ಶುದ್ಧವಾದ ದೇಸಿ ತುಪ್ಪವನ್ನು ತೆಗೆದುಕೊಂಡು ನಾವು ಹೇಳಿದ ರೀತಿ ನೀವು ಮಾಡಿದರೆ ನಿಮಗೆ ಅದರಿಂದ ಹತ್ತಾರು ರೀತಿಯ ಲಾಭಗಳು ದೊರೆಯುತ್ತದೆ. ನಿಮಗೆ ತಿಳಿದಿರುವ ಹಾಗೆ ನಿಮ್ಮ ಮುಖದ ಅಂದ ಚಂದಕ್ಕಾಗಿ ನೀವು ಸಾವಿರಾರು ರೂಪಾಯಿಯ ಹಣವ್ಯಯ ಮಾಡುವವರನ್ನು ಸಹ ನೋಡಿರುತ್ತೀರಿ. ಹಾಗೆಯೇ ಮುಖಕ್ಕೆ ಫ್ಯೇಶ್ಯಲ್ ಮತ್ತು ಮಸ್ಸಾಜ್ ಹೀಗೆ ಅನೇಕ ರೀತಿಯ ಮಸ್ಸಾಜ್ಗಳನ್ನು ಮಾಡಿಸಿ ಮುಖವನ್ನು ಅಂದವಾಗಿಟ್ಟುಕೊಳ್ಳಲು ಹಣವನ್ನು ಖರ್ಚು ಮಾಡುವುದು ಗೊತ್ತಿರುವ ಸಂಗತಿ. ನಿಮಗೆ ಒಂದು ರೂಪಾಯಿ ಸಹ ಖರ್ಚಿಲ್ಲದೆ ನಿಮ್ಮ ಮನೆಯಲ್ಲೇ ಸಿಗುವ ನ್ಯೆಸರ್ಗಿಕ ಆಹಾರದಿಂದ ನಿಮ್ಮ ತ್ವಚೆಯನ್ನು ಮತ್ತು ನಿಮ್ಮ ಮುಖವನ್ನು ಅಂದವಾಗಿ ಇಟ್ಟುಕೊಳ್ಳಬಹುದೆಂದರೆ ಖಂಡಿತವಾಗಿ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿರಿ. ನಾವು ನಿಮಗೆ ಹೇಳಲು ಇಂದು ಹೊರಟಿರುವುದು ತುಪ್ಪದಿಂದ ನಿಮ್ಮ ಮುಖವನ್ನು ಅಂದವಾಗಿಟ್ಟುಕೊಳ್ಳವ ಪರಿ. ಹಸುವಿನ ತುಪ್ಪದಿಂದ ಹೇಗೆ ಫೇಸ್ ಪಾಕ್ ಮಾಡಿಕೊಳ್ಳುವುದು ಮತ್ತು ಅದರಿಂದಾಗುವ ಲಾಭಗಳನ್ನು ಪಡೆದುಕೊಳ್ಳಬಹುದು ಎಂದು ಈ ಲೇಖನದ ಸಾರಾಂಶವಾಗಿದೆ.

ನಿಮ್ಮ ಮುಖದ ಮಾಯಿಶ್ಚರೈಜರ್ ಹೆಚ್ಚಿಸಬೇಕು ಎಂದರೆ ಹೀಗೆ ಮಾಡಿ. ನಿಮ್ಮ ಮನೆಯಲ್ಲಿ ಇರುವ ದೇಸಿ ತುಪ್ಪವನ್ನು ಉಗುರುಬೆಚ್ಚಗಿನ ಬಿಸಿಮಾಡಿ ನಂತರ ನಿಮ್ಮ ಮುಖಕ್ಕೆ ಹತ್ತು ನಿಮಿಷಗಳ ಕಾಲ ಮಸ್ಸಾಜ್ ಮಾಡಿರಿ. ನಂತರ ಹತ್ತರಿಂದ ಹದಿನೈದು ನಿಮಿಷ ಬಿಟ್ಟು ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆದು ಶುಭ್ರವಾದ ಬಟ್ಟೆಯಿಂದ ಒರೆಸಿಕೊಳ್ಳಿ. ಹೀಗೆ ನೀವು ಮಾಡುವುದರಿಂದ ಮುಖದ ಮಾಯಿಶ್ಚರೈಸರ್ ಹೆಚ್ಚುತ್ತದೆ. ನಿಮ್ಮ ಸ್ಕಿನ್ ಹೆಚ್ಚಿನ ರೀತಿಯಲ್ಲಿ ಸಾಫ್ಟ್ ಆಗಬೇಕೆಂತೆಂದರೆ ನೀರು ಮತ್ತು ತುಪ್ಪವನ್ನು ಸಮ ಪ್ರಮಾಣದಲ್ಲಿ ಬೆರೆಸಿಟ್ಟುಕೊಳ್ಳಿ. ನಂತರ ನಿಮ್ಮ ಕುತ್ತಿಗೆಯ ಭಾಗದ ತನಕ ಚೆನ್ನಾಗಿ ಬೆರೆಸಿಟ್ಟುಕೊಂಡಿರುವ ಮಿಶ್ರಣವನ್ನು ನಯವಾಗಿ ಮಸ್ಸಾಜ್ ಮಾಡಿ ಸ್ವಲ್ಪ ಸಮಯದ ನಂತರ ಚೆನ್ನಾಗಿ ನೀರಿನಿಂದ ತೊಳೆಯಿರಿ ನಂತರ ನಿಮ್ಮ ಸ್ಕಿನ್ ಸಾಫ್ಟ್ ಆಗುತ್ತದೆ.
ನೀವು ತುಂಬಾ ಕಪ್ಪಾಗಿದ್ದೀರ ನಿಮ್ಮ ಸ್ಕಿನ್ ಹೆಚ್ಚಿನ ರೀತಿಯಲ್ಲಿ ಹೊಳೆಯಬೇಕೆಂತೆಂದರೆ ಕಡಲೆಹಿಟ್ಟು ಮತ್ತು ಹಾಲು ಮತ್ತು ಸ್ವಲ್ಪ ತುಪ್ಪ ಎಲ್ಲವನ್ನು ಚೆನ್ನಾಗಿ ಬೆರೆಸಿಕೊಂಡು ಮಿಶ್ರಣ ಮಾಡಿ ನಿಮ್ಮ ಮುಖಕ್ಕೆ ಲೇಪಿಸಿ ಮೂವತ್ತು ನಿಮಿಷಗಳ ಕಾಲ ಬಿಟ್ಟು ಮುಖವನ್ನು ತೊಳೆದರೆ ಮುಖದ ತ್ವಚೆಯ ಗ್ಲೋನೆಸ್ ಹೆಚ್ಚುತ್ತದೆ. ಹಾಗೆಯೇ ಚಳಿಗಾಲದಲ್ಲಿ ನಿಮ್ಮ ತುಟಿಗಳು ಒಡೆದಿದ್ದರೆ ತುಪ್ಪವನ್ನು ಲೇಪಿಸುವುದರಿಂದ ಒಡಕನ್ನು ಸರಿಪಡಿಸುತ್ತದೆ. ಹಾಗೆಯೇ ಸಿಗರೇಟ್ ಸೇದುವವರಿಗೆ ತುಟಿಗಳು ಕಪ್ಪಾಗಿರುತ್ತದೆ ಈ ಸಮಸ್ಯೆ ಸರಿಪಡಿಸುವುದಕ್ಕೆ ಪ್ರತಿರಾತ್ರಿ ನೀವು ಮಲಗುವ ಮುನ್ನ ತುಪ್ಪವನ್ನು ನಿಮ್ಮ ತುಟಿಗಳಿಗೆ ಹಚ್ಚಿಕೊಂಡು ಮಲಗಬೇಕು. ಹೀಗೆ ನಾವು ಮೇಲೆ ಹೇಳಿರುವ ಹಾಗೆ ಪ್ರತಿನಿತ್ಯ ಅಥವಾ ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಈ ರೀತಿ ತುಪ್ಪದ ಲೇಪನವನ್ನು ನೀವು ಮುಖಕ್ಕೆ ಮಾಡುತ್ತಾ ಬಂದರೆ ನಿಮ್ಮ ಮಾಯಿಶ್ಚರೈಸರ್ ಹೆಚ್ಚಾಗಿ ನಿಮ್ಮ ಚರ್ಮವನ್ನು ಸುಕ್ಕುಗಟ್ಟುವುದನ್ನು ತಡೆಯುತ್ತದೆ.

ಮತ್ತು ನಿಮ್ಮ ಕಣ್ಣಿನ ಕೆಳಭಾಗದಲ್ಲಿ ಆಗುವ ಕುಪ್ಪು ವರ್ತುಲಗಳು ಕಡಿಮೆಯಾಗುತ್ತ ಹೋಗುತ್ತದೆ. ಹಾಗೆಯೇ ಕೆಲವರಿಗೆ ಒಡೆದ ಕೂದಲ ಸಮಸ್ಯೆ ಇರುತ್ತದೆ. ಈ ಸಮಸ್ಯೆ ಸರಿಹೋಗಲು ಶಾಂಪೂ ಬಳಕೆ ಮಾಡುವ ಬದಲು ದೇಸಿ ತುಪ್ಪವನ್ನು ನಿಮ್ಮ ಕೂದಲಿಗೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಕೂದಲು ತೊಳೆದರೆ ಈ ಸಮಸ್ಯೆ ಕಡಿಮೆಯಾಗುತ್ತದೆ. ಸ್ನೇಹಿತರೆ ಮನೆಯಲ್ಲಿ ಬಳಸುವ ಶುದ್ದ ತುಪ್ಪದಿಂದ ನೀವು ಅನೇಕ ರೀತಿಯಿಂದ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹಾಗಿದ್ದರೆ ಇನ್ನೇಕೆ ತಡ ಮನೆಯಲ್ಲಿರುವ ಶುದ್ಧವಾದ ತುಪ್ಪವನ್ನು ತೆಗೆದುಕೊಂಡು ನಿಮ್ಮ ಫೇಸ್ ಪಾಕ್ ಮಾಡಿಕೊಳ್ಳಿ. ಆದರೆ ಮಾರುಕಟ್ಟೆಯಲ್ಲಿ ಸಿಗುವ ಸಾಕಷ್ಟು ನಕಲಿ ತುಪ್ಪಗಳಲ್ಲಿ ಹಲವಾರು ರೀತಿಯ ರಾಸಾಯನಿಕ ಪದಾರ್ಥಗಳಿದ್ದು ಇವನ್ನು ನೀವು ಮುಖಕ್ಕೆ ಹಚ್ಚಿಕೊಂಡರೆ ಮುಖದಲ್ಲಿ ಕೆರೆತ ಮತ್ತು ಹಲವು ರೀತಿಯ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಆದುದರಿಂದ ಸಾಧ್ಯವಾದಷ್ಟು ಉತ್ತಮ ದರ್ಜೆಯ ತುಪ್ಪವನ್ನೇ ಹಚ್ಚಿರಿ ಅಥವ ನಿಮಗೇನಾದರೂ ಹಸುವಿನ ದೇಸಿ ತುಪ್ಪ ಏನಾದರೂ ಇದ್ದರೆ ಅದನ್ನೇ ಉಪಯೋಗ ಮಾಡಿರಿ ನಿಮಗೆ ಶೇಕಡಾ 100ರಷ್ಟು ಫಲಿತಾಂಶ ಕಡಿಮೆ ಸಮಯದಲ್ಲಿ ದೊರೆಯುತ್ತದೆ. ಈ ಲೇಖನವನ್ನು ಮರೆಯದೇ ಶೇರ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ