ಕಾಲು ಊತ ಎಡಿಮಾ ಈ ಸಮಸ್ಯೆಗೆ ಸುಲಭ ಮನೆ ಮದ್ದುಗಳು

0
996

ಇತ್ತೀಚಿನ ದಿನಗಳಲ್ಲಿ ಒತ್ತಡ ಕೆಲಸ ಸುತ್ತಾಟ ಇವೆಲ್ಲ ಹೆಚ್ಚಾಗಿರುವ ಕಾರಣ ಸಮಸ್ಯೆಗಳ ಸೂರಿ ಮಳೆ ಕೂಡ ಹೆಚ್ಚುತ್ತಲೇ ಇವೆ ಅದರಲ್ಲಿ ಕಾಲು ಊದಿ ಕೊಳ್ಳುವುದು ಕೂಡ ಒಂದು ಸಮಸ್ಯೆ ಈ ಸಮಸ್ಯೆ ಕಾಣಿಸಿಕೊಂಡರೆ ಕೂರಲು ಆಗದೆ ನಿಲ್ಲಲು ಆಗದೆ ತುಂಬಾ ಒದ್ದಾಡುತ್ತೇವೆ ಈ ಸಮಸ್ಯೆಗೆ ಮಾತ್ರೆಗಳನ್ನು ಸೇವಿಸುತ್ತೇವೆ ಎಲ್ಲ ರೀತಿಯ ಕ್ರೀಮ್ ಅನ್ನು ಹಚ್ಚುತ್ತೇವೆ ಆದರೂ ಕೂಡ ಗುಣ ಆಗುವುದಿಲ್ಲ. ಆದರೆ ಹೀಗೆ ಕಾಲು ಊತದ ಸಮಸ್ಯೆಗೆ ಕಾರಣ ಅಂಗಾಂಶಗಳಲ್ಲಿ ಸಂಗ್ರಹವಾಗುವ ದ್ರವ್ಯಗಳು ಇದಕ್ಕೆ ಮೂಲ ಕಾರಣ ಈ ಸ್ಥಿತಿಯನ್ನು ಎಡಿಮಾ ಎಂದು ಕರೆಯುತ್ತಾರೆ. ಅತಿಯಾದ ತೂಕ. ದೀರ್ಘಕಾಲದವರೆಗೆ ನಿಲ್ಲುವುದು. ವಯಸ್ಸಾಗುವುದು. ಗರ್ಭಧಾರಣೆ ಸಮಯದಲ್ಲಿ. ಪ್ರೀ ಮೆನ್ಸ್ಟ್ರುವಲ್ ಸಿಂಡ್ರೋಮ್ ಪಿ ಎಮ್ ಸಿ ಅಪೌಷ್ಟಿಕತೆ. ದೈಹಿಕ ವ್ಯಾಯಾಮದ ಕೊರತೆ
ರಕ್ತ ಕೊರತೆ ಕೂಡ ಕಾರಣ ಆಗುತ್ತವೆ.

ಆದರೆ ಈ ಸಮಸ್ಯೆಗೆ ಹೆಚ್ಚು ತುತ್ತಾಗುವುದು ಮಧುಮೇಹ ಹೃದಯ ಸಮಸ್ಯೆಗಳು ಮೂತ್ರಪಿಂಡದ ಅಥವಾ ಯಕೃತ್ತಿನ ರೋಗ ಹೊಂದಿರುವ ಜನರು ಮತ್ತು ಗರ್ಭಿಣಿ ಮಹಿಳೆಯರಲ್ಲಿ ಹೆಚ್ಚು ಕಾಣಿಸುತ್ತದೆ. ಆದರೆ ಈ ಕಾಲಿನ ಊತದ ಸಮಸ್ಯೆಗೆ ಸುಲಭ ಮನೆ ಮದ್ದುಗಳು. ಒಂದು ಬಟ್ಟಲು ನೀರಿನಲ್ಲಿ ಎರಡು ಚಮಚ ಆಪಲ್ ಸೈಡರ್ ವಿನೆಗರ್ ಅನ್ನು ಸೇರಿಸಿ ಅದಕ್ಕೆ ಟವಲ್ ಅನ್ನು ಅದ್ದಿ 10 ನಿಮಿಷಗಳ ಕಾಲ ಕಾಲಿನ ಸುತ್ತ ಸುತ್ತಿಕೊಳ್ಳಬೇಕು ಹೀಗೆ ಮಾಡಿದರು ಕೂಡ ಕಾಲಿನ ಊತ ಕಡಿಮೆ ಆಗುತ್ತದೆ. ಕೊತ್ತಂಬರಿ ಬೀಜವನ್ನು ಒಂದು ಲೋಟ ನೀರಿನಲ್ಲಿ ಬೆರೆಸಿ ಅದನ್ನು ಚೆನ್ನಾಗಿ ಕುದಿಸಿ ನಂತರ ಅದು. ತಣ್ಣಗೆ ಅದ ನಂತರ ಅದನ್ನು ದಿನಕ್ಕೆ 2 ರಿಂದ 3 ಬಾರಿ ಕುಡಿಯಬೇಕು. ಊತವನ್ನು ಕಡಿಮೆ ಮಾಡಲು ನಿತ್ಯ ವ್ಯಾಯಾಮಗಳಲ್ಲಿ ತೊಡಗಿಕೊಳ್ಳಬೇಕು. ಮೆಗ್ನೀಸಿಯಮ್ ಅನ್ನು ಒಳಗೊಂಡಿರುವ ಆಹಾರಗಳಾದ ಮೀನು ಸೋಯಾಬೀನ್ಗಳು ಆವಕಾಡೊ ಬಾಳೆಹಣ್ಣುಗಳು ಮತ್ತು ಡಾರ್ಕ್ ಚಾಕೊಲೇಟ್ಗಳನ್ನು ಹೆಚ್ಚು ಸೇವಿಸಬೇಕು.

ಎರಡು ದೊಡ್ಡ ಬಕೆಟ್ ಅನ್ನು ತೆಗೆದುಕೊಂಡು ಅದಕ್ಕೆ ಒಂದರಲ್ಲಿ ಬಿಸಿ ನೀರು ಇನ್ನೊಂದರಲ್ಲಿ ತಣ್ಣೀರು ಹಾಕಬೇಕು ನಂತರ 15 ರಿಂದ 20 ನಿಮಿಷಗಳ ಕಾಲ ಬೆಚ್ಚಗಿನ ನೀರಿನಲ್ಲಿ ಪಾದವನ್ನು ಇರಿಸಿ ನಂತರ ತಕ್ಷಣ ಸುಮಾರು 1 ನಿಮಿಷ ತಣ್ಣನೆಯ ನೀರಿನಲ್ಲಿ ಪದವನ್ನು ಇಟ್ಟುಕೊಳ್ಳಬೇಕು ಹೀಗೆ ವಾರದಲ್ಲಿ 3 ರಿಂದ 4 ದಿನ ಮಾಡಿದರೆ ಊತ ಕಡಿಮೆ ಆಗುತ್ತದೆ. ಸಾಸಿವೆ ಎಣ್ಣೆ ಆಲಿವ್ ತೈಲ ಅಥವಾ ಹರಳೆಣ್ಣೆ ಇದರಲ್ಲಿ ಯಾವುದಾದರೂ ಒಂದು ಎಣ್ಣೆಯನ್ನು ತೆಗೆದುಕೊಂಡು ಅದನ್ನು ಸ್ವಲ್ಪ ಬಿಸಿ ಮಾಡಿ ಅದನ್ನು ಕಾಲುಗಳಿಗೆ ಮಸಾಜ್ ಮಾಡಿಕೊಂಡರೆ ಊತ ಕಡಿಮೆ ಆಗುತ್ತದೆ. ಎಪ್ಸಮ್ ಉಪ್ಪು ಇದನ್ನು ನೀರಿನ ಟಬ್ ಗೆ ಹಾಕಿ ಮಿಶ್ರಣ ಮಾಡಿಕೊಂಡು 10 ರಿಂದ 15 ನಿಮಿಷಗಳ ಕಾಲ ಪಾದವನ್ನು ಅದರಲ್ಲಿ ಇರಿಸಿಕೊಳ್ಳಬೇಕು ಈಗೆ ವಾರದಲ್ಲಿ 2 ಬಾರಿ ಮಾಡಿದರೆ ಕಾಲಿನ ಊತ ಕಡಿಮೆಯಾಗುತ್ತದೆ. ಶುಂಠಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ದಿನಕ್ಕೆ 2 ರಿಂದ 3 ಬಾರಿ ಕಾಲಿಗೆ ಮಸಾಜ್ ಮಾಡಿದರೆ ಊತ ಕಡಿಮೆಯಾಗುತ್ತದೆ. ಒಂದು ಚಮಚ ದಂಡೇಲಿಯನ್ ಎಲೆಗಳ ಮಿಶ್ರಣವನ್ನು ತೆಗೆದುಕೊಂಡು ಅದರಿಂದ ಟೀ ಮಾಡಿಕೊಂಡು ಕುಡಿಯುವುದರಿಂದ ಕೂಡ ಕಾಲಿನ ಊದು ಕಡಿಮೆ ಆಗುತ್ತದೆ. ಒಂದು ಲೋಟ ಸ್ವಲ್ಪ ನಿಂಬೆ ರಸವನ್ನು ಮಿಶ್ರಣ ಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿಕೊಂಡು ಕುಡಿಯಬೇಕು. ಇವುಗಳನ್ನು ಪಾಲಿಸಿದರೆ ಸಾಕು ಕಾಲಿನ ಊತ ಕಡಿಮೆ ಆಗುತ್ತದೆ.

LEAVE A REPLY

Please enter your comment!
Please enter your name here