ಯಾವುದೇ ಚಿಕಿತ್ಸೆ ಪಡೆಯದೇ ನಿಮ್ಮ ಕಣ್ಣಿನ ದೃಷ್ಟಿ ಹೆಚ್ಚಿಸಲು ಹೀಗೆ ಮಾಡಿರಿ

0
566

ಯಾವುದೇ ಚಿಕಿತ್ಸೆ ಮಾಡಿಸಿ ಕೊಳ್ಳದೆ ಮತ್ತು ಕನ್ನಡಕವನ್ನು ಬಳಸದೆ ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಿಕೊಳ್ಳುವುದು ಹೇಗೆ ಎಂದು ನೋಡೋಣ ಬನ್ನಿ. ಕಣ್ಣಿನ ದೃಷ್ಟಿ ದೋಷ ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಇದು ಕಾಡುತ್ತದೆ. ಈ ಸಮಸ್ಯೆಗೆ ಕೆಲವರು ಕನ್ನಡಕದ ಮೊರೆ ಹೋದರೆ ಇನ್ನು ಕೆಲವರು ಚಿಕಿತ್ಸೆಯ ಮೊರೆ ಹೋಗುತ್ತಾರೆ ಇದಕ್ಕೆ ಅನೇಕ ಕಾರಣಗಳಿವೆ ಅವೆಂದರೆ ನಮ್ಮ ಒತ್ತಡದ ಜೀವನ ಶೈಲಿ ನಾವು ತಿನ್ನುವ ಆಹಾರ ಮೊಬೈಲ್ ಕಂಪ್ಯೂಟರ್ ಬಳಸುವ ಅಥವಾ ನೋಡುವ ವಿಧಾನ ಧೂಳಿನಲ್ಲಿ ಹೆಚ್ಚು ದೃಷ್ಟಿ ಇಡುವುದು ಹೀಗೆ ಹತ್ತು ಹಲವು. ಕಣ್ಣಿನ ದೃಷ್ಟಿ ಸಮಸ್ಯೆಗೆ ಮನೆಯಲ್ಲಿಯೇ ಮಾಡಿಕೊಳ್ಳ ಬಹುದಾದ ಸುಲಭ ದಾರಿಗಳಿವೆ ಅವುಗಳನ್ನು ನಿರುತ್ಸಾಹ ತೋರದೆ ಫಾಲೋ ಮಾಡಿ. ಈ ಮಾಹಿತಿಯನ್ನು ಪೂರ್ತಿ ಓದಿ ನಿಮ್ಮ ಸ್ನೇಹಿತ ಮಿತ್ರರಿಗೂ ಹಂಚಿಕೊಳ್ಳಿ.

ಮೊದಲನೆಯದಾಗಿ ಕಂಪ್ಯೂಟರ್ ಕೆಲಸ ಮಾಡುವವರು ಅಥವಾ ಹೆಚ್ಚು ಮೊಬೈಲ್ ಬಳಸುವವರು ಪ್ರತಿ ಐವತ್ತರಿಂದ ಅರವತ್ತು ನಿಮಿಷ ಗಳಿಗೆ ಒಮ್ಮೆ ಆದರೂ ಹತ್ತು ನಿಮಿಷ ಕಂಪ್ಯೂಟರ್ ಬಿಡುವು ಪಡೆದು ಕಣ್ಣಿಗೆ ವಿಶ್ರಾಂತಿ ನೀಡಿ. ಈ ಹತ್ತು ನಿಮಿಷದಲ್ಲಿ ನಿಮ್ಮ ಕಣ್ಣನ್ನು ಮುಚ್ಚಿ ಕುಳಿತು ಕಣ್ಣನ್ನು ವೃತ್ತಾಕಾರವಾಗಿ ಮತ್ತು ಅದರ ವಿರುದ್ಧ ದಿಕ್ಕಿನಲ್ಲಿ ಮಸಾಜ್ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ನಿಮ್ಮ ದೃಷ್ಟಿ ಒಂದೇ ಕಡೆ ಹರಿಹಾಯಲು ಅವಕಾಶ ನೀಡದಂತೆ ನಿಗಾ ವಹಿಸಿ.

ಎರಡನೆಯದಾಗಿ ರಾತ್ರಿ ಐದು ಬಾದಾಮಿ ನೆನೆಸಿ ಬೆಳಗ್ಗೆ ತಿನ್ನುತ್ತಾ ಬನ್ನಿ. ಬಾದಾಮಿಯಲ್ಲಿ ವಿಟಮಿನ್ ಇ ಒಮೆಗಾ 3 ಆಂಟಿ ಆಕ್ಸಿಡೆಂಟ್ ಗುಣವೂ ಅತೀ ಹೇರಳವಾಗಿರುತ್ತದೆ. ಇದು ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸಲು ಸಹಾಯ ಮಾಡುತ್ತದೆ ಹೀಗೆ ನಾಲ್ಕರಿಂದ ಐದು ತಿಂಗಳು ತಪ್ಪದೆ ಮಾಡಿದರೆ ನಿಮಗೆ ಫಲಿತಾಂಶ ಸಿಗುವುದು ಖಚಿತ ಮತ್ತು ನಿಮ್ಮ ಆರೋಗ್ಯ ವೃದ್ಧಿಸಲು ಸಹಾಯ ಆಗುತ್ತದೆ. ಮೂರನೆಯದಾಗಿ ಬಾದಾಮಿ ಸೋಂಪು ಕಾಳು ಮತ್ತು ಸಕ್ಕರೆ ಈ ಮೂರನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಪುಡಿ ಮಾಡಿಕೊಳ್ಳಿ ನಂತರ ರಾತ್ರಿ ಮಲಗುವ ಮುಂಚೆ ಒಂದು ಲೋಟ ಬಿಸಿ ಹಾಲಿಗೆ ಈ ಪುಡಿಯನ್ನು ಒಂದು ಚಮಚ ಹಾಕಿ ಮಿಕ್ಸ್ ಮಾಡಿ ಕುಡಿಯಿರಿ. ಹೀಗೆ ಪ್ರತಿದಿನ ಒಂದು ತಿಂಗಳು ಕುಡಿದರೆ ನಿಮಗೆ ಬೇಕಿರುವ ವ್ಯತ್ಯಾಸ ಕಾಣಿಸುತ್ತದೆ.

ನಾಲ್ಕನೆಯದು ವಿಟಮಿನ್ ಎ ಮತ್ತು ಬಿ ಕಾಂಪ್ಲೆಕ್ಸ್ ವಿಟಮಿನ್ ಸಿ ವಿಟಮಿನ್ ಡಿ ವಿಟಮಿನ್ ಇ ಇರುವ ಆಹಾರವನ್ನು ಹೆಚ್ಚು ತಿನ್ನಬೇಕು. ಉದಾಹರಣೆಗೆ ಕ್ಯಾರೆಟ್ ಹಸಿರು ತರಕಾರಿಗಳು ಪಾಲಕ್ ಸೊಪ್ಪು ಬ್ರುಕೋಲಿ ಕಾಳುಗಳು ಮೊಟ್ಟೆ ಹಾಲು ಮೀನು ಹೀಗೆ ಇತ್ಯಾದಿ. ಇನ್ನು ಕೊನೆಯದಾಗಿ ಕಣ್ಣಿಗೆ ವಿಶ್ರಾಂತಿ ತುಂಬಾ ಮುಖ್ಯ ಹಾಗಾಗಿ ಚೆನ್ನಾಗಿ ನಿದ್ರೆ ಮಾಡಿ ಆವಾಗ ಕಣ್ಣು ವಿಶ್ರಾಂತಿ ಪಡೆಯುತ್ತದೆ. ಮೇಲಿನ ಆಹಾರ ಪದ್ಧತಿಯನ್ನು ಎಲ್ಲ ವಯಸ್ಸು ಇರುವವರು ಕೂಡ ಉಪಯೋಗಿಸಬಹುದು ಮತ್ತು ಯಾವುದೇ ರೀತಿಯ ದೃಷ್ಟಿ ದೋಷ ಇದ್ದರೂ ಪರಿಹಾರವಾಗಿ ಉಪಯೋಗಿಸಬಹುದು. ದೃಷ್ಟಿ ದೋಷ ಇಲ್ಲದೆ ಇರುವವರು ಮಾಡಿದರೆ ಕಣ್ಣಿನ ದೃಷ್ಟಿ ಮುಂದೆಯೂ ಕೂಡ ಚೆನ್ನಾಗಿರುತ್ತದೆ.

LEAVE A REPLY

Please enter your comment!
Please enter your name here