ಬಾರ್ಲಿ ಇದನ್ನು ಜವ ಎಂದು ಕೂಡ ಕೆಲವರು ಕರೆಯುತ್ತಾರೆ ಇದೊಂದು ಏಕದಳ ಸಸ್ಯವಾಗಿದೆ. ಈ ಬಾರ್ಲಿಯಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಕೂಡಿವೆ ಹಾಗಾಗಿ ಇದನ್ನು ಹಿಂದಿನ ಕಾಲದಿಂದಲೂ ಕೂಡ ಬಳಸುತ್ತಾ ಬಂದಿದ್ದಾರೆ. ಈ ಬಾರ್ಲಿ ಸ್ವಲ್ಪ ಗೋಧಿಯ ರೂಪವನ್ನೇ ಹೊದಿರುವಂತಹದು ಆದರೆ ಈ ಬಾರ್ಲಿಯಲ್ಲಿ ಗಂಜಿಯನ್ನು ಮಾಡಿಕೊಂಡು ಕುಡಿದರೆ ಎಷ್ಟೆಲ್ಲ ಲಾಭಗಳನ್ನು ಪಡೆಯಬಹುದು. ಆದರೆ ನಮ್ಮ ಇತ್ತೇಚೆಗೆ ನಮ್ಮ ಜನಕ್ಕೆ ಬಾರ್ಲಿ ಗಂಜಿ ಮಾಡೋದು ಇರ್ಲಿ ಅದರ ನೆನಪು ಸಹ ಮರೆತು ಹೋಗಿದೆ. ಜಂಕ್ ಫುಡ್ಗಳಿಗೆ ಹೆಚ್ಚು ಮಾರು ಹೋಗಿರುವ ನಿಮಗೆ ಇದರ ಲಾಭಗಳು ಏನಾದರು ಗೊತ್ತಾದ್ರೆ ವಾರಕ್ಕೆ ಒಮ್ಮೆ ಆದರು ಮಾಡಿಕೊಂಡು ಕುಡಿತ್ತೀರ ನಿಮ್ಮ ಆರೋಗ್ಯ ಚೆನ್ನಾಗಿ ಇಟ್ಕೊತೀರ.

ಬಾರ್ಲಿಯಲ್ಲಿ ಗಂಜಿಯನ್ನು ಮಾಡುವುದು ಹೇಗೆ ಎಂದು ತಿಳಿದುಕೊಳ್ಳೋಣ ಮೊದಲು ಬಾರ್ಲಿಯನ್ನು ಚೆನ್ನಾಗಿ ತೊಳೆದು ಸ್ವಚ್ಛಗೊಳಿಸಬೇಕು ಅನಂತರ ಬಾರ್ಲಿಯನ್ನು ನೀರಿನಲ್ಲಿ ಬೇಯಿಸಬೇಕು ನಂತರ ಅದಕ್ಕೆ ಸ್ವಲ್ಪ ಹಾಲು ಕಲ್ಲು ಸಕ್ಕರೆ ಏಲಕ್ಕಿ ಪುಡಿಯನ್ನು ಮಿಶ್ರಣ ಮಾಡಬೇಕು. ಬಾರ್ಲಿಯಲ್ಲಿ ಹೆಚ್ಚು ನಾರಿನ ಅಂಶ ಇರುವ ಕಾರಣ ಇದರಿಂದ ಗಂಜಿ ಮಾಡಿಕೊಂಡು ಕುಡಿದರೆ ನಮ್ಮ ದೇಹದ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಹಾರ್ಟ್ ಅಟ್ಯಾಕ್ ಬರದಂತೆ ತಡೆಯುತ್ತದೆ.
ದೇಹದ ಉಷ್ಣತೆಯನ್ನು ಹತೋಟಿಯಲ್ಲಿ ಇಡುತ್ತದೆ. ಬಾರ್ಲಿ ಗಂಜಿಯನ್ನು ಕುಡಿಯುವುದರಿಂದ ಮಧುಮೇಹಿಗಳು ರಕ್ತದಲ್ಲಿರುವ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ನೆರವಾಗುತ್ತದೆ. ಬಾರ್ಲಿ ಅಲ್ಲಿ ಇರುವ ಕಾಪರ್ ಎಂಬ ಅಂಶವು ಇದರಿಂದ ಗಂಜಿ ಮಾಡಿಕೊಂಡು ಕುಡಿದರೆ ಕೀಲು ನೋವಿನ ಸಮಸ್ಯೆ ಇದ್ರೆ ದೂರ ಆಗುತ್ತದೆ. ಬಾರ್ಲಿ ಯಲ್ಲಿ ಇನ್ಸುಲಿನ್ ಉತ್ಪಾದಿಸುವ ಅಂಶಗಳಿವೆ ಹಾಗಾಗಿ ಇವು ಶುಗರ್ ಕಾಯಿಲೆಯನ್ನು ನಿಯಂತ್ರಿಸುತ್ತದೆ. ಬಾರ್ಲಿ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತದೆ. ಜೊತೆಗೆ ಮುಖಕ್ಕೆ ಹೊಸ ಹೊಳಪು ತರುತ್ತದೆ. ಬಾರ್ಲಿಯು ಉರಿಮೂತ್ರ ಸಮಸ್ಯೆಯನ್ನು ದೂರ ಮಾಡುತ್ತದೆ. ಬಾರ್ಲಿಯು ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಹಾಯ.
ಬಿಪಿಯಿಂದ ಬಳಲುತ್ತಿರುವವರು ಬಾರ್ಲಿ ಗಂಜಿಗೆ ಒಂದೆರಡು ಹನಿ ನಿಂಬೆ ರಸವನ್ನು ಸೇರಿಸಿ ಕುಡಿದರೆ ಬಿಪಿ ಕಂಟ್ರೋಲ್ ಆಗುತ್ತದೆ. ಬಾರ್ಲಿ ಗಂಜಿಯನ್ನು ಕುಡಿದರೆ ದೇಹಕ್ಕೆ ತಂಪು ಸಿಗುತ್ತದೆ. ಬಾರ್ಲಿ ಗಂಜಿ ಹಿಮೋಗ್ಲೋಬಿನ್ ಉತ್ಪತ್ತಿಗೆ ಕೂಡ ಸಹಾಯಕವಾಗಿದೆ. ಬಾರ್ಲಿ ಗಂಜಿ ಕುಡಿಯುವುದರಿಂದ ಹೊಟ್ಟೆ ನೋವು ಉಷ್ಣದ ಸಮಸ್ಯೆ ಇರುವುದಿಲ್ಲ. ಈ ಬೇಸಿಗೆಯಲ್ಲಿ ಈ ಬಾರ್ಲಿ ಗಂಜಿ ತುಂಬಾ ಒಳ್ಳೆಯ ಆಹಾರವಾಗಿದೆ. ಬಾರ್ಲಿ ಗಂಜಿಯನ್ನು ಕುಡಿಯುವುದರಿಂದ ಕೀಲು ನೋವು ಸಂಧಿವಾತದ ಸಮಸ್ಯೆ ಕೂಡ ದೂರ ಆಗುತ್ತದೆ. ತುಂಬಾ ಸುಸ್ತು ಸಂಕಟ ಆದಾಗ ಕೇವಲ ಒಂದು ಲೋಟ ಬಾರ್ಲಿ ಗಂಜಿ ಕುಡಿದರೆ ದೇಹಕ್ಕೆ ಬೇಕಾದ ಎಲ್ಲ ರೀತಿಯ ಶಕ್ತಿ ಕೂಡ ದೊರಕುತ್ತದೆ. ಹಾಗಾಗಿ ಆದಷ್ಟು ಬಾರ್ಲಿ ಗಂಜಿಯನ್ನು ಸೇವಿಸಿ.
ಈ ಬಾರ್ಲಿ ಯಲ್ಲಿ ಕೇವಲ ಗಂಜಿ ಮಾತ್ರ ಅಲ್ಲದೆ ರೊಟ್ಟಿ. ಉಪ್ಪಿಟ್ಟು. ಮುದ್ದೆ ಇವೆಲ್ಲವನ್ನು ಮಾಡಿಕೊಂಡು ಸೇವಿಸಬಹುದು ಹಾಗಾಗಿ ಬಾರ್ಲಿಯನ್ನು ಉಪಯೋಗಿಸಿ ಅದರಲ್ಲೂ ಈ ಬಿರು ಬೇಸಿಗೆಯಲ್ಲಿ ಈ ಬಾರ್ಲಿ ಬಳಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ದೇಹಕ್ಕೆ ತಂಪು. ಈ ಉಪಯುಕ್ತ ಆರೋಗ್ಯ ಲೇಖನ ಶೇರ್ ಮಾಡುವುದು ಮರೆಯಲೇ ಬೇಡಿ ಏಕೆಂದರೆ ನಿಮ್ಮ ಸ್ನೇಹಿತರಿಗೂ ಈ ವಿಷ್ಯ ತಿಳಿಯಲಿ.