ನಾವು ಪ್ರತಿ ದಿನ ಅಡುಗೆ ಮನೆಯಲ್ಲಿ ಬಳಸುವ ಹಲವು ರೀತಿಯ ವಸ್ತುಗಳಿಂದ ನಮ್ಮ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು ಆದರೆ ಹಾಗೆಯೇ ನಮಗೆ ನಿಮಗೆ ಚಿರ ಪರಿಚಿತವಾಗಿರುವ ಉಪ್ಪಿನಲ್ಲಿ ಎರಡು ರೀತಿಯ ಉಪ್ಪು ಸಿಗುತ್ತದೆ ಅದರಲ್ಲಿ ಪುಡಿ ಪುಡಿ ಉಪ್ಪು ಹಾಗೂ ಕಲ್ಲು ಉಪ್ಪು ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಹೆಚ್ಚಾಗಿ ಬಳಕೆ ಮಾಡುತ್ತಿದ್ದು ಕಲ್ಲು ಉಪ್ಪು ಆದರೆ ಇಂದು ಕಲ್ಲು ಉಪ್ಪನ್ನು ಹೆಚ್ಚಾಗಿ ಯಾರು ಕೂಡ ಬಳಸುವುದಿಲ್ಲ ಎಲ್ಲರೂ ಪುಡಿ ಉಪ್ಪು ಬಳಸುತ್ತಾರೆ
ಆದರೆ ಕಲ್ಲು ಉಪ್ಪು ಬಳಕೆ ಮಾಡುವುದರಿಂದ ಏನೆಲ್ಲ ಪ್ರಯೋಜನ ಆಗುತ್ತದೆ ಗೊತ್ತೇ. ಕಲ್ಲು ಉಪ್ಪಲ್ಲಿ ಮೆಗ್ನಿಶಿಯಂ ಅಂಶವು ಹೆಚ್ಚಾಗಿ ಇರುತ್ತದೆ ಅಗಾಗಿ ಇದು ಆರೋಗ್ಯಕ್ಕೆ ಒಳ್ಳೆಯದು. ಕಲ್ಲು ಉಪ್ಪನ್ನು ಬಳಸುವುದರಿಂದ ಮಾನಸಿಕ ಒತ್ತಡ ಕಡಿಮೆ ಆಗುತ್ತದೆ. ಕಲ್ಲು ಉಪ್ಪಿನಲ್ಲಿರುವ ಮೆಗ್ನೇಷಿಯಂ ಹಾಗೂ ಸೋಡಿಯಂ ಅಂಶಗಳು ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಲ್ಲು ಉಪ್ಪು ಸೇವಿಸುವುದರಿಂದ ಯಾವುದೇ ರೀತಿಯ ಬ್ಯಾಕ್ಟೀರಿಯಾ ಹಾಗೂ ವೈರಲ್ ಫಿವರ್ ಗಳು ಕಡಿಮೆ ಆಗುತ್ತವೆ.

ಕಲ್ಲು ಉಪ್ಪನ್ನು ಬಳಸುವುದರಿಂದ ಅಸ್ತಮಾ ಹಾಗೂ ಇನ್ನಿತರ ಶ್ವಾಸಕೋಶದ ಸಮಸ್ಯೆಗಳು ಗುಣ ಆಗುತ್ತವೆ. ಕಲ್ಲು ಉಪ್ಪು ಬಳಸುವುದರಿಂದ ಜೀರ್ಣಕ್ರಿಯೆ ಸಮಸ್ಯೆ ,ಹೊಟ್ಟೆನೋವು ಸಮಸ್ಯೆ ಮಲಬದ್ಧತೆಯ ಸಮಸ್ಯೆ ದೂರ ಆಗುತ್ತವೆ. ಕಲ್ಲು ಉಪ್ಪನ್ನು ನೀರಿನಲ್ಲಿ ಬೆರೆಸಿ ಎರಡರಿಂದ ಮೂರು ಚಮಚ ಸೇವಿಸಿದರೆ ತುಂಬಾ ಒಳ್ಳೆಯದು. ಕಲ್ಲು ಉಪ್ಪಿನಲ್ಲಿರುವ ಕ್ಯಾಲ್ಷಿಯಂ ಹಾಗೂ ಮೆಗ್ನೀಷಿಯಂ ಅಂಶಗಳು ದೇಹದಲ್ಲಿ ಆಮ್ಲಜನಕ ಪೂರೈಕೆಯನ್ನು ಉತ್ತಮಗೊಳಿಸುತ್ತದೆ. ಜೀರ್ಣಕ್ರಿಯೆ ಸಮಸ್ಯೆಗೆ ಕಲ್ಲು ಉಪ್ಪು ತುಂಬಾ ಒಳ್ಳೆಯದು. ದೇಹದ ಚಯಾಪಚಯವನ್ನು ಹೆಚ್ಚಿಸಲು ಕಲ್ಲು ಉಪ್ಪು ಸಹಕರಿಸುತ್ತದೆ ಜೋತೆಗೆ ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.
ಕಲ್ಲು ಉಪ್ಪಲ್ಲಿ ಪೊಟಾಷಿಯಂ ಅಂಶ ಅಧಿಕವಿರುವ ಕಾರಣ ರಕ್ತದೊತ್ತಡ ಸಮಸ್ಯೆ ನಿವಾರಣೆ ಆಗುತ್ತದೆ. ಕಲ್ಲು ಉಪ್ಪುನಲ್ಲಿ ಮೆಲಟೊನಿನ್ ಎಂಬ ಅಂಶವಿದ್ದು ಇದು ನಿದ್ರಾಹೀನತೆ ಸಮಸ್ಯೆಯನ್ನು ನಿವಾರಿಸುತ್ತದೆ. ಚರ್ಮದಲ್ಲಿ ಸೇರಿರುವ ವಿಷಕಾರಿ ಅಂಶವನ್ನು ತೊಡೆದುಹಾಕುವ ಶಕ್ತಿ ಕಲ್ಲು ಉಪ್ಪಿಗೆ ಇದೆ. ಕಲ್ಲು ಉಪ್ಪನ್ನು ಶ್ಯಾಂಪೂವೊಂದಿಗೆ ಮಿಶ್ರಣಮಾಡಿ ಕೂದಲು ತೊಳೆದರೆ ಕೂದಲು ಸೊಂಪಾಗಿ ಬೆಳೆಯುತ್ತದೆ ಕೂದಲಿನ ಸಮಸ್ಯೆ ದೂರ ಆಗುತ್ತದೆ. ಸೈನಸ್ ಮೈಗ್ರೇನ್ ಮತ್ತು ಇತರೆ ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡಲು ಕಲ್ಲು ಉಪ್ಪು ಸಹಾಯಕಾರಿಯಾಗಿದೆ.
ನಿತ್ಯ ಬೆಳಿಗ್ಗೆ ಬಿಸಿ ನೀರಿಗೆ ಕಲ್ಲು ಉಪ್ಪು ಹಾಕಿ ಬಾಯಿಯನ್ನು ಮುಕ್ಕಳಿಸುವುದರಿಂದ ಒಣಕೆಮ್ಮು ಗಂಟಲು ನೋವು ಊತ ಹಾಗೂ ಟಾನ್ಸಿಲ್ಗಳಂತಹ ತೊಂದರೆಗಳು ನಿವಾರಣೆ ಆಗುತ್ತವೆ. ಕಲ್ಲು ಉಪ್ಪು ದೇಹದ ಕೊಬ್ಬನ್ನು ಕರಗಿಸಿ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇನ್ನೊಂದು ನೆನೆಪಿನಲ್ಲಿ ಇಟ್ಟುಕೊಳ್ಳಬೇಕಾದ ವಿಷಯ ಏನೆಂದರೆ ಕಲ್ಲು ಉಪ್ಪನ್ನು ನಿತ್ಯ 3 ಗ್ರಾಂಗಿಂತ ಹೆಚ್ಚು ಸೇವಿಸಬೇಡಿ. ಜೊತೆಗೆ ಅಧಿಕ ರಕ್ತದ ಒತ್ತಡವಿರುವ ವ್ಯಕ್ತಿಯು ಕೂಡ ಕಲ್ಲು ಉಪ್ಪು ಸೇವಿಸಬಾರದು. ಹಾಗಾಗಿ ನಿತ್ಯ ಪುಡಿ ಉಪ್ಪು ಬಳಸುವ ಬದಲು ಕಲ್ಲು ಉಪ್ಪು ಬಳಸಿ ಆರೋಗ್ಯವನ್ನು ಕಾಪಿಡಿಕೊಳ್ಳಿ.