ಈ ಪುಡಿಯನ್ನು ಪ್ರತಿ ದಿನ ತಿಂದರೆ ನಿಮಗೆ ಹನ್ನೆರಡು ಲಾಭ ಗೊತ್ತೇ

0
668

ನಮ್ಮಲ್ಲಿ ನಾಟಿ ಔಷದಿ ಇಂಗ್ಲಿಷ್ ಔಷಧಿ ಆಯುರ್ವೇದ ಹೀಗೆ ಹಲವಾರು ರೀತಿಯಲ್ಲಿ ನಾವು ಔಷಧಿಗಳನ್ನು ತೆಗೆದುಕೊಳ್ಳುತ್ತೇವೆ ಅದರಲ್ಲೂ ಆಯುರ್ವೇದದಲ್ಲಿ ಸಂಜೀವಿನಿಯೆಂದೇ ಕರೆಸಿಕೊಳ್ಳುವ ತ್ರಿಫಲಾ ಚೂರ್ಣ ಇದು ಹಲವಾರು ಖಾಯಿಲೆಗಳಿಗೆ ರಾಮಬಾಣವಿದ್ದಂತೆ. ಈ ಪುಡಿಯನ್ನು ನಾವು ಮನೆಯಲ್ಲೇ ತಯಾರು ಮಾಡಿಕೊಂಡು ಇಟ್ಟುಕೊಳ್ಳಬಹುದು ಮತ್ತು ಇದನ್ನು ಪ್ರತಿ ನಿತ್ಯ ಸೇವನೆ ಮಾಡಿದ್ರೆ ನಮಗೆ ಹತ್ತಾರು ಲಾಭಗಳು ಸಿಗುತ್ತದೆ, ನಮಗೆ ಗೊತಿಲ್ಲದ ಹಾಗೇ ನಮ್ಮ ದೇಹಕ್ಕೆ ಆವರಿಸಿರುವ ಅನೇಕ ರೀತಿಯ ಸಮಸ್ಯೆಗಳು ದೂರ ಆಗುತ್ತದೆ ಅಂತೆ. ಕೆಲವೊಂದು ಮನೆ ಮದ್ದು ತಯಾರು ಮಾಡಿಕೊಂಡು ನಮ್ಮ ಆರೋಗ್ಯ ಸುಪರ್ ಆಗಿ ಇಟ್ಟು ಕೊಳ್ಳಬಹುದು.

ಮೊದಲು ನಾವು ಈ ತ್ರಿಫಲಾ ಚೂರ್ಣವನ್ನು ತಯಾರಿಸಿಕೊಳ್ಳುವುದು ಹೇಗೆ ಎಂದು ನೋಡೋಣ ಬನ್ನಿ. ಇದಕ್ಕೆ ಬೇಕಾಗುವ ಸಾಮಗ್ರಿಗಳು. ಆಮ್ಲ ಕಾಯಿ ಹರೀತಕಿ ಬಿಭಿತಕಿ ಇದೆಲ್ಲವೂ ನಿಮಗೆ ಗ್ರಂಧಗಿ ಅಂಗಡಿಯಲ್ಲಿ ದೊರೆಯುತ್ತದೆ. ಇವುಗಳೆಲ್ಲವನ್ನು ಸಮ ಪ್ರಮಾಣವನ್ನು ತೆಗೆದುಕೊಂಡು ಚೆನ್ನಾಗಿ ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ಇದರ ಪ್ರಯೋಜನ ಏನೆಂದು ತಿಳಿದುಕೊಳ್ಳೋಣ ಬನ್ನಿ. ತ್ರಿಫಲಾ ಚೂರ್ಣ ಇದು ಹೊಟ್ಟೆಯ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ದೇಹದಲ್ಲಿ ಶೇಖರಣೆ ಆಗಿರುವ ಅನಗತ್ಯವಾದ ಕೊಲೆಸ್ಟ್ರಾಲ್ ಅಂಶವನ್ನು ತೆಗೆದು ಹಾಕುತ್ತದೆ ಅಷ್ಟೇ ಅಲ್ಲದೆ ರಕ್ತ ನಾಳಗಳಲ್ಲಿನ ಕೊಬ್ಬು ಶೇಖರಣೆಯನ್ನು ತಡೆಯಲು ಸಹಾಯ ಮಾಡುತ್ತದೆ. ವಾತ ಪಿತ್ತ ಕಫ ಇದು ದೇಹದ ಮೂರು ಅಂಶಗಳನ್ನು ಸಮತೋಲನದಲ್ಲಿರಿಸಿ ನರಮಂಡಲವನ್ನು ನಿಯಂತ್ರಿಸುತ್ತದೆ ಜೊತೆಗೆ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವನ್ನು ಕೂಡ ವಹಿಸುತ್ತದೆ.

ತ್ರಿಫಲಾ ಚೂರ್ಣ ಇದು ದೇಹದಲ್ಲಿ ಚಯಾಪಚಯ ಕ್ರಿಯೆಯನ್ನು ಸರಾಗಗೊಳ್ಳಿಸುತ್ತದೆ. ತ್ರಿಫಲಾ ಚೂರ್ಣವೂ ದೇಹದಲ್ಲಿ ಕರುಳಿನ ಚಲನೆಯನ್ನು ನಿಯಂತ್ರಿಸುತ್ತದೆ. ಜೀರ್ಣಾಂಗ ವ್ಯವಸ್ಥೆ ಮತ್ತು ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಯನ್ನು ಸುಧಾರಿಸಲು ತ್ರಿಫಲಾ ಚೂರ್ಣ ಸಹಾಯ ಮಾಡುತ್ತದೆ. ತ್ರಿಫಲಾ ಚೂರ್ಣವೂ ರಕ್ತವನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.ಜೊತೆಗೆ ದೇಹದ ರಕ್ತ ಪರಿಚಲನೆ ಸುಧಾರಿಸುತ್ತದೆ. ತ್ರಿಫಲಾ ಚೂರ್ಣವೂ ಯಕೃತ್ತು ಮತ್ತು ಶ್ವಾಸಕೋಶಗಳನ್ನು ಶುದ್ಧೀಕರಿಸುತ್ತದೆ.

ತ್ರಿಫಲಾ ಚೂರ್ಣವೂ ಕಾಮಾಲೆ ಅಥವಾ ಬ್ರಾಂಕೈಟಿಸ್ಗೆ ಸಂಬಂಧಿಸಿದ ಸಮಸ್ಯೆಗಳು ದೂರ ಆಗುತ್ತವೆ. ತ್ರಿಫಲಾ ಚೂರ್ಣವೂ ದೇಹದ ಪ್ರತಿನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಹಾಗೂ ಹಲವಾರು ರೀತಿಯ ಜ್ವರಗಳ ವಿರುದ್ಧ ಹೋರಾಡುತ್ತದೆ. ತ್ರಿಫಲಾ ಚೂರ್ಣವೂ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಹಾಗೂ ಸತ್ತ ಕೋಶಗಳನ್ನು ತೆಗೆದುಹಾಕುತ್ತದೆ. ತ್ರಿಫಲಾ ಚೂರ್ಣವೂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ದೇಹದ ಕೊಲೆಸ್ಟರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ತ್ರಿಫಲಾ ಚೂರ್ಣವೂ ವೈರಸ್ ಹಾಗು ಬ್ಯಾಕ್ಟೀರಿಯಾದ ಸೋಂಕುಗಳ ವಿರುದ್ಧ ಹೋರಾಡುತ್ತದೆ.

ತ್ರಿಫಲಾ ಚೂರ್ಣವೂ ಹಲವಾರು ರೀತಿಯ ಕ್ಯಾನ್ಸರ್ ಸಮಸ್ಯೆಗೆ ಒಳ್ಳೆಯ ಮದ್ದು. ತ್ರಿಫಲಾ ಚೂರ್ಣವೂ ಕಣ್ಣಿನ ಸಮಸ್ಯೆಗಳಿಗೆ ರಾಮ ಬಾಣವಿದ್ದಂತೆ. ಹಾಗೂ ಕಣ್ಣಿನ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಕಂಜಂಕ್ಟಿವಿಟಿಸ್ಗ್ಲು ಕೊಮಾ ಮತ್ತು ಕಣ್ಣಿನ ಪೊರೆಗಳ ಆರಂಭಿಕ ಹಂತಗಳಂತಹ ರೋಗಗಳನ್ನು ಕಡಿಮೆ ಮಾಡುತ್ತದೆ. ಹಾಗಾಗಿ ತ್ರಿಫಲಾ ಚೂರ್ಣವನ್ನು ಬಳಕೆ ಮಾಡಿ ಹಲವಾರು ಸಮಸ್ಯೆಗಳನ್ನು ಗುಣ ಪಡಿಸುತ್ತದೆ. ಈ ಉಪಯುಕ್ತ ಲೇಖನ ಮರೆಯದೇ ಶೇರ್ ಮಾಡಿರಿ

LEAVE A REPLY

Please enter your comment!
Please enter your name here