ಮೊಟ್ಟೆಯಲ್ಲಿ ಹಲವಾರು ರೀತಿಯ ಪೌಷ್ಟಿಕ ಅಂಶಗಳು ಇರುತ್ತವೆ ಹಾಗಾಗಿ ಇದನ್ನು ಸೇವಿಸುವುದರಿಂದ ಆರೋಗ್ಯವು ಉತ್ತಮವಾಗಿ ಇರುತ್ತದೆ ಈ ಮೊಟ್ಟೆಯನ್ನು ಹಸಿಯಾಗು ತಿನ್ನುತ್ತಾರೆ ಹಾಗೂ ಬೇಯಿಸಿಕೊಂಡು ಕೂಡ ತಿನ್ನುತ್ತಾರೆ ಆದರೆ ಸಾಮಾನ್ಯವಾಗಿ ಎಲ್ಲರೂ ಬೇಯಿಸಿಕೊಂಡು ತಿನ್ನುವುದು ಹೆಚ್ಚು ಆದರೆ ಮೊಟ್ಟೆಯನ್ನು ಬೇಯಿಸುವಾಗ ಅದು ಹೆಚ್ಚಾಗಿ ಒಡೆದು ಹೋಗುತ್ತದೆ. ಇದಕ್ಕೆ ನಿರ್ಧಿಷ್ಟ ಕಾರಣ ಎಂಬುದು ಇರುವುದಿಲ್ಲ. ಹಾಗೂ ಸರಿಯಾಗಿ ಬೆಂದಿರದೇ ಇರುವುದು ಇವೆಲ್ಲಾ ಆಗುವುದು ಹೆಚ್ಚು ಆದರೆ ಈ ರೀತಿ ಆದರೆ ಅದನ್ನು ತಿನ್ನಲು ಆಗುವುದಿಲ್ಲ ಅದಕ್ಕಾಗಿ ಮೊಟ್ಟೆಯನ್ನು ಬೇಯಿಸುವಾಗ ಈ ರೀತಿಯ ಸಮಸ್ಯೆ ಆಗಬಾರದು ಎಂದರೆ ನೀವು ಏನು ಮಾಡಬೇಕು ಗೊತ್ತೇ. ಈ ಲೇಖನ ಸಂಪೂರ್ಣ ಓದಿರಿ ಮರೆಯದೇ ಶೇರ್ ಮಾಡಿರಿ.

ಮೊಟ್ಟೆಯನ್ನು ಬೇಯಿಸುವಾಗ ಅದಕ್ಕೆ ಸ್ವಲ್ಪ ಉಪ್ಪು ಹಾಕಬೇಕು ಆಗ ಮೊಟ್ಟೆ ಒಡೆದು ಹೋಗುವುದಿಲ್ಲ. ಮೊಟ್ಟೆಯನ್ನು ಬೇಯಿಸಲು ಇಟ್ಟಾಗ ಅದು ಬೆಂದಿದೆಯೇ ಇಲ್ಲವೇ ಎಂದು ತಿಳಿದುಕೊಳ್ಳಲು ಮೊದಲು ಅದನ್ನು ನಾಲ್ಕು ಇಂಚು ನೀರಿರುವ ಪಾತ್ರೆಯಲ್ಲಿ ಹಾಕಬೇಕು ನಂತರ ಮೊಟ್ಟೆಯು ಪೂರ್ತಿಯಾಗಿ ಮುಳುಗಿದರೆ ಅದು ಸರಿಯಾಗಿ ಬೆಂದಿದೆ ಎಂದು ಅರ್ಥ ಹಾಗೂ ಅದು ಅರ್ಧ ಮೇಲೆ ನಿಂತರೆ ಸರಿಯಾಗಿ ಬೆಂದಿಲ್ಲವೆಂದು ತಿಳಿಯುತ್ತದೆ. ಮೊಟ್ಟೆಯನ್ನು ಬೇಯಿಸುವ ಮೊದಲು ರೂಮ್ ಟೆಂಪ್ರೇಚರ್ಗೆ ತರಬೇಕು ಅಂದರೆ ನಾವು ಅದನ್ನು ಫ್ರಿಡ್ಜ್ನಲ್ಲಿಟ್ಟಿದರೆ ಅದು ತಣ್ಣಗೆ ಇರುತ್ತದೆ ಅದಕ್ಕಾಗಿ ಅದನ್ನು ಕೂಡಲೇ ಬೇಯಿಸಬಾರದು ಸ್ವಲ್ಪ ಸಮಯ ಹೊರಗೆ ಇಟ್ಟು ಈ ತಣ್ಣನೆಯಲ್ಲ ಆರಿದ ಮೇಲೆ ಬೇಯಿಸಬೇಕು.
ಫ್ರೆಶ್ ಆಗಿರುವ ಮೊಟ್ಟೆಗಳ ಬದಲಾಗಿ ಹಳೆಯ ಮೊಟ್ಟೆಗಳನ್ನು ಬಳಸುವುದು ಒಳ್ಳೆಯದು ಯಾಕೆಂದರೆ ಈ ಮೊಟ್ಟೆಯ ಸಿಪ್ಪೆ ತುಂಬಾ ಗಟ್ಟಿಯಾಗಿರುತ್ತದೆ. ಮೊಟ್ಟೆಯನ್ನು ಬೇಯಿಸುವ ಮೊದಲು ಸೇಫ್ಟಿ ಪಿನ್ ಮೂಲಕ ಸಣ್ಣದಾಗಿ ಶೆಲ್ ಮೇಲೆ ಚುಚ್ಚಬೇಕು ಇದರಿಂದ ಮೊಟ್ಟೆ ಒಡೆದು ಹೋಗಲು ಕಾರಣವಾಗುವ ಏರ್ ಬಬಲ್ ಉಂಟಾಗುವುದಿಲ್ಲ. ಒಂದು ಬೌಲ್ನಲ್ಲಿ ತುಂಬಾ ಮೊಟ್ಟೆಗಳನ್ನು ಹಾಕಬಾರದು ಅದು ಫ್ರೀ ಆಗಿ ಬೇಯುವಂತೆ ಇರಬೇಕು. ಮೊಟ್ಟೆಯನ್ನು ಯಾವತ್ತೂ ಬಿಸಿ ನೀರಿನ ಪಾಟ್ಗೆ ನೇರವಾಗಿ ಹಾಕಬಾರದು ಇದರಿಂದ ಮೊಟ್ಟೆ ಬೇಗನೆ ಒಡೆದು ಹೋಗುತ್ತದೆ.
ಮೊಟ್ಟೆಯನ್ನು ಬೇಯಿಸಲು ಇಟ್ಟಾಗ ಒಲೆಯ ಉರಿ ಕಡಿಮೆಯಲ್ಲೇ ಇಡಬೇಕು ತುಂಬಾ ಜಾಸ್ತಿ ಕೊಟ್ಟು ಬೇಯಿಸಬಾರದು. ಒಂದು ಮೊಟ್ಟೆಗೆ ಸರಿಯಾದಂತೆ ಒಂದು ಚಮಚ ವಿನೇಗರ್ ಹಾಕಿ ನಂತರ ಮೊಟ್ಟೆಯನ್ನು ಬಿಸಿ ಮಾಡಿ. ಇದರಿಂದ ಮೊಟ್ಟೆಯ ಬಿಳಿ ಭಾಗ ಬೇಗನೆ ಗಟ್ಟಿಯಾಗುತ್ತದೆ ಹಾಗೂ ಒಡೆಯುವುದಿಲ್ಲ. ಈ ಮೇಲಿನ ಸಲಹೆಗಳನ್ನು ಪಾಲಿಸಿದರೆ ಮೊಟ್ಟೆ ಯಾವುದೇ ಕಾರಣಕ್ಕೂ ಒಡೆಯುವುದಿಲ್ಲ ಹಾಗೂ ಮೊಟ್ಟೆ ಬೇಯಿಸುವಾಗ ಸಮಸ್ಯೆಗಳು ಬರುವುದಿಲ್ಲ. ನಮ್ಮ ವೆಬ್ಸೈಟ್ ಎಲ್ಲ ಬರಹಗಳಿಗೆ ವಿಶೇಷ ಕಾಪಿ ರೈಟ್ಸ್ ಹೊಂದಿದ್ದು ಅನುಮತಿ ಇಲ್ಲದೆ ನಕಲು ಮಾಡುವ ಪ್ರಯತ್ನ ಮಾಡಿದ್ರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ.