ಹಾರ್ಟ್ ಅಟ್ಯಾಕ್ ಆಗಬಾರದು ಅಂದ್ರೆ ಮೆಣಸಿನ ಕಾಯಿ ತಗೊಂಡು ಹೀಗೆ ಮಾಡಿ

0
646

ನಾವು ಬಳಸುವ ಪ್ರತಿನಿತ್ಯದ ಅಡುಗೆಯಲ್ಲಿ ಹಸಿ ಮೆಣಸಿನಕಾಯಿಯನ್ನು ತಪ್ಪದೇ ಬಳಸ ಬೇಕು. ನಾವು ಹೆಚ್ಚಾಗಿ ನಮ್ಮ ಅಡುಗೆಯಲ್ಲಿ ಕೆಂಪು ಮೆಣಸಿನಕಾಯಿಗೆ ಹೆಚ್ಚಾಗಿ ಪ್ರಾಧಾನ್ಯತೆಯನ್ನು ನೀಡುತ್ತೇವೆ. ಆದರೆ ಹಸಿ ಮೆಣಸಿನಕಾಯಿಗೆ ಅಷ್ಟೇನು ಮಹತ್ವ ನೀಡುವುದಿಲ್ಲ. ಬೇರೆ ವಿಧದಲ್ಲಿ ನಾವು ಅದನ್ನು ಸೇವಿಸಿದರು ಸಹ ಪ್ರತಿ ನಿತ್ಯ ಸಾಕಷ್ಟು ಜನ ಹಸಿಮೆಣಸಿನ ಕಾಯಿಯೆಂದರೆ ಅದರಿಂದ ನಮಗೇನು ಲಾಭ ಬಾಯಿಗೆ ಖಾರ ಒಂದು ಬಿಟ್ಟರೆ ನಮಗೇನು ಲಾಭ ಸಿಗುವುದಿಲ್ಲ ಎಂದು ಎಲ್ಲರೂ ಹೇಳುತ್ತಾರೆ. ಆದರೆ ಪ್ರತಿನಿತ್ಯ ಹಸಿಮೆಣಸಿನಕಾಯಿ ಸೇವಿಸುವುದರಿಂದ ನಮಗೆ ಸಾಕಷ್ಟು ರೀತಿಯ ಲಾಭಗಳು ದೊರೆಯುತ್ತದೆ. ನಮ್ಮಲ್ಲಿರುವ ಸಾಕಷ್ಟು ಜನರು ಹಸಿಮೆಣಸಿನ ಕಾಯಿಯಲ್ಲಿರುವ ಅದರ ಬೀಜಗಳನ್ನು ತಿನ್ನುತ್ತಾರೆ. ಆದರೆ ಈ ರೀತಿ ಮಾಡುವದಿಂದ ನಿಜಕ್ಕೂ ನಿಮಗೆ ಯಾವುದೇ ರೀತಿಯ ಲಾಭ ದೊರೆಯುವುದಿಲ್ಲ.

ಹಸಿಮೆಣಸಿನ ಕಾಯಿ ನಿಜಕ್ಕೂ ಖಾರವು ಹೌದು. ಆದರೆ ಅದೆಷ್ಟು ಖಾರವೋ ನಮಗೆ ಅಷ್ಟು ಉಪಯೋಗಗಳು ಸಹಾ ಇದೆ. ಆದರೆ ಮಿತಿಯಾಗಿ ಇದನ್ನು ಸೇವಿಸಿದರೆ ಖಂಡಿತಾ ನಾವು ಹಲವು ರೀತಿಯ ಪ್ರಯೋಜನವನ್ನು ಪಡೆಯಬಹುದು. ಹಸಿಮೆಣಸಿನ ಕಾಯಿಯಲ್ಲಿ ವಿಟಮಿನ್ ಬಿ6 ಹೆಚ್ಚಾಗಿರುತ್ತದೆ. ಹಾಗೆಯೇ ಐರಾನ್ ಕಾರ್ಬೋನ್ ಪೊಟಾಶಿಯಂ ವಿಟಮಿನ್ ಸಿ ಫೆಲೋಟಿಕ್ಸ್ ನಂತಹ ಹೆಚ್ಚಿನ ಅಂಶಗಳು ಇದರಲ್ಲಿ ಕೂಡಿರುತ್ತದೆ. ಇದರಲ್ಲಿರುವ ಹಲವು ಅಂಶಗಳು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ನಮಗೆ ಅನೇಕ ರೀತಿಯ ರೋಗಗಳು ಬರದಂತೆ ನಮಗೆ ತಡೆಯುತ್ತದೆ. ಹಸಿಮೆಣಸಿನ ಕಾಯಿಯನ್ನು ನಾವು ಮನೆ ಮದ್ದಾಗಿ ಸಹ ಪರಿಣಾಮಕಾರಿಯಾಗಿ ಉಪಯೋಗಿಸಬಹುದು. ಹಸಿಮೆಣಸಿನ ಕಾಯಿಯನ್ನು ನಾವು ತಿನ್ನುವ ಪ್ರತಿನಿತ್ಯ ಕಾಳಿನ ಜೊತೆ ಬೆರೆಸಿ ತಿನ್ನುವುದರಿಂದ ನಮ್ಮ ಜೀರ್ಣಾಂಗ ವ್ಯವಸ್ಥೆ ಅತ್ಯುತ್ತಮವಾಗಿರುತ್ತದೆ. ಯಾವುದೇ ರೀತಿಯ ಜೀರ್ಣ ಶಕ್ತಿಗೆ ಸಂಬಂಧಪಟ್ಟಂತೆ ಸಮಸ್ಯೆಗಳು ಬರುವುದಿಲ್ಲ.

ದೇಹದಲ್ಲಿ ನಮಗೆ ಗೊತ್ತಿಲ್ಲದ ರೀತಿ ಅನೇಕ ಕೊಬ್ಬು ಸಂಗ್ರಹಣೆಯಾಗಿರುತ್ತದೆ. ಈ ಕೊಬ್ಬು ಹೆಚ್ಚಾದರೆ ಮನುಷ್ಯನಿಗೆ ಹೃದಯಾಘಾತ ಬರುವ ಸಾಧ್ಯತೆಗಳಿದೆ. ಈ ಕೊಬ್ಬನ್ನು ಕರಗಿಸಲು ನಾವು ಸಾಕಷ್ಟು ವಿಧವಾದ ಪ್ರಯತ್ನಗಳನ್ನು ಮಾಡುತ್ತೇವೆ. ಆದರೆ ಆ ಎಲ್ಲಾ ಪ್ರಯತ್ನಗಳಿಗಿಂತ ಹೆಚ್ಚಾಗಿ ಹಸಿಮೆಣಸಿನ ಕಾಯಿಯ ಮತ್ತು ಅದರಲ್ಲಿರುವ ಸಣ್ಣ ಸಣ್ಣ ಬೀಜಗಳನ್ನು ತಿನ್ನುವುದರಿಂದ ಫ್ಲೈ ಟೋ ಸ್ಟೇರೊಯ್ಡ್ ಎಂಬ ಉತ್ತಮವಾದ ಶಕ್ತಿ ಅದರಲ್ಲಿದ್ದು ನಮ್ಮ ರಕ್ತದಲ್ಲಿರುವ ಕೊಬ್ಬಿನ ಅಂಶವನ್ನು ಅದು ಕಡಿಮೆ ಮಾಡುತ್ತದೆ. ಹೀಗೆ ಮಾಡುವುದರಿಂದ ಮನುಷ್ಯನಿಗೆ ಹೃದಯಾಘಾತ ಬರುವುದಿಲ್ಲ. ಹಾಗೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಇಚ್ಛಿಸುವವರು ಹಸಿಮೆಣಸಿನ ಕಾಯಿಯನ್ನು ಹೇರಳವಾಗಿ ಬಳಸುವುದು ಒಳ್ಳೆಯದು. ಆದರೆ ಅಮೃತವೂ ಸಹ ಹೆಚ್ಚಾದರೆ ವಿಷ ಎಂಬಂತೆ ಹಸಿಮೆಣಸಿನ ಕಾಯಿಯನ್ನೂ ಸಹ ಮಿತವಾಗಿ ಬಳಕೆ ಮಾಡಿಕೊಂಡು ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಲ್ಲಿ ಮೆಟಬಾಲಿಸಂ ಪ್ರಮಾಣವನ್ನು ಹೆಚ್ಚಿಸುತ್ತದೆ. ಕ್ಯಾಲೊರಿಗಳು ಶೀಘ್ರವಾಗಿ ನಿಮ್ಮ ದೇಹದಲ್ಲಿ ಕಡಿಮೆಯಾಗಿ ದೇಹದ ತೂಕ ಕಡಿಮೆಯಾಗುತ್ತದೆ.

ಇದರಲ್ಲಿರುವ ಬ್ಯಾಕ್ಟೀರಿಯಾ ಕಣಗಳು ನಿಮಗೆ ಚರ್ಮ ರೋಗಗಳು ಬರದಂತೆ ತಡೆಯುತ್ತದೆ. ಈಗಾಗಲೇ ನಿಮಗೆ ಅನೇಕ ರೀತಿಯ ಚರ್ಮ ರೋಗಗಳು ಬಂದಿದ್ದರೆ ಹಸಿಮೆಣಸಿನ ಕಾಯಿಯನ್ನು ಮಿತವಾಗಿ ಪ್ರತಿನಿತ್ಯ ಬಳಕೆ ಮಾಡಿದರೆ ಖಂಡಿತಾ ನಿಮಗೆ ಈ ಸಮಸ್ಯೆಗಳು ದೂರವಾಗುತ್ತದೆ. ಹಾಗೆಯೇ ಕೆಲವರು ಹಸಿಮೆಣಸಿನ ಕಾಯಿಯನ್ನು ಮಾರುಕಟ್ಟೆಯಿಂದ ತಂದು ನೇರವಾಗಿ ಅಡುಗೆಗೆ ಬಳಸುತ್ತಾರೆ. ಖಡಾಖಂಡಿತವಾಗಿಯು ಇದು ತಪ್ಪು. ಏಕೆಂದರೆ ಎಲ್ಲಾ ರೀತಿಯ ಸೊಪ್ಪು ಮತ್ತು ತರಕಾರಿಗಳು ಹಾಳಾಗದಂತೆ ನಮ್ಮ ರೈತರು ಅಥವಾ ಮಧ್ಯವರ್ತಿಗಳಾಗಿರಲಿ ಇದಕ್ಕೆ ಅನೇಕ ಬಗೆಯ ರಾಸಾಯನಿಕ ಅಂಶಗಳನ್ನು ಸಿಂಪಡಿಸಿರುತ್ತಾರೆ. ಆದ್ದರಿಂದ ಯಾವುದೇ ವಸ್ತುವನ್ನು ಬಳಕೆ ಮಾಡುವ ಮೊದಲು ಅದನ್ನು ಬಿಸಿ ನೀರಿನಲ್ಲಿ ಅದ್ದಿ ತೆಗೆದು ನಂತರ ನೀವು ಬಳಕೆ ಮಾಡಿದರೆ ಅದರಲ್ಲಿರುವ ರಾಸಾಯನಿಕ ಅಂಶ ಕಡಿಮೆ ಯಾಗುತ್ತದೆ ಮತ್ತು ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ. ಈ ಲೇಖನ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here