ದೇಹದ ತೂಕ ಕಡಿಮೆ ಮಾಡಲು ಇದನ್ನು ಬಿಟ್ಟು ಬಿಡಿ

0
636

ದಿನದಿಂದ ದಿನಕ್ಕೆ ಮನುಷ್ಯನಲ್ಲಿ ಕಾಡುತ್ತಿರುವ ಸಮಸ್ಯೆಗಳಲ್ಲಿ ತೂಕ ಹೆಚ್ಚಳ ಬೊಜ್ಜು ಸಾಮಾನ್ಯವಾಗಿ ಕಂಡು ಬರುತ್ತಿರುವ ಸಮಸ್ಸೆ ಗಳು. ಮನುಷ್ಯನ ತೂಕ ಏಕೆ ಹೆಚ್ಚಾಗುತ್ತದೆ ಅಥವಾ ಕೆಲವು ಆಹಾರಗಳ ಸೇವನೆಯ ಪರಿಣಾಮ ತೂಕ ಹೆಚ್ಚಳಕ್ಕೆ ಕಾರಣವೇ? ಹೇಗೆಲ್ಲಾ ಎಚ್ಚರ ವಹಿಸಿದರೆ ನಾವು ನಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳಬಹುದು ಎಂದು ಈ ಲೇಖನದ ಮೂಲಕ ತಿಳಿದು ಕೊಳ್ಳೋಣ. ಆರೋಗ್ಯ ಸಂಸ್ಥೆಯ ಪ್ರಕಾರ ಮನುಷ್ಯ ಸೇವಿಸುವ ಕೆಲವು ನಿರಂತರ ಆಹಾರಗಳು ಮನುಷ್ಯನ ತೂಕ ಹೊಟ್ಟೆ ಸುತ್ತಲಿನ ಬೊಜ್ಜು ಹಾಗೂ ಕೊಬ್ಬು ಹೆಚ್ಚಾಗುವಂತೆ ಮಾಡುತ್ತದೆ. ಹಾಗಾದರೆ ಅಂತಹ ಆಹಾರಗಳನ್ನು ತಿನ್ನುವುದನ್ನು ಬಿಟ್ಟುಬಿಟ್ಟರೆ ತೂಕ ಕಡಿಮೆ ಆಗುತ್ತಾ? ಹೌದು ನೈಸರ್ಗಿಕವಾಗಿಯೇ ಮನುಷ್ಯನ ತೂಕ ಕಡಿಮೆ ಆಗುತ್ತದೆ ಎನ್ನುತದೆ ವೈದ್ಯ ಲೋಕ. ಹಾಗಾದರೆ ಅಂತಹ ಆಹಾರಗಳು ಯಾವು ಯಾವು ಎಂದು ತಿಳಿದುಕೊಳ್ಳೋಣ.

ಮೊದಲು ಸಕ್ಕರೆ ಸೇವನೆ ಬಿಡಿ. ಹೌದು ಅತೀ ವೇಗವಾಗಿ ತೂಕ ಕಡಿಮೆ ಮಾಡಲು ಬಯಸುವವರು ಸಕ್ಕರೆಯನ್ನು ಬಳಸಬೇಡಿ ಅದರ ಬದಲು ಕಾಫಿ ಟೀ ಅಥವಾ ಸಿಹಿ ತಿಂಡಿಗಳಿಗೆ ನೈಸರ್ಗಿಕವಾಗಿ ತಯಾರಿಸಿದ ಬೆಲ್ಲವನ್ನು ಉಪಯೋಗಿಸಿ. ಸಕ್ಕರೆ ಅಲ್ಲಿ ಗ್ಲೂಕೋಸ್ ಹಾಗೂ ಫ್ರಕ್ಟೋಸ್ ಎಂಬ ಎರಡು ಪದಾರ್ಥಗಳು ಕಂಡು ಬರುತ್ತವೆ ಹಾಗೂ ಇವು ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ತೂಕ ಹೆಚ್ಚಳ ವಿಷಯವಾಗಿ ಸಕ್ಕರೆ ಸೇವನೆ ಬಹಳ ಪ್ರಮುಖ ಪಾತ್ರ ವಹಿಸುತ್ತದೆ. ಸಕ್ಕರೆ ಸೇವನೆ ಕೆಲವು ದಿನಗಳು ನಿಲ್ಲಿಸಿ ತೂಕ ಪರೀಕ್ಷೆ ಮಾಡಿ ನೋಡಿ ನಿಮ್ಮ ತೂಕದ ಜೊತೆ ದೇಹದ ಬೊಜ್ಜು ಸಹ ಕಡಿಮೆ ಆಗುತ್ತದೆ.

ಎರಡನೆಯದಾಗಿ ತಂಪು ಪಾನೀಯಗಳು. ಈಗಿನ ಜನ ತಂಪು ಪಾನೀಯಗಳ ಮೊರೆ ಹೋಗುವುದು ಹೊಸ ವಿಷಯವೇನಲ್ಲ ಆದರೆ ತಂಪು ಪಾನೀಯಗಳಲ್ಲಿ ಕಂಡು ಬರುವ ಸಕ್ಕರೆ ಅಂಶ ಹಾಗೂ ಶೇಕರಣೆ ಮಾಡಲು ಬಳಸುವ ರಾಸಾಯನಿಕಗಳ ಬಳಕೆ ಹಾಗೂ ಸೇವನೆ ಮನುಷ್ಯನ ತೂಕದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ದೇಹದ ತೂಕ ಬೇಗ ಹೆಚ್ಚಾಗುವಂತೆ ಮಾಡುತ್ತದೆ. ಮೂರನೆಯದಾಗಿ ಹೆಚ್ಚು ಪ್ರೊಟೀನ್ ಯುಕ್ತ ಆಹಾರವನ್ನು ಸೇವಿಸಿ. ಮೊದ ಮೊದಲು ನಿಮ್ಮ ದೇಹದ ತೂಕದಲ್ಲಿ ಬದಲಾವಣೆ ಕಂಡು ಬರದಿದ್ದರೂ ನಿಧಾನವಾಗಿ ತೂಕ ಇಳಿಯುತ್ತಾ ಬರುತ್ತದೆ. ಪ್ರೋಟಿನ್ ಆಹಾರ ತೆಗೆದುಕೊಳ್ಳಲು ನಿರ್ಧರಿಸಿದರೆ ಕಾರ್ಬೋಹೈಡ್ರೇಟ್ ಅಂದರೆ ಅನ್ನ ಹಾಗೂ ಇತರೆ ಕಾರ್ಬೋಹೈಡ್ರಟ್ಸ್ ಆಹಾರಗಳನ್ನು ಆದಷ್ಟು ಕಡಿಮೆ ಮಾಡಿ. ಆದರೆ ನಿಮ್ಮ ಆಹಾರದಲ್ಲಿ ಕಾರ್ಬೋಹೈಡ್ರಟ್ಸ್ ಇರುವ ಸಾಮಗ್ರಿಗಳನ್ನು ಒಂದೆರಡು ತಿಂಗಳು ಕಡಿಮೆ ಬಳಸಿ ನಿರಂತರವಾಗಿ ತೂಕ ನೋಡಿಕೊಳ್ಳಿ ತೂಕ ಇಳಿಯುತ್ತದೆ ಎನ್ನುತ್ತಾರೆ ಹಲವು ವೈದ್ಯರು.

ಕೊನೆಯದಾಗಿ ನಿಯಮಿತ ಕೊಬ್ಬು ಕರಗಲು ವ್ಯಾಯಾಮ ಅಗತ್ಯವಾಗಿ ಬೇಕೆ ಬೇಕು. ಪ್ರತಿ ದಿನ ಕನಿಷ್ಟ ಅಂದರೆ ಅರ್ಧಗಂಟೆ ವ್ಯಾಯಾಮ ವಾಕಿಂಗ್ ಮಾಡಲು ಅಭ್ಯಾಸ ಮಾಡಿ ಕ್ರಮೇಣವಾಗಿ ತೂಕ ಕಡಿಮೆ ಆಗುತ್ತದೆ. ಮೇಲೆ ತಿಳಿಸಿರುವ ಕ್ರಮವನ್ನು ಪಾಲನೆ ಮಾಡಿದರೆ ದೇಹದ ತೂಕವನ್ನು ನೈಸರ್ಗಿಕವಾಗಿ ಯಾವುದೇ ಡಯಟ್ ಮಾಡದೆ ಕರಗಿಸಿಕೊಳ್ಳಬಹುದು ಎನ್ನುತ್ತಾರೆ ವೈದ್ಯರು. ಈ ಉಪಯುಕ್ತ ಲೇಖನ ಮರೆಯದೇ ಶೇರ್ ಮಾಡಿರಿ ಎಲ್ಲರಿಗು ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here