ಕೀಲುನೋವು ಬರಲೇ ಬಾರದು ಅಂದ್ರೆ ಈ ಮನೆ ಮದ್ದು ಮಾಡಿರಿ

0
841

ಇತ್ತೀಚೆಗೆ ಎಲ್ಲರಲ್ಲೂ ಕೂಡ ಕೀಲು ನೋವು ಎಂಬುದು ಕಾಣಿಸುತ್ತಿದೆ ಈ ಕೀಲು ನೋವು ಎಂಬುದು ಒಂದು ಬಾರಿ ಬಂದರೆ ಸಾಕು ಅದನ್ನು ಗುಣ ಪಡಿಸಿಕೊಳ್ಳುವುದು ತುಂಬಾ ಕಷ್ಟ ಅದರಲ್ಲೂ 30 ರಿಂದ 45 ವರ್ಷ ವಯಸ್ಸಿನಲ್ಲಿ ಹೆಚ್ಚಾಗಿ ಕಾಡುವ ಸಮಸ್ಯೆ ಎಂದರೆ ಕೀಲು ನೋವಿನ ಸಮಸ್ಯೆ ಈ ಸಮಸ್ಯೆಯನ್ನು ಗುಣ ಪಡಿಸಿಕೊಳ್ಳುವುದು ತುಂಬಾ ಕಷ್ಟ ಎಷ್ಟೇ ಹಣವನ್ನು ಖರ್ಚು ಮಾಡಿದರು ಕೂಡ ಈ ಸಮಸ್ಯೆಗೆ ಸರಿಯಾದ ಔಷಧಿ ಸಿಗುವುದಿಲ್ಲ ಈ ಕೀಲು ನೋವು ಎಂದು ಆಸ್ಪತ್ರೆಗೆ ಹೋದರೆ ಅಲ್ಲಿ ಕೊಡುವ ಔಷಧಿಯಿಂದ ಕೀಲು ನೋವಿನ ಸಮಸ್ಯೆ ಕೂಡ ಹೋಗುವುದಿಲ್ಲ ಜೊತೆಗೆ ಈ ಔಷಧಿ ತೆಗೆದುಕೊಳ್ಳುವುದರಿಂದ ಅಡ್ಡ ಪರಿಣಾಮ ಕೂಡ ಬೀರುತ್ತದೆ.

ಆದರೆ ಯಾವುದೇ ಅಡ್ಡ ಪರಿಣಾಮ ಇಲ್ಲದೆ ಸುಲಭವಾಗಿ ತುಂಬಾ ಬೇಗ ಈ ಕೀಲು ನೋವಿನ ಸಮಸ್ಯೆ ಹೋಗಿಸುವ ಮದ್ದನ್ನು ತಿಳಿಯೋಣ ಬನ್ನಿ. ನಾವು ಬಳಸುವ ಮೆಂತ್ಯೆ ಕಾಳು ಪಾರಿಜಾತ ಎಲೆಗಳು ಮತ್ತು ಒಣಗಿದ ಹುಣಸೆ ಬೀಜಗಳ ಪುಡಿಗಳಿಂದ ಸುಲಭವಾಗಿ ಮೂಳೆ ಸವೆತವನ್ನು ಹೋಗಿಸಬಹುದು. ಮೆಂತ್ಯೆ ಕಾಳು ಇದನ್ನು ಒಂದು ಸ್ಪೂನ್ ತೆಗೆದುಕೊಂಡು ಒಂದು ಗ್ಲಾಸ್ ಉಗುರು ಬೆಚ್ಚಗಿನ ನೀರಿನಲ್ಲಿ ಹಾಕಿ ರಾತ್ರಿಯೆಲ್ಲ ನೆನೆಸಬೇಕು ನಂತರ ಬೆಳಿಗ್ಗೆ ಖಾಲಿ ಹೊಟ್ಟೆಗೆ ಆ ನೀರನ್ನು ಕುಡಿಯಬೇಕು ಹೀಗೆ ಒಂದು ವಾರ ತಪ್ಪದೆ ಮಾಡುತ್ತ ಬಂದರೆ ಕೀಲು ನೋವು ಬೇಗ ಹೋಗಿ ಮೂಳೆ ಗಟ್ಟಿ ಆಗುತ್ತದೆ.

ದೇವಾಲಯಗಳಲ್ಲಿ ಹೆಚ್ಚಾಗಿ ಕಂಡು ಬರುವ ಪಾರಿಜಾತ ಗಿಡಗಳು, ಈ ಗಿಡದಲ್ಲಿ ಬಿಳಿ ಬಣ್ಣದ ಹೂವುಗಳು ಇರುತ್ತವೆ ಈ ಹೂಗಳು ಹೆಚ್ಚಾಗಿ ರಾತ್ರಿ ಸಮಯದಲ್ಲಿ ಬಿಡುತ್ತವೆ ಇದರ ಎಲೆಗಳನ್ನು 5 ರಿಂದ 6 ರಷ್ಟು ತೆಗೆದುಕೊಂಡು ಬಂದು ಅದನ್ನು ಫೇಸ್ಟ್ ರೀತಿ ಮಾಡಿಕೊಳ್ಳಬೇಕು ಅದನ್ನು ಒಂದು ಗ್ಲಾಸ್ ನೀರಿನಲ್ಲಿ ಚೆನ್ನಾಗಿ ಕುದಿಸಬೇಕು ನಂತರ ಆ ನೀರು ಅರ್ಧ ಆಗುವವರೆಗೂ ಕಷಾಯದಂತೆ ಕುದಿಸಬೇಕು ಆ ಕಷಾಯವನ್ನು ರಾತ್ರಿಯೆಲ್ಲ ಹಾಗೆಯೇ ಇಟ್ಟು ಬೆಳಿಗ್ಗೆ ತಣ್ಣಗಿದ್ದಾಗಲೇ ಕುಡಿಯಬೇಕು ಪಾರಿಜಾತ ಎಲೆಗಳ ಕಷಾಯವನ್ನು ಕುಡಿಯುವುದರಿಂದ ಮೂಳೆಗಳು ಗಟ್ಟಿ ಆಗುತ್ತವೇ.

ಒಣಗಿದ ಹುಣಸೆ ಬೀಜ ಇದರಲ್ಲೂ ಕೂಡ ಔಷಧಿಯ ಗುಣ ಇದೆ ಹಾಗಾಗಿ ಹುಣಸೆ ಬೀಜವನ್ನು ಚೆನ್ನಾಗಿ ಬೇಯಿಸಬೇಕು ನಂತರ ಆ ಬೀಜಗಳನ್ನು ನೀರಿನಲ್ಲಿ ಎರಡು ದಿನ ಹಾಗೆ ನೆನೆಸಬೇಕು ಚೆನ್ನಾಗಿ ನೆನೆದ ಮೇಲೆ ಅದರ ಸಿಪ್ಪೆಯನ್ನು ತೆಗೆದು ಚೆನ್ನಾಗಿ ಒಣಗಿಸಬೇಕು ಒಣಗಿದ ಹುಣಸೆ ಬೀಜಗಳನ್ನು ಪುಡಿ ಮಾಡಿಕೊಂಡು ಆ ಪುಡಿಯನ್ನು ಒಂದು ಚಮಚದಷ್ಟು ಒಂದು ಗ್ಲಾಸ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಬೇಕು ಅದಕ್ಕೆ ಸ್ವಲ್ಪ ಹಾಲು, ಸಕ್ಕರೆ ಹಾಕಿ ಪಾಯಸದಂತೆ ಮಾಡಿ ಬೆಳಿಗ್ಗೆ ಮತ್ತು ಸಂಜೆ ಸೇವಿಸಬೇಕು ಹೀಗೆ ಮಾಡಿದರೆ ಕೀಲು ನೋವು ಗುಣ ಆಗುತ್ತದೆ. ಈ ಮೇಲಿನ ಔಷಧಗಳನ್ನು ತಪ್ಪದೆ ಪಾಲಿಸುತ್ತಾ ಬಂದರೆ ಸಾಕು ಕೀಲು ನೋವು ಹೋಗಿ ಮೂಳೆಗಳು ಗಟ್ಟಿ ಆಗುತ್ತದೆ.

LEAVE A REPLY

Please enter your comment!
Please enter your name here