ನಿಮಗೆ ಎಂದಾದರೂ ಎದೆ ನೋವಿನ ಅನುಭವವಾಗಿದೆಯೇ?

0
537

ನಿಮಗೆ ಎಂದಾದರೂ ಎದೆ ನೋವಿನ ಅನುಭವವಾಗಿದೆಯೇ ಇದೆಂಥಾ ನೋವು ಎಂಬ ಪ್ರಶ್ನೆ ಮೂಡಿದೆಯೇ ನೀವು ಎಂದಾದರೂ ಆಂಜೀನ ಬಗ್ಗೆ ಕೇಳಿದ್ದೀರಾ ಹೌದು ಇದು ಹೃದಯದ ರೋಗದ ಲಕ್ಷಣ ಆಂಜೀನ ಒಂದು ರೀತಿಯ ನೋವು ಹೃದಯಕ್ಕೆ ರಕ್ತದ ಹರಿತ ಕಡಿಮೆಯಾದಾಗ ನಿಮಗೆ ಈ ನೋವಿನ ಅನುಭವವಾಗುತ್ತದೆ. ರಕ್ತದ ಹರಿತ ಕಡಿಮೆಯಾದಾಗ ನಿಮ್ಮ ಹೃದಯಕ್ಕೆ ಸಾಕಷ್ಟು ಆಕ್ಸಿಜನ್ ಸಿಗುವುದಿಲ್ಲ. ಶಾರೀರಿಕ ಚಟುವಟಿಕೆ ಅಥವಾ ಒತ್ತಡದಿಂದಾಗಿ ಕೆಲವೊಮ್ಮೆ ಈ ನೋವು ಉಂಟಾಗುತ್ತದೆ.

ಹೃದಯದ ಸುಡುವಿಕೆ ಅಥವಾ ಆಂಜೀನ ಲಕ್ಷಣಗಳು ಕೆಲವೊಮ್ಮೆ ನಿಮಗೆ ಹೃದಯ ಸುಡುವಿಕೆ ಅಥವಾ ಉರಿಯೂತದ ಲಕ್ಷಣಗಳೇ ಎಂದು ಖಚಿತವಾಗುವುದಿಲ್ಲ. ಹೃದಯದ ಸುಡುವಿಕೆಯಲ್ಲಿ ಮುಖ್ಯವಾಗಿ ಆಸಿಡ್ ರಿಫ್ಲೆಕ್ಟ್ಸ್ ನಿಂದಾಗಿ ನಿಮಗೆ ಹೃದಯದ ಸುಡುವಿಕೆಯ ಸಂವೇಧನೆಯಾಗಿ ಅದು ಮೇಲಕ್ಕೆ ನಿಮ್ಮ ಇಸ್ಸೋಫೆಗಸ್ ಗೆ ಅಂದರೆ ಕಂಠನಾಳಕ್ಕೆ ಸರಿಯುತ್ತದೆ. ನಿಮಗೆ ನಿಮ್ಮ ಬಾಯಿಯಲ್ಲಿ ಕಹಿ ಅಥವಾ ಆಸಿಡ್ ನ ರುಚಿಯ ಅನುಭವವಾಗುತ್ತದೆ. ಆದರೆ ಆಂಜೀನದಲ್ಲಿ ಈ ಮೇಲಿನ ಒಂದು ಅಥವಾ ಹೆಚ್ಚಿನ ಅನುಭವವಾಗುತ್ತದೆ. ಒಂದು ಅಥವಾ ಎರಡು ಕ್ಯೆಗಳಲ್ಲಿ ದವಡೆ ಕತ್ತು ಬೆನ್ನು ಅಥವಾ ಹೊಟ್ಟೆಯಲ್ಲಿ ನೋವು ಉಸಿರುಗಟ್ಟುವಿಕೆ ತಲೆತಿರುಗುವ ಅನುಭವ ವಾಕರಿಕೆ ಬೆವರುವುದು ಅವ್ಯವಸ್ಥಿತ ಹೃದಯದ ಬಡಿತ ಎರಡು ವಿಧವಾದ ಆಂಜೀನಗಳಿವೆ.

ಸ್ಟೇಬಲ್ ಆಂಜೀನದ ಸೂಚಕ ನಮೂನೆ ಇದೆ ಅದು ಬರುವ ಲಕ್ಷಣಗಳು ಸುಲಭವಾಗಿ ಗೊತ್ತಾಗುತ್ತದೆ. ಉದಾಹರಣೆಗೆ ವ್ಯಾಯಾಮ ಮಾಡುವಾಗ ಸ್ಥಿರವಾದ ಆಂಜೀನ ಲಕ್ಷಣ ನೀವು ಆರಾಮ ಮಾಡಿದಾಗ ತೊಲಗುತ್ತದೆ. ಅನ್ ಸ್ಟೇಬಲ್ ಆಂಜೀನ ಇದರ ಲಕ್ಷಣಗಳು ಹೆಚ್ಚಾಗಿ ತಿಳಿಯುವುದಿಲ್ಲ. ನೀವು ಆರಾಮ ಮಾಡುತ್ತಿರುವಾಗ ಒಮ್ಮೆಲೇ ಎದೆನೋವು ಉಂಟಾಗುತ್ತದೆ. ಸ್ವಲ್ಪ ಸಮಯದಲ್ಲಿ ಗಂಭೀರವಾಗುತ್ತದೆ. ಅನ್ ಸ್ಟೇಬಲ್ ಆಂಜೀನ ಒಂದು ಗಂಭೀರವಾದ ಪರಿಸ್ಥಿತಿ ಆರೈಕೆ ಮಾಡದೆ ಬಿಟ್ಟರೆ ಹೃದಯಾಘಾತವಾಗುವ ಸಾಧ್ಯತೆಗಳಿವೆ. ಹೃದಯಾಘಾತ ಅಂದರೆ ಹೃದಯಕ್ಕೆ ರಕ್ತದ ಹರಿತಕ್ಕೆ ಅಡ್ಡಿಯಾಗಿದೆ ಮತ್ತು ಹೃದಯದ ಸ್ನಾಯುಗಳು ಸಾಯುತ್ತಿವೆ. ಇದೊಂದು ವ್ಯೆದ್ಯಕೀಯ ತುರ್ತುಪರಿಸ್ಥಿತಿ ಮತ್ತು ಕೂಡಲೇ ನಿಮ್ಮನ್ನು ಆಸ್ಪತ್ರೆಗೆ ಕೊಂಡೊಯ್ಯಬೇಕು. ನೆನಪಿಡಿ ಒಂದು ವೇಳೆ ನೀವು ಹಿರಿಯರು ಅಥವಾ ಡಯಾಬಿಟಿಕ್ ರೋಗಿಗಳಾಗಿದ್ದರೆ ನಿಮಗೆ ಹೃದಯದ ನೋವು ಆಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ನೀವು ಇನ್ನಷ್ಟು ಜಾಗ್ರತೆ ವಹಿಸಬೇಕಾಗುತ್ತದೆ.

ಧೂಮಪಾನ ಮತ್ತು ಹೆಚ್ಚಿನ ತೂಕ ಶಾರೀರಿಕ ಚಟುವಟಿಕೆ ಮಾಡದಿರುವುದು ಮತ್ತು ಕುಟುಂಬದವರಿಗೆ ಹೃದಯದ ಕಾಯಿಲೆ ಇದ್ದರೆ ನಿಮಗೆ ಆಂಜೀನದ ಹೆಚ್ಚಿನ ಅಪಾಯವಿರುತ್ತದೆ. ಎದೆನೋವು ಉಂಟಾದಾಗ ನೀವು ಏನು ಮಾಡಬೇಕು ಎದೆನೋವಿನ ಅನುಭವ ಅಥವಾ ಆಂಜೀನ ಆದಾಗ ಈ ಕೆಳಗಿನ ಹೆಜ್ಜೆಗಳನ್ನು ಅನುಸರಿಸಿರಿ. ನೀವೇನು ಮಾಡುತ್ತಿದ್ದೀರಿ ಅದನ್ನು ನಿಲ್ಲಿಸಿಬಿಡಿ ಕುಳಿತುಕೊಂಡು ಆರಾಮ ಮಾಡಿರಿ. ಒಂದು ವೇಳೆ ನೀವು ಮಲಗಿಕೊಂಡಿದ್ದರೆ ಹಾಸಿಗೆಯ ಮೇಲೆ ಕುಳಿತುಕೊಳ್ಳಿ ಒತ್ತಡಕ್ಕೆ ಸಹಾಯ ಮಾಡಲು ಧೀರ್ಘ ಶ್ವಾಸೋಚ್ಛಾಸ ಮಾಡಿರಿ ಉಸಿರಾಟಕ್ಕೆ ಸಹಾಯ ಮಾಡಲು ನಿಮ್ಮ ಕುತ್ತಿಗೆ ಹತ್ತಿರ ಮತ್ತು ನಿಮ್ಮ ನಡುವಿನ ಹತ್ತಿರ ಬಟ್ಟೆ ಬಿಗಿಯಾಗಿದ್ದರೆ ಅದನ್ನು ಸಡಿಲಗೊಳಿಸಿ. ಆಂಬುಲೆನ್ಸ್ ನ್ನು ಕರೆಯಿರಿ ಆಂಜೀನಾದ ಆರೈಕೆ ಮಾಡುವುದು ಔಷಧಿ ತೆಗೆದುಕೊಳ್ಳುವುದು ಆಂಜೀನ ಆರೈಕೆಯ ಒಂದು ಮುಖ್ಯಭಾಗ.

ಲಕ್ಷಣಗಳು ಕಂಡ ಕೂಡಲೇ ತಕ್ಷಣ ಉಪಶಮನ ಕೈಗೊಳ್ಳಬೇಕು. ಮುಂಬರುವ ಹೃದಯಾಘಾತವನ್ನು ತಡೆಯಿರಿ. ಹೃದಯಾಘಾತ ಅಥವಾ ಸ್ಟ್ರೋಕ್ ಆಗುವ ಅಪಾಯವನ್ನು ಕಡಿಮೆಗೊಳಿಸಿ. ಅಗತ್ಯವಿದ್ದರೆ ವ್ಯದ್ಯರು ನಿಮಗೆ ಜೀವನ ಪರ್ಯಂತದ ಆರೈಕೆಗಳನ್ನು ಸೂಚಿಸಬಹುದು. ನಿಮ್ಮ ಮೆಡಿಟೇಶನ್ ಪದ್ದತಿಯನ್ನು ನಿಯಮಿತವಾಗಿ ಪಾಲಿಸಿರಿ ನೀವು ನಿಮ್ಮ ಹೃದಯವನ್ನು ಆಂಜೀನದಿಂದ ರಕ್ಷಿಸಬಹುದು. ನೀವು ಧೂಮಪಾನ ಮಾಡುತ್ತಿದ್ದರೆ ಅದನ್ನು ತ್ಯಜಿಸಿರಿ. ದಿನನಿತ್ಯ ವ್ಯಾಯಾಮ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ಹೃದಯಕ್ಕೆ ಮತ್ತು ಶರೀರದ ಪ್ರತಿಯೊಂದು ಭಾಗಕ್ಕೆ ತುಂಬಾ ಉತ್ತಮ. ಹೃದಯದ ಆರೋಗ್ಯಕ್ಕೆ ಉತ್ತಮವಾದ ಆಹಾರ ಸೇವಿಸಿರಿ. ಈ ಲೇಖನವನ್ನು ಶೇರ್ ಮಾಡಿರಿ.

LEAVE A REPLY

Please enter your comment!
Please enter your name here