ಅತಿಯಾದ ಕುಡಿತದ ಚಟವನ್ನು ಬಿಡಿಸುವ ಮನೆಮದ್ದುಗಳು.

1
1344

ಮದ್ಯಪಾನ ಧೂಮಪಾನ ಇತ್ತಿಚೆಗೆ ಫ್ಯಾಶನ್ ಆಗಿದೇ ಹಿಂದಿನ ಕಾಲದಲ್ಲಿ ಕೇವಲ ಗಂಡಸರು ಮಾತ್ರ ಈ ಅಭ್ಯಾಸವನ್ನು ಇಟ್ಟುಕೊಂಡಿದ್ದರು ಆದರೆ ಇವಾಗ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಎಲ್ಲರೂ ಕೂಡ ಈ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ ಯಾವುದೇ ಪಾರ್ಟಿ ಅಂತ ಆದರೆ ಅಲ್ಲಿ ಈ ಧೂಮಪಾನ ಮದ್ಯಪಾನ ಎಂಬುದು ಇರಲೇ ಬೇಕು ಆಗ ಮಾತ್ರ ಅದು ಪಾರ್ಟಿ ಎಂದೆನ್ನಿಸಿಕೊಳ್ಳುವುದು ಆದರೆ ಮದ್ಯಪಾನ ಅಭ್ಯಾಸ ಇರುವವರು ಅಲ್ಪ ಪ್ರಮಾಣದಲ್ಲಿ ಕುಡಿದು ಯಾರಿಗೂ ತೊಂದರೆ ಆಗದಂತೆ ಮನೆಗೆ ಬಂದು ಸೇರಿದರೆ ಒಳ್ಳೆಯದು ಆದರೆ ಕುಡಿದು ಎಲ್ಲಿಂದರಲಿ ಬಿದ್ದು ಒದ್ದಾಡಿ ಎಲ್ಲರಿಗೂ ತೊಂದರೆ ಕೊಡುವುದಲ್ಲದೆ ಅವರ ಪ್ರಣಕ್ಕೂ ಕೂಡ ಆಪತ್ತು ತಂದು ಕೊಳ್ಳುತ್ತಾರೆ. ಆದರೆ ಕೆಲವರು ಮದ್ಯಪಾನದ ಅಭ್ಯಾಸ ಮಾಡಿಕೊಂಡಿರುತ್ತಾರೆ ಆದರೆ ಕೆಲವು ದಿನಗಳ ನಂತರ ಅದರಿಂದ ದೂರ ಆಗಲು ಬಯಸುತ್ತಾರೆ ಆದರೆ ಎಷ್ಟೇ ಪ್ರಯತ್ನ ಪಟ್ಟರು ಕೂಡ ದೂರ ಆಗಲು ಆಗದೆ ಒದ್ದಾಡುತ್ತಾರೆ ಇಂತಹವರಿಗೆ ತಮ್ಮ ಕುಡಿತದ ಅಭ್ಯಾಸವನ್ನು ಬಿಡಲು ಸುಲಭ ಮನೆ ಮದ್ದುಗಳನ್ನು ಮಾಡಿಕೊಂಡರೆ ಸಾಕು ಸುಲಭವಾಗಿ ಕುಡಿತವನ್ನು ಬಿಡಬಹುದು ಹಾಗಾದರೆ ಅದು ಹೇಗೆ ನೋಡೋಣ ಬನ್ನಿ.

ಹಾಗಲಕಾಯಿಯ ಎಲೆಗಳು ಇದನ್ನು ಬಳಸುವುದು ಹೇಗೆಂದರೆ ಮೊದಲು ಹಾಗಲ ಕಾಯಿಯ ಎಲೆಯಿಂದ ರಸವನ್ನು ತೆಗೆದುಕೊಳ್ಳಬೇಕು ಆ ರಸವನ್ನು ಮಜ್ಜಿಗೆಯೊಂದಿಗೆ ಬೆರೆಸಿಕೊಂಡುಒಂದು ಲೋಟ ಮಜ್ಜಿಗೆಯೊಂದಿಗೆ ಮಿಶ್ರಣ ಮಾಡಬೇಕು ಇದನ್ನು ಸತತವಾಗಿ ಒಂದು ತಿಂಗಳು ಸೇವಿಸಬೇಕು ಹೀಗೆ ಮಾಡುವುದರಿಂದ ಕುಡಿತ ಅಭ್ಯಾಸ ತಪ್ಪುತ್ತದೆ. ಹಣ್ಣು ಮತ್ತು ತರಕಾರಿಗಳಾದ ನಿಂಬೆ ಹಣ್ಣು ಕಿತ್ತಳೆ ದ್ರಾಕ್ಷಿ ಸೇಬು ಬೀಟ್ರೂಟ್ ಕ್ಯಾರೆಟ್ ಸೆಲರಿ ಮುಂತಾದವುಗಳನ್ನು ನಿತ್ಯ ಆಹಾರದಲ್ಲಿ ಬಳಸಬೇಕು.ಜೊತೆಗೆ ಹಣ್ಣು ಮತ್ತು ತರಕಾರಿಗಳ ಜ್ಯುಸ್ ಅನ್ನು ಸೇವಿಸುವುದರಿಂದ ಕೂಡ ಕುಡಿತದ ಅಭ್ಯಾಸ ಹೋಗುತ್ತದೆ.

ಖರ್ಜೂರ ಇದನ್ನು ಬಳಸುವುದು ಹೇಗೆಂದರೆ ಒಂದು ಲೋಟ ನೀರಿಗೆ 5 ರಿಂದ 6 ಖರ್ಜುರವನ್ನು ಹಾಕಿ ಒಂದು ಗಂಟೆಗಳ ಕಾಲ ನೆನೆಸಬೇಕು ನಂತರ ಅದರ ಬೀಜಗಳನ್ನು ತೆಗೆದು ಚೆನ್ನಾಗಿ ನೀರಿನಲ್ಲಿ ಹಿಚುಕಬೇಕು ನಂತರ ಇದರ ರಸವನ್ನು ನಿತ್ಯ 2 ತಿಂಗಳು ಸೇವಿಸಬೇಕು ಹೀಗೆ ಮಾಡುತ್ತ ಬಂದರೆ ಕುಡಿತದ ಅಭ್ಯಾಸ ತಪ್ಪುತ್ತದೆ. ಓಂ ಕಾಳು ಇದನ್ನು ನೀರಿನಲ್ಲಿ ಹಾಕಿ ಅದನ್ನು ಚೆನ್ನಾಗಿ ಕುದಿಸಬೇಕು ನಂತರ ಅದನ್ನು ಸೋಸಬೇಕು ಈ ರಸವನ್ನು ಮದ್ಯ ಸೇವನೆ ಮಾಡಬೇಕು ಎಂದೆನ್ನಿಸಿದಾಗೆಲ್ಲ 2 ರಿಂದ 3 ಚಮಚ ಕುಡಿದರೆ ಕುಡಿತದ ಅಭ್ಯಾಸ ಹೋಗುತ್ತದೆ.

ನೀರು ಲವಂಗ, ಏಲಕ್ಕಿ, ಹುಣಸೆಹಣ್ಣು, ಕಲ್ಲಂಗಡಿ ಮತ್ತು ಕಪ್ಪು ಉಪ್ಪು. ಇದನ್ನು ಬಳಸುವುದು ಹೇಗೆಂದರೆ ಸ್ವಲ್ಪ ನೀರಿಗೆ ಇವೆಲ್ಲವನ್ನು ಹಾಕಿ ಕುದಿಸಬೇಕು ನಂತರ ಅದು ಆರಿದ ನಂತರ ಅದನ್ನು ಸೋಸಿ ಅದಕ್ಕೆ ಕಲ್ಲಂಗಡಿ ರಸವನ್ನು ಸೇರಿಸಿ ನಿತ್ಯ ಬೆಳಿಗ್ಗೆ ತಿಂಡಿಯ ನಂತರ ಹಾಗೂ ರಾತ್ರಿ ಊಟದ ನಂತರ ಸೇವಿಸಬೇಕು ಹೀಗೆ ಸೇವಿಸುತ್ತಾ ಬಂದರೆ ಕುಡಿತದ ಚಟ ತಪ್ಪುತ್ತದೆ. ಒಂದು ಲೋಟ ನೀರಿಗೆ ಸ್ವಲ್ಪ ಶುಂಠಿಯ ಚುರುಗಳನ್ನು ಹಾಕಿ ಅದನ್ನು 10 ನಿಮಿಷ ಕುದಿಸಬೇಕು ನಂತರ ಇದನ್ನು ಸೋಸಿಕೊಂಡು ಕುಡಿಯಬೇಕು ಹೀಗೆ ಮಾಡುವುದರಿಂದ ಕೂಡ ಕುಡಿತದ ಚಟ ತಪ್ಪುತ್ತದೆ.

ಒಂದು ಲೋಟ ಬಿಸಿಯಾದ ಹಾಲಿಗೆ ಸ್ವಲ್ಪ ಅಶ್ವಗಂಧದ ಪುಡಿಯನ್ನು ಸೇರಿಸಿಕೊಂಡು ಪ್ರತಿದಿನ ಕುಡಿಯುತ್ತ ಬಂದರೆ ಕುಡಿತದ ಚಟ ಬಿಡುತ್ತದೆ. ಒಂದು ಲೋಟ ನೀರಿಗೆ ಸ್ವಲ್ಪ ದತ್ತೂರಿ ಬೀಜಗಳನ್ನು ಸೇರಿಸಿ ಅದನ್ನು ಸ್ವಲ್ಪ ಸಮಯ ಕುದಿಸಬೇಕು ನಂತರ ಈ ಮಿಶ್ರಣವನ್ನು ಸೋಸಿ ಕುಡಿಯುತ್ತ ಬಂದರೆ ಕುಡಿತದ ಅಭ್ಯಾಸ ಬಿಟ್ಟು ಹೋಗುತ್ತದೆ. ಒಂದು ಲೋಟ ನೀರಿಗೆ ಸ್ವಲ್ಪ ತುಳಸಿ ಎಲೆಗಳನ್ನು ಮತ್ತು ಸ್ವಲ್ಪ ಕರಿ ಮೆಣಸಿನ ಪುಡಿಯನ್ನು ಹಾಕಿ ಅದನ್ನು ರಾತ್ರಿ ಪೂರ್ಣ ನೆನಸಬೇಕು ನಂತರ ಅದನ್ನು ನಿತ್ಯ ಸೇವಿಸುತ್ತಾ ಬಂದರೆ ಕುಡಿತದ ಅಭ್ಯಾಸ ಹೋಗುತ್ತದೆ. ನೋಡಿ ಕುಡಿತದ ಅಭ್ಯಾಸವನ್ನು ನಮ್ಮಿಂದ ದೂರ ಮಾಡಿಕೊಳ್ಳಲು ನಮ್ಮಲ್ಲೆ ಎಷ್ಟೆಲ್ಲ ರೀತಿಯ ಮನೆ ಮದ್ದುಗಳು ಇವೆ ಇವುಗಳನ್ನು ಉಪಯೋಗಿಸಿ ಮದ್ಯಪಾನದ ಅಭ್ಯಾಸವನ್ನು ತೊಲಗಿಸಿ ಆರೋಗ್ಯ ಕಾಪಾಡಿಕೊಳ್ಳಿ.

1 COMMENT

  1. The Kannada inscription excavated at the Pranaveshwara temple complex at Talagunda near Shiralakoppa in Shikaripur taluk of Shivamogga district, dated to 370 CE is said to be one of the earliest Kannada inscriptions replacing the Halmidi inscription of 450 CE.

LEAVE A REPLY

Please enter your comment!
Please enter your name here