ಬೇಸಿಗೆಯಲ್ಲಿ ಈ ರೀತಿ ಮಾಡಿರಿ ಆರೋಗ್ಯ ಸೂಪರ್ ಆಗಿರುತ್ತೆ

0
553

ಬೇಸಿಗೆ ಆರಂಭವಾಗಿದೆ ಬಿಸಿಲು ಆರಂಭವಾಯಿತು ಎಂದರೆ ಸಾಕು ದೇಹದಲ್ಲಿ ಉಷ್ಣತೆ ಹೆಚ್ಚಾಗಿ ಕಣ್ಣು ಉರಿಯುವುದು ಕಾಲು ಕೈಗಳು ಉರಿಯುವುದು ಮೂಗಿನಿಂದ ಕಿವಿಗಳಿಂದ ಹಾಗೂ ಬಾಯಿಯಿಂದ ಬಿಸಿಯಾದ ಹಬೆ ಬರುವುದು ಮೂತ್ರದಲ್ಲಿ ಉರಿ ಉಂಟಾಗುವುದು ಹೀಗೆ ಎಷ್ಟೆಷ್ಟೋ ಲಕ್ಷಣಗಳು ಹೊರಬರುತ್ತದೆ. ಇನ್ನೂ ದೇಹಕ್ಕೆ ಉಷ್ಣತೆ ಜಾಸ್ತಿಯಾಗಿದೆ ಎಂದರೆ ನಮ್ಮ ಡಾಕ್ಟರ್ ಗಳು ಅಷ್ಟು ಸೀರಿಯಸ್ಸಾಗಿ ತೆಗೆದುಕೊಳ್ಳುವುದಿಲ್ಲ ಯಾವುದೋ ಒಂದು ಉಷ್ಣ ಕಡಿಮೆ ಮಾದುವ ಔಷಧಿಯನ್ನ ಬರೆದುಕೊಟ್ಟು ಸಾಗುಹಾಕುತ್ತಾರೆ. ಆದರೆ ಆಯುರ್ವೇದದಲ್ಲಿ ಮಾತ್ರ ಡಾಕ್ಟರ್ ಗಳು ಈ ದೇಹಕ್ಕೆ ಉಷ್ಣತೆಯಾಗಿದೆ ಎಂದರೆ ಉತ್ತಮ ರೀತಿಯಾದಂತಹ ಸಲಹೆ ನೀಡುತ್ತಾರೆ. ಅದು ಕೂಡ ಕುತ್ತಿಗೆಯಲ್ಲಿ ಉರಿ ಹೊಟ್ಟೆಯಲ್ಲಿ ಉರಿ ಅಂಗಾಲು ಅಂಗ್ಯೆಗಳಲ್ಲಿ ಉರಿ ಮತ್ತು ಮೂತ್ರದಲ್ಲಿ ಕೂಡ ಉರಿ ಕಾಣಿಸಿ ಮೈಯೆಲ್ಲಾ ಬಿಸಿಯಾಗಿ ಹಾಗೂ ಮೂಗಿನಿಂದ ನೀರು ಸೋರುತ್ತಾ ಶೀತವಾಗಿ ಕಫ ಕೆಮ್ಮು ಕಾಡಿಸುತ್ತಿದ್ದರೆ ಆಯುರ್ವೇದದಲ್ಲಿ ಒಂದು ಅತ್ಯುತ್ತಮವಾದಂತಹ ಔಷಧಿಗಳಿವೆ. ಶರೀರದಲ್ಲಿ ವಿಟಮಿನ್ ಡಿ ಕಡಿಮೆಯಾಗಿ ಜೀವಕಣಗಳು ಹಾನಿಯಾಗುವ ಅವಕಾಶ ಈ ಉರಿಯಿಂದ ಇರುತ್ತದೆ. ಆದರಿಂದ ಜೀವಕಣಗಳು ಬಹುಬೇಗ ಹಾಳಾಗುವ ಅವಕಾಶಗಳು ಇರುತ್ತದೆ. ಅದರಿಂದ ದೇಹದಲ್ಲಿರುವಂತಹ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳುವ ಪ್ರಕ್ರಿಯೆ ತಕ್ಷಣವೇ ಜರುಗಬೇಕು.

ಇನ್ನೂ ಉಷ್ಣತೆ ಹೆಚ್ಚಾಗಿ ಶರೀರವೆಲ್ಲಾ ಉರಿ ಕಾಣಿಸಿಕೊಂಡರೆ ಬಹುಬೇಗ ತಂಪನ್ನು ನೀಡುವ ಪದಾರ್ಥಗಳನ್ನ ಸೇವಿಸಲು ಆರಂಭಿಸಬೇಕು. ಹೀಗೆ ತಂಪು ಪದಾರ್ಥಗಳನ್ನು ಸೇವಿಸುತ್ತಾ ಬಂದರೆ ದೇಹವು ಸಮತೋಳನ ಹೊಂದಿ ಬಹುಬೇಗ ತಂಪಾಗುತ್ತದೆ. ಮುಖ್ಯವಾಗಿ ನಾವು ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಮಸಾಲೆ ಮತ್ತು ಎಣ್ಣೆ ಪದಾರ್ಥಗಳು ಹಾಗೆ ಉಪ್ಪಿನಕಾಯಿಗಳು ಹೆಚ್ಚು ಕಾರವನ್ನು ಹೊಂದಿರುತ್ತದೆ. ಆದ್ದರಿಂದ ಸಾಧ್ಯವಾದಷ್ಟು ಈ ದೇಹ ಬಿಸಿಯಾದಾಗ ಅಥವಾ ಉಷ್ಣತೆ ಹೆಚ್ಚಿದಾಗ ಇಂತಹ ಪದಾರ್ಥಗಳನ್ನ ಪಕ್ಕಕ್ಕಿಡಬೇಕು. ಆದಷ್ಟು ಸೇವಿಸಲು ಪ್ರಯತ್ನ ಮಾಡಬಾರದು. ಇವುಗಳನ್ನ ತಿನ್ನಲು ಇಷ್ಟವಾಗುತ್ತದೆ ಆಮೇಲೆ ರುಚಿ ಕೂಡ ಇರುತ್ತೆ ಆದರೆ ಶರೀರ ಮಾತ್ರ ಬಹಳ ಕಷ್ಟಪಡಬೇಕಾಗುತ್ತದೆ. ಆದ್ದರಿಂದ ಇದಕ್ಕೆ ಒಂದು ಒಳ್ಳೆಯ ಉಪಾಯ ಅಂದರೆ ತೊಗರಿಬೇಳೆಯ ಕಟ್ಟು ಅಥವಾ ಹೆಸರುಬೇಳೆಯ ಕಟ್ಟು ಈ ಕಟ್ಟುಗಳಿಂದ ಮಾಡಿದ ಸಾರಿನಿಂದ ಊಟವನ್ನು ಮಾಡಬೇಕು.

ಇನ್ನು ಸಾಧ್ಯವಾದಷ್ಟು ದೇಹಕ್ಕೆ ಉಷ್ಣತೆಯನ್ನು ನೀಡುವ ಆಹಾರ ಪದಾರ್ಥಗಳನ್ನ ತ್ಯಜಿಸಬೇಕು. ಶರೀರ ಮತ್ತೆ ಸಮಸ್ಥಿತಿಗೆ ಬರುವಂತೆ ನೋಡಿಕೊಳ್ಳಬೇಕು. ಇನ್ನು ಮುಖ್ಯವಾಗಿ ಬೆಳಗ್ಗೆ ಎದ್ದ ತಕ್ಷಣ ಮಾಡುವ ತಿಂಡಿಯಲ್ಲಿ ಕೂಡ ಉಷ್ಣತೆ ಜಾಸ್ತಿಯಾಗಿರುತ್ತದೆ. ಯಾವುದೇ ತಿಂಡಿಯನ್ನು ತಿನ್ನಿ ಅದರಲ್ಲಿ ಉಷ್ಣಾಂಶವು ಜಾಸ್ತಿಯಾಗಿರುತ್ತದೆ. ಇದು ದೇಹಕ್ಕೆ ಉರಿಯನ್ನ ಉಂಟು ಮಾಡುತ್ತದೆ. ದೇಹವನ್ನು ತಂಪಾಗಿಟ್ಟುಕೊಳ್ಳಲು ದಾಳಿಂಬೆ ಹಣ್ಣು ಕರಬೂಜದ ಹಣ್ಣು ಕಲ್ಲಂಗಡಿ ಹಣ್ಣು ಸೌತೆಕಾಯಿ ಎಳನೀರು ಸೊಗದೆ ಬೇರಿನ ನೀರು ಮತ್ತು ಮಜ್ಜಿಗೆಯನ್ನು ಹೆಚ್ಚಾಗಿ ಸೇವಿಸಿದರೆ ನಮ್ಮ ಶರೀರದ ಉಷ್ಣಾಂಶವು ಸಮಸ್ಥಿತಿಗೆ ಬರುತ್ತದೆ.

LEAVE A REPLY

Please enter your comment!
Please enter your name here