ಪ್ಲಾಸ್ಟಿಕ್ ಬಾಟಲ್ನಲ್ಲಿ ನೀರು ಕುಡಿಯುವುದರಿಂದ ಹತ್ತಾರು ರೀತಿಯ ಸಮಸ್ಯೆಗಳು ಬರುತ್ತವೆ. ಸ್ನೇಹಿತರೆ ನಿಮಗೆ ತಿಳಿದಿರಬಹುದು. ಈಗಾಗಲೇ ಅಮೆರಿಕಾದ ಕ್ಯಾಲಿಫೋರ್ನಿಯಾದ ವಿಶ್ವವಿದ್ಯಾನಿಲಯವು ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ಕುಡಿಯುವುದರಿಂದ ನಮಗೆ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಬರುತ್ತದೆ ಎಂಬುದನ್ನು ಈಗಾಗಲೇ ದೃಢ ಮಾಡಿದೆ. ಆದ್ದರಿಂದ ಅಮೆರಿಕಾದ್ಯಂತ ಪ್ಲಾಸ್ಟಿಕ್ ಬಾಟಲ್ಗಳಿಗೆ ದಿನದಿನಕ್ಕೂ ನಿಷೇಧ ಮಾಡಲಾಗುತ್ತಿದೆ. ಅಲ್ಲಿನ ಜನರು ಈಗ ಬುದ್ಧಿವಂತರಾಗಿದ್ದಾರೆ. ಅಲ್ಲಿನ ಹೆಚ್ಚಿನ ಜನರು ಇತ್ತೀಚೆಗೆ ತಾಮ್ರದ ಬಾಟಲು ಗಳನ್ನು ಬಳಸುತ್ತಿದ್ದಾರೆ.
ಆದರೆ ನಮ್ಮ ಭಾರತದಲ್ಲಿ ನಾವು ನಮ್ಮ ಜನರಿಗೆ ಎಷ್ಟು ಬುದ್ದಿ ಮಾತು ಹೇಳಿದರೂ ಸಹ ಪ್ಲಾಸ್ಟಿಕ್ ಬಾಟಲಿನಿಂದ ನೀರು ಕುಡಿಯುವುದನ್ನು ಬಿಡುವುದಿಲ್ಲ. ಏಕೆಂದರೆ ಪ್ಲಾಸ್ಟಿಕ್ ಬಾಟಲ್ ಅಗ್ಗವಾಗಿ ಸಿಗುತ್ತದೆ. ಆದರೆ ಒಂದು ತಾಮ್ರದ ಬಾಟಲ್ ತೆಗೆದುಕೊಳ್ಳಬೇಕೆಂದರೆ ನೂರಾರು ರೂಪಾಯಿ ಹಣ ಖರ್ಚಾಗುತ್ತದೆ. ಮತ್ತು ಇದು ತೆಗೆದುಕೊಂಡು ಹೋಗಲು ಸಮಸ್ಯೆಯಾಗುತ್ತದೆ. ನಮ್ಮ ಹಿಂದಿನ ಕಾಲದ ಜನರು ಅತ್ಯಂತ ಸುರಕ್ಷಿತವಾಗಿದ್ದರು. ಏಕೆಂದರೆ ಅವರು ಪ್ಲಾಸ್ಟಿಕನ್ನು ಬಳಸುತ್ತಿರಲಿಲ್ಲ. ಅವರು ಮಣ್ಣಿನ ಪಾತ್ರೆಯಲ್ಲಿ ಮತ್ತು ತಾಮ್ರದ ಬಿಂದಿಗೆಯಲ್ಲಿ ನೀರನ್ನು ಇಟ್ಟುಕೊಂಡು ಕುಡಿಯುತ್ತಿದ್ದರು. ಆ ಮಣ್ಣಿನಲ್ಲಿರುವ ಅನೇಕ ಔಷಧಿಯುಕ್ತ ಪ್ರಮಾಣ ಆ ನೀರಿನೊಂದಿಗೆ ಬೆರೆತು ಅವರಿಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಬರುತ್ತಿರಲಿಲ್ಲ. ಆದರೆ ಇತ್ತೀಚೆಗೆ ಅಮೆರಿಕಾದ ಕ್ಯಾಲಿಫೋರ್ನಿಯಾದ ಸಂಸ್ಥೆ ವರದಿ ನೀಡಿರುವ ಪ್ರಕಾರ ಹೆಚ್ಚು ಹೆಚ್ಚು ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ಕುಡಿತುವುದರಿಂದ ಅವರಿಗೆ ಜ್ಞಾಪಕ ಶಕ್ತಿ ಕಡಿಮೆಯಾಗುತ್ತದೆ ಎಂದು ಸಾರಿ ಸಾರಿ ಹೇಳಿದೆ.

ನಾವು ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ಕುಡಿಯುವುದರಿಂದ ನಮ್ಮ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಏಕೆಂದರೆ ಪ್ಲಾಸ್ಟಿಕ್ ಬಾಟಲಿನಲ್ಲಿ ವೈರಾಣುಗಳು ಬಲುಬೇಗನೆ ಹೆಚ್ಚಿಸುತ್ತದೆ. ನಾವು ಪ್ಲಾಸ್ಟಿಕ್ ಬಾಟಲನ್ನು ನೀರು ಖಾಲಿಯಾದಂತೆ ಮತ್ತೆ ಬಳಕೆ ಮಾಡುತ್ತೇವೆ. ಅದನ್ನು ವಾರಕ್ಕೋ ತಿಂಗಳಿಗೋ ಒಮ್ಮೆ ತೊಳೆದರೆ ಅದೇ ಹೆಚ್ಚು. ಇನ್ನು ಕೆಲವರು ಪ್ಲಾಸ್ಟಿಕ್ ಬಾಟಲನ್ನು ತಿಂಗಳುಗಟ್ಟಲೆ ತೊಳೆಯುವುದೇ ಇಲ್ಲ. ಪ್ರತಿನಿತ್ಯ ನೀರನ್ನು ಕುಡಿಯುವುದು ಮತ್ತು ಹಾಗೆ ನೀರು ತುಂಬಿಸುವುದು ಮಾಡುತ್ತಿರುತ್ತಾರೆ. ಆದರೆ ನೀವು ಹೀಗೆ ಮಾಡುವುದರಿಂದ ಸಾಕಷ್ಟು ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತೀರಿ. ಇದು ನಿಮಗೆ ಜೀರ್ಣಕ್ರಿಯೆಗೆ ಕೂಡ ತೊಂದರೆ ಮಾಡುವ ಸಾಧ್ಯತೆ ಇರುತ್ತದೆ. ಹಾಗು ವಾಕರಿಕೆ ವಾಂತಿ ಹೀಗೆ ಹಲವು ಬಗೆಯ ಸಣ್ಣ ಪುಟ್ಟ ಖಾಯಿಲೆಗಳು ನಿಮ್ಮನ್ನು ಆವರಿಸಲಿದೆ.
ನೀವು ಇಂದು ಸಣ್ಣಪುಟ್ಟ ಬಾಧೆಗಳೆಂದು ಅದನ್ನು ನಿರ್ಲಕ್ಯ ಮಾಡಿದರೆ ಸಹ ನಿಮಗೆ ಮುಂದೊಂದು ದಿನ ಅದು ಹೆಚ್ಚಿನ ದೊಡ್ಡ ಪರಿಣಾಮವಾಗಿ ಕಾಡುತ್ತದೆ. ಪ್ಲಾಸ್ಟಿಕ್ ಬಾಟಲ್ ಹೊಂದಿರುವವರು ನೀರು ಕುಡಿಯಲೇ ಬೇಕೆಂದಿದ್ದರೆ ಪ್ರತಿ ಎರಡು ದಿವಸಕೊಮ್ಮೆಯಾದರೂ ಸೋಪು ಅಥವಾ ಬಿಸಿನೀರಿನಿಂದ ತೊಳೆಯುವ ಅಭ್ಯಾಸಗಳನ್ನು ಮಾಡಿರಿ. ಹೀಗೆ ಮಾರುಕಟ್ಟೆಯಲ್ಲಿ ಅನೇಕ ರೀತಿಯ ಬ್ರಶ್ಗಳು ಬರುತ್ತದೆ. ಆ ಬ್ರಶ್ಗಳನ್ನು ಉಪಯೋಗ ಮಾಡಿಕೊಂಡು ಬಾಟಲನ್ನು ತೊಳೆಯುವ ಅಭ್ಯಾಸ ಇಟ್ಟುಕೊಳ್ಳಿ. ನಿಮಗೇನಾದರೂ ಸಾಧ್ಯವಾದರೆ ಇದೀಗ ಮಾರುಕಟ್ಟೆಯಲ್ಲಿ ಹಲವು ರೀತಿಯ ತಾಮ್ರದ ನೀರಿನ ಬಾಟಲ್ಗಳು ದೊರೆಯುತ್ತಿದೆ. ಈ ತಾಮ್ರದ ಬಾಟಲ್ನಲ್ಲಿ ನೀರು ಕುಡಿಯುವುದರಿಂದ ನೀವು ಸಾಕಷ್ಟು ರೀತಿಯ ಲಾಭವನ್ನು ಪಡೆಯಬಹುದು. ಇದು ನಿಮ್ಮ ರಕ್ತದೊತ್ತಡವನ್ನು ನಿಯಂತ್ರಣದಲ್ಲಿರುತ್ತದೆ ಹಾಗೆ ನಿಮ್ಮ ದೇಹದಲ್ಲಿರುವ ಸಕ್ಕರೆಯ ಅಂಶವನ್ನು ಸಹ ಇದು ಹತೋಟಿಯಲ್ಲಿಡುತ್ತದೆ. ಈಗಲಾದರೂ ತಿಳಿಯಿತಲ್ಲವೇ, ನೀವು ಪ್ಲಾಸ್ಟಿಕ್ ಬಾಟಲಿನಲ್ಲಿ ನೀರು ಕುಡಿಯುತ್ತಿದ್ದರೆ ಆದಷ್ಟು ಅದನ್ನು ಕಡಿಮೆ ಮಾಡಿರಿ ಮತ್ತು ತಾಮ್ರದ ಬಾಟಲಿನಲ್ಲಿ ನೀರು ಕುಡಿಯುವ ಅಭ್ಯಾಸವನ್ನು ಇಟ್ಟುಕೊಳ್ಳಿ. ಈ ಉಪಯುಕ್ತ ಲೇಖನವನ್ನು ತಪ್ಪದೇ ಶೇರ್ ಮಾಡಿರಿ ಮತ್ತು ನಿಮ್ಮ ಎಲ್ಲಾ ಸ್ನೇಹಿತರಿಗೂ ತಿಳಿಸಿರಿ.