ಸೊಳ್ಳೆ ಬತ್ತಿ ವಾಸನೆ ನೂರು ಸಿಗರೆಟ್ ವಾಸನೆಗೆ ಸಮ

0
669

ಯಾರ ಮನೆಯಲ್ಲಿ ಸೊಳ್ಳೆಗಳು ಇಲ್ಲ ಹೇಳಿ ಸೊಳ್ಳೆಗಳ ಬಳಿ ಯಾರು ಕಚ್ಚಿಸಿಕೊಂಡಿಲ್ಲ ಹೇಳಿ ಅದರಲ್ಲೂ ರಾತ್ರಿ ಮಲಗುವಾಗ ಸೊಳ್ಳೆಗಳು ಬಂದು ಕಿವಿಗಳ ಬಳಿ ಗುಯ್ ಎಂಬ ಶಬ್ದ ಮಾಡಿದರೆ ಆ ರಾತ್ರಿಯ ನಿದ್ದೆ ಹಾಳಾದಂತೆ ಅದಕ್ಕಾಗಿ ಆ ಸೊಳ್ಳೆಗಳನ್ನು ಹೊಡಿಸಲು ಹಲವಾರು ರೀತಿಯಲ್ಲಿ ಪ್ರಯತ್ನ ಮಾಡುತ್ತೇವೆ ಅಂದರೆ ಸೊಳ್ಳೆಗಳ ಬ್ಯಾಟ್ ಅಲ್ಲಿ ಹೊಡೆಯುತ್ತೇವೆ. ಸೊಳ್ಳೆ ಬತ್ತಿಗಳನ್ನು ಹೆಚ್ಚಾಗಿ ಏಷ್ಯಾ, ಆಫ್ರಿಕಾ ಮತ್ತು ದಕ್ಷಿಣ ಅಮೆರಿಕಾ ದೇಶಗಳಲ್ಲಿ ಬಳಸಲಾಗುತ್ತದೆ. ಈ ಸೊಳ್ಳೆ ಬತ್ತಿಗಳು ಹೊರಸೂಸಲ್ಪಡುವ ಹೊಗೆಯು ಕ್ಯಾನ್ಸರ್ ಸಮಸ್ಯೆಗೆ ಕಾರಣ ಆಗುತ್ತದೆ. ಕೆಲವು ಸೊಳ್ಳೆಗಳ ಸುರುಳಿಗಳು ಆಕ್ಟಾಕ್ಲೋರೊಡಿಪ್ರೊಪಿಲ್ ಈಥರ್ ಎಸ್ 2ಅನ್ನು ಹೊಂದಿರುತ್ತವೆ ಇದು ಅತ್ಯಂತ ಪ್ರಬಲವಾದ ಶ್ವಾಸಕೋಶದ ಕಾರ್ಸಿನೋಜೆನ್ ಅನ್ನು ಬಿಸ್ ಕ್ಲೋರೊಮೆಥಿಲ್ ಈಥರ್ ಬಿ ಸಿ ಎಮ್ ಇ ಎಂದು ಕರೆಯಲಾಗುವ ಉಪ ಉತ್ಪನ್ನವಾಗಿ ಉತ್ಪಾದಿಸುತ್ತದೆ.

ಅದೃಷ್ಟವಶಾತ್ ಹಲವು ದೇಶಗಳಲ್ಲಿ ಎಸ್ 2 ಅನ್ನು ನಿಷೇಧಿಸಲಾಗಿದೆ. ಪೈರೆಥ್ರಾಯ್ಡ್ಗಳನ್ನು ಒಳಗೊಂಡಿರುವ ಉತ್ಪನ್ನಗಳು ಸೊಳ್ಳೆಗಳಿಂದ ಉತ್ತಮವಾದ ರಕ್ಷಣೆಯನ್ನು ಒದಗಿಸುತ್ತದೆ, ಅವು ಕೇವಲ ಸಸ್ಯ ಸಾರಗಳನ್ನು ಮಾತ್ರ ಒಳಗೊಂಡಿರುತ್ತವೆ ಇವುಗಳನ್ನು ಬಳಕೆ ಮಾಡುವುದರಿಂದ ಯಾವ ರೀತಿಯ ತೊಂದರೆ ಆಗುವುದಿಲ್ಲ. ಆದರೆ ಸೊಳ್ಳೆಗಳ ಸುರುಳಿಗಳಿಗೆ ಸಂಬಂಧಿಸಿದ ಕೀಟ ನಾಶಕಗಳ ದಹನದಿಂದ ಬಿಡುಗಡೆಯಾಗುವ ಉಪ ಉತ್ಪನ್ನಗಳು ಕೆಲವು ಸಂದರ್ಭಗಳಲ್ಲಿ ಆರೋಗ್ಯಕ್ಕೆ ಅಪಾಯವನ್ನುಉಂಟುಮಾಡಬಹುದು ಸೊಳ್ಳೆ ಸುರುಳಿಯನ್ನು ಮಲಗುವ ಕೋಣೆಯಲ್ಲಿ ಹಚ್ಚಬೇಡಿ ಇದರ ಬದಲು ಆರ್ಗಾನಿಕ್ ಸೊಳ್ಳೆ ನಿವಾರಕಗಳನ್ನು ಬಳಸಿ. ಈ ಸೊಳ್ಳೆಗಳ ಕಡಿತವನ್ನು ತಪ್ಪಿಸಲು ಮಾರಕವಾದ ಸೊಳ್ಳೆ ಬತ್ತಿಯನ್ನು ಬಳಸಿ ಆರೋಗ್ಯವನ್ನು ಕೆಡಿಸಿಕೊಳ್ಳುವ ಬದಲು ಸೊಳ್ಳೆ ಪರದೆಯನ್ನು ಬಳಕೆ ಮಾಡುವುದು ಒಳ್ಳೆಯದು. ಮನೆಯನ್ನು ಮನೆಯ ಸುತ್ತ ಮುತ್ತ ಸ್ವಚ್ಛತೆಯನ್ನು ಕಾಪಿಡಿಕೊಳ್ಳಿ ಇದರಿಂದ ಸೊಳ್ಳೆಗಳ ಕಾಟ ತಪ್ಪುತ್ತದೆ.

ಮನೆಯ ಅಕ್ಕ ಪಕ್ಕ ನೀರು ನಿಲ್ಲುವುದನ್ನು ತಪ್ಪಿಸಿ. ಮನೆಯಲ್ಲಿ ಸೊಳ್ಳೆಗಳು ಬರದ ಹಾಗೆ ನೋಡಿ ಕೊಳ್ಳುವುದು ಒಳ್ಳೆಯದು ಇದರಿಂದ ಆರೋಗ್ಯವು ಚೆನ್ನಾಗಿರುತ್ತದೆ. ಇನ್ನೊಂದು ವಿಷಯ ಏನೆಂದರೆ ಸೊಳ್ಳೆಗಳ ಬತ್ತಿಯನ್ನು ಬಳಸುವ ಬದಲು ಅಲ್ ಔಟ್ ಗೆ ಬೇವಿನ ರಸ ಹಾಗೂ ಕರ್ಪುರದ ರಸವನ್ನು ತುಂಬಿ ಹಚ್ಚಿ ಇದು ಕೂಡ ಆರೋಗ್ಯಕ್ಕೆ ಮಾರಕವಲ್ಲ ಇದರಿಂದ ಸೊಳ್ಳೆಗಳು ಸತ್ತು ಹೋಗುತ್ತವೆ ಜೊತೆಗೆ ಆರೋಗ್ಯವು ಚೆನ್ನಾಗಿರುತ್ತದೆ. ಇದನ್ನು ಪಾಲಿಸಿದರೆ ಸೊಳ್ಳೆಗಳ ಕಾಟದಿಂದ ಕೂಡ ತಪ್ಪಿಸಿಕೊಳ್ಳಬಹುದು ಜೊತೆಗೆ ಆರೋಗ್ಯವು ಕೂಡ ಚೆನ್ನಾಗಿರುತ್ತದೆ ಅದನ್ನು ಬಿಟ್ಟು ಸೊಳ್ಳೆಗಳ ಬತ್ತಿ ಮೊರೆ ಹೋದರೆ ಸೊಳ್ಳೆಗಳು ಸತ್ತು ಹೋಗುತ್ತವೆ ಜೊತೆಗೆ ನಮ್ಮ ಆರೋಗ್ಯವು ಕೂಡ ಕೆಡುತ್ತದೆ ಅದಕ್ಕಾಗಿ ಸೊಳ್ಳೆಗಳ ಬತ್ತಿಗಳನ್ನು ಬಳಸುವ ಮುಂಚೆ ಅದರ ಬಗ್ಗೆ ತಿಳಿದುಕೊಂಡು ಬಳಕೆ ಮಾಡುವುದು ಒಳ್ಳೆಯದು. ಈ ಉಪಯುಕ್ತ ಲೇಖನ ಮರೆಯದೇ ಶೇರ್ ಮಾಡಿರಿ ನಿಮ್ಮ ಎಲ್ಲ ಸ್ನೇಹಿತರಿಗೂ ಸಹಾಯ ಆಗುತ್ತೆ.

LEAVE A REPLY

Please enter your comment!
Please enter your name here