ವೀಳ್ಯದೆಲೆ ತಗೊಂಡು ಈ ರೀತಿ ಮಾಡಿದ್ರೆ ನಿಮಗೆ ಸಿಗುತ್ತೆ ಹತ್ತಾರು ಲಾಭ

0
611

ಭಾರತದಲ್ಲಿ ವೀಳ್ಯದೆಲೆಗೆ ಒಂದು ಪ್ರತ್ಯೇಕ ಸ್ಥಾನ ಮಾನವಿದೆ. ನಾವು ಹಲವು ಬಗೆಯ ಎಲೆಗಳನ್ನು ವಿವಿಧ ರೀತಿಯಲ್ಲಿ ಬಳಸುತ್ತೇವೆ. ಆದರೆ ವೀಳ್ಯದೆಲೆಗೆ ಮಾತ್ರ ಉನ್ನತ ಸ್ಥಾನಮಾನವನ್ನು ನೀಡಿದ್ದೇವೆ. ಯಾವುದೇ ಶುಭ ಸಮಾರಂಭವಿರಲಿ ಅದರಲ್ಲಿ ವೀಳ್ಯದೆಲೆ ಇರಬೇಕಾದದ್ದು ಕಡ್ಡಾಯವಾಗಿದೆ. ಹಾಗೆ ವೀಳ್ಯದೆಲೆಯಲ್ಲಿರುವ ಸಾಕಷ್ಟು ಅಂಶಗಳು ಮನುಷ್ಯನಿಗೆ ಅನೇಕ ರೀತಿಯ ಲಾಭವನ್ನು ಸಹ ಕೊಡುತ್ತದೆ. ನಮ್ಮ ಶಾಸ್ತ್ರ ಮತ್ತು ಪುರಾಣಗಳಲ್ಲಿ ವೀಳ್ಯದೆಲೆಗೆ ಹೆಚ್ಚಿನ ಮಹತ್ವವನ್ನು ಕೊಡಲಾಗಿದೆ. ಹಾಗೆಯೇ ವೀಳ್ಯದೆಲೆ ಮತ್ತು ಅಡಿಕೆಯನ್ನು ಬೆರೆಸಿ ತಿನ್ನುವುದರಿಂದ ದೇಹಕ್ಕೆ ಒಳ್ಳೆಯದು.

ನಮ್ಮಲ್ಲಿರುವ ಅನೇಕ ಮಂದಿ ಪ್ರತಿನಿತ್ಯ ವೀಳ್ಯದೆಲೆಯನ್ನು ತಿನ್ನುತ್ತಿರುತ್ತಾರೆ. ಆದರೆ ನಮಗೆ ಅಷ್ಟೇನು ಅದರ ಬಗ್ಗೆ ಮಾಹಿತಿ ಇರುವುದಿಲ್ಲ. ಆದರೆ ನಿಮಗೆ ಗೊತ್ತಿರಲಿ ಪ್ರತಿನಿತ್ಯ ನಾವು ವೀಳ್ಯದೆಲೆಯನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾಗಳನ್ನು ಅದು ಕೊಳ್ಳುತ್ತಾ ಬರುತ್ತದೆ. ನೀವು ಯಾವುದೇ ಆಹಾರವನ್ನು ಸೇವಿಸಿದರೂ ನಿಮಗೆ ಅಧಿಕ ಪ್ರಮಾಣದ ಕ್ಯಾಲ್ಸಿಯಂ ದೊರೆಯುವುದಿಲ್ಲ. ಆದರೆ ಪ್ರತಿನಿತ್ಯ ಒಂದು ವೀಳ್ಯದೆಲೆಯನ್ನು ತಿನ್ನುವುದರಿಂದ ಇದರಲ್ಲಿರುವ ಅತೀ ಹೆಚ್ಚು ಕ್ಯಾಲ್ಸಿಯಂ ನಮ್ಮ ದೇಹಕ್ಕೆ ಸಹಕಾರಿಯಾಗಲಿದೆ. ನಮ್ಮಲ್ಲಿ ಕೆಲವು ಜನರು ಗ್ಯಾಸ್ಟ್ರಿಕ್ ಹಾಗು ಜೀರ್ಣಕ್ರಿಯೆ ಸಮಸ್ಯೆಯಿಂದ ಬಳಲುತ್ತಿರುವವರು ಜೆಲೆಸಿಲ್ ಹೀಗೆ ವಿವಿಧ ರೀತಿಯ ಮಾತ್ರೆಗಳನ್ನು ಜೀರ್ಣಕ್ರಿಯೆಗೆ ತೆಗೆದುಕೊಂಡು ಜೀರ್ಣಕ್ರಿಯೆ ಸರಾಗವಾಗಿ ನಡೆಯಲು ಪ್ರಯತ್ನಿಸುತ್ತಿರುತ್ತಾರೆ. ಆದರೆ ಈ ರೀತಿಯ ಮಾತ್ರೆಗಳನ್ನು ಪ್ರತಿನಿತ್ಯ ತೆಗೆದುಕೊಳ್ಳುವುದು ಆರೋಗ್ಯಕ್ಕೆ ಹಾನಿಕರ.

ಆದ್ದರಿಂದ ಊಟ ಆದನಂತರ ಒಂದು ವೀಳ್ಯದೆಲೆಯನ್ನು ತಿಂದರೆ ನಮ್ಮ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. ಹಾಗಾಗಿಯೇ ನಮ್ಮ ಹಿಂದಿನವರು ಮದುವೆ ಹಾಗು ಶುಭ ಸಮಾರಂಭಗಳಲ್ಲಿ ಊಟದ ನಂತರ ಅಡಿಕೆ,ವೀಳ್ಯದೆಲೆ ಮತ್ತು ಒಂದಿಷ್ಟು ಸುಣ್ಣವನ್ನು ಕೊಡುತ್ತಿದ್ದರು. ಬೇರೆ ಯಾವುದೇ ಸೊಪ್ಪು ಅಥವಾ ಎಲೆಗಳಿಗೆ ಹೋಲಿಸಿದರೆ ವೀಳ್ಯದೆಲೆಯನ್ನು ನಾವು ಬಾಯಲ್ಲಿ ತಿನ್ನುವುದರಿಂದ ನಮ್ಮ ಬಾಯಲ್ಲಿ ಲಾಲಾರಸ ಉತ್ಪತ್ತಿಯಾಗಿ ನಮ್ಮ ಬಾಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ. ನಿಮಗೆ ಹಲ್ಲಿನ ಹುಳುಕಿನ ಸಮಸ್ಯೆ ಇದ್ದರೆ ಅದು ಖಂಡಿತಾ ಬರುವುದಿಲ್ಲ. ಈ ಸಮಸ್ಯೆಯನ್ನು ತಡೆಗಟ್ಟುತ್ತದೆ. ಮಕ್ಕಳಿಗೆ ಜಂತು ಹುಳುವಾಗುವುದು ಸರ್ವೇ ಸಾಮಾನ್ಯ. ಅವರು ಹೆಚ್ಚು ಹೆಚ್ಚು ಸಿಹಿ ತಿಂದಷ್ಟು ಸಹ ಅವರಿಗೆ ಬೇಗ ಜಂತು ಹುಳಗಳು ಬರುತ್ತದೆ. ವೀಳ್ಯದೆಲೆಯ ಹತ್ತು ಎಮ್.ಎಲ್ ನಷ್ಟು ರಸವನ್ನು ಮಕ್ಕಳಿಗೆ ಕುಡಿಸುವುದರಿಂದ ಮಕ್ಕಳ ಹೊಟ್ಟೆಯಲ್ಲಿರುವ ಜಂತುಹುಳು ತಾವಾಗಿಯೇ ಸತ್ತು ಹೋಗುತ್ತವೆ.

ಸಣ್ಣ ಮಕ್ಕಳಿಗೆ ಕೆಮ್ಮು ಸರ್ವೇ ಸಾಮಾನ್ಯವಾಗಿದೆ. ಈ ಕೆಮ್ಮನ್ನು ತಡೆಗಟ್ಟಲು ನೀವು ಅನೇಕ ರೀತಿಯ ಟ್ಯಾಬ್ಲೆಟ್ಸ್ ಗಳನ್ನು ಕೊಡುವ ಬದಲು ಐದು ಎಮ್.ಎಲ್ ವೀಳ್ಯದ ರಸವನ್ನು ಅವರಿಗೆ ಕುಡಿಯಲು ನೀಡಿದರೆ ಖಂಡಿತಾ ಕೆಲವೇ ದಿನಗಳಲ್ಲಿ ಕೆಮ್ಮು ನಿಲ್ಲುತ್ತದೆ. ಹಾಗೆ ವೀಳ್ಯದೆಲೆಯ ಮತ್ತೊಂದು ಉಪಯೋಗವೇನೆಂದರೆ ಇದರಿಂದ ಕಷಾಯವನ್ನು ತಯಾರಿಸಿಕೊಂಡು ನೀವು ಬಾಯನ್ನು ಮುಕ್ಕಳಿಸಿದರೆ ನಿಮಗೆ ವಸಡಿನ ಸಮಸ್ಯೆಗಳು ಮತ್ತು ಹಲ್ಲು ನೋವಿನ ಸಮಸ್ಯೆಗಳು ಕಡಿಮೆಯಾಗುತ್ತದೆ. ಇದನ್ನು ಮಾಡುವ ವಿಧಾನ ಹೇಗೆಂದರೆ ಮೊದಲು ವೀಳ್ಯದೆಲೆಯನ್ನು ಚೆನ್ನಾಗಿ ಕುದಿಸಿ ಸೋಧಿಸಿರಿ. ನಂತರ ಉಪ್ಪನ್ನು ಬೆರೆಸಿ ನಿಮ್ಮ ಬಾಯನ್ನು ಮುಕ್ಕಳಿಸಿರಿ. ಇನ್ನು ಕೆಲವರಿಗೆ ಹಲ್ಲು ನೋವಿನ ಸಮಸ್ಯೆ ಅತಿರೇಕವಾಗಿ ಹೋಗುತ್ತದೆ.

ಆ ಸಮಯದಲ್ಲಿ ಮಾತ್ರೆಗಳನ್ನು ನುಂಗುವ ಬದಲು ನಿಮಗೆ ನೋವು ಕಾಣಿಸಿಕೊಂಡಾಗ ಹತ್ತು ಎಮ್. ಎಲ್ ವೀಳ್ಯದೆಲೆ ರಸಕ್ಕೆ ಒಂದು ಚಿಟಿಕೆಯಷ್ಟು ಲವಂಗದ ಪುಡಿಯನ್ನು ಬೆರೆಸಿ ಚೆನ್ನಾಗಿ ಕಲಸಿ ನೋವಿರುವ ಜಾಗಕ್ಕೆ ಹತ್ತಿಯಿಂದ ಅದ್ದಿರಿ. ಕೆಲವೇ ನಿಮಿಷಗಳಲ್ಲಿ ಹಲ್ಲುನೋವಿನ ಸಮಸ್ಯೆ ಖಂಡಿತಾ ಗುಣವಾಗಲಿದೆ. ಹೀಗೆ ವೀಳ್ಯದೆಲೆ ಒಂದಲ್ಲ ಎರಡಲ್ಲ ಹಲವು ರೀತಿಯ ಸಮಸ್ಯೆಗಳನ್ನು ನಮ್ಮ ದೇಹದಿಂದ ದೂರ ಮಾಡುತ್ತದೆ. ನಾವು ನಿಮಗೆ ನೀಡಿರುವುದು ಕೆಲವು ಉದಾಹರಣೆಗಳಷ್ಟೇ ವೀಳ್ಯದೆಲೆಯನ್ನು ಸೇವಿಸಿದರೆ ಅನೇಕ ರೀತಿಯ ಲಾಭಗಳನ್ನು ಪಡೆಯಬಹುದು. ಈ ಲೇಖನ ನಿಮಗೆ ಇಷ್ಟವಾದರೆ ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಸ್ನೇಹಿತರಿಗೂ ತಿಳಿಸಿರಿ.

LEAVE A REPLY

Please enter your comment!
Please enter your name here