ಈ ಬೀಜವನ್ನು ನೆನೆಸಿದ ನೀರನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಏನೆಲ್ಲ ಪ್ರಯೋಜನ ಗೊತ್ತೇ.

0
1108

ಕಾಮ ಕಸ್ತೂರಿಗೆ ಸಬ್ಜಾ ಬೇಸಿಲ್ ಸೀಡ್ಸ್ ಅಥವಾ ತುಕ್‎ಮಾರಿಯಾ ಸೀಡ್ಸ್ ಎಂಬ ಹಲವಾರು ಹೆಸರುಗಳು ಇವೆ ಹಾಗೂ ಸಂಸ್ಕೃತದಲ್ಲಿ ಇದಕ್ಕೆ ಕಠಿಂಜರ ಅಥವ ಪರ್ಣಾಸವೆಂದು ಎಂದು ಕರೆಯುತ್ತಾರೆ. ಹಾಗೂ ಇದು ವಯಸ್ಕರನ್ನು ಬದಲಾಯಿಸುವ ವಿಶಿಷ್ಟ ಸುಗಂಧವುಳ್ಳ ಗಿಡವಾಗಿದೆ. ಈ ಬೀಜವು ಕಪ್ಪು ಬಣ್ಣದಿಂದ ಕೂಡಿರುತ್ತದೆ ಇದನ್ನು ಸಿಹಿ ತುಳಸಿ ಸಸಿಗಳಿಂದ ಸಂಗ್ರಹಿಸಲಾಗುತ್ತದೆ ಹಾಗೂ ಈ ಬೀಜಗಳನ್ನು ನೀರಿನಲ್ಲಿ ನೆನೆಸಿ ನಂತರ ಉಪಯೋಗಿಸುತ್ತಾರೆ.

ಕಾಮ ಕಸ್ತೂರಿ ಬೀಜದಲ್ಲಿ ತೇವಾಂಶ ಪ್ರೋಟಿನ್‌ ಕೊಬ್ಬು ನಾರು ಕಾರ್ಬೋಹೈಡ್ರೇಟ್‌ ಅಂಶಗಳು ಇವೆ ಒಂದು ಚಮಚ ಕಾಮ ಕಸ್ತೂರಿಯ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ನೆನೆಹಾಕಬೇಕು ಇದು ಬೆಳಿಗ್ಗೆ ಒಳಗೆ ಲೋಳೆ ಸೇರಿದಂತೆ ಅಂಟು ಅಂಟಾಗಿ ಉಬ್ಬಿಕೊಂಡಿರುತ್ತದೆ ಇದಕ್ಕೆ ಬೆಳಿಗ್ಗೆ ಸ್ವಲ್ಪ ಕಲ್ಲು ಸಕ್ಕರೆಯ ಪುಡಿಯನ್ನು ಸೇರಿಸಿ ಸೇವಿಸಬೇಕು ಹೀಗೆ ಸೇವಿಸುವುದರಿಂದ ದೇಹಕ್ಕೆ ತುಂಬಾ ತಂಪು ನೀಡುತ್ತದೆ. ಕಸ್ತೂರಿ ಬೀಜದಲ್ಲಿ ಫ್ಲೇವನಾಯ್ಡ್ಸ್ ಅಂಶ ಇದ್ದು ಇದು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಪ್ರತಿನಿತ್ಯ ಕಾಮಕಸ್ತೂರಿ ಎಲೆಗಳ ರಸವನ್ನು ದೇಹಕ್ಕೆ ಹಚ್ಚಿಕೊಂಡರೆ ದೇಹದ ದುರ್ಗಂಧ ವಾಸನೆ ನಿವಾರಣೆಯಾಗುತ್ತದೆ. ಕಾಮಕಸ್ತೂರಿಯ ಹಸಿ ಎಲೆಗಳ ರಸವನ್ನು ಹಿಂಡಿ ಅದನ್ನು ಒಂದು ಬಟ್ಟೆಯಲ್ಲಿ ಶೋಧಿಸಿ ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ನೆಕ್ಕಿದರೆ ಗಂಟಲಿನ ಸಮಸ್ಯೆ ದೂರ ಆಗುತ್ತದೆ. ಒಂದೇ ಸಮನೆ ಮೂಗಿನಿಂದ ನೀರು ಸುರಿಯುವುದು ಶೀತ ಮತ್ತು ಜ್ವರಕ್ಕೆ ಈ ಕಾಮ ಕಸ್ತೂರಿ ಎಲೆಗಳ ಕಷಾಯ ಒಳ್ಳೆಯ ಮದ್ದು ಇದರಿಂದ ಕಷಾಯವನ್ನು ಮಾಡಿಕೊಂಡು ಕುಡಿದರೆ ಸಮಸ್ಯೆಗಳು ದೂರ ಆಗುತ್ತವೆ. ಒಂದು ಚಮಚ ಕಾಮ ಕಸ್ತೂರಿ ಬೀಜವನ್ನು ಒಂದು ಬಟ್ಟಲಿನಲ್ಲಿ ತಣ್ಣೀರಿಗೆ ಬೆರೆಸಿ ಅದನ್ನು ನುಣ್ಣಗೆ ರುಬ್ಬಿ ಶೋಧಿಸಿ ಸೇವಿಸುವುದರಿಂದ ರಕ್ತ ಭೇದಿಯ ಸಮಸ್ಯೆ ದೂರ ಆಗುತ್ತದೆ.

ಕಾಮ ಕಸ್ತೂರಿ ಗಿಡದ ಹೂಗಳನ್ನು ನೀರಿನಲ್ಲಿ ಅರೆದು ಅದನ್ನು ಶೋಧಿಸಿ ಅದಕ್ಕೆ ಸ್ವಲ್ಪ ಜೇನುತುಪ್ಪ ಹಾಕಿ ಸೇವಿಸಿದರೆ ಅಜೀರ್ಣದ ಸಮಸ್ಯೆ ಹೊಟ್ಟೆಯ ಸಮಸ್ಯೆ ದೂರ ಆಗುತ್ತದೆ. ಕಾಮ ಕಸ್ತೂರಿ ಬೀಜವನ್ನು ಸೇವಿಸುವುದರಿಂದ ಎಡಿಮಾ ಮತ್ತು ಉರಿಯೂತಕ್ಕೆ ಸಂಬಂಧಿಸಿರುವ ಸಮಸ್ಯೆಯನ್ನು ದೂರ ಆಗುತ್ತವೆ. ಕಾಮ ಕಸ್ತೂರಿಯ ಬೀಜವನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಕಡಿಮೆ ಆಗುತ್ತದೆ. ಕಾಮ ಕಸ್ತೂರಿ ಬೀಜಗಳ ಸೇವನೆಯಿಂದ ಮನಸ್ಸಿನ ಮೇಲೆ ಹಿತವಾದ ಮತ್ತು ಶಾಂತಗೊಳಿಸುವ ಪರಿಣಾಮ ಬೀರುತ್ತದೆ. ಮಾನಸಿಕ ಒತ್ತಡ ಮತ್ತು ಖಿನ್ನತೆಗೆ ಕಾಮ ಕಸ್ತೂರಿ ಬೀಜ ಒಳ್ಳೆಯ ಔಷಧಿ. ನೋಡಿದರಲ್ಲ ಕಾಮ ಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿ ಸೇವಿಸುವುದರಿಂದ ಎಷ್ಟೆಲ್ಲ ಲಾಭಗಳನ್ನು ಪಡೆಯಬಹುದು ಹಾಗಾಗಿ ಇದರ ಪ್ರಯೋಜನ ಪಡೆದುಕೊಳ್ಳಿ. ನಮ್ಮ ವೆಬ್ಸೈಟ್ ಎಲ್ಲ ರೀತಿಯ ಕಾಪಿರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡುವ ಪ್ರಯತ್ನ ಮಾಡಿದ್ರೆ ಕಾನೂನು ರೀತಿಯ ಕ್ರಮ ತೆಗೆದುಕೊಳ್ಳುತ್ತೇವೆ.

LEAVE A REPLY

Please enter your comment!
Please enter your name here