ಸಾಮಾನ್ಯವಾಗಿ ಎಲ್ಲರೂ ಕೂಡ ಆಸೆ ಪಡುವುದು ಸ್ಲಿಮ್ ಆಗಿ ಕಾಣಬೇಕು ಎಂದು ಅದಕ್ಕಾಗಿ ಏನೆಲ್ಲ ಹರಸಾಹಸ ಪಡುತ್ತಾರೆ ಆದರೆ ಕೆಲವರು ಎಷ್ಟು ಸಣ್ಣ ಇರುತ್ತಾರೆ ಎಂದರೆ ನೋಡಿದವರೆಲ್ಲ ಯಾಕೆ ಸಣ್ಣ ಇದೀಯ ಎಂದು ಕೇಳುತ್ತಾರೆ ಜೊತೆಗೆ ತುಂಬಾ ಸಣ್ಣ ಇದ್ದರು ಚೆನ್ನಾಗಿ ಕಾಣಿಸುವುದಿಲ್ಲ ತುಂಬಾ ದಪ್ಪ ಇದ್ದರು ಚೆನ್ನಾಗಿ ಕಾಣಿಸುವುದಿಲ್ಲ ಅದಕ್ಕಾಗಿ ತುಂಬಾ ಸಣ್ಣ ಇರುವವರು ದಪ್ಪ ಆಗುವುದಕ್ಕಾಗಿ ಏನೆಲ್ಲ ತಿನ್ನುತ್ತಾರೆ ಏನೆಲ್ಲ ಟಾನಿಕ್ ಗಳೆಲ್ಲ ಕುಡಿಯುತ್ತಾರೆ ಆದರೆ ಸಣ್ಣ ಇರುವವರು ದಪ್ಪ ಆಗುವುದಕ್ಕೆ ತುಂಬಾ ಸುಲಭ ವಿಧಾನ ಏನೆಂದು ತಿಳಿಯೋಣ ಬನ್ನಿ.
ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೊಟ್ಟೆಯಲ್ಲಿನ ಬಿಳಿ ಸೇವನೆ ಮಾಡಿರಿ ಏಕೆಂದರೆ ಮೊಟ್ಟೆಯಲ್ಲಿ ಹೆಚ್ಚಿನ ಕ್ಯಾಲೊರಿ ಪ್ರೋಟೀನ್ ಕೊಬ್ಬಿನ ಅಂಶವಿದ್ದು ಇದು ದೇಹದ ತೂಕವನ್ನು ಹೆಚ್ಚು ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಮೊಟ್ಟೆಯ ಈ ಬಿಳಿ ಭಾಗವನ್ನು ತಿನ್ನುವುದರಿಂದ ದಪ್ಪ ಆಗಬಹುದು. ಹಾಲು ಮತ್ತು ಬಾಳೆ ಹಣ್ಣು ಸೇವಿಸುವುದು ಏಕೆಂದರೆ ಬಾಳೆ ಹಣ್ಣಿನಲ್ಲಿ ಕ್ಯಾಲೊರಿ ಹೆಚ್ಚಿನ ಪ್ರಮಾಣದಲ್ಲಿದೆ ಜೊತೆಗೆ ಕಾರ್ಬೋ ಹೈಡ್ರೆಟ್ಸ್ ಪೊಟ್ಯಾಸಿಯಂ ಕೂಡ ಹೆಚ್ಚಾಗಿ ಇದೆ ಹಾಗಾಗಿ ಇದು ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಲು ಸಹಾಯ ಮಾಡುತ್ತದೆ. ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ನಿತ್ಯ ಬೆಳಗ್ಗೆ ಒಂದು ಲೋಟ ಹಾಲು ಮತ್ತು ಒಂದು ಬಾಳೆ ಹಣ್ಣು ಸೇವಿಸುತ್ತಾ ಬನ್ನಿ.

ಮಾವಿನ ಹಣ್ಣು ಇದರಲ್ಲಿ ಸಕ್ಕರೆಯ ಅಂಶ ನಾರಿನ ಅಂಶ ಹೆಚ್ಚಾಗಿ ಇದೆ ಹಾಗಾಗಿ ನಿತ್ಯ ಒಂದು ಮಾವಿನ ಹಣ್ಣನ್ನು ತಿಂದು ಒಂದು ಲೋಟ ಹಾಲು ಕುಡಿದರೆ ದಪ್ಪ ಆಗಲು ಸಹಾಯ ಆಗುತ್ತದೆ. ಆಲುಗಡ್ಡೆ ಇದರಲ್ಲಿ ಕಾರ್ಬೋ ಹೈಡ್ರೆಟ್ಸ್ ಹೆಚ್ಚಾಗಿದ್ದು ದೇಹದ ತೂಕವನ್ನು ಹೆಚ್ಚಿಸಿ ಕೊಳ್ಳಲು ಸಹಾಯವಾಗುತ್ತದೆ. ಆದರೆ ನೀವು ಯಾವಾಗಲು ಹೆಚ್ಚು ಬೇಯಿಸಿದ ಆಲೋ ಸೇವಿಸುವುದು ಸೂಕ್ತ. ನಿತ್ಯ ಅಂಜೂರ ಮತ್ತು ಒಣ ದ್ರಾಕ್ಷಿಯನ್ನು ರಾತ್ರಿ ನೀರಿನಲ್ಲಿ ಅಥವಾ ಹಾಲಿನಲ್ಲಿ ನೆನೆ ಹಾಕಿ ಬೆಳಿಗ್ಗೆ ಎದ್ದಾಗ ತಿನ್ನುವುದರಿಂದ ದೇಹದ ತೂಕವನ್ನು ಹೆಚ್ಚಿಸಿ ಕೊಳ್ಳಲು ಸಹಾಯವಾಗುತ್ತದೆ. ಒಂದು ಚಮಚ ಬೆಣ್ಣೆಯನ್ನು ಒಂದು ಚಮಚ ಸಕ್ಕರೆಯ ಜೊತೆಗೆ ಮಿಶ್ರಣ ಮಾಡಿಕೊಂಡು ಸೇವಿಸಿದರು ಕೂಡ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು. ನಿತ್ಯ ಆಹಾರದ ಜೊತೆಗೆ ತುಪ್ಪವನ್ನು ಸೇರಿಸಿಕೊಂಡು ಸೇವಿಸುತ್ತಾ ಬಂದರು ಕೂಡ ದೇಹದ ತೂಕ ಹೆಚ್ಚುತ್ತದೆ. ಸಿಗಡಿ ಮೀನು ಇದರಲ್ಲಿ ಕ್ಯಾಲೋರಿ ಅಂಶ ಹೆಚ್ಚಿರುವ ಕಾರಣ ಇದನ್ನು ಸೇವಿಸುವುದರಿಂದ ಕೂಡ ದೇಹದ ತೂಕವನ್ನು ಹೆಚ್ಚಿಸಿಕೊಳ್ಳಬಹುದು
ಹಾಲಿನ ಕೆನೆಯಿಂದ ಮಾಡಿರುವ ಕಾಟೇಜ್ ಚೀಸ್ ಅನ್ನು ಸೇವಿಸುವುದರಿಂದ ಕೂಡ ತೂಕವನ್ನು ಹೆಚ್ಚಿಸಿಕೊಳ್ಳಲು ಸಹಾಯಕವಾಗಿದೆ. ಗೆಣಸು ಇದರಲ್ಲಿ ಹೆಚ್ಚು ಕ್ಯಾಲೋರಿ ಅಂಶ ಇರುತ್ತದೇ ಹಾಗಾಗಿ ಇದನ್ನು ದಿನ ನಿತ್ಯದ ಆಹಾರದ ಜೊತೆಗೆ ಸೇವಿಸುತ್ತಾ ಬಂದರು ಕೂಡ ದೇಹ ತೂಕ ಹೆಚ್ಚುತ್ತದೆ. ನೋಡಿದರಲ್ಲ ತೂಕ ಹೆಚ್ಚಿಸಿಕೊಂಡು ದಪ್ಪ ಆಗುವುದು ಹೇಗೆ ಎಂದು ಹಾಗಾಗಿ ಇವುಗಳನ್ನು ಸೇವಿಸುತ್ತಾ ಬನ್ನಿ ದಪ್ಪ ಆಗುತ್ತಿರ. ಈ ಉಪಯುಕ್ತ ಲೇಖನ ಮರೆಯದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.