ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ನಿಮಗೆ ತಿಳಿಯದ ಮಾಹಿತಿ

0
553

ನಮ್ಮ ಹೆಮ್ಮೆಯ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಗ್ಗೆ ಹೇಳುತ್ತಾ ಹೋದ್ರೆ ದಿನ ಇಡೀ ಸಾಕಾಗೋದಿಲ್ಲ ಹಾಗೆಯೇ ಅವರ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ಅವ್ರ ಅಭಿಮಾನಿಗಳಿಗೆ ನಾವು ಇಂದು ನೀಡುತ್ತಾ ಇದ್ದೇವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಪ್ರಾಣಿ ಪಕ್ಷಿ ಮತ್ತು ಪರಿಸರದ ಮೇಲಿನ ಪ್ರೀತಿ ಕಾಳಜಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆನೇ. ಬಲಗ್ಯೆನಲ್ಲಿ ಕೊಟ್ಟಿದ್ದು ಎಡಗ್ಯೆಗೆ ಗೊತ್ತಾಗಬಾರದು ಎನ್ನುವುದು ದಚ್ಚು ಮನೋಧರ್ಮ. ಕಷ್ಟ ಅಂತ ಮನೆ ಬಾಗಿಲಿಗೆ ಹೋದ್ರೆ ಅದು ಏನೇ ಇರಲಿ ಅವರು ಸಹಾಯ ಮಾಡ್ತಾರೆ. ನಿಜಕ್ಕೂ ದರ್ಶನ್ ಎಲ್ಲರಿಗೂ ಮಾದರಿ. ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ದರ್ಶನ್ ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ಮಾಸ್ ಮಹಾರಾಜ ದರ್ಶನ್ ರವರು ಪ್ರಾಣಿಪಕ್ಷಿ ಎಂದರೆ ಜೀವ ಬಿಡುತ್ತಾರೆ. ಆರಡಿ ಕಟ್ ಔಟ್ ಒಳಗೆ ಒಬ್ಬ ವನ್ಯಪ್ರೇಮಿ ಇದ್ದಾನೆ. ಚಿಕ್ಕಲಿನಿಂದಲೇ ಪ್ರಾಣಿಪಕ್ಷಿ ಪ್ರೀತಿ ಬೆಳೆಸಿಕೊಂಡು ಬಂದ ದರ್ಶನ್ ಇವತ್ತು ನೂರಾರು ಪ್ರಾಣಿಪಕ್ಷಿಗಳನ್ನ ಮಕ್ಕಳಂತೆ ಸಾಕುತ್ತಿದ್ದಾರೆ.

ಸಾಮಾನ್ಯವಾಗಿ ಹಳೆಯಕಾಲದಲ್ಲಿ ಮಂದಿರ ಮಠಗಳಲ್ಲಿ ಪ್ರಾಣಿ ಪಕ್ಷಿಗಳನ್ನು ಸಾಕಿ ಬೆಳೆಸುವ ಪದ್ದತಿ ಇತ್ತು. ಆದರೆ ಬೆಂಗಳೂರಿನಂತಹ ಕಾಂಕ್ರೀಟ್ ಕಾಡಿನಲ್ಲಿ ದೇವಸ್ಥಾನದಲ್ಲಿ ಇವೆಲ್ಲವನ್ನು ಊಹಿಸಿಕೊಳ್ಳುವುದು ಕಷ್ಟಕರವಾದ ವಿಷಯ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದನ್ನು ಮಾಡಿ ತೋರಿಸಿದ್ದಾರೆ. ದರ್ಶನ್ ಮೈಸೂರು ಚಾಮುಂಡಿ ತಾಯಿಯ ಭಕ್ತ ಎನ್ನುವುದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ನಗರದ ಗವಿಪುರಂ ಗುಟ್ಟಳ್ಳಿಯಲ್ಲಿರೋ ಬಂಡಿ ಮಾಕಳಮ್ಮನ ಮೇಲೆ ಅಪಾರ ಭಕ್ತಿ ಇದೆ. ದೇವಸ್ಥಾನದ ಜೊತೆ ಕ್ಯೆಜೋಡಿಸಿ ಡಿ ಬಾಸ್ ಅಲ್ಲಿ ಒಂದಷ್ಟು ಪ್ರಾಣಿ ಪಕ್ಷಿಗಳಿಗೆ ಆಶ್ರಯ ನೀಡಿದ್ದಾರೆ. ದೇವಸ್ಥಾನದ ಅರ್ಚಕರಾದ ಶಶಿಗೂ ಪ್ರಾಣಿಪಕ್ಷಿ ಅಂದರೆ ವಿಶೇಷ ಕಾಳಜಿ ಇದೇ ಕಾಳಜಿಯನ್ನು ಮನಗೊಂಡು ದರ್ಶನ್ ತಮ್ಮ ಮನೆಯಲ್ಲಿರೋ ಒಂದಷ್ಟು ಪ್ರಾಣಿಪಕ್ಷಿಗಳನ್ನು ಕೊಟ್ಟು ದೇವಸ್ಥಾನದಲ್ಲಿ ಸಾಕುತ್ತಿದ್ದಾರೆ.

ಕೆಲ ವರ್ಷಗಳ ಹಿಂದೆ ಬೆರಳೆಣಿಕೆಯ ಪ್ರಾಣಿಪಕ್ಷಿಯಿಂದ ಶುರುವಾದ ಸಣ್ಣ ಮೃಗಾಲಯದಲ್ಲಿ ಈಗ ಸಾಕಷ್ಟು ಪ್ರಾಣಿಪಕ್ಷಿಗಳು ಇವೆ. ಸಂಬಂಧಗಳಿಗೆ ಬೆಲೆ ಇಲ್ಲದ ಸ್ನೇಹಕ್ಕು ಕವಡೆ ಕಾಸಿನ ಕಿಮ್ಮತ್ತಿಲ್ಲದ ಪ್ರಪಂಚದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಾಣಿಪಕ್ಷಿ ಪ್ರೀತಿ ಎಲ್ಲರಿಗೂ ಮಾದರಿ. ಮೈಸೂರಿನಲ್ಲಿರೋ ವಿಶಾಲವಾದ ಫಾರ್ಮ್ ಹೌಸ್ ನಲ್ಲಿ ಸಾಕಷ್ಟು ಪ್ರಾಣಿಪಕ್ಷಿಗಳನ್ನು ಸಾಕುತ್ತಿದ್ದಾರೆ ನಮ್ಮ ನಿಮ್ಮೆಲ್ಲರ ಪ್ರೀತಿಯ ದಚ್ಚು. ಪ್ರತಿವರ್ಷ ಮೈಸೂರು ಮೃಗಾಲಯದಲ್ಲಿ ಹಲವು ಪ್ರಾಣಿಗಳನ್ನು ದತ್ತು ಪಡೆದು ಅವುಗಳಿಗೆ ಖರ್ಚು ಭರಿಸುತ್ತಿದ್ದಾರೆ ನಮ್ಮ ದಚ್ಚು. ಪ್ರತಿವರ್ಷ ಬಂಡಿ ಮಾಕಳಮ್ಮ ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ದರ್ಶನ್ ಮರೆಯುವುದಿಲ್ಲ. ತಿಂಗಳಿಗೊಮ್ಮೆ ವಿಶೇಶಪೂಜೆ ನೆರವೇರಿಸುತ್ತಿದ್ದಾರೆ. ಬರೀ ದೇವರಿಗೆ ಕ್ಯೆಮುಗಿದರೆ ಸಾಲದು ಪ್ರಾಣಿಪಕ್ಷಿಗಳನ್ನು ದೇವರಂತೆ ಕಾಣಬೇಕು. ಪ್ರಾಣಿಪಕ್ಷಿ ಕಾಡು ಇದ್ದರೆ ಮನುಷ್ಯ ಬದುಕೋಲಿಕ್ಕೆ ಸಾಧ್ಯ ಎನ್ನುವುದನ್ನು ಅರಿತಿರುವ ದರ್ಶನ್ ತಮ್ಮ ಕ್ಯೆಲಾದ ಸಹಾಯ ಮಾಡುತ್ತ ಬಂದಿದ್ದಾರೆ. ಅವರ ಈ ವಿಶೇಷ ಕಾಳಜಿಯನ್ನು ಎಲ್ಲರೂ ಮೆಚ್ಚಲೇಬೇಕು. ದರ್ಶನ್ ಅಭಿಮಾನಿಗಳು ತಪ್ಪದೇ ಈ ಲೇಖನ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here