ್ಣಿನಿಂದ ದೇವಸ್ಥಾನವನ್ನು ಸಂಪೂರ್ಣವಾಗಿ ಮುಚ್ಚಿಟ್ಟಿದ್ದರಂತೆ. ಹೀಗೆ ನೂರರು ವರ್ಷಗಳಕಾಲ ಈ ಒಂದು ದೇವಾಲಯವು ಮಣ್ಣಿನಲ್ಲಿ ಸೇರಿ ಹೋಯಿತು. ಹಾಗೆ ದಿನಕಳೆದಂತೆ ವರ್ಷಗಳು ಕಳದಂತೆ ಈ ಮಣ್ಣು ಗುಡ್ಡವಾಗಿ ಬೆಳೆದು ಅಲ್ಲಿ ಕಾಡಿನಂತಾಗಿ ಯಾವುದೇ ಸುಳಿವು ಸಿಗದೆ ದೇವಸ್ಥಾನ ಮುಚ್ಚಿ ಹೋಗಿತ್ತು. ಹಾಗೆ ಕೆಲವೇ ನೂರಾರು ವರ್ಷಗಳ ಹಿಂದೆ ಈ ದೇವಸ್ಥಾನ ಒಬ್ಬ ಮರಕಡಿಯುವ ಸ್ಥಳೀಯನಿಗೆ ಕಂಡಾಗ ಆತ ಗ್ರಾಮದ ಜನರಿಗೆ ತಿಳಿಸಿ ಈ ಮಣ್ಣಿನಲ್ಲಿ ಹುದುಗಿದ್ದ ಈ ದೇವಾಲಯವನ್ನು ಪುನರ್ ಪ್ರತಿಷ್ಠಾಪನೆಗೊಳಿಸಿ ನರಸಿಂಹಸ್ವಾಮೀಯ ಒಂದು ಕೃಪೆಗೆ ಪಾತ್ರರಾದರು.

ಹೀಗೆ ಮಾಡಿದ ನಂತರ ಆ ಒಂದು ಊರಿನಲ್ಲಿ ಸಾಕಷ್ಟು ಬದಲಾವಣೆಗಳಾದವು ನರಸಿಂಹ ಸ್ವಾಮಿಯು ಆ ಊರಿಗೆ ಸಾಕಷ್ಟು ಒಳಿತನ್ನು ಮಾಡಿದ್ದಾರೆ. ಅಕ್ಕಪಕ್ಕದ ಗ್ರಾಮದವರು ಅಲ್ಲದೆ ದೂರದ ಊರುಗಳಿಂದ ಸಹ ಈ ದೇವಾಲಯಕ್ಕೆ ಬಂದು ಕಷ್ಟಸುಖಗಳನ್ನು ದೇವರಬಳಿ ಹೇಳಿಕೊಂಡು ತಮ್ಮ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳುತ್ತಾರೆ. ಪ್ರತೀ ವರ್ಷ ಇಲ್ಲಿ ಶ್ರೀ ದೇವಿ ಭೂದೇವಿ ಸಮೇತ ಶ್ರೀನಿವಾಸ ದೇವರ ಬ್ರಹ್ಮರಥೋತ್ಸವವು ಸಹ ನಡೆಯುತ್ತದೆ. ಈ ದೇವಾಲಯ ಇರುವುದು ಮುಳಬಾಗಿಲು ತಾಲೂಕಿನ ಕದ್ರಿಪುರ ಕಂಬದ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ಕ್ಷೇತ್ರವೆಂದು ಪ್ರಸಿದ್ಧಿ ಹೊಂದಿದೆ. ಮುಳಬಾಗಿಲಿಗೆ ನೀವು ತಲುಪಿದರೆ ಅಲ್ಲಿಂದ ಕದ್ರಿಪುರ ಕಂಬದ ನರಸಿಂಹಸ್ವಾಮಿ ದೇಗುಲಕ್ಕೆ ನಿಮಗೆ ವಿಶೇಷವಾದ ಬಸ್ಸಿನ ವ್ಯವಸ್ಥೆ ಮತ್ತು ಆಟೋಗಳು ಸಹ ಇಲ್ಲಿ ದೊರೆಯುತ್ತದೆ. ಇಂದೇ ಸ್ವಾಮಿಯ ದರ್ಶನವನ್ನು ಮಾಡಿರಿ. ನಿಮ್ಮ ಸಮಸ್ಯೆಗಳಿಂದ ಮುಕ್ತಿ ಹೊಂದಿರಿ.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಆರಾಧಕರು ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ವಿವಾಹ ಸಂತಾನ ಲೈಂಗಿಕ ಸ್ತ್ರೀಪುರುಷ ಮಾಟ ಮಂತ್ರ ಕೋರ್ಟು ಕೇಸ್ ನಲ್ಲಿ ಜಯ ಸಿಗಲು ಮನೆಯಲ್ಲಿ ಅಶಾಂತಿ ಇದ್ದರೆ ಧನ ವಶ ಮತ್ತು ಶತ್ರು ನಾಶ ಆಗಲು ಇನ್ನು ಹತ್ತಾರು ಸಮಸ್ಯೆಗಳಿಗೆ ಧರ್ಮಸ್ಥಳದಿಂದ ನೇರವಾಗಿ ನಿಮಗೆ ಫೋನ್ ನಲ್ಲೆ 3 ದಿನದಲ್ಲಿ ನಿಮಗೆ ಪರಿಹಾರ ಮಾಡಿಕೊಡುತ್ತೇವೆ ಒಮ್ಮೆ ಕರೆ ಮಾಡಿರಿ. 9886 83 53 33

LEAVE A REPLY

Please enter your comment!
Please enter your name here