ಡೇಟಿಂಗ್ ನಲ್ಲಿ ಹುಡುಗರು ಹೇಳುವ ಸುಳ್ಳುಗಳು

0
447

ಈಗಂತೂ ಕಾಲ ಎಷ್ಟರಮಟ್ಟಿಗೆ ಬದಲಾಗಿದೆ ಎಂತೆಂದರೆ ಮದುವೆಗೂ ಮುಂಚೆಯೇ ಹುಡುಗ ಹುಡುಗಿ ಡೇಟಿಂಗ್ ಮಾಡಿಕೊಂಡು ಇಷ್ಟವಾದರೆ ನಂತರ ವಿವಾಹವಾಗುತ್ತಾರೆ. ಇಲ್ಲವಾದರೆ ಇನ್ನೊಬ್ಬರನ್ನು ಹುಡುಕಿಕೊಳ್ಳುತ್ತಾರೆ. ಇದನ್ನು ನೋಡಿದರೆ ನಿಜಕ್ಕೂ ಎಷ್ಟರಮಟ್ಟಿಗೆ ಸರಿ ಎಂಬುದು ನಮ್ಮ ಹಿರಿಯರ ಪ್ರಶ್ನಾತೀತವಾಗಿಯೇ ಉಳಿದಿದೆ. ಹಾಗೆ ನಮ್ಮ ಹಿರಿಯರು ಈ ಹಿಂದೆ ಮದುವೆಯಾಗುವ ಸಮಯದಲ್ಲಿ ಎಷ್ಟೋ ಸರಿ ತಮ್ಮ ತಂದೆ ತಾಯಿಯ ಮಾತಿಗೆ ಬೆಲೆ ಕೊಟ್ಟು ಮತ್ತು ಆಗಿನ ಪದ್ಧತಿಗಳಿಗೆ ಒಳಗಾಗಿ ಮತ್ತು ಬೆಲೆಯನ್ನು ಕೊಟ್ಟು ಹುಡುಗಿಯನ್ನು ಹಸೆಮಣೆ ಏರಿದ ನಂತರವೇ ನೋಡುತ್ತಿದ್ದರು. ಮಿಕ್ಕಿದ್ದ ಎಲ್ಲವನ್ನು ಕೂಡ ವರನ ತಂದೆ ತಾಯಿಯೇ ನಿಶ್ಚಯ ಮಾಡುತ್ತಿದ್ದರು. ಇಷ್ಟರ ಮಟ್ಟಿಗೆ ಒಂದು ಶಿಸ್ತನ್ನು ನಮ್ಮ ಭಾರತ ದೇಶ ಪಾಲಿಸಿಕೊಂಡು ಬಂದಿತ್ತು.

ಆದರೆ ವಿದೇಶಿ ಸಂಸೃತಿ ಹೆಚ್ಚಾದಂತೆ ವಿದೇಶಿ ಭಾಷಮಾಧ್ಯಗಳ ಜನರ ಒಡನಾಟ ಮತ್ತು ಅವರ ಒಂದು ಸಾಂಪ್ರದಾಯಗಳು ನಮ್ಮನ್ನು ಹೆಚ್ಚಿನ ರೀತಿಯಲ್ಲಿ ಆವರಿಸಿದೆ. ಹಾಗೆಯೇ ಹುಡುಗಿಯ ಜೊತೆ ಡೇಟಿಂಗ್ ಮಾಡುವ ಹುಡುಗರು ನಿಜಕ್ಕೂ ಎಲ್ಲವನ್ನೂ ಸಹ ಮರೆಮಾಚುತ್ತಾರೆ. ಅದರಲ್ಲಿ ಹೆಣ್ಣುಮಕ್ಕಳು ಏನು ಕಡಿಮೆ ಇಲ್ಲ ಅವರೂ ಸಹ ಹಲವು ವಿಷಯಗಳನ್ನು ಮರೆಮಾಚುತ್ತಾರೆ. ಹೀಗೆ ಹುಡುಗರು ಮರೆಮಾಚುವ ಒಂದು ವಿಷಯದಲ್ಲಿ ಮೊದಲು ಹಳೆಯ ಸಂಬಂಧ ಹುಡುಗರಿಗೆ ಈ ಹಿಂದೆ ಏನಾದರೂ ಅಫ್ಫೇರ್ಗಳಿದ್ದರೆ ಅವುಗಳನ್ನು ಮರೆಮಾಚುತ್ತಾರೆ. ಹಾಗೆಯೇ ಈ ಹುಡುಗರು ಸಾಕಷ್ಟು ಹುಡುಗಿಯರ ಹಿಂದೆ ಬಿದ್ದು ಕಾಡಿಸಿರುವುದು ಇರುತ್ತದೆ ಮತ್ತು ಅನೇಕ ಹುಡುಗಿಯರ ಫೋನ್ ನಂಬರ್ ಜೊತೆಗೆ ಮತ್ತು ವಾಟ್ಸಪ್ಪ್ ನಲ್ಲಿ ಈಗಲೂ ಕೂಡ ಸಂಪರ್ಕದಲ್ಲಿರುತ್ತಾರೆ.

ಅಂತಹ ಎಲ್ಲಾ ವಿಷಯಗಳನ್ನು ಸಹ ಡೇಟಿಂಗ್ ನಲ್ಲಿ ಮರೆಮಾಚುತ್ತಾರೆ. ಹಾಗೆಯೇ ಹಣಕಾಸಿನ ವಿಚಾರದಲ್ಲಿ ತಮ್ಮ ಆರ್ಥಿಕ ವರಮಾನ ಮತ್ತು ನೌಕರಿಗೆ ಸಂಬಂಧ ಪಟ್ಟ ವಿವರಗಳು ಮತ್ತು ತಾವು ಮಾಡಿರುವ ಆಸ್ತಿಯ ಬಗ್ಗೆ ತಪ್ಪು ಮಾಹಿತಿಯನ್ನು ನೀಡುತ್ತಾರೆ. ಕೆಲವರಂತೂ ಕಡಿಮೆ ವರಮಾನವಿದ್ದರು ಸಹ ಹೆಚ್ಚಿನ ವರಮಾನವನ್ನು ಹೇಳಿ ತಮಗೆ ತಾವೇ ಜಂಬ ಪಟ್ಟುಳ್ಳುತ್ತಾರೆ. ಇನ್ನು ಕೆಲವರು ನೈಜ್ಯಯಂಶವನ್ನು ತಿಳಿಸಿ ಯಾವುದೇ ರೀತಿಯ ಇಂಪ್ರೆಸ್ಸ್ ಮಾಡುವುದಿಲ್ಲ. ಹಾಗೆಯೇ ದೈಹಿಕ ವಿಚಾರ ಇನ್ನು ನಮ್ಮಲ್ಲಿರುವ ಹುಡುಗರು ತಮ್ಮ ದೈಹಿಕ ಸಾಮರ್ಥ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ಹೊಂದಿರುತ್ತಾರೆ. ಹಾಗೆಯೇ ತಮ್ಮ ಆರೋಗ್ಯದ ಗುಟ್ಟುಗಳು ಮತ್ತು ಒಂದಿಷ್ಟು ವೈಯುಕ್ತಿಕ ಮಾಹಿತಿಯನ್ನು ಡೇಟಿಂಗ್ ನಲ್ಲಿ ಯಾವುದೇ ಹುಡುಗಿಗೇ ಬಿಟ್ಟುಕೊಡುವುದಿಲ್ಲ. ಹಾಗೆಯೇ ಹುಡುಗಿಯರ ಬಳಿ ತಮ್ಮ ವೈಯುಕ್ತಿಕ ಕುಟುಂಬದ ಯಾವುದೇ ವಿಚಾರಗಳನ್ನೂ ಸಹ ಈ ಹುಡುಗರು ಹಂಚುಕೊಳ್ಳುವುದಿಲ್ಲ. ಎಲ್ಲವನ್ನೂ ಸಹ ತಪ್ಪು ಮಾಹಿತಿಗಳಯನ್ನೇ ನೀಡುತ್ತಾರೆ. ಕೊನೆಗೆ ತಪ್ಪು ಮಾಹಿತಿಯನ್ನು ನೀಡಿ ವಿವಾಹವಾದ ನಂತರ ಇಷ್ಟವಾಗದೇ ಇದ್ದಲ್ಲಿ ಇಬ್ಬರು ಸಹ ನಿಜಾಂಶ ತಿಳಿದು ಇಬ್ಬರು ಸಹ ಕಿತ್ತಾಡಿಕೊಳ್ಳುತ್ತಾರೆ. ಮತ್ತು ಡಿವೋರ್ಸ್ ಆಗುವ ಸಾಧ್ಯತೆಗಳೂ ಸಹ ಹೆಚ್ಚಿರುತ್ತದೆ.

ಈವೊಂದು ಡೇಟಿಂಗ್ ಎನ್ನುವುದು ಇತ್ತೀಚೆಗೆ ಕಾಮೋನ್ ಆಗೋಗಿದೆ. ಎಲ್ಲಿ ನೋಡಿದರೂ ಸಹ ಹುಡುಗ ಹುಡುಗಿಯರು ಒಂದಿಷ್ಟು ದಿನ ಸುತ್ತಾಡಿ ಇಷ್ಟವಾದಲ್ಲಿ ಮದುವೆಯಾಗುವುದು ಇಲ್ಲವಾದರೆ ಬಿಟ್ಟು ಇನ್ನೊಬ್ಬರನ್ನು ವಿವಾಹವಾಗುವುದು ಕಾಮೋನ್ ಆಗೋಗಿದೆ. ನಿಜಕ್ಕೂ ಇದು ನಮ್ಮ ಸಂಪ್ರದಾಯವ ನಿಜಕ್ಕೂ ಇದು ನಮ್ಮ ಭಾರತ ದೇಶವಾ ಎಂಬುದು ನಮಗೆ ಪರಮಾಶ್ಚರ್ಯವಾಗುತ್ತದೆ. ಆದ್ದರು ಏನೇ ಇರಲಿ ಡೇಟಿಂಗ್ ಎಂಬುವುದು ಒಂದು ಉಪಯುಕ್ತವಾಗಿ ಅದನ್ನು ಬಳಕೆ ಮಾಡಿಕೊಂಡರೆ ಸಹ ಮುಂದಿನ ಸಂಸಾರದ ಜೀವನದಲ್ಲಿ ಯಾವುದೇ ರೀತಿಯ ತೊಂದರೆಗಳಿಲ್ಲದೆ ನಾವು ಸುಖೀ ಜೀವನ ನಡೆಸಬಹುದು. ಆದರೆ ಕೆಲವು ಜನರು ಅದನ್ನೇ ಇಟ್ಟುಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಮತ್ತು ಆ ಸುಳ್ಳುಗಳನ್ನು ಹೇಳಿಕೊಂಡು ತಮ್ಮ ದ್ಯೆನಂದಿನ ಜೀವನವನ್ನು ಶುರುಮಾಡಲು ಇಷ್ಟಪಡುತ್ತಾರೆ. ಆದರೆ ಅದೆಲ್ಲವೂ ಹೆಚ್ಚು ದಿನ ಉಳಿಯುವುದಿಲ್ಲ ಎಂಬುದು ತಾವು ಅರ್ಥ ಮಾಡಿಕೊಳ್ಳಬೇಕು. ಈಗ ಸಧ್ಯದ ಮಟ್ಟಿಗೆ ಏನಾದರೂ ಡೇಟಿಂಗ್ ನಡೆಸುತ್ತಿದ್ದಲ್ಲಿ ನಿಮ್ಮ ಪ್ರೇಯಸಿಯೊಂದಿಗೆ ಇರುವ ಮೂಲ ವಿಚಾರಗಳನ್ನು ತಿಳಿಸಿ ಆಕೆಗೆ ಇಷ್ಟವಾದರೆ ಇರುತ್ತಾರೆ ಇಲ್ಲವಿದ್ದರೆ ನಿಮ್ಮನ್ನು ಬಿಟ್ಟು ಹೋಗುತ್ತಾರೆ. ಆಕೆ ನಿಮ್ಮನ್ನು ಬಿಟ್ಟು ಹೋಗುತ್ತಾಳೆ ಎಂಬುವ ಭಯದಿಂದ ಇಲ್ಲಸಲ್ಲದ ಸುಳ್ಳುಗಳನ್ನು ಹೇಳಿ ಇಂಪ್ರೆಸ್ಸ್ ಮಾಡಲು ದಯವಿಟ್ಟು ಹೋಗಲೇಬೇಡಿ. ಏಕೆಂದರೆ ಸುಳ್ಳುಗಳಿಂದ ಕಟ್ಟಿದ ಈವೊಂದು ಸಂಬಂಧ ಹೆಚ್ಚಿನ ದಿನ ಉಳಿದುಕೊಳ್ಳುವುದಿಲ್ಲ. ಈವೊಂದು ಲೇಖನವನ್ನು ಮರೆಯದೇ ಶೇರ್ ಮಾಡಿರಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿರಿ.

LEAVE A REPLY

Please enter your comment!
Please enter your name here