ಸಕ್ಕರೆ ಖಾಯಿಲೆ ಬರಲೇ ಬಾರದು ಅಂದ್ರೆ ಈ ರೀತಿ ಮಾಡಿರಿ

0
797

ನಮ್ಮ ದೇಶದಲ್ಲಿ ಹೆಚ್ಚಾಗಿ ಜನರನ್ನ ಕಾಡುತ್ತಿರುವ ರೋಗ ಸಕ್ಕರೆ ಖಾಯಿಲೆ. ಈ ರೋಗದಿಂದ ಬಳಲುತ್ತಿರುವವರು ಪ್ರತಿ ದಿನ ವಿಶೇಷವಾಗಿ ಗಮನವಿಟ್ಟು ಆರೋಗ್ಯ ಕಾಪಾಡಿಕೊಳ್ಳುವ ಅವಶ್ಯಕತೆ ಇರುತ್ತದೆ. ಈ ಖಾಯಿಲೆ ನಿಯಂತ್ರಿಸಬೇಕು ಎಂದರೆ ನಾವು ತಿನ್ನುವ ಆಹಾರ ಹಾಗೂ ಆಹಾರ ಕ್ರಮ ಪ್ರಮುಖ ಪಾತ್ರ ವಹಿಸುತ್ತದೆ. ಆಯುರ್ವೇದದ ಪ್ರಕಾರ ಈ ಲೇಖನದಲ್ಲಿ ಸಕ್ಕರೆ ಖಾಯಿಲೆಯನ್ನು ನೈಸರ್ಗಿಕವಾಗಿ ಹೇಗೆ ನಿಯಂತ್ರಿಸಬಹುದು ಯಾವ ಆಹಾರಗಳು ಸಕ್ಕರೆ ಖಾಯಿಲೆ ನಿಯಂತ್ರಿಸಲು ಸಹಕಾರಿ ಎಂದು ತಿಳಿಸುತ್ತಿದ್ದೇವೆ. ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರು ಹಾಗೂ ಪ್ರೀತಿ ಪಾತ್ರರಿಗೆ ಶೇರ್ ಮಾಡಿ.

ಬೀಟ್ರೂಟ್ ತರಕಾರಿಯಲ್ಲಿ ನೈಸರ್ಗಿಕವಾದ ಸಕ್ಕರೆ ಇದ್ದು ಮನುಷ್ಯ ಸೇವಿಸಿದಾಗ ಗ್ಲೂಕೋಸ್ ಆಗಿ ಮಾರ್ಪಡುವುದಿಲ್ಲ. ಲಿಪೊಯಿಕ್ ಆಸಿಡ್ ಎಂಬ ಆಂಟಿ ಆಕ್ಸಿಡೆಂಟ್ ಒಳಗೊಂಡಿದ್ದು ಸಕ್ಕರೆ ಮಟ್ಟ ನಿಯಂತ್ರಣಕ್ಕೆ ಸಹಾಯ ಮಾಡಲಿದೆ. ಹಾಗಲಕಾಯಿ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆಗೊಳಿಸುವ ಪರಿಣಾಮವಾಗಿ ಹಾಗಲಕಾಯಿ ಸಕ್ಕರೆ ನಿಯಂತ್ರಣ ಮಾಡಲು ಬಹಳ ಪರಿಣಾಮಕಾರಿ. ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ಸೇವನೆ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಉತ್ತಮ ಮಾರ್ಗವಾಗಿದೆ. ಟೊಮೆಟೊಗಳು ರಕ್ತದೊತ್ತಡ ಮತ್ತು ಮಧುಮೇಹಕ್ಕೆ ಸಂಭಂದಿಸಿದ ಹೃದಯಾಘಾತ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮುಂದಿನದು ಕುಂಬಳಕಾಯಿ ಬೀಜ. ಕುಂಬಳಕಾಯಿ ಬೀಜಗಳನ್ನು ಸ್ವಲ್ಪ ಪ್ರಮಾಣದಲ್ಲಿ ಸ್ವೀಕರಿಸಿದರೆ ಮನುಷ್ಯನ ಹಸಿವು ಕಡಿಮೆ ಆಗುತ್ತದೆ ಹಾಗೂ ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ. ಆದರೆ ಸ್ವಲ್ಪ ಪ್ರಮದಲ್ಲಿ ಸೇವಿಸಬೇಕು.

ಡ್ರೈ ಫ್ರೂಟ್ಸ್. ಡ್ರೈ ಫ್ರೂಟ್ಸ್ ನಲ್ಲಿ ಒಮೆಗಾ 3 ಕೊಬ್ಬಿನ ಆಮ್ಲಗಳು ಹೆಚ್ಚಾಗಿ ಕಂಡು ಬರುವುದರಿಂದ ಉರಿಯೂತ ರಕ್ತದ ಸಕ್ಕರೆ ಮತ್ತು ದೇಹದಲ್ಲಿರುವ ಕೆಟ್ಟ ಕೊಲಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆದರೆ ಪ್ರತಿ ದಿನ 30 ಗ್ರಾಂ ಗಿಂತ ಹೆಚ್ಚು ಸೇವಿಸಬಾರದು. ನೇರಳೆ ಹಣ್ಣು. ಮಧುಮೇಹ ನಿಯಂತ್ರಣಕ್ಕೆ ಲಭ್ಯವಿರುವ ಉತ್ತಮ ಹಣ್ಣುಗಳಲ್ಲಿ ನೇರಳೆ ಹಣ್ಣು ಕೂಡ ಒಂದಾಗಿದೆ. ನೇರಳೆ ಹಣ್ಣಿನ ಸೇವನೆಯು ಇನ್ಸುಲಿನ್ ಚಟುವಟಿಕೆಯನ್ನು ಮತ್ತು ಅದರ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸೀಬೆ ಹಣ್ಣು ಸೀಬೆ ಹಣ್ಣು ಮಧುಮೇಹ ಹೊಂದಿರುವವರಿಗೆ ಮಲಬದ್ಧತೆ ಸಮಸ್ಯೆಗೆ ಚಿಕಿತ್ಸೆ ನೀಡುವಲ್ಲಿ ಸಹಾಯ ಮಾಡುವ ಉತ್ತಮ ಆಹಾರವಾಗಿದೆ. ನಿಮ್ಮ ದೇಹದಲ್ಲಿ ಸಕ್ಕರೆಯ ಪ್ರಮಾಣ ನಿಧಾನವಾಗಿ ಕಡಿಮೆ ಮಾಡಲು ಸೀಬೆ ಹಣ್ಣು ಸಹಾಯ ಮಾಡುತ್ತದೆ.

ಬಾರ್ಲಿ ಅಕ್ಕಿ. ಮುದ್ದೆ ಜೊತೆಗೆ ಅನ್ನ ತಿನ್ನುವ ಅಭ್ಯಾಸ ಇದ್ದರೆ ದಿನ ನಿತ್ಯ ಬಳಸುವ ಬಿಳಿ ಅಕ್ಕಿ ಬದಲಿಗೆ ಬಾರ್ಲಿ ಅಕ್ಕಿ ಊಟಕ್ಕೆ ಆಯ್ಕೆ ಮಾಡಿಕೊಳ್ಳಿ. ಇದರಿಂದ ಸುಮಾರು ಶೇಕಡಾ ಇಪ್ಪತ್ತರಷ್ಟು ರಕ್ತದ ಸಕ್ಕರೆಯ ಏರಿಕೆಯನ್ನು ಕಡಿಮೆ ಮಾಡಬಹುದು ಮತ್ತು ಅಧ್ಯಯನ ಗಳು ತಿಳಿಸಿವೆ ಆದರೆ ರಾಸಾಯನಿಕ ಪದಾರ್ಥಗಳು ಸಕ್ಕರೆ ಬಳಸಿ ಹಣ್ಣಿನ ರಸ ತಯಾರು ಮಾಡುವುದರಿಂದ ಇದು ಸಕ್ಕರೆ ಖಾಯಿಲೆ ಅಪಾಯವನ್ನು ಹೆಚ್ಚಿಸಬಹುದು ಆದ್ದರಿಂದ ಹಣ್ಣನ್ನು ತಿನ್ನಿ ಜ್ಯೂಸ್ ಕುಡಿಯಬೇಡಿ. ಗೆಣಸು ಬಿಳಿ ಆಲೂಗೆಡ್ಡೆ ಬದಲಿಗೆ ಬೇಯಿಸಿದ ಸಿಹಿ ಆಲೂಗೆಡ್ಡೆ ಆರಿಸಿ ಅದು ರಕ್ತದ ಸಕ್ಕರೆ ಏರಿಕೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಗೆಣಸು ಪೌಷ್ಟಿಕಾಂಶ ಗಳು ಮತ್ತು ಸಕ್ಕರೆ ಖಾಯಿಲೆ ಹೋರಾಟಕ್ಕೆ ಬೇಕಾದ ಫೈಬರ್ ಇಂದ ತುಂಬಿರುತ್ತದೆ. ಸುಮಾರು ಶೇಕಡಾ 40 ರಷ್ಟು ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಆಯುರ್ವೇದದ ಸಲಹೆಯಂತೆ ಈ ಮಾಹಿತಿಯನ್ನು ಹಂಚಿಕೊಂಡಿದ್ದೇನೆ. ಸೇವನೆಯ ಪ್ರಮಾಣ ನಿಮ್ಮ ಅಗತ್ಯಕ್ಕೆ ತಕ್ಕಂತೆ ಇರಲಿ ಹಾಗೂ ಎಂತ ಉಪಯುಕ್ತ ಆಹಾರ ಆದರೂ ಅತಿಯಾದರೆ ಯಾವುದು ಒಳ್ಳೆಯದಲ್ಲ ಮತ್ತು ನಿಮ್ಮ ವೈದ್ಯರ ಸಲಹಯಂತೆ ನೀವು ಈ ತರಕಾರಿ ಹಣ್ಣುಗಳನ್ನು ಸೇವಿಸಬಹುದು.

LEAVE A REPLY

Please enter your comment!
Please enter your name here