ಮೊಬೈಲ್ ಫೋನ್ ಯಾರ ಬಳಿ ಇಲ್ಲ ಹೇಳಿ ? ಸಣ್ಣ ಮಕ್ಕಳಿಗೆ ಸಹ ಇವತ್ತು ಮೊಬೈಲ್ ಇಲ್ಲ ಅಂದ್ರೆ ಅಳು ಬರುತ್ತೆ. ಮನುಷ್ಯನ ದೈನಂದಿನ ಜೀವನದಲ್ಲಿ ಮೊಬೈಲ್ ಇಲ್ಲದೆ ಯಾವುದೇ ಕೆಲಸ ಕಾರ್ಯಗಳು ಆಗೋದಿಲ್ಲ ಎನ್ನುವ ಮಟ್ಟಿಗೆ ನಾವು ಅದನ್ನು ಹಚ್ಚಿಕೊಂಡಿದ್ದೇವೆ. ಈ ಫೋನ್ ಗಳು ಕೂಡ ಒಂದಲ್ಲ ಎರಡಲ್ಲ ಹಲವರು ಕಂಪನಿಗಳು ತಿಂಗಳಿಗೆ ಒಂದು ಹೊಸ ಹೊಸ ವಿಧಾನದ ಫೋನ್ ಅನ್ನು ಬಿಡುಗಡೆ ಮಾಡುತ್ತವೆ ಈ ಹೊಸ ವಿಧಾನಕ್ಕೆ ನಮ್ಮ ಜನರು ತುಂಬಾ ಬೇಗ ಮಾರುಹೋಗುತ್ತಾರೆ ಎಷ್ಟೇ ಕಷ್ಟ ಆದರೂ ಸಲ ಮಾಡಿ ಆದರೂ ಕೂಡ ಮೊಬೈಲ್ ತೆಗೆದುಕೊಳ್ಳಲು ಪ್ರಯತ್ನಿಸುತ್ತಾರೆ ಆದರೆ ಯಾವುದೇ ಕಂಪನಿಯ ಫೋನ್ ತೆಗೆದುಕೊಂಡರು ಕೂಡ ಎಲ್ಲ ಫೋನ್ ಗಳು ಚೆನ್ನಾಗಿ ವರ್ಕ್ ಆಗುವುದು ಕೇವಲ ಒಂದರಿಂದ ಎರಡು ತಿಂಗಳು ಅಷ್ಟೇ ಏಕೆಂದರೆ ನಮ್ಮ ಇಂದಿನ ಜನರು ಮೊಬೈಲ್ ಅನ್ನು ಅಷ್ಟರ ಮಟ್ಟಿಗೆ ಉಪಯೋಗಿಸುತ್ತಾರೆ ಹೀಗೆ ಉಪಯೋಗಿಸುತ್ತ ಉಪಯೋಗಿಸುತ್ತ ಮೊಬೈಲ್ ಹ್ಯಾಂಗ್ ಆಗಲು ಶುರು ಆಗುತ್ತದೆ ಮೊಬೈಲ್ ಪದೇ ಪದೇ ಹ್ಯಾಂಗ್ ಆಗುತ್ತಿದ್ದರೆ ಅದನ್ನು ಬಳಸಲು ಕಷ್ಟ ಆಗುತ್ತದೆ.

ಅದಕ್ಕಾಗಿ ಈ ಮೊಬೈಲ್ ಗಳು ಹ್ಯಾಂಗ್ ಆಗದ ಹಾಗೆ ನೋಡಿಕೊಳ್ಳುವುದು ಹೇಗೆ ಎಂದು ನೋಡೋಣ ಬನ್ನಿ.ಮೊಬೈಲ್ ನಲ್ಲಿ ಅನವಶ್ಯಕವಾದ ಎಲ್ಲ ಆಪ್ಗಳನ್ನು ತೆಗೆದುಹಾಕಬೇಕು ಕೆಲವು ಆಪ್ ಗಳು ನಿಮಗೆ ತಿಳಿಯದ ಹಾಗೇ ಸ್ಕ್ರೀನ್ ಹಿಂದೆ ಕೆಲಸ ಮಾಡ್ತಾ ಮಾಡ್ತಾ ಮೊಬೈಲ್ ಹ್ಯಾಂಗ್ ಮಾಡಿಸುತ್ತದೆ. ಕ್ಲಿನ್ ಮಾಸ್ಟರ್ ಎಂಬ ಆಪ್ ಹಾಕಿಕೊಂಡು ಫೋನನ್ನು ಸ್ವಚ್ಛ ಮಾಡಿಕೊಳ್ಳಬೇಕು. ಇದರಿಂದ ಡಿವೈಸ್ನಲ್ಲಿರುವ ಟೆಂಪರರಿ ಫೈಲುಗಳು ಕುಕೀಸ್ ಹಿಸ್ಟರೀ ಎಲ್ಲಾ ಹೋಗಿ ಫೋನ್ ಹ್ಯಾಂಗ್ ಆಗುವುದು ತಪ್ಪುತ್ತದೆ.
ಆಂಡ್ರಾಯ್ಡ್ ಫೋನ್ ನಲ್ಲಿ ಯಾವುದಾದರೂ ಆಪ್ ಅನ್ನು ಕೇವಲ ಗೂಗಲ್ ಪ್ಲೇ ಸ್ಟೋರ್ ನಿಂದ ಮಾತ್ರ ಡೌನ್ ಲೋಡ್ ಮಾಡಿಕೊಂಡು ಇನ್ಸ್ಟಾಲ್ ಮಾಡಿಕೊಳ್ಳಬೇಕು. ಬೇರೆ ಲಿಂಕ್ ಮತ್ತು ಹಲವು ರೀತಿಯ ವೆಬ್ಸೈಟ್ ನಿಂದ ಆಪ್ ಡೌನ್ಲೋಡ್ ಮಾಡಿಕೊಂಡರೆ ಮೊಬೈಲ್ ಗೆ ನಿಮಗೆ ಗೊತಿಲ್ಲದ ಹಾಗೇ ವೈರಸ್ ಬಂದು ಮೊಬೈಲ್ ಹ್ಯಾಂಗ್ ಆಗಲು ಶುರು ಆಗುತ್ತದೆ. ಪೋನಿನಲ್ಲಿ ಆಂಟಿ ವೈರಸ್ ಇಲ್ಲವೆ ಕ್ಲೀನಿಂಗ್ ಆಪ್ ಇನ್ಸ್ಟಾಲ್ ಮಾಡಿ ಬೇಡದಿರುವ ಆಪ್ಗಳನ್ನು ಡಿಲೀಟ್ ಮಾಡಿಕೊಳ್ಳಬೇಕು. ಯಾವಾಗಲು ಡಿವೈಸ್ ಮೆಮೊರಿಯನ್ನು ಆದಷ್ಟು ಫ್ರೀ ಆಗಿ ಇಟ್ಟುಕೊಂಡಿರಬೇಕು. ಎಲ್ಲವನು ಮೆಮೊರಿ ಕಾರ್ಡ್ ಗೆ ವರ್ಗಾವಣೆ ಮಾಡೀರಿ. ಫೋನನ್ನು ವಾರಕ್ಕೆ ಒಮ್ಮೆಯಾದರೂ ರೀಸ್ಟಾರ್ಟ್ ಮಾಡುತ್ತಿರಬೇಕು. ವಾರಕ್ಕೆ ಒಮ್ಮೆ ಆದರೂ ಫೋನ್ ನ ಮೆಮೊರಿ ಕಾರ್ಡ್ ಬ್ಯಾಟರಿ ತೆಗೆದು ಹಾಕಬೇಕು.ಬ್ಯಾಟರಿ ತೆಗೆಯುವ ಆಯ್ಕೆ ಇಲ್ಲದಿದ್ದರೆ ಸಿಮ್ ಅನ್ನು ತೆಗೆದು ಹಾಕಬೇಕು.
ಫೋನ್ ಚಾರ್ಜ್ ಮಾಡಲು ಕಂಪೆನಿ ಕೊಟ್ಟ ಚಾರ್ಜರ್ ಗಳನ್ನೇ ಉಪಯೋಗಿಸಬೇಕು. ಅವಶ್ಯಕತೆ ಇದ್ದಾಗ ಮಾತ್ರ ವೈಫೈ ಬ್ಲೂಟೂತ್ ಜಿಪಿಎಸ್ ಅನ್ನು ಬಳಸಬೇಕು. ಇಲ್ಲವಾದಗ ಆಫ್ ಮಾಡಿ ಇಡಬೇಕು. ಮೊಬೈಲ್ ಬಿಸಿ ಆಗುವವರೆಗೆ ಚಾರ್ಜ್ ಮಾಡಬಾರದು. ಹಾಗೂ ಮೊಬೈಲ್ ಅಲ್ಲಿ ಚಾರ್ಜ್ ಫುಲ್ ಕಾಲಿ ಆಗುವ ತನಕ ಬಳಸಬಾರದು 10ಇಂದ 20 ಇದ್ದಾಗಲೇ ಚಾರ್ಜ್ ಮಾಡಿಕೊಳ್ಳಿ.ಮೊಬೈಲ್ ಬಿಸಿ ಆಗುವ ತನಕ ಮೊಬೈಲ್ ಬಳಕೆ ಮಾಡಬೇಡಿ. ಮೊಬೈಲ್ ಅಲ್ಲಿ ಗಂಟೆಗಟ್ಟಲೆ ಗೇಮ್ ಆಡಬಾರದು ಇದರಿಂದ ರಾಯಮ್ ಗೆ ಮತ್ತು ಸಿ ಪಿ ಯು ಗೆ ಒತ್ತಡ ಬಿದ್ದು ಬೇಗನೆ ಹಾಳಾಗುತ್ತದೆ. ಈ ಮೇಲಿನ ಎಲ್ಲ ನಿಯಮಗಳನ್ನು ಪಾಲಿಸಿದರೆ ಮೊಬೈಲ್ ಹ್ಯಾಂಗ್ ಆಗುವುದನ್ನು ತಪ್ಪಿಸಬಹುದು. ಮತ್ತು ಹೆಚ್ಚಿನ ಸಮಯ ಬಾಳಿಕೆ ಕೂಡ ಬರುತ್ತದೆ.