ರಾಗಿ ಹುರಿಟ್ಟು ಮಾಡ್ಕೊಂಡು ತಿನ್ನುವವರಿಗೆ ಮಾತ್ರ ಈ ಲಾಭ ಸಿಗೋದು

0
1013

ಈ ರಾಗಿಯ ಹುರಿಟ್ಟನ್ನು ಮಾಡಿಕೊಂಡು ತಿಂದರೆ ನಿಮಗೆ ಹತ್ತಾರು ರೀತಿಯ ಲಾಭಗಳು ದೊರೆಯುತದೆ. ನಾವು ಪ್ರತಿನಿತ್ಯ ತಿಂಡಿಯಾಗಿ ಪರೋಟಾ ಚಿತ್ರಾನ್ನ ಹಾಗು ಒಂದಿಷ್ಟು ಜಂಕ್ಫುಡ್ಗಳನ್ನು ತಿಂದು ಆತುರದಲ್ಲಿ ಕಛೇರಿಗೆ ತೆರಳುತ್ತೇವೆ. ಆದರೆ ನಾವು ತಿನ್ನುವ ಈ ಜಂಕ್ಫುಡ್ ಮತ್ತು ಅನೇಕ ರೀತಿಯ ಆಹಾರಗಳು ನಮ್ಮನ್ನು ಸದ್ಯದ ಮಟ್ಟಿಗೆ ಸಮಸ್ಯೆಗೆ ನೂಕದಿದ್ದರು ಸಹ ಮುಂದೊಂದು ದಿನ ದೊಡ್ಡ ಪರಿಣಾಮವನ್ನು ಇದರಿಂದ ನಾವು ಅನುಭವಿಸಬೇಕಾಗುತದೆ. ನಮ್ಮ ಇತ್ತೀಚಿನ ಸಿಟಿಯ ಜನರು ರಾಗಿಯನ್ನೇ ಮರೆತಂತಿದೆ. ಏಕೆಂದರೆ ಬಡವರು ಮಾತ್ರವೇ ರಾಗಿಯನ್ನು ತಿನ್ನಬೇಕೇನೋ ಅಷ್ಟರ ಮಟ್ಟಿಗೆ ಕೀಳಾಗಿ ಕಾಣುವವರು ಸಹ ಇದ್ದಾರೆ. ಆದರೆ ನಮ್ಮ ಹಳ್ಳಿಯ ಮಂದಿ ಹಾಗಲ್ಲ, ಅವರು ರಾಗಿ ಇಲ್ಲದೆ ಅವತ್ತಿನ ಜೀವನವನ್ನು ಮುಂದೆ ಸಾಗಿಸುವುದೇ ಇಲ್ಲ. ಏಕೆಂದರೆ ಆರೋಗ್ಯದ ವಿಷಯದಲ್ಲಿ ಹಳ್ಳಿಯವರೆ ಬುದ್ಧಿವಂತರೆಂದು ಹೇಳಬಹುದು. ಅವರ ಆರೋಗ್ಯದ ಗುಟ್ಟು ರಾಗಿಯಲ್ಲಿದೆ ಎಂಬುದು ಹಳ್ಳಿಯ ಜನಕ್ಕೆ ಮಾತ್ರವೇ ತಿಳಿದಿದೆ ಎಂದರೆ ತಪ್ಪಾಗಲಾರದು.

ಆದರೆ ನಮ್ಮಲ್ಲಿರುವ ಕೆಲವು ಸಿಟಿ ಜನರು ರಾಗಿಯನ್ನು ಖಡಾಖಂಡಿತವಾಗಿ ಮರೆತೇ ಹೋಗಿದ್ದಾರೆ. ಆದರೆ ನೀವು ರಾಗಿಯನ್ನು ಮರೆತರೆ ನಿಮ್ಮ ದೇಹಕ್ಕೆ ಬರುವ ರೋಗಗಳಿಗೆ ನೀವೇ ಆಹ್ವಾನ ನೀಡಿದಂತೆ ಎಂಬುದು ಮರೆಯಬಾರದು. ರಾಗಿ ಎಂಬುದು ನಿಜಕ್ಕೂ ಒಂದು ಪೌಷ್ಟಿಕ ಆಹಾರ ಹಾಗೆಯೇ ನಮ್ಮಲ್ಲಿರುವ ಸಾಕಷ್ಟು ಜನರ ಮನೆಯಲ್ಲಿ ಈಗಲು ರಾಗಿ ದೋಸೆ, ರಾಗಿ ರೊಟ್ಟಿ ಹೀಗೆ ರಾಗಿಯಿಂದ ಮಾಡ ಬಹುದಾದ ಹಲವು ರೀತಿಯ ಖಾದ್ಯಗಳನ್ನು ಮಾಡಿ ತಿನ್ನುತ್ತಾರೆ. ಹೀಗೆ ಮಾಡಿಕೊಂಡು ತಿಂದ ಖಾದ್ಯಗಳಿಂದ ನಮ್ಮ ದೇಹಕ್ಕೆ ಸಾಕಷ್ಟು ರೀತಿಯ ಲಾಭಗಳನ್ನು ಪಡೆಯಬಹುದು. ಹಾಗೆಯೇ ನಾವು ನಿಮಗೆ ಹುರಿಟ್ಟಿನ ಬಗ್ಗೆ ಒಂದು ಮಾಹಿತಿಯನ್ನು ನೀಡುತ್ತಿದೇವೆ. ಈ ರಾಗಿಯ ಹುರ್ರಿಟ್ಟು ಬೇಸಿಗೆಕಾಲದಲ್ಲಿ ನಿಜಕ್ಕೂ ಒಂದು ಅಮೃತವಿದ್ದಂತೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಈ ರಾಗಿಯ ಹುರಿಹಿಟ್ಟನ್ನು ಹೇಗೆ ಮಾಡುವುದು ಮತ್ತು ಇದನ್ನು ಮಾಡಿ ತಿನ್ನುವುದರಿಂದ ದೇಹಕ್ಕೆ ಏನೆಲ್ಲಾ ಲಾಭ ಸಿಗುತ್ತದೆ ಎಂಬುವುದರ ಬಗ್ಗೆ ಸಂಪೂರ್ಣವಾದ ಲೇಖನ ಇಲ್ಲಿದೆ. ಈ ಲೇಖನವನ್ನು ಸಂಪೂರ್ಣವಾಗಿ ಓದಿರಿ.

ರಾಗಿಯ ಹುರಿಹಿಟ್ಟನ್ನು ಮಾಡುವ ವಿಧಾನಗಳು. ನಿಮ್ಮ ಮನೆಯಲ್ಲಿ ಎಷ್ಟು ಜನ ಇದ್ದಾರೆ ಅದಕ್ಕೆ ತಕ್ಕಂತೆ ಒಂದಿಷ್ಟು ರಾಗಿಯ ಹಿಟ್ಟನ್ನು ತೆಗೆದುಕೊಳ್ಳಿ, ನಾವು ನಿಮಗೆ ಒಂದು ಕೆಜಿ ರಾಗಿಹಿಟ್ಟಿನ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಒಂದು ಕೆಜಿ ರಾಗಿ ಹಿಟ್ಟನ್ನು ತೆಗೆದುಕೊಳ್ಳಿರಿ. ಮತ್ತು ನೀರು ಬೆಲ್ಲ ಒಂದಿಷ್ಟು ತೆಂಗಿನ ತುರಿ ಮತ್ತು ರುಚಿಗೆ ತಕ್ಕಂತೆ ಏಲಕ್ಕಿಯನ್ನು ತೆಗೆದುಕೊಳ್ಳಿ. ಇದನ್ನು ಮಾಡುವ ವಿಧಾನ, ಮೊದಲು ರಾಗಿಯನ್ನು ಚೆನ್ನಾಗಿ ತೊಳೆಯಿರಿ. ನಂತರ ಎಲ್ಲಾ ನೀರನ್ನು ಚೆನ್ನಾಗಿ ಬಸಿದು ಬಿಸಿಲಿನಲ್ಲಿ ಒಣಗಿಸದೆ ನೆರಳಿನಲ್ಲೇ ಒಣಗಿಸಬೇಕು. ನಂತರ ಇದನ್ನು ಚೆನ್ನಾಗಿ ಹುರಿಯಬೇಕು. ಆದರೆ ಎಲ್ಲಾ ರಾಗಿಯನ್ನು ಒಂದೇ ಬಾರಿಗೆ ಹುರಿಯಬಾರದು. ಹಿಡಿ ಹಿಡಿಯಾಗಿ ರಾಗಿಯನ್ನು ಬಾಣಲೆಗೆ ಹಾಕಿ ಚೆನ್ನಾಗಿ ಹುರಿಯಬೇಕು. ಹೀಗೆ ಹುರಿದ ರಾಗಿಯನ್ನು ಪುಡಿ ಮಾಡಿಟ್ಟುಕೊಳ್ಳಿ. ಈಗ ರಾಗಿಯ ಹುರಿಹಿಟ್ಟು ಸಿದ್ಧವಾಗುತ್ತದೆ. ಈ ಹುರಿಹಿಟ್ಟಿಗೆ ಬೆಲ್ಲ, ಏಲಕ್ಕಿಪುಡಿ, ತೆಂಗಿನತುರಿ ಹಾಕಿ ನೀರಿನಲ್ಲಿ ಕಲಸಿ ಉಂಡೆಮಾಡಿ ಅದನ್ನು ನಿಮ್ಮ ಮನೆ ಮಕ್ಕಳಿಗೆ ಮತ್ತು ನೀವು ಸಹ ತಿನ್ನಬಹುದು. ಇದಕ್ಕೆ ಬೇಕಾದರೆ ಒಂದಿಷ್ಟು ಸಕ್ಕರೆ ಹಾಲನ್ನು ಬೆರೆಸಿ ಸಹ ತಿನ್ನಬಹುದು. ಹೀಗೆ ಮಾಡುವುದರಿಂದ ನಿಮ್ಮ ದೇಹಕ್ಕೆ ಗ್ಲುಕೋಸ್ ಅಂಶ ಬೇಗನೆ ಬರದಿರುವುದರಿಂದ ಸಕ್ಕರೆ ಖಾಯಿಲೆ ಬರುವುದಿಲ್ಲ.

ಅಲ್ಲದೇ ನಿಮ್ಮ ದೇಹಕ್ಕೆ ಅನೇಕ ರೀತಿಯ ಶಕ್ತಿಯನ್ನು ನೀಡುತ್ತದೆ. ನೀವು ಪರೋಟ ದೋಸೆ ಇವೆಲ್ಲವನ್ನು ತಿನ್ನುವುದರ ಬದಲು ಒಂದಿಷ್ಟು ರಾಗಿಯಿಂದ ಮಾಡಿದ ತಿಂಡಿಗಳನ್ನು ತಿಂದರೆ ದಿನ ಪೂರ್ತಿ ನಿಮ್ಮ ದೇಹಕ್ಕೆ ಬೇಕಾದ ಶಕ್ತಿಯನ್ನು ಒದಗಿಸುತ್ತದೆ. ಇನ್ನಾದರೂ ಸಹ ವಾರಕ್ಕೆ ಮೂರರಿಂದ ನಾಲ್ಕು ದಿವಸ ರಾಗಿಯ ಹುರಿಹಿಟ್ಟಿನಿಂದ ಮಾಡಿದ ಖಾದ್ಯಗಳನ್ನು ಸೇವಿಸುತ್ತಾ ಬನ್ನಿರಿ. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ. ನಿಮ್ಮ ಆಹಾರ ಕ್ರಮದಿಂದ ಆರೋಗ್ಯ ಶೈಲಿಯನ್ನು ಬದಲಾಯಿಸಿಕೊಳ್ಳಿ. ಈ ಉಪಯುಕ್ತ ಲೇಖನ ತಪ್ಪದೇ ಶೇರ್ ಮಾಡಿರಿ ಹಾಗೂ ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here