ಹೃದಯ ಸಂಬಂಧಿ ಕಾಯಿಲೆ ತಡೆಯುವಲ್ಲಿ ಕಡೆ ಬೀಜ ಸಾಕಷ್ಟು ಪರಿಣಾಮಕಾರಿ

0
681

ನಿಮಗೆ ತಿಳಿದಿರುವ ಹಾಗೇ ಕಡಲೆಕಾಯಿ ಬಡವರ ಬಾದಾಮಿ ಇದ್ದ ಹಾಗೇ ಏಕೆಂದರೆ ಈ ಬೀಜದಲ್ಲಿ ನಿಮಗೆ ಸಾಕಷ್ಟು ರೀತಿಯ ಪ್ರೋಟಿನ್ ಮತ್ತು ವಿಟಮಿನ್ ಸಿಗುತ್ತದೆ. ನೀವು ಬಾದಾಮಿಗೆ ಹೋಲಿಕೆ ಮಾಡಿದ್ರೆ ಅದರಷ್ಟೇ ಸಮ ಪ್ರಮಾಣದ ಶಕ್ತಿ ಇದು ನಿಮ್ಮ ದೇಹಕ್ಕೆ ನೀಡುತ್ತದೆ. ಇದರ ಪ್ರಜೋಜನಗಳು ನಿಮಗೆ ಗೊತ್ತಾದ್ರೆ ಪ್ರತಿ ನಿತ್ಯ ಒಂದಿಷ್ಟು ಕಡಲೆಬೀಜ ಸೇವನೆ ಮಾಡ್ತೀರ. ನಮ್ಮ ಹಿರಿಯರು ಹೇಳಿರುವ ಹಾಗೇ ಪ್ರತಿ ನಿತ್ಯ ಒಂದು ಹಿಡಿ ಕಡಲೆ ಬೀಜ ಸಾಕು ನಮ್ಮ ದೇಹದ ಆರೋಗ್ಯವನ್ನು ಕಾಪಾಡಲು. ಹಾಗಾದ್ರೆ ಕಡಲೆ ಕಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯೋಣ ಮತ್ತು ಯಾವ ಸಮಯದಲ್ಲಿ ಇದನ್ನು ಹೆಚ್ಚಿಗೆ ತಿಂದರೆ ನಮಗೆ ಶಕ್ತಿ ಬರುತ್ತದೆ ಮತ್ತು ಯಾವ ಯಾವ ಕಾಯಿಲೆ ತಡೆಯುತ್ತದೆ ಸಂಪೂರ್ಣ ಓದಿ.

ಇತ್ತೇಚೆಗೆ ಅಮೇರಿಕಾದ ಟೆಕ್ಸಸ್ ರಾಜ್ಯದ ಒಂದು ವೈದ್ಯಕೀಯ ತಂಡವು ಒಂದು ಸಂಶೋಧನೆ ಮಾಡಿದೆ ಅದರ ಪ್ರಕಾರ ಪ್ರತಿ ನಿತ್ಯ ಒಂದು ಹಿಡಿ ಕಡಲೆ ಕಾಯಿ ತಿನ್ನುವ ಏಳು ನೂರಕ್ಕೂ ಅಧಿಕ ಮಂದಿಯನ್ನು ಈ ಸಂಶೋದನೆಗೆ ಒಳಪಡಿಸಿದಾಗ. ಕಡಲೆ ಕಾಯಿ ತಿನ್ನುವ ವ್ಯಕ್ತಿಗಳಲ್ಲಿ ಹೃದಯಕ್ಕೆ ಸಂಭಂಧ ಪಟ್ಟ ಯಾವುದೇ ಖಾಯಿಲೆ ಇರಲಿಲ್ಲ ಅಂತೆ ಮತ್ತು ಹಾಗೆಯೇ ಪ್ರತಿ ನಿತ್ಯ ಸೇವನೆ ಮಾಡುತ್ತಿರುವ ಇವರಿಗೆ ರಕ್ತ ಸಂಚಾರ ಸರಾಗವಾಗಿ ಆಗುತ್ತಾ ಇತ್ತು ಎಂಬುದು ದೃಡಪಟ್ಟಿದೆ. ಇದನ್ನು ಮತ್ತಷ್ಟು ಜನರ ಮೇಲೆ ಪ್ರಯೋಗ ಮಾಡಲು ಅಲ್ಲಿನ ವೈದ್ಯರು ಚಿಂತನೆ ಮಾಡಿ ರಕ್ತ ಸಂಚಾರ ಕಡಿಮೆ ಆಗಿ ಸಮಸ್ಯೆಗೆ ಒಳಪಟ್ಟ ಅನೇಕ ಜನರಿಗೆ ಮಾತ್ರೆಗಳು ಕಡಿಮೆ ಮಾಡಿ ಸರಿ ಸುಮಾರು ಒಂದು ತಿಂಗಳ ಕಾಲ ಕಡಲೆ ಕಾಯಿ ತಿನ್ನಲು ಹೇಳಿದರಂತೆ ಹೀಗೆ ಮಾಡಿದ ಒಂದು ತಿಂಗಳಿನಲ್ಲಿ ಹೃದಯಕ್ಕೆ ರಕ್ತ ಸಂಚಾರ ಸರಿಯಾದ ಪ್ರಮಾಣದ ರೀತಿಯಲ್ಲಿ ಆಗಿದ್ದು ಮತ್ತು ರಕ್ತ ವೃದ್ದಿ ಆಗಿದ್ದು ಇನ್ನಿತರೇ ಪ್ರಯೋಜನ ಆಗಿದ್ದನು ಕಂಡು ಅಲ್ಲಿನ ವೈದ್ಯರೇ ಆಶ್ಚರ್ಯ ಪಟ್ಟರು.

ಕಡಲೆ ಕಾಯಿ ಬರೀ ರಕ್ತ ಸಂಚಾರ ಸಮಸ್ಯೆಗೆ ಅಲ್ಲ. ಇತ್ತೇಚೆಗೆ ಸಾಕಷ್ಟು ಜನಕ್ಕೆ ಪಿತ್ತ ಕೋಶದಲ್ಲಿ ಕಲ್ಲು ಆಗೋದು ಮಾಮೂಲಿ ಆಗೋಗಿದೆ ಇದನ್ನು ತಪ್ಪಿಸಲು ಕಡಲೆ ಬೇಜ ಅಂದ್ರೆ ಶೇಂಗ ತಿನ್ನುವುದರಿಂದ ಸಣ್ಣ ಪ್ರಮಾಣದಲ್ಲಿ ಆಗಿರುವ ಪಿತ್ತಕೋಶದ ಕಲ್ಲುಗಳನ್ನು ಕರಗಿಸುವ ಶಕ್ತಿ ಸಹ ಇದೆ ಎಂಬುದು ದೃಡಪಟ್ಟಿದೆ. ಸ್ನೇಹಿತರೇ ಇಷ್ಟೆಲ್ಲಾ ಉಪಯೋಗ ಇರೋ ಕಡಲೆಕಾಯಿ ಬಗ್ಗೆ ಅಸಡ್ಡೆ ಏಕೆ? ಪ್ರತಿ ನಿತ್ಯ ಒಂದಿಷ್ಟು ನಿಯಮಿತವಾಗಿ ಸೇವನೆ ಮಾಡೋಣ ನಮ್ಮ ಹೃದಯವನ್ನು ಆರೋಗ್ಯವಾಗಿ ಇಟ್ಟುಕೊಳ್ಳೋಣ. ಬಡವರ ಬಾದಾಮಿ ಎಂದು ಫೇಮಸ್ ಆಗಿರುವ ಶೇಂಗ ನಮ್ಮ ಆರೋಗ್ಯ ಸುಪರ್ ಆಗಿ ಇಡಲು ಹೆಚ್ಚಿನ ಸಹಕಾರಿ ಆಗಿದೆ. ಈ ಲೇಖನ ಮರೆಯದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗಲಿ.

LEAVE A REPLY

Please enter your comment!
Please enter your name here