ಕ್ಯಾನ್ಸರ್ ಬಗ್ಗೆ ವಿಶೇಷ ಲೇಖನ ಇಲ್ಲಿದೆ

0
536

ಕ್ಯಾನ್ಸರ್ ಇಡೀ ಪ್ರಪಂಚಕ್ಕೆ ಕಾಡುತ್ತಿರುವ ದೊಡ್ಡ ಕಾಯಿಲೆ. ಕ್ಯಾನ್ಸರ್ ಎಂದ ಕೂಡಲೇ ಎಷ್ಟೋ ಜನರು ಜೀವನ ಮುಗಿಯಿತು ಇನ್ನು ಸಾವು ಖಚಿತ ಎಂಬ ನಿರ್ಧಾರಕ್ಕೆ ಬಂದುಬಿಡುತ್ತಾರೆ. ಈ ರೋಗವೇ ಹಾಗೆ ಇದರ ಪ್ರಭಾವ ಮಾನವನ ಶರೀರವನ್ನು ಹಂತ ಹಂತವಾಗಿ ಆವರಿಸಿ ಮನುಷ್ಯನ ದೇಹವನ್ನು ವಿವಿಧ ರೀತಿಯಲ್ಲಿ ನೋವಿನಿಂದ ಬಳಲುವ ಹಾಗೆ ಮಾಡಿ ಕೊನೆಗೆ ಸಾವಿನಲ್ಲಿ ಅಂತ್ಯಗೊಳಿಸುತ್ತದೆ. ಯಾವುದೇ ಕ್ಯಾನ್ಸರ್ ಆದರೂ ಪ್ರಾರಂಭಿಕ ಹಂತದಲ್ಲಿ ಪತ್ತೆಹಚ್ಚಿದರೆ ಸೂಕ್ತ ಚಿಕಿತ್ಸೆಗಳ ಮೂಲಕ ಗುಣಪಡಿಸಬಹುದು. ಆದರೆ ಕ್ಯಾನ್ಸರ್ ಲಕ್ಷಣಗಳು ಪ್ರಾರಂಭಿಕ ಹಂತದಲ್ಲಿ ಅಷ್ಟು ನಿರ್ಧಿಷ್ಟವಾದ ಮಾರ್ಗ ಇಲ್ಲ. ವ್ಯೆದ್ಯರ ಮೂಲಕ ನಿರಂತರ ತಪಾಸಣೆ ಮಾಡಿಸಿ ತಿಳಿದುಕೊಳ್ಳುವುದು ಒಳ್ಳೆಯದು.

ಈ ಲೇಖನದಲ್ಲಿ ವಿಶ್ವ ಆರೋಗ್ಯ ಇಲಾಖೆ ಪ್ರಕಾರ ಕ್ಯಾನ್ಸರ್ ಎಂದರೇನು ಹಾಗೂ ಇದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಮುಂದೆ ತಿಳಿದುಕೊಳ್ಳಿ. ಮೊದಲು ಕ್ಯಾನ್ಸರ್ ಎಂದರೇನು ಎನ್ನುವುದನ್ನು ತಿಳಿದುಕೊಳ್ಳೋಣ. ಈ ರೋಗಕ್ಕೆ ಹಲವಾರು ವಿಧಗಳಿವೆ ಸರಳವಾಗಿ ಹೇಳುವುದಾದರೆ ವಿಶ್ವ ಆರೋಗ್ಯ ಇಲಾಖೆ ಪ್ರಕಾರ ಕ್ಯಾನ್ಸರ್ ಎಂಬುದು ವಿವಿಧ ರೀತಿಯ ಕಾಯಿಲೆಗಳ ಗುಂಪು. ವಿವಿಧ ರೀತಿಯ ಕಾಯಿಲೆಗಳನ್ನು ಒಟ್ಟುಗೂಡಿಸಿ ಮಾನವನ ದೇಹದಲ್ಲಿ ಸಂಬಂಧಿತ ತೊಂದರೆಗಳನ್ನು ಉಂಟುಮಾಡುವ ಒಂದು ಕ್ರಿಯೆ. ಈ ಕ್ಯಾನ್ಸರ್ ಮಾನವನ ದೇಹದ ಯಾವ ಭಾಗದಲ್ಲಿಯಾದರು ಕಾಣಿಸಿಕೊಳ್ಳಬಹುದು. ಮತ್ತು ಕ್ಯಾನ್ಸರ್ ಹೇಗೆ ಉಂಟಾಗುತ್ತದೆ ಎಂದು ತಿಳಿದುಕೊಳ್ಳೋಣ. ವಿಶ್ವ ಆರೋಗ್ಯ ಇಲಾಖೆ ಪ್ರಕಾರ ಮಾನವನ ದೇಹವನ್ನು ರೂಪಿಸಲು ಜೀವಕೋಶಗಳು ಬೇಕು ಹಾಗೂ ಈ ಜೀವಕೋಶಗಳಿಂದಲೇ ಮಾನವನ ಆರೋಗ್ಯ ಉತ್ತಮವಾಗಿರುತ್ತದೆ. ಮನುಷ್ಯನ ದೇಹಕ್ಕೆ ಅಗತ್ಯವಿರುವಂತೆ ಬೇಕಾದ ಸಮಯದಲ್ಲಿ ಜೀವಕೋಶಗಳು ಹೊಸ ಜೀವಕೋಶಗಳನ್ನು ಉತ್ಪತ್ತಿ ಮಾಡುತ್ತದೆ. ಹಾಗೂ ವಿಭಜಿಸುತ್ತದೆ. ಇದು ಸ್ವಯಂಚಾಲಿತ ಕ್ರಿಯೆಯಾಗಿದೆ. ಸಾಮಾನ್ಯವಾಗಿ ಜೀವಕೋಶಗಳು ತುಂಬಾ ಹಳೆಯದಾದಾಗ ಅಥವಾ ವಿವಿಧ ಕಾರಣಗಳಿಂದ ಹಾನಿಗೊಳಗಾದಾಗ ಮನುಷ್ಯನ ದೇಹದಲ್ಲಿಯೇ ಆ ಜೀವಕೋಶಗಳು ನಾಶವಾಗುತ್ತದೆ.

ನಂತರ ದೇಹವು ಹೊಸಜೀವಕೋಶಗಳನ್ನು ದೇಹದ ಅಗತ್ಯಕ್ಕೆ ತಕ್ಕಂತೆ ಉತ್ಪತ್ತಿ ಮಾಡುತ್ತದೆ. ಇನ್ನು ಕ್ಯಾನ್ಸರ್ ಗೆ ತುತ್ತಾದ ವ್ಯಕ್ತಿಯ ದೇಹದಲ್ಲಿ ಜೀವಕೋಶಗಳು ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಯೋಣ. ಕ್ಯಾನ್ಸರ್ ಮನುಷ್ಯನ ದೇಹದಲ್ಲಿ ಕಾಣಿಸಿಕೊಂಡಮೇಲೆ ಜೀವಕೋಶದ ಕ್ರಮಬದ್ಧ ಪ್ರತಿಕ್ರಿಯೆ ಬದಲಾಗುತ್ತದೆ. ಹೇಗೆಂದರೆ ಜೀವಕೋಶಗಳು ಅಗತ್ಯಕ್ಕೆ ತಕ್ಕಂತೆ ಉತ್ಪತ್ತಿಯಾಗದೆ ಅಸಹಜ ರೀತಿಯಲ್ಲಿ ಉತ್ಪತ್ತಿಯಾಗುತ್ತದೆ. ಅಂದರೆ ಜೀವಕೋಶ ಹಾಗೂ ದೇಹದ ಮಧ್ಯ ಇರುವ ಸಂಬಂಧ ಹಾಗೂ ಸಂಪರ್ಕ ಸರಿಯಾಗಿ ಕೆಲಸ ಮಾಡುವುದಿಲ್ಲ. ಜೊತೆಗೆ ಹಳೆಯ ಹಾನಿಗೊಳಗಾದ ಜೀವಕೋಶಗಳು ವಿಭಜನೆಯಾಗದೆ ದೇಹದಲ್ಲಿ ಉಳಿದು ಇದರ ಪರಿಣಾಮ ಅಗತ್ಯವಿಲ್ಲದಿದ್ದಾಗ ಉಂಟಾಗುವ ಜೀವಕೋಶಗಳು ಹಾಗೂ ನಾಶವಾಗದೆ ಉಳಿಯುವ ಅಗತ್ಯವಿಲ್ಲದ ಜೀವಕೋಶಗಳು ಸರಿಯಾಗಿ ದೇಹದಲ್ಲಿ ವಿಭಜನೆಯಾಗದೆ ಗೆಡ್ಡೆಗಳಾಗಿ ಮಾರ್ಪಡುತ್ತದೆ. ಈ ಪ್ರಕ್ರಿಯೆಯನ್ನು ವ್ಯೆದ್ಯರು ಕ್ಯಾನ್ಸರ್ ಎನ್ನುತ್ತಾರೆ. ಈ ಲೇಖನವನ್ನು ಮರೆಯದೇ ಶೇರ್ ಮಾಡಿರಿ ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here