ಈ ಮಿಶ್ರಣ ಮಾಡಿಕೊಂಡು ಕುಡಿದರೆ ನರ ದೌರ್ಬಲ್ಯ ಸರಿ ಆಗುತ್ತೆ

0
1544

ಇತ್ತೀಚಿನ ಕಾಲದಲ್ಲಿ ನರಗಳ ಬಲಹೀನತೆ ನರಗಳ ದೌರ್ಬಲ್ಯದ ಸಮಸ್ಯೆಯಿಂದ ಬಹುತೇಕ ಜನರು ಬಳಲುತ್ತಿದ್ದಾರೆ. ಕ್ಯೆಕಾಲುಗಳು ಜೋಮು ಹಿಡಿಯುವುದು. ಇದ್ದಕ್ಕಿದ್ದಂತೆ ಯಾವುದಾದರೂ ಜಗಳ ಅಥವಾ ಗಲಾಟೆ ನಡೆದಾಗ ಹೃದಯದ ಬಡಿತ ಹೆಚ್ಚಾಗುವುದು. ಚಿಕ್ಕ ಕೆಲಸ ಮಾಡಿದರು ಬಹಳ ಬೇಗ ಸುಸ್ತಾಗುವುದು. ಬಾರರಹಿತ ವಸ್ತುಗಳನ್ನು ಎತ್ತಲೂ ಸಹ ಆಗದೇ ಬಳಲುವುದು ಇದು ನರ ಬಲಹೀನತೆಯ ಕೆಲವು ಲಕ್ಷಣಗಳು. ಇನ್ನು ಮನುಷ್ಯನ ಚಲನವಲನಗಳಿಗೆ ಬೆನ್ನೆಲುಬು ಹಾಗೂ ಮೆದುಳು ಎಷ್ಟು ಮುಖ್ಯನೋ ನರಗಳು ಕೂಡ ಅಷ್ಟೇ ಮುಖ್ಯವಾದದ್ದು. ಮೆದುಳಿನಿಂದ ಬರುವ ಸಂಕೇತಗಳನ್ನ ನರಗಳಿಂದ ಖಂಡಗಳಿಗೆ ಹೋಗಿ ನಂತರ ಚಾಲನೆ ಸಿಗುತ್ತದೆ. ಯಾವಾಗ ನರಗಳು ದೌರ್ಬಲ್ಯವಾಗುತ್ತದೆಯೋ ಆಗ ಸ್ಪರ್ಶ ಇಲ್ಲದಂತೆ ಆಗುವುದು ಕ್ಯೆಕಾಲುಗಳ ಚಾಲನೆ ಇಲ್ಲದಂತಾಗುವುದು ನಡೆಯದಂತಾಗುವುದು ಇವುಗಳು ನರ ಸಂಬಂಧಿ ರೋಗಗಳ ಲಕ್ಷಣಗಳಾಗಿವೆ.

ಸಾಧಾರಣವಾಗಿ ಈ ಸಮಸ್ಯೆಯನ್ನು ಸಕ್ಕರೆ ಕಾಯಿಲೆ ಅಂದರೆ ಮಧುಮೇಹದಿಂದ ಬಳಲುತ್ತಿರುವವರಲ್ಲಿ ನೋಡಬಹುದು. ಇನ್ನು ಧೂಮಪಾನ ಮಧ್ಯಪಾನ ಅತಿಯಾಗಿ ಸೇವನೆ ಮಾಡುವವರಲ್ಲಿಯೂ ಕೂಡ ಈ ದೌರ್ಬಲ್ಯ ಕಂಡುಬರುತ್ತದೆ. ಅಷ್ಟೇ ಅಲ್ಲ ಪೂರ್ತಿ ಸಸ್ಯಾಹಾರಿ ಸೇವನೆ ಮಾಡುವವರಲ್ಲಿ ಬೇಗನೆ ನರಗಳು ದೌರ್ಬಲ್ಯಗೊಳ್ಳುತ್ತವೆ ಎಂದು ಹೇಳುತ್ತಾರೆ. ಕೆಲವರಿಗೆ ಮಾತ್ರೆಗಳಿಂದ ಪರಿಹಾರ ದೊರೆತಿರುವುದಿಲ್ಲ ಅಂತವರು ಕ್ರಮ ತಪ್ಪದೇ ವ್ಯಾಯಾಮ ಮತ್ತು ಪ್ರಾಣಯಾಮವನ್ನು ಮಾಡಿದರೆ ಸಾಕು ಒಳ್ಳೆಯ ಫಲಿತಾಂಶಗಳನ್ನು ಕಾಣಬಹುದು. ಇದರಿಂದ ನರಗಳಲ್ಲಿ ರಕ್ತದ ಹರಿತ ಉತ್ಪನ್ನವಾಗುತ್ತದೆ. ಸೂರ್ಯನ ಕಿರಣಗಳಲ್ಲಿ ವಿಟಮಿನ್ ಡಿ ಸಿಗುವ ಕಾರಣ ಸ್ವಲ್ಪ ಹೊತ್ತು ಬೆಳಗಿನ ಜಾವದಲ್ಲಿ ಬಿಸಿಲಿನಲ್ಲಿ ಓಡಾಡಿದರೆ ಇನ್ನು ಉತ್ತಮ.

ಇನ್ನು ಎಲ್ಲದ್ದಕ್ಕಿಂತ ಉತ್ತಮವಾದದ್ದು ಆಯುರ್ವೇದದಲ್ಲಿ ಒಂದಿದೆ ಅದೇ ಒಂದು ಚಿಕ್ಕ ಪರಿಹಾರ ವಿಷಯ ಅದುವೇ ಅಶ್ವಗಂಧ ಈ ಅಶ್ವಗಂಧ ತೆಗೆದುಕೊಂಡು ನುಣ್ಣಗೆ ಪುಡಿಮಾಡಿಕೊಂಡು ಅದಕ್ಕೆ ಸ್ವಲ್ಪ ಕಲ್ಲುಸಕ್ಕರೆಯನ್ನ ಬೆರೆಸಿ ಮಿಶ್ರಣ ಮಾಡಿಕೊಂಡು ಒಂದು ಡಬ್ಬದಲ್ಲಿ ಸ್ಟೋರ್ ಮಾಡಿಕೊಳ್ಳಬೇಕು. ಉಗುರುಬೆಚ್ಚಗಿನ ಹಾಲಿನಲ್ಲಿ ಒಂದು ಸ್ಪೂನ್ ಈ ಮಿಶ್ರಣವನ್ನು ಹಾಕಿಕೊಂಡು ಪ್ರತಿನಿತ್ಯ ಎರಡುಬಾರಿ ಸೇವಿಸುವುದರಿಂದ ಎರಡು ಮೂರು ತಿಂಗಳುಗಳಲ್ಲೇ ನಿಮ್ಮ ನರಗಳು ಬಲಗೊಳ್ಳುತ್ತವೆ ಜೊತೆಗೆ ಆರೋಗ್ಯಕರವಾಗಿ ಏರ್ಪಡುತ್ತವೆ. ಇನ್ನು ಮಧುಮೇಹದಿಂದ ಬಳಲುತ್ತಿರುವವರು ಕಲ್ಲುಸಕ್ಕರೆ ಹಾಕುವ ಬದಲು ಹಳೆಯ ಬೆಲ್ಲವನ್ನು ಮಿಶ್ರಣ ಮಾಡಿಕೊಂಡು ಅಶ್ವಗಂದವನ್ನು ಸೇವಿಸಬಹುದು.

ಇನ್ನು ಈ ನರಗಳ ದೌರ್ಬಲ್ಯ ಇರುವವರು ತಪ್ಪದೆ ಪ್ರತಿನಿತ್ಯ ಹಾಲನ್ನು ಸೇವಿಸಬೇಕು ಇದರಿಂದ ಕ್ಯಾಲ್ಸಿಯಂ ಹೆಚ್ಚಾಗಿ ನರಗಳ ದೌರ್ಬಲ್ಯಕ್ಕೆ ಸ್ವಲ್ಪ ಮಟ್ಟಿಗಾದರು ಕಡಿಮೆಯಾಗುತ್ತದೆ. ಇನ್ನು ನರಗಳ ದೌರ್ಬಲ್ಯತೆಯಿಂದ ಬಳಲುತ್ತಿರುವವರು ಪ್ರತಿನಿತ್ಯ ಉಗುರುಬೆಚ್ಚಗಿನ ನೀರಿನಲ್ಲಿ ಸ್ವಲ್ಪ ನಿಂಬೆರಸ ಹಾಗೂ ಸ್ವಲ್ಪ ಹರಿಶಿನ ಸ್ವಲ್ಪ ಜೇನುತುಪ್ಪ ಸೇರಿಸಿ ಪ್ರತಿನಿತ್ಯ ಕುಡಿಯುವುದರಿಂದ ನರಗಳ ದೌರ್ಬಲ್ಯತೆಯೂ ಕಡಿಮೆಯಾಗುತ್ತ ಹೋಗುತ್ತದೆ. ಇನ್ನು ನೇರವಾಗಿ ಹಾಲು ಕುಡಿಯುವುದಕ್ಕಿಂತ ಒಂದು ಚೀಟಿಕೆಯಷ್ಟು ಅರಿಶಿನ ಬೆರೆಸಿ ಹಾಲು ಕುಡಿಯುವುದರಿಂದ ಕೂಡ ನರಗಳು ಬಲವಂತವಾಗಿ ಮಾರ್ಪಡುತ್ತವೆ. ಇನ್ನು ಪ್ರತಿನಿತ್ಯ ವಾಕಿಂಗ್ ಮಾತ್ರ ತಪ್ಪದೇ ಮಾಡಬೇಕು ಇದರಿಂದ ಶರೀರಕ್ಕೆ ರಕ್ತ ಪ್ರಸರಣೆ ಚೆನ್ನಾಗಿ ಆಗಿ ನರಗಳ ಕ್ರಮೇಣ ಕಡಿಮೆಯಾಗುತ್ತದೆ. ಇನ್ನು ಖಾಲಿ ಹೊಟ್ಟೆಯಲ್ಲಿ ಸ್ವಲ್ಪ ಉಗುರುಬೆಚ್ಚಗಿನ ನೀರಿನಲ್ಲಿ ನಿಂಬೆಹಣ್ಣಿನ ರಸ ಮತ್ತು ಜೇನುತುಪ್ಪವನ್ನ ಕಲಸಿ ಕುಡಿಯುವುದರಿಂದ ಕೂಡ ಸಾಕಷ್ಟು ನರಗಳಬಲಹೀನತೆ ಕಡಿಮೆಯಾಗುತ್ತದೆ. ಈ ಲೇಖನವನ್ನು ಶೇರ್ ಮಾಡಿ.

LEAVE A REPLY

Please enter your comment!
Please enter your name here