ಗರ್ಭಿಣಿ ಮಹಿಳೆಯರು ಯಾವುದೇ ಕಾರಣಕ್ಕೂ ಈ ತಪ್ಪು ಮಾಡಬಾರದು.

0
605

ಮಹಿಳೆಯರು ಗರ್ಭಿಣಿ ಆದಾಗ ಆಕೆ ಎಷ್ಟು ಜೋಪಾನವಾಗಿ ಇರಬೇಕು ಎಂದರೆ ಪ್ರತಿಯೊಂದು ಕೆಲಸದಲ್ಲೂ ಕೂಡ ಮುನ್ನೆಚ್ಚರಿಕೆವಹಿಸಿ ತುಂಬಾ ಜಾಗೃತೆವಹಿಸಬೇಕು ಏಕೆಂದರೆ ಗರ್ಭಿಣಿ ಆದಾಗ ಕೇವಲ ಒಬ್ಬರು ಮಾತ್ರವಲ್ಲದೆ ಇಬ್ಬರು ಆಗಿರುತ್ತದೆ ಆ ಮಹಿಳೆಯ ಬಳಿ ಒಂದು ಚಿಕ್ಕ ಜೀವಿ ಇರುತ್ತದೆ ಅಗಾಗಿ ಆದಷ್ಟು ತುಂಬಾ ಜಾಗೃತೆ ವಹಿಸಬೇಕು. ನಮ್ಮಲಿ ಇರುವ ಎಷ್ಟೋ ಮಹಿಳೆಯರಿಗೆ ಗರ್ಭಧಾರಣೆ ಮಾಡಿದಾಗ ಹೇಗೆಲ್ಲ ಇರ್ಬೇಕು ಏನೆಲ್ಲಾ ಟಿಪ್ಸ್ ಫಾಲ್ಲೋ ಮಾಡಬೇಕು ಎಂಬುದು ಗೊತ್ತಿರೋದಿಲ್ಲ ಅದಕ್ಕಾಗಿ ಮಹಿಳೆಯರು ಗರ್ಭಿಣಿಯಾಗಿದ್ದಾಗ ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾಡಬಾರದು ಹಾಗಾದರೆ ಯಾವ ಕೆಲಸಗಳು ಎಂದು ನೋಡೋಣ ಬನ್ನಿ.

ಸರಿಯಾದ ಸಮಯಕ್ಕೆ ಆಹಾರ ಸೇವಿಸಿದೇ ಇರುವುದು ಮಹಿಳೆ ಗರ್ಭಿಣಿ ಅದ ಸಮಯದಲ್ಲಿ ಸರಿಯಾದ ಸಮಯಕ್ಕೆ ಆಹಾರವನ್ನು ಸೇವಿಸಬೇಕು ಇಲ್ಲದಿದ್ದರೆ ಸುಸ್ತು ಸಂಕಟ ಹೆಚ್ಚುತ್ತದೆ ಜೊತೆಗೆ
ಆಮ್ಲೀಯತೆಯ ಸಮಸ್ಯೆ ಉಂಟಾಗುತ್ತದೆ ಹೊಟ್ಟೆಯಲ್ಲಿರುವ ಮಗುವಿಗೆ ತೊಂದರೆ ಆಗುತ್ತದೆ. ಗರ್ಭಿಣಿ ಅದ ಸಮಯದಲ್ಲಿ ಒಂದೇ ಸಮಯದಲ್ಲಿ ಹೆಚ್ಚು ಆಹಾರವನ್ನು ಕೂಡ ಸೇವಿಸದೇ ಸ್ವಲ್ಪ ಸ್ವಲ್ಪ ಮಾತ್ರ ಸೇವಿಸಬೇಕು ಅದರಲ್ಲೂ ನೈಸರ್ಗಿಕ ಉತ್ಪನ್ನಗಳಾದ ಮೊಟ್ಟೆ ತರಕಾರಿಗಳನ್ನು ಸೇವಿಸಬೇಕು.

ಗರ್ಭಿಣಿ ಅದ ಸಮಯದಲ್ಲಿ ಜಂಕ್ ಫುಡ್ ಆಹಾರವನ್ನು ಸೇವಿಸಬಾರದು ಅಂದರೆ ಚಿಪ್ಸ್ ಬರ್ಗರ್ ಪಿಜ್ಜಾ ದಂತಹ ಆಹಾರಗಳು ನಿಮಗೆ ಇಷ್ಟ ಆದರೂ ಕೂಡ ಅವುಗಳಿಂದ ದೂರ ಇರಬೇಕು. ಗರ್ಭಿಣಿಯಾದ ಸಮಯದಲ್ಲಿ ಕೆಫೀನ್ ಸೇವನೆ ಮಾಡಬಾರದು ಕೆಫೀನ್ ಗರ್ಭಪಾತ ಅಥವಾ ಮಗುವಿನ ತೂಕವನ್ನು ಕಡಿಮೆ ಮಾಡುವ ಸಾಧ್ಯತೆ ಹೆಚ್ಚು ಆದ್ದರಿಂದ ಕೆಫೀನ್ ರಹಿತ ಚಹಾ ಮತ್ತು ಕಾಫಿ ಸೇವನೆ ಮಾಡಿ ಹಾಗೂ ಹಣ್ಣಿನ ಚಹಾ ಮತ್ತು ಹಣ್ಣಿನ ರಸವನ್ನು ಸೇವನೆ ಮಾಡುವುದು ಒಳ್ಳೆಯದು. ಗರ್ಭಿಣಿ ಮಹಿಳೆ ಸರಿಯಾದ ಸಮಯಕ್ಕೆ ಸರಿಯಾಗಿ ನಿದ್ದೆ ಮಾಡಬೇಕು ಏಕೆಂದರೆ ಭ್ರೂಣದ ಉತ್ತಮ ಬೆಳವಣಿಗೆಗೆ ಹೆಚ್ಚು ಸಮಯ ವಿಶ್ರಾಂತಿ ಪಡೆಯುವುದು ಒಳ್ಳೆಯದು.

ಗರ್ಭಿಣಿಯರು ನಿತ್ಯ ವ್ಯಾಯಾಮ ಮಾಡಬೇಕು ಏಕೆಂದರೆ ಗರ್ಭಿಣಿಯರಲ್ಲಿ ಸಾಮಾನ್ಯವಾಗಿ ಕಾಣಸಿಗುವ ಉಬ್ಬಿರುವ ರಕ್ತನಾಳಗಳು ಮತ್ತು ಕಾಲುಗಳಲ್ಲಿ ಉರಿಯೂತ , ರಕ್ತ ಹೆಪ್ಪು ಕಟ್ಟುವುದು ಇನ್ನಿತರ ಸಮಸ್ಯೆಗಳನ್ನು ತಡೆಯಲು ಯೋಗ ವ್ಯಾಯಾಮ ತುಂಬಾ ಒಳ್ಳೆಯದು. ಗರ್ಭಿಣಿ ಸಮಯದಲ್ಲಿ ಧೂಮಪಾನ ಮದ್ಯಪಾನ ಮಾಡಬಾರದು ಹಾಗೂ ಇದನ್ನು ಸೇವಿಸುವವರ ಜೊತೆ ಕೂಡ ಸೇರಬಾರದು. ಗರ್ಭಿಣಿ ಸಮಯದಲ್ಲಿ ಕೆಲಸ ಮಾಡುತ್ತಿದ್ದಾರೆ ಆದಷ್ಟು ಕೆಲಸದ ಸಮಯಕ್ಕೆ ವಿರಾಮ ತೆಗೆದುಕೊಳ್ಳುವುದು ಒಳ್ಳೆಯದು.

ಗರ್ಭಿಣಿಯರು ಸೀಟ್ ಬೆಲ್ಟ್ ಅನ್ನು ಧರಿಸಬಾರದು ಧರಿಸಲೇಬೇಕಾದ ಸಂದರ್ಭ ಬಂದರೆ ಸರಿಯಾದ ರೀತಿಯಲ್ಲಿ ಧರಿಸಬೇಕು. ಗರ್ಭಿಣಿಯ ಸಂದರ್ಭದಲ್ಲಿ ಕೆಟ್ಟ ಯೋಚನೆಗಳನ್ನು ಕೆಟ್ಟ ಕೆಲಸಗಳನ್ನು ಮಾಡಬಾರದು. ಹಾಗಾಗಿ ಗರ್ಭಿಣಿಯಾದ ಸಮಯದಲ್ಲಿ ಆದಷ್ಟು ತುಂಬಾ ಜಾಗೃತೆ ವಹಿಸಬೇಕು ಯಾವುದೇ ಕೆಲಸಕ್ಕೂ ಕೂಡ ನಿರ್ಲಕ್ಷ್ಯ ಮಾಡಬೇಡಿ ಆಗ ಮಾತ್ರ ಗರ್ಭಿಣಿ ಮಹಿಳೆಯರು ಆರೋಗ್ಯವಾಗಿ ಇರಲು ಸಾಧ್ಯವಾಗುತ್ತದೆ.

LEAVE A REPLY

Please enter your comment!
Please enter your name here