ಚರ್ಮ ರೋಗಗಳು ಬರಲೇ ಬಾರದು ಅಂದ್ರೆ ವೆನಿಗರ್ ತಗಂಡು ಹೀಗೆ ಮಾಡಿರಿ

0
812

ಆಪಲ್ ವೆನಿಗರ್ ಇದನ್ನು ನಾವು ಅನೇಕ ರೀತಿಯಲ್ಲಿ ಬಳಸಿರುತ್ತೇವೆ. ಆದರೆ ಇದರಿಂದ ದೇಹದ ದುರ್ಗಂಧವನ್ನು ಸಹ ತಡೆಬಹುದು. ಆಪಲ್ ವೆನಿಗರನ್ನು ನಾವು ಅಡುಗೆ ಮನೆ ಸ್ವಚ್ಛ ಮಾಡಲು ಮತ್ತು ಸೌಂದರ್ಯ ಕ್ಕೂ ಸಹ ಹೆಚ್ಚಿನ ರೀತಿಯಲ್ಲಿ ಬಳಕೆ ಮಾಡುತ್ತೇವೆ. ಆದರೆ ನಾವು ನಿಮಗೆ ಇಂದು ಈ ಆಪಲ್ ವೆನಿಗರನ್ನು ಬಳಕೆ ಮಾಡಿಕೊಂಡು ನಿಮ್ಮ ದೇಹದಲ್ಲಿ ಆಗುವ ಅನೇಕ ರೀತಿಯ ಸಮಸ್ಯೆಗಳಿಗೆ ಹೇಗೆ ಪರಿಹಾರ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸುತ್ತೇವೆ. ಆಪಲ್ ವೆನಿಗರನ್ನು ಮೊದಲು ಒಂದು ಸಣ್ಣ ಕಪ್ ನಲ್ಲಿ ಹಾಕಿಕೊಂಡು ನಂತರ ಶುದ್ಧವಾದ ಹತ್ತಿಯಿಂದ ನಿಮ್ಮ ದೇಹದ ವಿವಿಧ ಭಾಗಗಳಿಗೆ ಹಚ್ಚಿದರೆ ಏನೆಲ್ಲಾ ಸಮಸ್ಯೆ ಬಗೆಹರಿಯುತ್ತದೆ ಎಂಬುದನ್ನು ತಿಳಿದು ಕೊಳ್ಳೋಣ.

ನಾವು ನಮ್ಮ ಚರ್ಮ ರೋಗಕ್ಕಾಗಲಿ ಅಥವಾ ಇನ್ಯಾವುದೋ ಒಂದು ದೇಹದ ಸೌಂದರ್ಯಕ್ಕಾಗಲಿ ಸಾಕಷ್ಟು ಖರ್ಚು ಮಾಡುತ್ತೇವೆ. ಆದರೆ ಮನೆಯಲ್ಲಿರುವ ಒಂದಿಷ್ಟು ಔಷಧಿಗಳನ್ನು ಬಳಸಿಕೊಂಡು ಮನೆಮದ್ದಾಗಿ ನಾವು ಉಪಯೋಗ ಮಾಡಿಕೊಂಡರೆ ನಮಗೆ ಯಾವುದೇ ರೀತಿಯ ಸಮಸ್ಯೆಗಳು ಬರುವುದಿಲ್ಲ.ಕೆಲವರಿಗೆ ಇದ್ದಕ್ಕಿದ್ದಂತೆ ಸಣ್ಣ ವಯಸ್ಸಿನಲ್ಲೇ ಮುಖ ಅಥವಾ ಚರ್ಮ ಬಾಡುವಂತೆ ಆಗುತ್ತದೆ. ಹಾಗೇಯೇ ನೆರಿಗೆಗಳನ್ನು ನೀವು ತಡೆಯಬೇಕೆಂದರೆ ಆಪಲ್ ವೆನಿಗರಿನಿಂದ ನಿಮ್ಮ ಮುಖವನ್ನು ಹತ್ತಿಯ ಮುಖಾಂತರ ಉಜ್ಜಿಕೊಂಡರೆ ನಿಮಗೆ ವಯಸ್ಸಾಗುವ ಲಕ್ಷಣಗಳು ಏನಾದರೂ ಕಾಣಿಸುತ್ತಿದ್ದರೆ ಅದೆಲ್ಲವನ್ನು ಸಹ ಮರೆಮಾಚುತ್ತದೆ.

ಪ್ರತಿದಿನ ಬೆಳಿಗ್ಗೆ ನೀವು ಸ್ನಾನ ಮಾಡುವುದಕ್ಕೆ ಮುಂಚೆ ಆಪಲ್ ವೆನಿಗರನ್ನು ಹತ್ತಿಯಿಂದ ಮುಖಕ್ಕೆ ಉಜ್ಜಿಕೊಂಡರೆ ನಿಮಗೆ ಮೊಡವೆ ಹಾಗು ಕಲೆಗಳನ್ನು ಸಂಪೂರ್ಣವಾಗಿ ತಡೆಯುತ್ತದೆ ಮತ್ತು ಈಗಾಗಲೇ ಆಗಿರುವ ಮೊಡವೆ ಹಾಗು ಕಲೆಗಳನ್ನು ಸಂಪೂರ್ಣವಾಗಿ ಹೋಗುವಂತೆ ಮಾಡುತ್ತದೆ. ನಿಮ್ಮ ಮುಖದಲ್ಲಿ ಯಾವಾಗಲೂ ಎಣ್ಣೆಯ ಅಂಶ ಅಂದರೆ ಆಯಿಲ್ ಸ್ಕಿನ್ ಏನಾದರೂ ಇತ್ತು ಎಂದಾದರೆ ಆಪಲ್ ವೆನಿಗರನ್ನು ಹಾಕಿ ಹತ್ತಿಯಿಂದ ಉಜ್ಜಿದರೆ ಅದು ಎಣ್ಣೆಯ ಚರ್ಮವನ್ನು ಹೋಗಲಾಡಿಸುತ್ತದೆ ಮತ್ತು ನಿಮ್ಮ ಮುಖ ಹೊಳೆಯುವಂತೆ ಮಾಡುತ್ತದೆ.

ದೇಹದ ವಿವಿಧ ಭಾಗಗಳಲ್ಲಿ ತುರಿಕೆ ಮತ್ತು ಚರ್ಮ ಸಂಬಂಧಿಸಿದಂತೆ ತುರಿಕೆಗಳು ಏನಾದರೂ ಇದ್ದರೆ ಒಂದಿಷ್ಟು ಆಪಲ್ ವೆನಿಗರನ್ನು ಆ ಭಾಗದಲ್ಲಿ ಹತ್ತಿಯಿಂದ ಎರಡು ಮೂರು ನಿಮಿಷಗಳ ಕಾಲ ಉಜ್ಜಿಕೊಂಡರೆ ಖಂಡಿತಾ ನಿಮಗೆ ತುರಿಕೆಯ ಸಮಸ್ಯೆ ದೂರವಾಗುತ್ತದೆ. ಇದಕ್ಕೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಸಹ ಇರುವುದಿಲ್ಲ. ತಲೆ ಹೊಟ್ಟಿನ ಸಮಸ್ಯೆ ಇರುವವರು ಸಾಕಷ್ಟು ಕಷ್ಟ ಅನುಭವಿಸುತ್ತಾರೆ. ಅವರು ಹಲವು ರೀತಿಯ ಶ್ಯಾಂಪೂಗಳು ಹಾಗು ಕ್ರೀಮ್ಗಳನ್ನು ಹಚ್ಚಿ ತಡೆಯಲು ಪ್ರಯತ್ನಿಸುತ್ತಾರೆ. ಆದರೆ ಇದ್ಯಾವುದಕ್ಕೂ ತಲೆಹೊಟ್ಟಿನ ಸಮಸ್ಯೆ ಬಗೆಹರಿಯದೆ ಇದ್ದರೆ ಆಪಲ್ ವೆನಿಗರನ್ನು ಕೂದಲಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ನಂತರ ತಣ್ಣೀರಿನಿಂದ ತಲೆಗೆ ಸ್ನಾನ ಮಾಡಿದರೆ ತಲೆ ಹೊಟ್ಟಿನ ಸಮಸ್ಯೆ ನಿಜವಾಗಿಯೂ ಕಡಿಮೆಯಾಗುತ್ತದೆ.

ಈಗಂತೂ ಬೇಸಿಗೆ ಕಾಲ ಬಂದಿದೆ. ದೇಹ ಇದ್ದಕ್ಕಿದ್ದಂತೆ ಬೆವರಲು ಶುರುವಾಗುತ್ತದೆ ಮತ್ತು ದೇಹದ ದುರ್ಗಂಧವೂ ಸಹ ಹೆಚ್ಚಾಗುತ್ತದೆ. ನಾವು ಪ್ರತಿನಿತ್ಯ ಎರಡು ಮೂರು ಬಾರಿ ಸ್ನಾನ ಮಾಡಿದರೂ ಸಹ ದೇಹ ಹೆಚ್ಚಿನ ರೀತಿಯಲ್ಲಿ ಬೆವೆತು ವಾಸನೆ ಬರುತ್ತದೆ. ಆದ್ದರಿಂದ ಆಪಲ್ ವೆನಿಗರನ್ನು ತೆಗೆದುಕೊಂಡು ಕಂಕುಳದ ಕೆಳಗೆ ಹಚ್ಚಿಕೊಂಡರೆ ದೇಹದಿಂದ ಬರುವ ದುರ್ಗಂಧ ನಿವಾರಣೆಯಾಗುತ್ತದೆ. ಸ್ನೇಹಿತರೆ ತಿಳಿಯಿತಲ್ಲವೇ ಈ ಆಪಲ್ ವೆನಿಗರಿನಿಂದ ಎಷ್ಟೆಲ್ಲಾ ಉಪಯೋಗಗಳನ್ನು ಪಡೆದುಕೊಳ್ಳಬಹುದು ಎಂದು. ಈ ಲೇಖನವನ್ನು ಮರೆಯದೇ ಶೇರ್ ಮಾಡಿರಿ ಮತ್ತು ನಿಮ್ಮ ಎಲ್ಲಾ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here