ಬೆಳಗಿನ ಜಾಗಿಂಗ್ ಗಿಂತ ಸಂಜೆಯ ವಾಕಿಂಗ್ ಆರೋಗ್ಯಕ್ಕೆ ಒಳ್ಳೆಯದು.

0
753

ಇತ್ತೀಚಿನ ಜೀವನ ಬರಿ ಜಂಜಾಟದ ಜೀವನ ಬೆಳಿಗ್ಗೆ ಎದ್ದಾಗಿನಿಂದ ಸಂಜೆಯವರೆಗೂ ಕೂಡ ಕೆಲಸ ಜವಾಬ್ದಾರಿ. ಒತ್ತಡ ಸುತ್ತಟ ಇವೆ ಆಗುತ್ತದೆ ಇದರಿಂದ ಆರೋಗ್ಯದ ಸ್ಥಿತಿ ಗತಿಯ ಬಗ್ಗೆ ಸ್ವಲ್ಪ ಕೂಡ ಕಾಳಜಿ ವಹಿಸುವುದಿಲ್ಲ ಒಂದು ಬಾರಿ ಆರೋಗ್ಯ ಕೆಟ್ಟರೆ ಅದನ್ನು ಸುಧಾರಿಸುವುದು ಕಷ್ಟ ಜೊತೆಗೆ ಎಲ್ಲ ಕೆಲಸಗಳು ಕೂಡ ಪೂರ್ತಿ ಆಗದೆ ಹಾಗೆ ಉಳಿಯುತ್ತವೆ ಅದಕ್ಕಾಗಿ ನಿತ್ಯ ಈ ಎಲ್ಲ ಜಂಜಾಟಗಳ ಮದ್ಯ ಆರೋಗ್ಯವನ್ನು ಕಾಪಾಡಿಕೊಳ್ಳಲು ನಿತ್ಯ ವಾಕಿಂಗ್ ಮಾಡಬೇಕು. ಸಾಮಾನ್ಯವಾಗಿ ಎಲ್ಲರೂ ಬೆಳಿಗ್ಗೆ ಎದ್ದು ಜಾಕಿಂಗ್ ಹೋಗಿ ನಂತರ ಕೆಲಸ ಒತ್ತಡಗಳ ಮದ್ಯ ಸಿಕ್ಕಿ ಹಾಕಿಕೊಳ್ಳೂತ್ತಾರೆ ಅದಕ್ಕಾಗಿ ಬೆಳಗಿನ ಜಾಕಿಂಗ್ ಅಷ್ಟು ಪ್ರಯೋಜನ ನೀಡುವುದಿಲ್ಲ ಬದಲಾಗಿ ಸಂಜೆಯ ಸಮಯ ವಾಕಿಂಗ್ ಮಾಡುವುದರಿಂದ ಬೆಳಿಗ್ಗೆ ಇಂದ ಇರುವ ಒತ್ತಡಗಳು ಮಾಯವಾಗಿ ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತದೆ ಹಾಗೂ ಆರೋಗ್ಯಕ್ಕೂ ಒಳ್ಳೆಯದು.

ಹಾಗೆಯೇ ಬೆಳಗಿನ ಜಾವ ಜಾಗಿಂಗ್ ಹೋಗಲು ಎಷ್ಟೋ ಜನರಿಗೆ ಸಮಯ ಕೂಡ ಇರುವುದಿಲ್ಲ ಕೆಲಸಕ್ಕೆಂದು ಹತ್ತಾರು ಕಿಲೋಮೀಟರ್ ದೂರ ಹೋಗಬೇಕು ಅದರಿಂದ ಎರಡು ಗಂಟೆ ಮೊದಲೇ ಮನೆಬಿಡಬೇಕು ಹೀಗಿದ್ದಾಗ ಬೆಳಗಿನ ಜಾವ ಆರೋಗ್ಯಕ್ಕೆ ಸಮಯ ನಿಗದಿಪಡಿಸಿಕೊಳ್ಳಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ ಆಫೀಸ್‍ಗೆ ಹೋಗುವ ಒತ್ತಡದಲ್ಲಿ ವ್ಯಾಯಾಮ ಮಾಡಿದರೂ ಅದರ ಲಾಭ ಕೂಡ ಸಿಗುವುದಿಲ್ಲ. ಹಾಗಾಗಿ ಬೆಳಗ್ಗಿನ ಜಾಕಿಂಗ್ ಗಿಂತ ಸಂಜೆಯ ವಾಕಿಂಗ್ ಮಾಡುವುದರಿಂದ ಏನೆಲ್ಲ ಲಾಭಗಳು ಆಗುತ್ತದೆ ಗೊತ್ತೇ.

ನಿತ್ಯ ಕೆಲಸದ ಒತ್ತಡ ಜವಾಬ್ದಾರಿಯನ್ನು ಮುಗಿಸಿ ಸಂಜೆ ಸಮಯದಲ್ಲಿ ಒಂದು ಗಂಟೆಯಾದರೂ ವ್ಯಾಯಾಮ ಅಥವಾ ವಾಕಿಂಗ್ ಮಾಡುವುದರಿಂದ ಆ ದಿನದ ಎಲ್ಲ ಒತ್ತಡಗಳನ್ನು ಕಡಿಮೆ ಮಾಡಬಹುದು.ಜೊತೆಗೆ ಒಳ್ಳೆಯ ನಿದ್ರೆ ಬರುತ್ತವೆ. ಹೆಚ್ಚು ಹೆಚ್ಚು ವ್ಯಾಯಾಮ ಮಾಡುವುದರಿಂದ ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡಬಹುದು. ಆದರೆ ಬೆಳಗಿನ ಜಾವ ಹೆಚ್ಚಾಗಿ ವರ್ಕೌಟ್ ಮಾಡಲು ಸಮಯದ ಅಭಾವವಿರುತ್ತದೆ. ಬೊಜ್ಜು, ದೇಹದ ಅತಿಯಾದ ತೂಕ ಹೀಗೆ ಅನೇಕ ಸಮಸ್ಯೆಗಳಿರುವವರು ಸಂಜೆ ಸಮಯವನ್ನೇ ಆಯ್ದುಕೊಳ್ಳುವುದು ತುಂಬಾ ಒಳ್ಳೆಯದು ಆಗ ನಮಗೆ ಹೆಚ್ಚು ಕ್ಯಾಲೋರಿಗಳನ್ನು ಕರಗಿಸಲು ಸಮಯ ಸಿಗುತ್ತದೆ.

ಬೆಳಗಿನ ಸಮಯದಲ್ಲಿ ಕೆಲಸಗಳ ಒತ್ತಡ ಹೆಚ್ಚು ಇರುತ್ತದೆ ಆದರೆ ಸಂಜೆ ಯಾವುದೇ ಕೆಲಸಗಳ ಒತ್ತಡವಿರುವುದಿಲ್ಲ. ಆಗ ಹೆಚ್ಚಿನ ಸಮಯವನ್ನು ದೇಹದ ಫಿಟ್ನೆಸ್ ಗೆ ಇಡಬಹುದು. ಸಂಜೆಯ ಸಮಯದಲ್ಲಿ ವಾಕಿಂಗ್ ಮಾಡುವುದರಿಂದ ಅಲ್ಲಿ ಸಿಗುವ ಸಂತೋಷ ಹಾಗೂ ಮನಸ್ಸು ಕೂಡ ಹಗುರ ಆಗುತ್ತದೆ ಇದರಿಂದ ಮರುದಿನದ ಕೆಲಸಕ್ಕೆ ಪ್ರೋತ್ಸಾಹ ಸಿಗುತ್ತದೆ. ಹಾಗಾಗಿ ನಿಮ್ಮ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಸಂಜೆಯ ಸಮಯವನ್ನು ವಾಕಿಂಗ್ ಆಗಿ ಮೀಸಲಿಡಿ ಇದರಿಂದ ಆರೋಗ್ಯವು ಸುಧಾರಿಸುತ್ತದೆ ಮನಸ್ಸು ಹಗುರವಾಗುತ್ತದೆ. ಈ ಉಪಯುಕ್ತ ಆರೋಗ್ಯ ಲೇಖನ ಮರೆಯದೇ ಶೇರ್ ಮಾಡಿರಿ ನಿಮ್ಮ ಸ್ನೇಹಿತರಿಗೂ ತಿಳಿಸಿರಿ.

LEAVE A REPLY

Please enter your comment!
Please enter your name here