ಹಣ ಖರ್ಚು ಮಾಡದೇ ನಿಮ್ಮ ಫೇಸ್ ಸುಪರ್ ಆಗಿರಬೇಕು ಅಂದ್ರೆ ಇದನ್ನ ಟ್ರೈ ಮಾಡಿ

0
1252

ನಮ್ಮ ಚರ್ಮಕ್ಕೆ ಹೆಚ್ಚಿನ ಹೊಳಪು ಸಿಗಲು ನಾವು ಸಾಕಷ್ಟು ರೀತಿಯ ಕ್ರೀಮ್ ಮತ್ತು ಸೋಪ್ ಬಳಕೆ ಮಾಡ್ತೇವೆ ಪ್ರತಿಯೋಬ್ಬರಿಗೂ ಸಹ ಅಂದ ಚಂದವಾಗಿ ಕಾಣಬೇಕು ಎಂಬುದು ಆಸೆ ಇದ್ದೆ ಇರುತ್ತದೆ ಇದಕ್ಕಾಗಿ ನಾವು ಸಾಕಷ್ಟು ಹಣ ಸಹ ಖರ್ಚು ಮಾಡುತ್ತೇವೆ ಸೂಕ್ತವಲ್ಲದ ಫೇಸ್ ಕ್ರೀಮ್ ಬಳಕೆ ಮಾಡಿ ಎಷ್ಟೋ ಜನ ಸಮಸ್ಯೆಗಳು ಸಹ ಮಾಡಿಕೊಂಡಿದ್ದಾರೆ ಈ ಎಲ್ಲ ಸಮಸ್ಯೆಗಳು ಬರಲು ಕಾರಣ ನೀವು ಬಳಕೆ ಮಾಡುವ ಸೋಪ್ ಮತ್ತು ಫೇಸ್ ಕ್ರೀಮ್ ನಲ್ಲಿ ಸಾಕಷ್ಟು ಕೆಮಿಕಲ್ ಮಿಶ್ರಣ ಆಗಿರುತ್ತದೆ. ಹಾಗೆಯೇ ಈಗಂತೂ ಹೆಚ್ಚು ಜನರು ಹರ್ಬಲ್ ಕ್ರೀಮ್ ಎಂದು ಬಳಕೆ ಮಾಡುತ್ತಾರೆ ನಿಜ ಹೇಳ್ಬೇಕು ಅಂದ್ರೆ ಹರ್ಬಲ್ ಕ್ರೀಮ್ ನಲ್ಲಿ ಸಹ ಸಾಕಷ್ಟು ಕೆಮಿಕಲ್ ಮಿಶ್ರಣ ಇದ್ದೆ ಇರುತ್ತದೆ. ಎಲ್ಲ ಸಮಸ್ಯೆಗಳಳಿಂದ ತಪ್ಪಿಸಿಕೊಳ್ಳಲು ನೀವು ಮನೆಯಲ್ಲೇ ಉಪಯೋಗ ಈ ರೀತಿ ಮಾಡಿ ನೀವು ಸುಪರ್ ಆಗಿ ಕಾಣಿಸಿಕೊಳ್ಳಬಹುದು.

ಈ ದಿನ ನಾವು ಕಡಲೆಹಿಟ್ಟಿನ ಫೇಸ್ ಪ್ಯಾಕ್ ಮಾಡಿಕ್ಕೊಳುವುದು ಅದರಿಂದಾಗುವ ಲಾಭಗಳೇನು ಎಂದು ಈ ಲೇಖನದಲ್ಲಿ ತಿಳಿಯಿರಿ. ಕಡಲೆಹಿಟ್ಟು ನಮ್ಮ ಮುಖವನ್ನು ಫೇರ್ ಅಂಡ್ ಗ್ಲೋಯಿಂಗ್ ಆಗಿ ಕಾಣುವಂತೆ ಮಾಡುತ್ತದೆ ಮತ್ತು ಕೇವಲ ಮೂವತ್ತು ನಿಮಿಷಗಳ ತಕ್ಷಣವೇ ನಿಮ್ಮ ಬಿಸಿಲಿನಿಂದಾದ ಕಂದುಬಣ್ಣವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಕಡಲೆಹಿಟ್ಟು ಎಣ್ಣೆ ಚರ್ಮ ಒಣ ಚರ್ಮ ಸೆನ್ಸಿಟಿವ್ ಚರ್ಮ ಎಲ್ಲಾ ರೀತಿಯ ಚರ್ಮವುಳ್ಳವರು ಉಪಯೋಗಿಸಬಹುದು. ಇದರಿಂದ ಯಾವುದೇ ಸೈಡ್ ಎಪ್ಪೆಕ್ಟ್ ಇಲ್ಲ ಇದರಿಂದ ನಿಮಗೆ ಹತ್ತಾರು ಲಾಭಗಳು ಸಿಗುತ್ತದೆ. ಹಾಗಾದ್ರೆ ಈ ಲೇಖನ ಕೊನೆವರೆಗೂ ಓದಿರಿ ನಾವು ನಿಮಗೆ ಈ ರೆಮಿಡಿ ಮಾಡುವುದು ಹೇಗೆ ಸಂಪೂರ್ಣ ತಿಳಿಸುತ್ತವೇ.

ಬನ್ನಿ ಈ ರೆಮಿಡಿಯನ್ನು ತಯಾರಿಸುವ ವಿಧಾನವನ್ನು ತಿಳಿಯೋಣ. ಇದಕ್ಕೆ ಬೇಕಾಗಿರುವ ಸಾಮಗ್ರಿಗಳು ಎರಡು ಚಮಚ ಕಡಲೆಹಿಟ್ಟು ಒಂದು ಚಮಚ ಜೇನುತುಪ್ಪ ಒಂದು ಚಿಟಿಕೆ ಅರಿಶಿನದ ಪುಡಿ ಒಂದು ಚಮಚ ನಿಂಬೆರಸ ಈ ಮಿಶ್ರಣಕ್ಕೆ ಬೇಕಾದಷ್ಟು ಹಸಿಹಾಲು ಇವೆಲ್ಲವನ್ನೂ ಮಿಕ್ಸ್ ಮಾಡಿ ಪೇಸ್ಟ್ ಅನ್ನು ತಯಾರಿಸಿಕೊಳ್ಳಿ. ಮೊದಲು ಹತ್ತಿಯನ್ನು ತೆಗೆದುಕೊಂಡು ರೋಸ್ ವಾಟರ್ ನಲ್ಲಿ ಅದ್ದಿ ನಂತರ ಅದರಿಂದ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಿ. ನಂತರ ಕಡಲೆಹಿಟ್ಟಿನ ಪೇಸ್ಟ್ ಅನ್ನು ಮುಖ ಮತ್ತು ಕುತ್ತಿಗೆಯ ಭಾಗಕ್ಕೆ ಚೆನ್ನಾಗಿ ಹಚ್ಚಬೇಕು. ಈ ಪ್ಯಾಕ್ ಅನ್ನು ಧರಿಸಿ ಇಪ್ಪತ್ತರಿಂದ ಮೂವತ್ತು ನಿಮಿಷಗಳ ಕಾಲ ಒಣಗಲು ಬಿಡಿ. ನಂತರ ತಣ್ಣೀರಿನಿಂದ ನಿಧಾನವಾಗಿ ಮುಖವನ್ನು ತೊಳೆಯಿರಿ. ಈ ರೀತಿ ಮಾಡುವುದರಿಂದ ನಿಮ್ಮ ಮುಖವನ್ನು ಇದು ಮೃದು ಮತ್ತು ಫೇರ್ ಅಂಡ್ ಗ್ಲೋಯಿಂಗ್ ಆಗಿ ಕಾಣುವಂತೆ ಮಾಡುತ್ತದೆ. ನೀವು ಎಷ್ಟೇ ಕಪ್ಪಗೆ ಇದ್ದರು ದಿನ ದಿನಕ್ಕೆ ಬೆಳ್ಳಗೆ ಆಗುತ್ತೀರಿ. ಈ ಪ್ಯಾಕ್ ಅನ್ನು ವಾರದಲ್ಲಿ ಎರಡರಿಂದ ಮೂರು ಬಾರಿ ಮಾಡಿಕೊಂಡರೆ ಸಾಕು ಒಳ್ಳೆಯ ಫಲಿತಾಂಶ ದೊರೆಯುತ್ತದೆ. ಈ ಲೇಖನವನ್ನು ಶೇರ್ ಮಾಡಿರಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿರಿ.

LEAVE A REPLY

Please enter your comment!
Please enter your name here