ಫೇಸ್ಬುಕ್ ಬಳಕೆ ಮಾಡುವ ಹೆಣ್ಣು ಮಕ್ಕಳು ಮಾತ್ರ ಓದಿ

0
242

ಫೇಸ್ಬುಕ್ ಎಂಬುದು ಎಷ್ಟರ ಮಟ್ಟಿಗೆ ಪ್ರಖ್ಯಾತಿ ಪಡೆದಿದೆ ಅಂದ್ರೆ ಸರಿ ಸುಮಾರು ನಮ್ಮ ಭಾರತದಲ್ಲೇ ನಲವತ್ತು ಕೋಟಿ ಫೇಸ್ಬುಕ್ ಖಾತೆಗಳು ಇದೆ ಅಂತೆ ಅಂದ್ರೆ ಅರ್ಥ ಮಾಡಿಕೊಳ್ಳಿ ಇನ್ನು ಪ್ರಪಂಚಾದ್ಯಂತ ಎಷ್ಟು ಅಕ್ಕೌಂಟ್ ಇರಬಹುದು ಎಷ್ಟು ಜನ ಉಪಯೋಗ ಮಾಡ್ತಾ ಇರಬಹುದು ಎಂಬುದು. ಫೇಸ್ಬುಕ್ ನಲ್ಲಿ ಎಲ್ಲವು ನಮ್ಮ ಕಂಟ್ರೋಲ್ ನಲ್ಲೆ ಇದೆ. ನಮ್ಮ ಗುಪ್ತ ಮಾಹಿತಿ ಯಾರಿಗೂ ಗೊತ್ತಾಗದ ಹಾಗೇ ಕೆಲವು ಸೆಟ್ಟಿಂಗ್ ಮಾಡಿಕೊಂಡು ನಮಗೆ ಪರಿಚಯ ಇರೋ ಜನರನ್ನು ಮಾತ್ರವೇ ಸ್ನೇಹಿತರನ್ನಾಗಿ ಮಾಡಿಕೊಂಡರೆ ಯಾವುದೇ ಸಮಸ್ಯೆ ಇರೋದಿಲ್ಲ. ಆದರೆ ಇತ್ತೇಚೆಗೆ ನಾವು ಫೇಸ್ಬುಕ್ ನಿಂದ ಹೆಣ್ಣುಮಕ್ಕಳಿಗೆ ಎಷ್ಟು ಸಮಸ್ಯೆ ಆಗಿದೆ ಎಂಬುದು ನಿಮಗೆ ತಿಳಿದಿದೆ ಎಷ್ಟು ಜನ ಪ್ರತಿ ನಿತ್ಯ ಮೋಸ ಹೋಗಿ ಹಣ ಕಳೆದುಕೊಳ್ಳುತ್ತಾ ಇರುತ್ತಾರೆ ಇದು ಸಹ ನಿಮಗೆ ಗೊತ್ತಿರೋ ವಿಚಾರ ಆಗಿದೆ. ಇತ್ತೇಚೆಗೆ ಫೇಸ್ಬುಕ್ ನಲ್ಲಿ ಒಂದು ಪ್ರಕರಣ ನಡೆದಿದೆ ಇದರ ಹುಚ್ಚಿಗೆ ಒಂದು ಮುಗ್ದ ಜೀವ ಬಲಿ ಆಗಿದೆ. ಅದು ನಮ್ಮ ಕನ್ನಡ ನಾಡಿನಲ್ಲಿ ನಡೆದಿರುವುದು ನಿಜಕ್ಕೂ ನಮಗೆ ಬೇಸರದ ಸಂಗತಿ ಆಗಿದೆ.

ಪ್ರಿಯ ಎಂಬ ದಾವಣಗೆರೆ ಮೂಲದ ಹುಡುಗಿಗೆ ಫೇಸ್ಬುಕ್ ನಲ್ಲಿ ಅಪರಿಚಿತ ವ್ಯಕ್ತಿಯಿಂದ ಒಂದು ರಿಕ್ವೆಸ್ಟ್ ಬಂದಿದೆ ಅದನ್ನು ಮಾಮೂಲಿಯಾಗಿ ಸ್ವೀಕಾರ ಮಾಡಿದ ಈಕೆಗೆ ಮುಂದೆ ಹೀಗೆ ಆಗುತ್ತೆ ಎಂಬುದು ನಿಜಕ್ಕೂ ತಿಳಿದಿರಲಿಲ್ಲ. ಸಮಯ ಕಳೆಯುತ್ತಾ ಆ ಅನಾಮಿಕ ವ್ಯಕ್ತಿಯಿಂದ ಮೆಸ್ಸೆಂಜರ್ ನಲ್ಲಿ ಸಾಕಷ್ಟು ಸಂದೇಶಗಳು ಬಂದಿದೆ. ನಂತರ ಆತನ ಪ್ರೊಫೈಲ್ ಚೆಕ್ ಮಾಡಿದಾಗ ಆತ ಐಶರಾಮಿ ಕಾರ್ ಮತ್ತು ಬೈಕ್ ಮೇಲೆ ಕುಳಿತು ಹಾಗೆಯೇ ದೊಡ್ಡ ಬಂಗಲೆ ನಲ್ಲಿ ಇರುವ ರೀತಿ ಇರುವ ಚಿತ್ರಗಳನ್ನು ಫೋಟೋ ತೆಗೆದು ಫೇಸ್ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ ಇದಕ್ಕೆ ಆಕರ್ಷಣೆ ಆದ ಪ್ರಿಯ ಮೊದಲಿಗೆ ಫೋನ್ ನಂಬರ್ ಕೊಟ್ಟು ಸ್ನೇಹ ಪರಿಚಯ ಆಗಿದೆ ನಂತರ ಸಾಗುತ್ತಾ ಇಬ್ಬರು ಪ್ರೀತಿ ಮಾಡಲು ಶುರು ಮಾಡಿದ್ದಾರೆ.

ಇನ್ನು ಅತೀರೆಕಕ್ಕೆ ಹೋಗಿ ಕೆಲವೊಂದು ಸಮಯದಲ್ಲಿ ದೈಹಿಕ ಸಂಬಂಧ ಕೂಡ ಬೆಳೆಸಿದ್ದಾರೆ. ಒಂದು ದಿನ ಇಬ್ಬರು ಸಹ ವಿವಾಹ ಆಗಲು ತೀರ್ಮಾನ ಮಾಡಿ ಆತನ ಪ್ರಿಯಕರನ ಹೈದರಾಬಾದ್ ಊರಿಗೆ ಈಕೆ ಹುಡಿಕೊಂಡು ಹೋಗಿದ್ದಾಳೆ ಆಗ ನಿಜವಾದ ಬಣ್ಣ ಬಯಲು ಆಗಿದೆ. ಈಗಾಗಲೇ ಆತನ ಪ್ರಿಯಕರನಿಗೆ ವಿವಾಹ ಆಗಿ ಮೂರು ಜನ ಮಕ್ಕಳು ಇದ್ದು ಆತ ಸಣ್ಣ ಮನೆಯಲ್ಲಿ ವಾಸ ಮಾಡುತ್ತಿರುತ್ತಾನೆ ಹಾಗೂ ಈತ ಪಿಯುಸಿ ಓದಿ ಪೈಂಟ್ ಬಳೆಯುವ ಕೆಲಸ ಮಾಡ್ತಾ ಇರ್ತಾನೆ ಇದೆಲ್ಲವನ್ನು ನಿಜವಾಗಿ ಕಂಡ ಯುವತಿ ತಾನು ಮೋಸ ಹೋಗಿರುವುದು ಗೊತ್ತಾಗಿ ಕೊನೆಗೆ ತನ್ನ ತಂದೆ ತಾಯಿಗೂ ಮುಖ ತೋರಿಸಲು ಆಗದೆ ಕಡೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸ್ನೇಹಿತರೇ ನಿಜಕ್ಕೂ ಸಣ್ಣ ವಯಸಿನಲ್ಲಿ ಚೆನ್ನಾಗಿ ಓದಿ ಅಪ್ಪ ಅಮ್ಮನಿಗೆ ಕೀರ್ತಿ ತರಬೇಕಿದ್ದ ಪ್ರಿಯ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂದ್ರೆ ನೀವೇ ಯೋಚನೆ ಮಾಡಿರಿ ಫೇಸ್ಬುಕ್ ನಲ್ಲಿ ಅಪರಿಚಿತ ವ್ಯಕ್ತಿಯನ್ನು ಹೇಗೆ ನಂಬುದು ಎಂದು. ಹೆಣ್ಣು ಮಕ್ಕಳು ಅಪರಿಚಿತ ಜನಕ್ಕೆ ಫೋನ್ ನಂಬರ್ ಮತ್ತು ಫ್ರೆಂಡ್ ಮಾಡಿಕೊಳ್ಳುವುದು ಒಳ್ಳೆಯದಲ್ಲ. ಫೇಸ್ಬುಕ್ ನಲ್ಲಿ ನೀವು ನೋಡುವುದು ಬರಿ ಸುಳ್ಳು ಆಗಿರುತ್ತದೆ ಆದರೆ ಕೆಲವು ಜನರು ಹೆಣ್ಣುಮಕ್ಕಳು ತಮ್ಮ ಬಳಗೆ ಬೀಳಿಸಲು ಈ ರೀತಿ ಟ್ರಿಕ್ಸ್ ಮಾಡುತ್ತಾ ಇರುತ್ತಾರೆ ನಿಮ್ಮ ಜೀವನ ಹಾಳು ಮಾಡಿಕೊಳ್ಳಬೇಡಿ. ಈ ಲೇಖನ ಶೇರ್ ಮಾಡೀರಿ ಎಲ್ಲರಿಗು ಈ ವಿಷ್ಯ ತಿಳಿಯಲಿ ಜಾಗ್ರತಿ ಮೂಡಲಿ.

LEAVE A REPLY

Please enter your comment!
Please enter your name here