ಯಾವುದೇ ಒಂದು ಮಹಿಳೆಗೆ ತನ್ನ ಹೆಣ್ಣಿನ ತನ ಪೂರ್ಣ ಆಗಬೇಕು ಎಂದರೆ ಅವಳು ತಾಯಿ ಆಗಬೇಕು ಎಲ್ಲರಿಗೂ ಕೂಡ ಅಮ್ಮ ಎಂದು ಕರೆಸಿಕೊಳ್ಳಬೇಕು ಎಂಬ ಆಸೆ ಇದೆ ಆದರೆ ಎಷ್ಟೋ ಜನರು ಮಕ್ಕಳು ಅದ ಮೇಲೆ ದಪ್ಪ ಆಗುತ್ತೇವೆ ಅಂದ ಕೆಡುತ್ತದೆ ಎಂದು ಮಕ್ಕಳು ಮಾಡಿ ಕೊಳ್ಳುವುದಕ್ಕೆ ಹಿಂಜರಿಯುತ್ತಾರೆ ಅದರಲ್ಲೂ ಹೆಚ್ಚು ಎಲ್ಲರನ್ನು ಕಾಡುವ ಸಮಸ್ಯೆ ಮಗು ಅದ ನಂತರ ಸ್ಟ್ರೆಚ್ ಮಾರ್ಕ್ಸ್ ಆಗುವುದು ಮಗು ಆಗುವುದು ಹೊಟ್ಟೆಯು ದಪ್ಪ ಆಗುತ್ತದೆ ಇದರಿಂದ ಚರ್ಮವು ಈಜಿಕೊಂಡಿರುತ್ತದೆ ಅದರಿಂದ ಚರ್ಮದಲ್ಲಿ ಸ್ಟ್ರೆಚ್ ಮಾರ್ಕ್ಸ್ ಆಗಿರುತ್ತದೆ ಆದರೆ ಇದನ್ನು ಸುಲಭವಾಗಿ ಹೋಗಿಸಬಹುದು ಅದು ಹೇಗೆ ಎಂದು ನೋಡೋಣ ಬನ್ನಿ.

ಬಿಳಿ ಅಥವಾ ಗುಲಾಬಿ ಬಣ್ಣದ ವರ್ಣಗಳು ಚರ್ಮದ ಮೇಲೆ ಕಾಣಿಸಿಕೊಳ್ಳುವ ಕ್ರಿಯೆಗೆ ಸ್ಟ್ರೆಚ್ ಮಾರ್ಕ್ಸ್ ಎಂದು ಕರೆಯುತ್ತಾರೆ. ಇದು ಕೇವಲ ಕಿಬ್ಬೊಟ್ಟೆಯ ಮೇಲೆ ಮಾತ್ರ ಅಲ್ಲದೆ ತೊಡೆ ತೊಳುಗಳು ಪೃಷ್ಠ ಮತ್ತು ಸ್ತನಗಳ ಮೇಲೆ ಕೂಡ ಕಾಣಿಸಿಕೊಳ್ಳುತ್ತದೆ ಏಕೆಂದರೆ ಮಗುವಾಗುವ ಸಮಯದಲ್ಲಿ ತಾಯಿಯು ದಪ್ಪ ಆಗುತ್ತಾಳೆ ಇದರಿಂದ ಸ್ಟ್ರೆಚ್ ಮಾರ್ಕ್ಸ್ ಕಾಣಿಸುತ್ತದೆ. ಚರ್ಮವು ಮೂರು ಮುಖ್ಯ ಪದರಗಳನ್ನು ಒಳಗೊಂಡಿರುತ್ತದೆ. ಹೊರ ಪದರ ಮಧ್ಯಮ ಪದರ ಆಳವಾದ ಪದರ
ಹೊರ ಪದರ ಮತ್ತು ಮಧ್ಯಮ ಪದರದ ನಡುವಿನ ಬೆಸುಗೆ ಕಡಿಮೆಯಾಗಿ ಎಳೆಯಲ್ಪಟ್ಟ ಚರ್ಮವೇ ಸ್ಟ್ರೆಚ್ ಮಾರ್ಕ್ಸ್ ಆಗಿದೆ. ಈ ಸ್ಟ್ರೆಚ್ ಮಾರ್ಕ್ಸ್ ಅನ್ನು ಸುಲಭವಾಗಿ ತಡೆಯುವುದು ಹೇಗೆ ಗೊತ್ತೇ? ಒಂದು ಚಮಚ ಕಾಫಿ ಪುಡಿಯನ್ನು ತೆಗೆದುಕೊಳ್ಳಬೇಕು ಅದಕ್ಕೆ ಒಂದು ಚಮಚ ಲೋಳೆಸರವನ್ನು ಮಿಶ್ರಣ ಮಾಡಿಕೊಂಡು ಅದನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಿಕೊಳ್ಳಬೇಕು ನಂತರ 30 ನಿಮಿಷ ಬಿಟ್ಟು ತೊಳೆಯಬೇಕು ಹೀಗೆ 2 ರಿಂದ 3 ತಿಂಗಳು ತಪ್ಪದೆ ಮಾಡಿದರೆ ಸಾಕು ಸ್ಟ್ರೆಚ್ ಮಾರ್ಕ್ಸ್ ಮಾಯವಾಗುತ್ತದೆ.
ಹಾಗೆಯೇ ಒಂದು ಚಮಚ ಲೋಳೆಸರ ಅಥವಾ ಅಲೋವೆರಾದಲ್ಲಿ ಬರುವ ಬಿಳಿ ಭಾಗವನ್ನು ಹಾಗೂ ಒಂದು ಚಮಚ ಬಾದಾಮಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಮಿಶ್ರಣ ಮಾಡಿಕೊಂಡು ಅದನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಿಕೊಳ್ಳಬೇಕು ಹೀಗೆ 2 ತಿಂಗಳು ಮಾಡಿದರೆ ಸ್ಟ್ರೆಚ್ ಮಾರ್ಕ್ಸ್ ಹೋಗುತ್ತದೆ. ಆಲೂಗಡ್ಡೆ ಇದರಲ್ಲಿ ಕ್ಯಾಲ್ಸಿಯಂ , ಪೊಟ್ಯಾಸಿಯಂ ಮೆಗ್ನೀಷಿಯಂ ಹಾಗು ಜಿಂಕ್ ಅಂಶ ಹೇರಳವಾಗಿದೇ ಹಾಗಾಗಿ ಅಳುಗೆಡ್ಡೆಯನ್ನು ತೆಗೆದುಕೊಂಡು ಅದನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿಕೊಂಡು ಅದನ್ನು ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಉಜ್ಜಬೇಕು ನಂತರ ತೊಳೆಯಬೇಕು ಹೀಗೆ ಮಾಡಿದರು ಕೂಡ ಸ್ಟ್ರೆಚ್ ಮಾರ್ಕ್ಸ್ ಹೋಗುತ್ತದೆ.
ಒಂದು ಚಮಚ ಸಕ್ಕರೆಗೆ ಸ್ವಲ್ಪ ಬಾದಾಮಿ ಎಣ್ಣೆಯನ್ನು ಬೆರೆಸಿ ಅದಕ್ಕೆ ಒಂದೆರಡು ಹನಿ ನಿಂಬೆ ರಸವನ್ನು ಬೆರೆಸಿ ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಬೇಕು ಹೀಗೆ ಒಂದರಿಂದ ಎರಡು ತಿಂಗಳು ಸ್ನಾನ ಮಾಡುವ ಮುನ್ನ ಹಚ್ಚುತ್ತಾ ಬಂದರೆ ಸಾಕು ಸ್ಟ್ರೆಚ್ ಮಾರ್ಕ್ಸ್ ದೂರ ಆಗುತ್ತದೆ. ಸ್ವಲ್ಪ ನಿಂಬೆ ರಸವನ್ನು ತೇಡೆದುಕೊಂಡು ಅದಕ್ಕೆ ಸಕ್ಕರೆಯನ್ನು ಬೆರೆಸಿ ಸ್ಟ್ರೆಚ್ ಮಾರ್ಕ್ಸ್ ಇರುವ ಜಾಗಕ್ಕೆ ಹಚ್ಚಬೇಕು ನಂತರ 10 ನಿಮಿಷ ಬಿಟ್ಟು ತೊಳೆಯಬೇಕು ಹೀಗೆ ಮಾಡಿದರು ಕೂಡ ಸ್ಟ್ರೆಚ್ ಮಾರ್ಕ್ ದೂರ ಆಗುತ್ತದೆ . ಈ ಮೇಲೆ ನೀಡಿದವರಲ್ಲಿ ಯಾವುದಾದರೂ ಒಂದನ್ನು ತಪ್ಪದೆ 2 ರಿಂದ 3 ತಿಂಗಳು ಮಾಡಿದರೆ ಸಾಕು ಸ್ಟ್ರೆಚ್ ಮಾರ್ಕ್ಸ್ ಹೋಗಿ ಅಂದವಾಗಿ ಕಾಣುತ್ತೇವೆ.