ಜೀರಿಗೆ ಮತ್ತು ಬೆಲ್ಲ ತಗೊಂಡು ಈ ರೀತಿ ಮಾಡಿ ಹತ್ತಾರು ಲಾಭ ಪಡೆಯಿರಿ

2
1231

ಬೆಲ್ಲ ಮತ್ತು ಜೀರಿಗೆಯನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ ಏನಾಗುತ್ತದೆ ಗೊತ್ತಾ? ಜೀರಿಗೆಯನ್ನು ಪ್ರತಿಯೊಬ್ಬರ ಮಾನೆಯಲ್ಲೂ ಉಪಯೋಗಿಸುತ್ತಾರೆ ರುಚಿಗೆ ಮಾತ್ರವಲ್ಲ ಅನೇಕ ಆರೋಗ್ಯ ಗುಣಗಳು ಮತ್ತು ಸತ್ವವನ್ನು ಹೊಂದಿದೆ. ಇದರಲ್ಲಿ ವಿಟಮಿನ್ ಎ ವಿಟಮಿನ್ ಸಿ ವಿಟಮಿನ್ ಡಿ ವಿಟಮಿನ್ ಬಿ6 ಖನಿಜಗಳು ತಾಮ್ರ ಕ್ಯಾಲ್ಶಿಯಂ ಮೆಗ್ನೀಷಿಯಂ ಪಾಸ್ಪರಸ್ ಪೊಟ್ಯಾಸಿಯಂ ತಯಾಮೀನ್ ರಿಯಾಸಿನ್ ನಿಬೂಲನಿನ್ ಪ್ರೊಟೀನ್ ಅಮೈನೋ ಆಮ್ಲಗಳು ಕರ್ಬೋ ಹೈಡ್ರೇಟ್ ಗಳು ಆಹಾರದ ಫೈಬರ್ ಗಳ ಸಾಕಷ್ಟು ಪ್ರಮಾಣದಲ್ಲಿ ಒಳಗೊಂಡಿರುತ್ತದೆ. ಬೆಲ್ಲ ಕೂಡ ನಮ್ಮೆಲ್ಲರ ಮನೆಯಲ್ಲಿ ಅವಶ್ಯಕವಾಗಿ ಉಪಯೋಗಿಸುತ್ತೇವೆ.ಬೆಲ್ಲ ಇಂದ ಅನೇಕ ಪ್ರಯೋಜನವಿದೆ ಇದು ನಮ್ಮ ದೇಹದಲ್ಲಿ ಅದ್ಬುತವಾಗಿ ಕೆಲಸ ಮಾಡುತ್ತದೆ. ಈ ಬೆಲ್ಲ ಮತ್ತು ಜೀರಿಗೆ ಎರಡನ್ನೂ ಒಟ್ಟಿಗೆ ಸೇರಿಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ದೂರ ಮಾಡ ಬಹುದು ಅವು ಯಾವುವು ಹಾಗೂ ಹೇಗೆ ತಯಾರಿಸಿಕೊಳ್ಳುವುದು ಎಂಬುದನ್ನು ಈ ಲೇಖನದಲ್ಲಿ ತಿಳಿಸಿ ಕೊಡುತ್ತೇವೆ ಹಾಗಾಗಿ ಇದನ್ನು ಪೂರ್ತಿ ಓದಿ ಪ್ರೀತಿ ಪಾತ್ರರಿಗೆ ಶೇರ್ ಮಾಡಿ.

ಇದನ್ನು ತಯಾರಿಸಲು ಒಂದು ಚಮಚ ಜೀರಿಗೆ ಒಂದು ಚಮಚ ಬೆಲ್ಲ ತೆಗೆದು ಕೊಂಡು ಒಂದು ಲೋಟ ನೀರನ್ನು ಹಾಕಿ ಆರರಿಂದ ಏಳು ನಿಮಿಷ ಕುದಿಸಿ ನಂತರ ತಣಿಸಿ ಶೋಧಿಸಿ ಕುಡಿಯಿರಿ. ಇದರಿಂದ ಆಗುವ ಪ್ರಯೋಜನಗಳು ಏನೆಂದರೆ ಮೊದಲನೆಯದಾಗಿ ಅನೀಮಿಯಕ್ಕೆ ಪ್ರಯೋಜನಕಾರಿ ಆಗಿದೆ. ಈ ನೀರು ದೇಹಕ್ಕೆ ತುಂಬಾ ಅನುಕೂಲಕರ ಆಗಿದ್ದು ಅನೀಮಿಯಾ ಅಂದರೆ ರಕ್ತ ಹೀನತೆ ಸಮಸ್ಸ್ಯೆ. ಈ ಸಮಸ್ಸ್ಯೆಗೆ ಇದು ಉಪಯುಕ್ತವಾಗಿದೆ ಅಲ್ಲದೆ ರಕ್ತದ ಕಲ್ಮಶವನ್ನು ಕೂಡ ಇದು ತೆಗೆದು ಹಾಕುವಲ್ಲಿ ಯಶಸ್ವಿ ಆಗುತ್ತದೆ. ಎರಡನೆಯದು ತಲೆ ನೋವಿನಿಂದ ಪರಿಹಾರ. ತಲೆ ನೋವಿನಿಂದ ಬಳಲುತ್ತಿರುವವರು ಬೆಲ್ಲ ಮತ್ತು ಜೀರಿಗೆ ನೀರನ್ನು ಸೇವಿಸಬೇಕು ಇದರಿಂದ ತಲೆ ನೋವು ಕಡಿಮೆ ಆಗುತ್ತದೆ ಅಲ್ಲದೆ ಜ್ವರದ ಸಮಸ್ಸ್ಯೆ ಇದ್ದರೂ ಕೂಡ ನಿವಾರಣೆಯಾಗುತ್ತದೆ.

ಮೂರನೆಯದು ಮುಟ್ಟಿನ ಸಮಸ್ಸ್ಯೇಗೆ ಪರಿಹಾರ. ಮುಟ್ಟಿ ಗೆ ಸಂಭಂದಿಸಿದ ಸಮಸ್ಸ್ಯೇ ಗಳನ್ನು ಜೀರಿಗೆ ಮತ್ತು ಬೆಲ್ಲದ ನೀರನ್ನು ಕುಡಿಯುವ ಮೂಲಕ ಸುಲಭವಾಗಿ ಪರಿಹರಿಸಬಹುದು. ಮುಟ್ಟಿನ ಸಮಯದಲ್ಲಿ ಕಾಣಿಸಿಕೊಳ್ಳುವ ಅತೀವ ಹೊಟ್ಟೆ ನೋವಿಗೆ ಇದು ಸುಲಭವಾದ ಚಿಕಿತ್ಸೆ ಆಗಿದೆ. ನಾಲ್ಕನೆಯದಾಗಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೀರಿಗೆ ಮತ್ತು ಬೆಲ್ಲ ಅನೇಕ ಆರೋಗ್ಯಕರ ಅಂಶಗಳನ್ನು ಹೊಂದಿದ್ದು ಇದು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ನಮ್ಮ ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ತೆಗೆದು ಹಾಕುತ್ತದೆ.

ಐದನೆಯದು ಹೊಟ್ಟೆ ಸಮಸ್ಸ್ಯೆಗಳಿಗೆ ಪರಿಹಾರ. ಮಲಬದ್ಧತೆ ಅನಿಲ ಸಡಿಲವಾದ ಚಲನೆ ಮುಂತಾದ ಹೊಟ್ಟೆ ಸಂಬಂಧಿಸಿದ ಸಮಸ್ಸ್ಯೆಗಳನ್ನು ಬೆಲ್ಲ ಮತ್ತು ಜೀರಿಗೆ ನೀರನ್ನು ಕುಡಿಯುವುದರಿಂದ ಸುಲಭವಾಗಿ ಕಡಿಮೆ ಮಾಡಬಹುದು. ಮುಖ್ಯವಾಗಿ ಜೀರ್ಣಕ್ರಿಯೆ ಸಮಸ್ಸೆ ಇಂದ ಬಳಲುತ್ತಿರುವವರು ಈ ನೀರನ್ನು ತಯಾರಿಸಿ ಕುಡಿದರೆ ಅತೀ ವೇಗವಾಗಿ ಗುಣ ಮುಖರಾಗಬಹುದು. ಹಾಗೂ ಮಧುಮೇಹ ರೋಗಿ ಅವರು ಸಹ ಇದು ಉಪಯೋಗ ಆಗುತ್ತದೆ. ಈ ರೀತಿ ನಮ್ಮ ಮನೆಯಲ್ಲೇ ಸಿಗುವ ಪದಾರ್ಥಗಳನ್ನು ಬಳಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ.

2 COMMENTS

LEAVE A REPLY

Please enter your comment!
Please enter your name here