ಆಯುರ್ವೇದದ ಪ್ರಕಾರ ಅಡಿಗೆ ಸೋಡಾ ಹಲವಾರು ಆರೋಗ್ಯ ಮತ್ತು ಸೌಂದರ್ಯ ಪ್ರಯೋಜನ ಗಳನ್ನಿ ಹೊಂದಿದೆ. ಮಾನವನ ಆರೋಗ್ಯದ ದೃಷ್ಟಿಯಲ್ಲಿ ಅಡುಗೆ ಸೋಡಾ ಜೊತೆಗೆ ನೀರು ಬೆರೆಸಿದರೆ ಏನೆಲ್ಲಾ ಅದ್ಭುತ ಲಾಭಗಳಿವೆ ಎಂದು ಈ ಲೇಖನದ ಮೂಲಕ ತಿಳಿಯೋಣ. ಅಡಿಗೆ ಸೋಡಾ ನೀರು ತಯಾರಿಸುವುದು ಹೇಗೆ ಇದರ ಪ್ರಯೋಜನಗಳೇನು ಹೀಗೆ ಸಂಪೂರ್ಣ ಮಾಹಿತಿಗಾಗಿ ಈ ಲೇಖನವನ್ನು ಪೂರ್ತಿಯಾಗಿ ಓದಿ. ಅಡಿಗೆ ಸೋಡಾ ನೀರಿನ ಪ್ರಮುಖ ಆರು ಪ್ರಯೋಜನಗಳು ಯಾವು ಎಂದರೆ ಮೋದಲ್ನೆಯದು ಅಜೀರ್ಣ ಸಮಸ್ಯೆ. ಎಲ್ಲರಿಗೂ ತಿಳಿದಿರುವ ಹಾಗೆ ಅಡುಗೆ ಸೋಡಾ ಬೆರಸಿದ ನೀರು ಸೇವಿಸಿದರೆ ವಯಸ್ಕರಲ್ಲಿ ಅಜೀರ್ಣದಿಂದ ಉಂಟಾಗುವ ತೊಂದರೆಗಳು ಕಡಿಮೆ ಆಗುತ್ತವೆ.

ಹಾಗೂ ತಿಂದ ಆಹಾರವನ್ನು ಜೀರ್ಣ ಮಾಡಲು ಸಹಾಯ ಮಾಡುತ್ತದೆ. ಎರಡನೆಯದು ಮೂತ್ರ ಪಿಂಡದ ಕಲ್ಲುಗಳು. ಮಾನವನ ದೇಹದಲ್ಲಿ ಮೂತ್ರಪಿಂಡದ ಕಲ್ಲುಗಳ ಬೆಳವಣಿಗೆಗೆ ಕಬ್ಬಿಣ ಅಂಶದ ಕೊರತೆಯ ದೇಹದಲ್ಲಿ ಅತಿಯಾದ ಆಮ್ಲ ಮತ್ತು ನಿರ್ಜಲೀಕರಣ ಕೂಡ ಕಾರಣ ಆಗಬಹುದು. ಅಡುಗೆ ಸೋಡಾ ನೀರನ್ನು ಮೂತ್ರಪಿಂಡದ ಕಲ್ಲುಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ ಮತ್ತು ದೇಹದ ಪಿಹೆಚ್ ಮಟ್ಟವನ್ನು ಕಾಪಾಡುತ್ತದೆ. ಮೂರನೆಯದು ಕರುಳಿನ ಶುದ್ಧೀಕರಣ. ಮಾನವನ ಕರುಳಿನ ಶುದ್ಧೀಕರಣಕ್ಕೆ ಸೋಡಾ ಸಹಾಯ ಮಾಡುತ್ತದೆ. ಹೊಟ್ಟೆ ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ ಹಾಗೂ ಜೀರ್ಣಕಾರಿ ಸಮಸ್ಯೆಗಳಿಗೆ ರಾಮ ಬಾಣ. ನಾಲ್ಕನೆಯದು ಕೀಲು ನೋವು ಸೋಡಾ ಜೊತೆ ನೀರು ಬೆರೆಸಿ ಸೇವನೆ ಮಾಡಿದರೆ ಕೀಲುಗಳ ಮೇಲೆ ಪರಿಣಾಮ ಬೀರುವ ಸಂಧಿವಾತದ ನೋವು ಹಾಗೂ ಸಮಸ್ಯೆ ಅನ್ನು ತಡೆಯುತ್ತದೆ.
ಐದನೆಯ ಆಂಟಿ ಆಕ್ಸಿಡೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಒಂದಷ್ಟು ಬಾರಿ ಮನುಷ್ಯನಲ್ಲಿ ಆಹಾರದ ವ್ಯತ್ಯಾಸದಿಂದ ನಮ್ಮ ಎದೆಯ ಭಾಗ ಹಾಗೂ ಹೊಟ್ಟೆಯ ಭಾಗದಲ್ಲಿ ಉರಿ ಉಂಟಾಗುತ್ತದೆ. ಬೇಕಿಂಗ್ ಸೋಡಾ ಜೊತೆ ನೀರು ಬೆರೆಸಿ ಕುಡಿದರೆ ಹೊಟ್ಟೆಯಲ್ಲಿ ಅತಿಯಾದ ಹೈಡ್ರೋಕ್ಲೋರಿಕ್ ಆಮ್ಲವನ್ನು ತಟಸ್ಥ ಗೊಳಿಸುತ್ತದೆ ಹಾಗೂ ಸಮಾಧಾನ ದೊರೆಯುತ್ತದೆ. ಆರನೇ ಯದು ದೇಹದಲ್ಲಿ ಆಮ್ಲವನ್ನು ಸಮತೋಲನ ಮಾಡುತ್ತದೆ. ಮನುಷ್ಯನ ದೇಹದಲ್ಲಿ ಆಹಾರ ಸರಿಯಾಗಿ ಜೀರ್ಣ ಆಗಲು ಆಮ್ಲದ ಅಗತ್ಯವಿದೆ. ದೇಹದಲ್ಲಿ ಆಮ್ಲದ ಅಂಶ ಹೆಚ್ಚಾಗಿದ್ದರೆ ಸಂಧಿವಾತ ಮತ್ತು ಕೆಲವು ಸಂಧರ್ಭ ಗಳಲ್ಲಿ ಮತ್ತು ಕ್ಯಾನ್ಸರ್ ಗಳಂಥ ರೋಗಗಳನ್ನು ಉಂಟು ಮಾಡುತ್ತದೆ. ಬೇಯಿಸುವ ಸೋಡಾ ನೀರು ಮನುಷ್ಯನ ದೇಹದಲ್ಲಿ ಆಮ್ಲದ ಅಂಶವನ್ನು ಹೆಚ್ಚಾಗದಂತೆ ತಡೆಯುತ್ತದೆ ಹಾಗೂ ಸಮತೋಲನ ಕಾಪಾಡುತ್ತದೆ.
ಮನೆಯಲ್ಲಿ ಅಡುಗೆ ಸೋಡಾ ನೀರನ್ನು ತಯಾರಿಸುವ ವಿಧಾನ ಹೇಗೆ ಎಂದರೆ ಅರ್ಧ ಟೀ ಚಮಚ ಅಡುಗೆ ಸೋಡಾವನ್ನು 250 ಎಂ ಎಲ್ ಶುದ್ಧ ನೀರಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸೇವಿಸಿ. ಪ್ರತಿ ದಿನವೂ ಸೇವಿಸುವ ಅವಶ್ಯಕತೆ ಇಲ್ಲ ಎಷ್ಟು ಸೇವಿಸಬೇಕು ಎಂಬುದು ನಿಮ್ಮ ದೇಹದ ತೊಂದರೆಗಳ ಮೇಲೆ ಅವಲಂಬಿತ ವಾಗಿರುತ್ತದೆ. ಅಗತ್ಯಕ್ಕೆ ತಕ್ಕಂತೆ ನುರಿತ ವೈದ್ಯರ ಸಲಹೆ ಪಡೆಯಿರಿ ಹಾಗೂ ಸೇವಿಸಿ. ಈ ಮಾಹಿತಿ ಇಷ್ಟ ಆದಲ್ಲಿ ದಯವಿಟ್ಟು ನಿಮ್ಮ ಪ್ರೀತಿ ಪಾತ್ರರಿಗೆ ತಿಳಿಸಿ ಶೇರ್ ಮಾಡಿ.