ಪ್ರಸವಾದ ನಂತರ ಹೆಣ್ಣು ಮಕ್ಕಳ ಎದೆಹಾಲು ಹೆಚ್ಚಿಸುವ ಪರಿಹಾರ

0
740

ಪ್ರತಿಯೊಂದು ಹೆಣ್ಣು ಮಕ್ಕಳಿಗೆ ಹೆಣ್ಣಿನ ತನ ಸಂಪೂರ್ಣ ಆಗುವುದು ಅವಳು ಮದುವೆ ಆಗಿ ತಾಯಿ ಆದ ನಂತರ ಒಂದು ಮಗುವಿನಿಂದ ಅಮ್ಮ ಎಂದು ಕರೆಸಿಕೊಂಡಗ ಹೆಣ್ಣಿನ ಜೀವನಕ್ಕೆ ಸಾರ್ಥಕತೆ ಸಿಗುತ್ತದೇ. ಹೆಣ್ಣು ಮಕ್ಕಳು ಒಂದು ಮಗುವಿಗೆ ಜನನ ನೀಡಿದ ಮೇಲೆ ಆ ಮಗುವಿನ ಆರೋಗ್ಯ ಉತ್ತಮವಾಗಿ ಇರಬೇಕು ಎಂದರೆ ಆ ಮಗುವಿಗೆ ಎದೆ ಹಾಲನ್ನು ನೀಡಬೇಕು ಎದೆ ಹಾಲಿನಲ್ಲಿ ಎಲ್ಲ ರೀತಿಯ ಪೌಷ್ಟಿಕ ಅಂಶಗಳು ಇದ್ದು ಇದು ಮಕ್ಕಳ ಬೆಳವಣಿಗೆಗೆ ಉತ್ತಮ ಆಹಾರ. ಆದರೆ ನಮ್ಮಲ್ಲಿ ಸಾಕಷ್ಟು ಜನ ತಾಯಂದಿರು ತಮ್ಮ ವಿದೇಶಿ ನಿಯಮ ಪಾಲಿಸುತ್ತಾ ಇದ್ದಾರೆ ಅದು ಏನು ಅಂದ್ರೆ ತಮ್ಮ ಮಕ್ಕಳಿಗೆ ಎದೆ ಹಾಲು ಕುಡಿಸುವ ಬದಲು ಬಾಟಲ್ ಮಿಲ್ಕ್ ಫೀಡಿಂಗ್ ಮಾಡ್ತಾ ಇದ್ದಾರೆ ಆದರೆ ಆರೋಗ್ಯದ ದೃಷ್ಟಿಯಿಂದ ಇದು ಮಕ್ಕಳಿಗೂ ಮತ್ತು ನಿಮಗೆ ಆರೋಗ್ಯಕ್ಕೆ ಹಾನಿ ಉಂಟು ಮಾಡುತ್ತದೆ. ಆದರೆ ಮತ್ತಷ್ಟು ಮಹಿಳೆಯರಿಗೆ ಎದೆ ಹಾಲು ಕುಡಿಸಲು ಹೆಚ್ಚಿನ ಪ್ರಮದಲ್ಲಿ ಉತ್ಪಾದನೆ ಇರೋದಿಲ್ಲ ಇಂತಹ ಸಮಯದಲ್ಲಿ ಒಂದಿಷ್ಟು ಮನೆ ಮದ್ದು ಮಾಡಿದ್ರೆ ಎದೆಹಾಲು ಹೆಚ್ಚಿಸುತ್ತದೆ.

ಜೀರಿಗೆ ಬೀಜಗಳು ಕಬ್ಬಿಣ ಅಂಶದಿಂದ ತುಂಬಿದ್ದು ಇದು ತಾಯಂದಿರಿಗೆ ಅತ್ಯಗತ್ಯವಾದ ಖನಿಜಗಳನ್ನೂ ಒದಗಿಸಲು ಸಹಾಯ ಮಾಡುತ್ತದೆ. ಹಾಗೂ ಜೀರ್ಣಕ್ರಿಯೆಯಲ್ಲಿ ಸಹ ಸಹಾಯ ಮಾಡುತ್ತಾದೆ. ಕರುಳಿನ ಚಲನೆಯನ್ನು ಉತ್ತೇಜಿಸಿ ಗ್ಯಾಸ್ಟ್ರಿಕ್ ಸಮಸ್ಯೆಗಳಿಗೆ ಪರಿಹಾರವನ್ನು ಕೂಡ ಒದಗಿಸುತ್ತದೆ. ವಾರಕ್ಕೆ ಎರಡರಿಂದ ಮೂರು ದಿನ ಸಬ್ಬಸ್ಸಿಗೆ ಸೊಪ್ಪು ಸೇವಿಸಬೇಕು ಇದು ಕೂಡ ಎದೆ ಹಾಲನ್ನು ಹೆಚ್ಚಿಸುತ್ತದೆ ಬಾದಾಮಿ ಪಿಸ್ತಾ ಗೋಡಂಬಿ ದ್ರಾಕ್ಷಿ ಗಳನ್ನು ನಿತ್ಯ ಸ್ವಲ್ಪ ಸ್ವಲ್ಪ ಸೇವಿಸಬೇಕು ಇದು ಕೂಡ ಮಕ್ಕಳಿಗೆ ಬೇಕಾಗುವ ಶಕ್ತಿಯನ್ನು ಎದೆ ಹಾಲಿನ ಮೂಲಕ ನೀಡಲು ಸಹಾಯ ಮಾಡುತ್ತದೆ.

ನಿತ್ಯ ಪೌಷ್ಟಿಕ ತರಕಾರಿಗಳು ಸೊಪ್ಪುಗಳ ಸೇವನೆ ಮಾಡಬೇಕು. ಸಕ್ಕರೆ ಮತ್ತು ಒಂದು ಟೀಚಮಚ ಜೀರಿಗೆ ಪುಡಿಯಯನ್ನು ಮಿಶ್ರಮಾಡಿ ಮಲಗುವ ಮೊದಲು ಪ್ರತಿದಿನ ಬೆಚ್ಚಗಿನ ಹಾಲಿನೊಂದಿಗೆ ಸೇವಿಸಬೇಕು. ದಿನಕ್ಕೆ ಎಂಟರಿಂದ ಒಂಬತ್ತು ಗ್ಲಾಸ್ ನೀರನ್ನು ಕುಡಿಯುವುದರ ಜೊತೆಗೆ, ಹಾಲುಣಿಸುವ ಮಹಿಳೆಯರು ಒಂದು ಲೋಟ ಹಾಲನ್ನು ಸಹ ತಪ್ಪದೆ ಕುಡಿಯಬೇಕು ಇದು ತಾಯಿಯ ಪ್ರಸವಾ.ನಂತರದಲ್ಲಿ ಎದೆಹಾಲು ಉತ್ಪಾದನೆಯಲ್ಲಿ ಸಹಾಯ ಮಾಡುತ್ತದೆ. ಅದೇ ಕಾರಣಕ್ಕಾಗಿ ಹಾಲು ಉತ್ಪಾದನೆಯನ್ನು ಸುಧಾರಿಸಲು ಹೊಸ ತಾಯಂದಿರು ತಮ್ಮ ಆಹಾರದಲ್ಲಿ ಮೆಂತ್ಯೆ ಸೇರಿಸಬೇಕು ಎಂದು ವೈದ್ಯರು ಸಲಹೆ ನೀಡುತ್ತಾರೆ.

ಹಾಲು ಉತ್ಪಾದನೆಯನ್ನು ಸುಧಾರಿಸಲು ದೈನಂದಿನ ಆಹಾರದಲ್ಲಿ ಎರಡು ಮೂರು ಬೆಳ್ಳುಳ್ಳಿ ಎಸಳನ್ನು ಸೇರಿಸಿಕೊಳ್ಳಬೇಕು. ಅಜ್ವೈನ್ ಇದು ಪ್ರತಿಯೊಂದು ಮನೆಯಲ್ಲೂ ಇರುತ್ತದೆ ಇದು ಜೀರ್ಣಕ್ರಿಯೆಗೆ ಮತ್ತು ಮಲಬದ್ಧತೆಯ ಸಮಸ್ಯೆಗೆ ಸಹಾಯ ಮಾಡುತ್ತದೆ ಹಾಗಾಗಿ ಹಾಲುಣಿಸುವ ತಾಯಂದಿರಲ್ಲಿ ಹಾಲು ಉತ್ಪಾದನೆಯನ್ನು ಹೆಚ್ಚಿಸಲು ಇದು ಸಹಾಯ ಮಾಡುತ್ತದೆ. ಎಳ್ಳಿನ ಬೀಜಗಳು ಕ್ಯಾಲ್ಸಿಯಂನಿಂದ ತುಂಬಿದ್ದು ಇದು ಎಲುಬುಗಳಿಗೆ ತುಂಬಾ ಒಳ್ಳೆಯದು ಮತ್ತು ಎದೆ ಹಾಲಿನ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹೀಗೆ ಮಾಡಿದರೆ ಎದೆ ಹಾಲಿನ ಉತ್ಪತ್ತಿ ಹೆಚ್ಚಿ ಮಕ್ಕಳಿಗೆ ಬೇಕಾಗುವಷ್ಟು ಎದೆ ಹಾಲು ಉತ್ಪತ್ತಿ ಆಗುತ್ತದೆ.

LEAVE A REPLY

Please enter your comment!
Please enter your name here