ಹಲ್ಲು ಜುಮ್ ಜುಮ್ ಅನ್ನುತ್ತಿದೆಯೇ ಹಾಗಾದರೆ ಹೀಗೆ ಮಾಡಿ.

0
892

ಮನುಷ್ಯನಿಗೆ ಹಲ್ಲುಗಳು ಆಹಾರ ಸೇವನೆಗೆ ತುಂಬಾ ಮುಖ್ಯ ಯವುದೇ ಒಂದು ಆಹಾರವನ್ನು ಸೇವಿಸುವಾಗ ನಾವು ಅದನ್ನು ಜಗಿದು ಸೇವಿಸಬೇಕು ಇದಕ್ಕೆ ನಮಗೆ ಸಹಾಯ ಮಾಡುವುದು ನಮ್ಮ ಹಲ್ಲುಗಳು. ಹೀಗೆ ನಮಗೆ ಹಲ್ಲುಗಳು ಇಲ್ಲ ಎಂದರೆ ನಾವು ಸರಿಯಾಗಿ ಮಾತನಾಡಲು ಆಗುವುದಿಲ್ಲ ಜೊತೆಗೆ ಆಹಾರವನ್ನು ಸೇವಿಸಲು ಆಗುವುದಿಲ್ಲ ಹಾಗೂ ಹಲ್ಲುಗಳು ಇಲ್ಲವಾದರೆ ಮುಖದ ಅಂದ ಕೂಡ ಕೆಟ್ಟು ಹೋಗುತ್ತದೆ ಅದಕ್ಕಾಗಿ ಮನುಷ್ಯನಿಗೆ ಹಲ್ಲುಗಳು ತುಂಬಾ ಮುಖ್ಯ.

ಕೆಲವೊಮ್ಮೆ ನಾವು ತುಂಬಾ ತಣ್ಣನೆಯ ಆಹಾರವನ್ನು ಹುಳಿ ಆಹಾರವನ್ನು ಅಥವ ತುಂಬಾ ಬಿಸಿ ಇರುವ ಆಹಾರವನ್ನು ಸೇವಿಸುವಾಗ ನಮ್ಮ ಹಲ್ಲುಗಳು ಜುಮ್ ಜುಮ್ ಎನ್ನುತ್ತವೆ ಹಾಗೆ ಜುಮ್ ಎಂದ ಮೇಲೆ ಹಲ್ಲುಗಳಲ್ಲಿ ನೋವು ಕಾಣಿಸುತ್ತದೆ ಹೀಗೆ ಅದ ನಂತರ ನಾವು ಇನ್ನು ಯಾವ ಆಹಾರವನ್ನು ಸೇವಿಸಲು ಆಗದೆ ನೋವು ಅನುಭವಿಸುತ್ತೇವೆ. ಆದರೆ ಈ ರೀತಿ ಹಲ್ಲುಗಳು ಜುಮ್ ಜುಮ್ ಎನ್ನುತ್ತಿರುವ ಸಮಸ್ಯೆಯನ್ನು ಸುಲಭವಾಗಿ ಗುಣ ಪಡಿಸುವುದು ಹೇಗೆ ಎಂದು ನೋಡೋಣ ಬನ್ನಿ.

ಹಲ್ಲು ಜುಮ್ ಜುಮ್ ಎಂದು ನೋವು ಕಾಣಿಸಿಕೊಂಡಾಗ ಸರಿಯಾಗಿ ಆಹಾರವನ್ನು ಜಗಿಯಲು ಆಗುವುದಿಲ್ಲ ಜೊತೆಗೆ ಹಲ್ಲುಗಳನ್ನು ಉಜ್ಜುವುದು ಕೂಡ ಕಷ್ಟ ಆಗುತ್ತದೆ ಇಂತಹ ಸಮಯದಲ್ಲಿ ನಾವು ಈ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ವಿಶೇಷ ಟೂತ್ ಪೇಸ್ಟ್ ಗಳನ್ನು ಬಳಸಬೇಕು. ಹಾಗೂ ಸಾಸಿವೆ ಎಣ್ಣೆ ಮತ್ತು ಉಪ್ಪನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಹಲ್ಲು ಜುಮ್ ಎನ್ನುವ ಭಾಗಕ್ಕೆ ನಿಧಾನವಾಗಿ ಹಚ್ಚಿನಂತರ ತಣ್ಣಿರಿನಲ್ಲಿ ಬಾಯಿ ಮುಕಳಿಸುವುದರಿಂದ ಹಲ್ಲು ಜುಮ್ ಎನ್ನುವುದು ಕಡಿಮೆಯಾಗುತ್ತದೆ.

ಉಪ್ಪಿನ ನೀರು ಇದು ಹಲ್ಲಿಗೆ ಒಳ್ಳೆಯ ಔಷಧಿ ಹಾಗಾಗಿ ಸ್ವಲ್ಪ ತಣ್ಣೀರಿಗೆ ಕಲ್ಲು ಉಪ್ಪನ್ನು ಹಾಕಿ ಅದು ಚೆನ್ನಾಗಿ ಕರಗಿದ ನಂತರ ಅದರಿಂದ ಬಾಯಿಯನ್ನು ಮುಕ್ಕಿಳಿಸುವುದರಿಂದ ಹಲ್ಲಿನ ನೋವು ಕಡಿಮೆಯಾಗುತ್ತದೆ. ಲವಂಗದ ಎಣ್ಣೆ ಇದು ಹಲ್ಲಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗಾಗಿ ಹಲ್ಲು ಜುಮ್ ಎನ್ನುವ ಜಾಗಕ್ಕೆ ಒಂದೆರಡು ಹನಿ ಲವಂಗದ ಎಣ್ಣೆಯನ್ನು ನಿಧಾನವಾಗಿ ಹಚ್ಚಿ ಸ್ವಲ್ಪ ಸಮಯ ಬಿಟ್ಟು ನಂತರ ತಣ್ಣೇರಿನಲ್ಲಿ ಬಾಯಿ ಮುಕಳಿಸುವುದರಿಂದ ಹಲ್ಲು ಜುಮ್ ಎನ್ನುವುದು ಹೋಗುತ್ತದೆ

ನಿತ್ಯ ಎರಡು ಬಾರಿಯಾದರೂ ಹಲ್ಲುಗಳನ್ನು ಉಜ್ಜಬೇಕು ಹಾಗೂ ಪ್ರತಿ ಬಾರಿ ಉಜ್ಜುವಾಗ ಮೃದುವಾದ ಬ್ರಶ್ ಅನ್ನು ಬಳಸಬೇಕು. ಹಲ್ಲುಗಳಿಗೆ ತುಂಬಾ ಒತ್ತಡ ನೀಡಬಾರದು. ತುಂಬಾ ತಣ್ಣಗೆ ಇರುವ ಹಾಗೂ ತುಂಬಾ ಗಟ್ಟಿ ಪದಾರ್ಥವನ್ನು ಹೆಚ್ಚು ಸೇವಿಸಬಾರದು. ಯಾವುದೇ ಆಹಾರವನ್ನು ಸೇವಿಸಿದ ನಂತರ ನೀರಿನಿಂದ ಚೆನ್ನಾಗಿ ಬಾಯಿ ಮುಕ್ಕಳಿಸಬೇಕು. ಹೀಗೆ ಮಾಡುತ್ತ ಬಂದರೆ ಹಲ್ಲುಗಳು ಜುಮ್ ಎನ್ನುವುದು ಹಲ್ಲುಗಳ ನೋವು ಕಡಿಮೆ ಆಗುತ್ತದೆ ಹಲ್ಲುಗಳ ಆರೋಗ್ಯದ ಮೇಲೆ ಗಮನಹರಿಸಿ. ಈ ಉಪಯುಕ್ತ ಲೇಖನ ಮರೆಯದೇ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here