ಈ ದೇಶಗಳಲ್ಲಿ ಇರೋ ಜೈಲ್ ಫೈವ್ ಸ್ಟಾರ್ ಹೋಟಲ್ ಇದ್ದಂಗೆ ಇರುತ್ತೆ ಅಂತೆ

0
336

ನಮ್ಮ ಭಾರತ ದೇಶದ ಜೈಲುಗಳು ಎಂದ ತಕ್ಷಣವೇ ನಮಗೆ ಕೆಲವೊಂದು ಕಲ್ಪನೆಗಳಿರುತ್ತವೆ ಕಬ್ಬಿಣದ ಕಂಬಿಗಳು ಕಾಂಕ್ರಿಟ್ ಗೋಡೆಗಳು ಸಿಲ್ವರ್ ತಟ್ಟೆಯನ್ನು ಹಿಡಿದುಕೊಂಡು ಊಟಕ್ಕೋಸ್ಕರ ಕಾಯುವುದು ಮತ್ತು ಸಜ ಆಗಿರೋ ಖೈದಿಗಳು ಗಾರ್ಡೆನ್ ನಲ್ಲಿ ಕೆಲಸ ಮಾಡುವುದು ಈ ತರಹದ ಒಂದಷ್ಟು ಘಟನೆಗಳು ನಮ್ಮ ಕಣ್ಣ ಮುಂದೆ ಬರುತ್ತೆ. ಯಾಕೆಂದರೆ ಈ ತರಹದ ಘಟನೆಗಳನ್ನು ಸಿನಿಮಾದಲ್ಲಿ ತುಂಬಾನೇ ನೋಡಿರುತ್ತೇವೇ. ಮತ್ತು ನಿಜವಾಗಿ ಸಹ ಭಾರತದ ಜೈಲಿನಲ್ಲಿ ಇರುವುದು ಇದೆ ಆಗಿದೆ. ಹಾಗಾಗಿ ಜೈಲು ಎಂದ ತಕ್ಷಣ ನಮಗೆ ಇವೆಲ್ಲಾ ಕಣ್ಣ ಮುಂದೆ ಬರುತ್ತೆ. ಆದರೆ ಇವತ್ತಿನ ಈ ಲೇಖನದಲ್ಲಿ ಜೈಲು ಎಂದರೆ ಹೀಗೂ ಇರುತ್ತಾ ಅಂತ ನಿಮಗೆ ಅಚ್ಚರಿಯಾಗಬಹುದು. ಅಂತಹದ್ದೆ ಕೆಲವು ಐಷಾರಾಮಿ ಜೈಲುಗಳ ಕುರಿತು ಈ ಲೇಖನದಲ್ಲಿ ಓದಿ ತಿಳಿಯಿರಿ.

ಮೊದಲನೆಯದು. ಬಸ್ಟಾಯ್ ಪ್ರಿಶನ್ ನಾರ್ ವೇ ನಾರ್ ವೇ ಯ ಬಸ್ಟಾಯ್ ದ್ವೀಪದಲ್ಲಿ ನಿರ್ಮಾಣ ಮಾಡಿರುವ ಈ ಒಂದು ಜೈಲ್ ನಿಜಕ್ಕುನೂ ಇದೊಂದು ಫೈವ್ ಸ್ಟಾರ್ ಹೋಟೆಲ್ ಅಂದ್ರೆ ತಪ್ಪಾಗೋದಿಲ್ಲ. ಯಾಕೆಂದರೆ ಆ ರೀತಿ ನಿರ್ಮಾಣ ಮಾಡಿದ್ದಾರೆ. ಯಾಕೆಂದರೆ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಸಿಗೋ ಎಲ್ಲಾ ಸೌಲಭ್ಯಗಳು ಈವೊಂದು ಜೈಲ್ ನಲ್ಲಿ ಕೈದಿಗಳಿಗೆ ಸಿಗುತ್ತದೆ. ಈ ಜೈಲ್ ನಲ್ಲಿ ಸೆಕ್ಯುರಿಟಿ ತುಂಬಾನೇ ಕಡಿಮೆ ಇರುತ್ತದೆ. ಎಲ್ಲಾ ಜೈಲ್ ಗಳ ಹಾಗೆ ಇಲ್ಲಿ ಕೈದಿಗಳನ್ನ ಬಂದಿಸಿಡೋಲ್ಲ ಮತ್ತು ಪ್ರತಿಯೊಬ್ಬ ಖೈದಿಗಳಿಗೂ ಕೂಡ ಸಪರೇಟ್ ಅಂತ ಒಂದು ರೂಮ್ ಇರುತ್ತದೆ. ಆ ರೂಮ್ ಗಳಲ್ಲಿ ಸಪರೇಟ್ ಬಾತ್ರೂಮ್ ಕೂಡ ಇರುತ್ತೆ ಮತ್ತು ಆ ಎಲ್ಲಾ ರೂಮ್ ಗಳು ಕೂಡ ಫೈವ್ ಸ್ಟಾರ್ ಹೋಟೆಲ್ ನ ಮಾದರಿಯಲ್ಲಿ ಆ ರೂಮ್ ಗಳ ನಿರ್ಮಾಣ ಮಾಡಲಾಗಿದೆ. ಮತ್ತು ಅಲ್ಲಿರುವ ಖೈದಿಗಳು ತಮ್ಮ ಬಿಡುವಿನ ಸಮಯದಲ್ಲಿ ಟೆನ್ನಿಸ್ ಆಡಬಹುದು ಫಿಶಿಂಗ್ ಮಾಡಬಹುದು ಮತ್ತು ಹಾರ್ಸ್ ರೈಡಿಂಗ್ ಮಾಡಬಹುದು ಈ ತರಹದ ಎಲ್ಲಾ ಸೌಲಭ್ಯಗಳನ್ನು ಈ ಖೈದಿಗಳಿಗೆ ನೀಡಲಾಗುತ್ತದೆ.

ಎರಡನೆಯದು. ಸೊಲೆಂಟುನ ಪ್ರಿಶನ್ ಸ್ವೇಡೆನ್. ಈ ಜೈಲ್ ಕೂಡ ಯಾವುದೇ ಒಂದು ಫೈವ್ ಸ್ಟಾರ್ ಹೋಟೆಲ್ ಗೆ ಕಮ್ಮಿ ಇಲ್ಲ ಆ ರೀತಿ ಈವೊಂದು ಜೈಲ್ ನ ಕೂಡ ನಿರ್ಮಾಣ ಮಾಡಲಾಗಿದೆ. ಮತ್ತು ಇಲ್ಲಿರುವ ಖೈದಿಗಳು ತಮ್ಮ ದಿನನಿತ್ಯದ ಊಟವನ್ನ ತಾವೇ ತಯಾರಿಸಿಕೊಳ್ಳುವ ಪದ್ದತಿ ಈವೊಂದು ಜೈಲ್ ನಲ್ಲಿದೆ. ಇದು ನೋಡೋದಕ್ಕೆ ಯಾವುದೋ ಒಂದು ಪ್ಲಾಟ್ ತರಹ ಕಾಣಿಸುತ್ತದೆ. ಮತ್ತು ಇಲ್ಲಿ ಜೈಲಿನ ಖೈದಿಗಳು ಯಾವುದೇ ರೀತಿಯ ಜೈಲಿನ ಯುನಿಫಾರ್ಮ್ ಕೂಡ ಧರಿಸೋಹಾಗಿಲ್ಲಾ. ತಮಗೆ ಇಷ್ಟ ಬಂದಂತಹ ಬಟ್ಟೆಗಳನ್ನು ಹಾಕಿಕೊಳ್ಳಬಹುದು. ಮತ್ತು ರೂಮ್ ನಲ್ಲಿ ಟಿವಿ ಕೂಡ ಇರುತ್ತದೆ. ಮತ್ತು ಬಿಡುವಿನ ಸಮಯದಲ್ಲಿ ಅವರು ಓದಬಹುದು ಮತ್ತು ಸಪರೇಟ್ ಬಾತ್ರೂಮ್ ಕೂಡ ಇದೆ. ಮತ್ತು ಈ ರೂಮ್ ಜೈಲ್ ನಲ್ಲಿ ನಿಮಗೇನಾದರೂ ಯಾವುದಾದರೂ ಒಂದು ವಸ್ತು ತುಂಬಾ ಇಷ್ಟವಾಯಿತು ಎಂದರೆ ಅದನ್ನು ನೀವು ನಿಮ್ಮ ಮನೆಗೆ ತರಿಸಿಕೊಂಡು ಅದನ್ನ ಅಲ್ಲಿಟ್ಟುಕೊಂಡು ಉಪಯೋಗಿಸಬಹುದು. ಅಂತಹ ಒಂದು ಸೌಲಭ್ಯ ಕೂಡ ಈವೊಂದು ಜೈಲ್ ನಲ್ಲಿ ಇದೆ.

ಮೂರನೆಯದು. ಜಸ್ಟೀಸ್ ಸೆಂಟರ್ ಲಿಯೊಬನ್ ಆಸ್ಟ್ರಿಯಾ. ಈವೊಂದು ಫೈವ್ ಸ್ಟಾರ್ ಜೈಲ್ ನಲ್ಲಿ 205 ಖೈದಿಗಳಿಗೆ ಮಾತ್ರ ಇಲ್ಲಿ ಇರೋದಕ್ಕೆ ವ್ಯವಸ್ಥೆ ಇದೆ. ಈವೊಂದು ಜೈಲ್ ನಲ್ಲಿ ಜಿಮ್ ನಿಂದ ಹಿಡಿದು ಟೆನ್ನಿಸ್ ಕೋಟ್ ಸ್ವಿಮ್ಮಿಂಗ್ ಪೂಲ್ ಎಲ್ಲಾ ತರಹದ ಒಂದು ಸೌಲಭ್ಯ ಈ ಒಂದು ಜೈಲ್ ನಲ್ಲಿ ಸಿಗುತ್ತದೆ. ಇಲ್ಲಿನ ಪ್ರತಿಯೊಂದು ಖೈದಿಗಳಿಗೂ ಕೂಡ ಸಪರೇಟ್ ರೂಮ್ ಇರುತ್ತದೆ. ಸಪರೇಟ್ ಬಾತ್ರೂಮ್ ಇರುತ್ತದೆ. ಮತ್ತು ಅವರಿಗೆ ಇಷ್ಟ ಬಂದ ಬಟ್ಟೆಗಳನ್ನು ಧರಿಸಬಹುದು. ಮತ್ತು ಅಲ್ಲಿನ ಖೈದಿಗಳಿಗೆ ಯಾವುದಾದರೂ ಸ್ಪೋರ್ಟ್ಸ್ ಬಗ್ಗೆ ಆಸಕ್ತಿಯನ್ನು ಹೊಂದಿದ್ದರೆ ಅವರು ದಿನನಿತ್ಯ ಅವರು ಅದರಲ್ಲೇ ತೊಡಗಿಸಿಕೊಳ್ಳಬಹುದು.

ನಾಲ್ಕನೆಯದು. ಆರಂಜ್ಯುಜ್ ಪ್ರಿಶನ್ ಸ್ಪೈನ್. ಈವೊಂದು ಜೈಲಲ್ಲಿ ಯಾರಾದರೂ ಒಬ್ಬ ವ್ಯಕ್ತಿ ಅಪರಾಧ ಮಾಡಿದಾಗ ಆ ವ್ಯಕ್ತಿಯ ಮಕ್ಕಳಾಗಿರಬಹುದು ಅಥವಾ ಅವರ ಹೆಂಡತಿಯಾಗಿರಬಹುದು ಅವರನ್ನ ನೋಡಿಕೊಳ್ಳುವುದಕ್ಕೆ ಅವರ ಸಂಬಂಧಿಕರು ಯಾರು ಇಲ್ಲವೆಂದಾಗ ಅವರನ್ನ ಈವೊಂದು ಜೈಲ್ ನಲ್ಲಿ ಕರೆದುಕೊಂಡು ಬಂದು ಆ ಅಪರಾದಿಯ ಜೊತೆ ಇರಿಸುವ ಸೌಲಭ್ಯ ಈವೊಂದು ಜೈಲ್ ನಲ್ಲಿ ಇದೆ. ಹಾಗೇನಾದರೂ ಅವರ ಪರಿವಾರದವರಿಗೆ ಜೈಲಲ್ಲಿ ಇರುವುದಕ್ಕೆ ಇಷ್ಟವಿಲ್ಲ ಎಂದರೆ ಅವರನ್ನ ಯಾವುದಾದರೂ ಒಂದು ಎನ್ ಜಿ ಓ ಗೆ ಸೇರಿಸುವಂತಹ ವ್ಯವಸ್ಥೆ ಕೂಡ ಮಾಡಲಾಗುತ್ತದೆ. ಇಂತಹ ಒಂದು ಸೌಲಭ್ಯ ಈ ಜೈಲ್ ನಲ್ಲಿ ಇದೆ.

ಮತ್ತು ಈ ಎಲ್ಲಾ ಜೈಲುಗಳಲ್ಲೂ ಕೂಡ ತಮ್ಮ ಜೀವನದಲ್ಲಿ ಮೊದಲ ಬಾರಿಗೆ ಯಾರು ತಪ್ಪನ್ನು ಮಾಡಿರುತ್ತಾರೆ ಅಂತವರಿಗೆ ಮಾತ್ರ ಈ ತರಹದ ಜೈಲ್ ನಲ್ಲಿ ಇಡಲಾಗುತ್ತದೆ. ಮತ್ತು ಮುಂದೆಂದೂ ಕೂಡ ಯಾವ ರೀತಿಯಲ್ಲೂ ಕೂಡ ಒಂದು ಚಿಕ್ಕ ಅಪರದವನ್ನ ಮಾಡದೆ ಇರುವ ತರಹ ಅವರ ಮನವನ್ನು ಪರಿವರ್ತನೆ ಮಾಡಿ ಅವರನ್ನು ಬಿಡುಗಡೆ ಮಾಡಲಾಗುತ್ತದೆ. ಮತ್ತು ಎಲ್ಲೂ ಕೂಡ ಅವರನ್ನ ಖೈದಿಗಳ ತರಹ ಅಲ್ಲಿ ಅವರನ್ನ ನೋಡಿಕೊಳ್ಳುವುದಿಲ್ಲ. ಅವರಿಗೆ ಬೇಕಾದಂತಹ ಎಲ್ಲಾ ಸೌಲಭ್ಯಗಳನ್ನು ಕೊಟ್ಟು ಅವರನ್ನ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಈ ಲೇಖನವನ್ನು ಶೇರ್ ಮಾಡಿ. ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here