ನಿಮಗೆ ದೇವರ ಅನುಗ್ರಹ ಬೇಗ ಸಿಗಬೇಕು ಅಂದ್ರೆ ಈ ರೀತಿ ಮಾಡಿ ಸಾಕು

0
776

ನಿಮಗೆ ದೇವರ ಅನುಗ್ರಹ ಬೇಗ ಸಿಗಬೇಕು ಮತ್ತು ನೀವು ಜೀವನದಲ್ಲಿ ಯಾವುದೇ ಸಮಸ್ಯೆಗಳಿಂದ ತೊಂದರೆ ಅನುಭವಿಸಬಾರದು ಅಂದ್ರೆ ಐದು ನಿಮಿಷ ಬಿಡುವುದು ಮಾಡಿಕೊಂಡು ಈ ಲೇಖನ ಸಂಪೂರ್ಣ ಓದಿ. ದೇವಾಲಯಗಳಲ್ಲಿ ಭಗವಂತನನ್ನ ದರ್ಶಿಸಿ ಪ್ರಾರ್ಥಿಸಿ ಪೂಜಿಸುವುದು ಆಚಾರವಾಗಿ ಬಂದಂತಹ ಸಾಂಪ್ರದಾಯ ನಮ್ಮದು. ಇನ್ನು ಆ ದೇವಾಲಯಗಳಿಗೆ ಹೋದಾಗ ನಾವು ಸಮಾಧಾನ ಚಿತ್ತದಿಂದ ಶರಣಾಗತಿ ವಿಧಿ ವಿಧಾನಗಳಿಂದ ಆ ಭಗವಂತನನ್ನ ಪೂಜಿಸಿ ಪ್ರಾರ್ಥಿಸಿದರೆ ಶೀಘ್ರವೇ ಉತ್ತಮ ಫಲ ಸಿಗುತ್ತದೆ. ಮುಖ್ಯವಾಗಿ ದೇವಾಲಯಕ್ಕೆ ಕಾಟಾಚಾರಕ್ಕೆ ಹೋಗಿ ಬಂದಿದ್ದೇವೆ ಎನ್ನುವ ಪದ್ಧತಿಯನ್ನ ಮಾತ್ರ ಇಟ್ಟುಕೊಳ್ಳಬಾರದು. ದೇವಾಲಯಕ್ಕೆ ಹೋದಾಗ ತೀರ್ಥ ತೆಗೆದುಕೊಳ್ಳುವಾಗ ಮೂರು ಬಾರಿ ಬೇರೆ ಬೇರೆಯಾಗಿ ತೆಗೆದುಕೊಳ್ಳಬೇಕು. ಅಂದರೆ ಒಂದೇ ಬಾರಿ ಮೂರು ಸಲ ಹಾಕಿಸಿಕೊಂಡು ತೀರ್ಥವನ್ನು ಸೇವನೆ ಮಾಡಬಾರದು. ಇನ್ನು ದೀಪವನ್ನು ಮುಡಿಸುವಾಗ ಬತ್ತಿಯನ್ನು ಎಣ್ಣೆಯಲ್ಲಾಗಲಿ ಅಥವಾ ಒಳ್ಳೆಯ ಹಸುವಿನ ತುಪ್ಪದಲ್ಲಾಗಲಿ ಚೆನ್ನಾಗಿ ನೆನೆಸಿ ಅದನ್ನು ಪೂರ್ವದ ದಿಕ್ಕಿನ ಕಡೆಗೆ ಮುಖ ಮಾಡಿ ಎರಡು ಬತ್ತಿಗಳನ್ನು ತೆಗೆದುಕೊಂಡು ದೀಪವನ್ನು ಬೆಳಗಿಸಬೇಕು. ಇನ್ನು ಈಶ್ವರ ಅಭಿಷೇಕ ಪ್ರಿಯ ಆದ್ದರಿಂದ ಅಭಿಷೇಕ ಪೂಜೆಗಳಿಂದ ಶಿವನನ್ನು ಪೂಜಿಸಬೇಕು.

ವಿಷ್ಣು ಅಲಂಕಾರ ಪ್ರಿಯ ಹೀಗಾಗಿ ವಿಷ್ಣುವಿನ ಅಲಂಕಾರಕ್ಕೆ ಸುಗಂಧ ದ್ರವ್ಯಾದಿಗಳ ಜೊತೆಗೆ ಪುಷ್ಪಗಳನ್ನ ತೆಗೆದುಕೊಂಡು ಹೋಗಿ ವಿಷ್ಣುವನ್ನ ಪೂಜಿಸಬೇಕು. ಸೂರ್ಯನು ನಮಸ್ಕಾರ ಪ್ರಿಯನು ಹೌದು ಸೂರ್ಯನಿಗೆ ನಮಸ್ಕಾರಧಿಗಳಿಂದ ಪೂಜಿಸಬೇಕು. ಇನ್ನು ವಿನಯಕನಿಗೆ ತರ್ಪಣದಿಂದ ದೇವತೆಯರಿಗೆ ಕುಂಕುಮಾರ್ಚನೆಯಿಂದ ಪೂಜಿಸಬೇಕು. ಇವುಗಳನ್ನ ಗಮನದಲ್ಲಿಟ್ಟುಕೊಂಡು ನಾವೆಲ್ಲ ಆಚರಿಸಬೇಕು. ಇನ್ನು ಪ್ರಸಾದವನ್ನು ಸ್ವೀಕರಿಸುವಾಗ ಮಾತ್ರ ಕೆಲವು ಎಚ್ಚರಿಕೆಗಳನ್ನ ತೆಗೆದುಕೊಳ್ಳಬೇಕು. ಪ್ರಸಾದವನ್ನು ಸ್ವೀಕರಿಸಿದ ತಕ್ಷಣ ಕಣ್ಣಿಗೆ ಅಡ್ಡಿಕೊಂಡು ಮಹಾಪ್ರಸಾದವೆಂದು ತಿಳಿದು ಕೊಟ್ಟ ತಕ್ಷಣ ಬಾಯಿಗೆ ಹಾಕಿಕೊಳ್ಳಬೇಕು. ತಿನ್ನದೇ ಬಿಸಾಕಬಾರದು. ಇನ್ನು ದೀಪವನ್ನು ಬಾಯಿಂದ ಆರಿಸಬಾರದು ಹಾಗೆಯೇ ಒಂದು ದೀಪದಿಂದ ಮತ್ತೊಂದು ದೀಪವನ್ನ ಮುಡಿಸಬಾರದು ದೀಪ ಹಚ್ಚಿದ ತಕ್ಷಣವೇ ಬಾಗಿಲು ಮುಚ್ಚಿಕೊಂಡು ಹೊರಗೆ ಹೋಗಬಾರದು.

ಪೂಜಾ ಮಂದಿರದಲ್ಲೇ ಸ್ವಲ್ಪ ನಿಂತುಕೊಂಡು ಧ್ಯಾನ ಮಾಡಿದ ನಂತರ ಹೊರಗೆ ಬರಬೇಕು. ಹೀಗೆ ಪೂಜೆಗೆ ಉಪಯೋಗಿಸಿದ ಆಸನವನ್ನ ಬೇರೆ ಯಾವ ಕಾರಣಕ್ಕೂ ಉಪಯೋಗಿಸಬಾರದು. ಇನ್ನು ದೇವಾಲಯಕ್ಕೆ ಹೋದಾಗ ದೇವರ ಎದುರಿಗೆ ಅಂದರೆ ನೇರವಾಗಿ ದೇವರಿಗೆ ಮುಖಮಾಡಿ ನಿಂತುಕೊಂಡು ಮಂತ್ರಗಳನ್ನ ಸ್ತ್ರೋತ್ರಗಳನ್ನ ಪಠಿಸಬಾರದು. ಸ್ವಲ್ಪ ಪಕ್ಕಕ್ಕೆ ಸರಿದು ಅಥವಾ ನಿಂತುಕೊಂಡು ಇಲ್ಲವೇ ಕುಳಿತುಕೊಂಡು ಎರಡು ಕೈಗಳನ್ನು ಜೋಡಿಸಿ ಮಂತ್ರಗಳನ್ನ ಸ್ತ್ರೋತ್ರಗಳನ್ನ ಪಾರಾಯಣ ಮಾಡಿಕೊಳ್ಳಬೇಕು. ಇನ್ನು ನಮಸ್ಕಾರ ಮಾಡಬೇಕಾದರೆ ಪುರುಷರು ಸಾಷ್ಟಾಂಗ ನಮಸ್ಕಾರವನ್ನು ಮಾಡಬೇಕು. ಹಾಗೆಯೇ ಸ್ತ್ರೀಯರು ಮಾತ್ರ ಮೊಣಕಾಲುಗಳ ಮೇಲೆ ಕುಳಿತುಕೊಂಡು ನಮಸ್ಕಾರವನ್ನು ಮಾಡಬೇಕು ಅಂದರೆ ಹಣೆಯನ್ನ ನೆಲಕ್ಕೆ ತಗುಲಿಸಿ ನಮಸ್ಕರಿಸಬೇಕು. ಎದೆಯ ಭಾಗವನ್ನ ಮಾತ್ರ ಭೂಮಿಗೆ ತಗುಲಿಸಬಾರದು. ಇನ್ನು ಮನೆಯಲ್ಲಿ ಯುದ್ದಕ್ಕಾಗಿ ಸನ್ನದ್ಧವಾಗಿ ನಿಂತಿರುವ ಶ್ರೀಕ್ರಷ್ಣ ಶಂಖ ಊದುತ್ತಿರುವಂತೆ ಇರುವ ಪ್ರತಿಮೆಯನ್ನಾಗಲಿ ಚಿತ್ರಪಟವನ್ನಾಗಲಿ ಇಟ್ಟುಕೊಳ್ಳಬಾರದು.

ಹಾಗೆಯೇ ಶ್ರೀಕ್ರಷ್ಣನು ಒಬ್ಬನೇ ನಿಂತುಕೊಂಡು ಕೊಳಲು ನುಡಿಸುತ್ತಿರುವ ಕ್ರಷ್ಣನ ಪ್ರತಿಮೆಯನ್ನಾಗಲಿ ಚಿತ್ರಪಟವನ್ನಾಗಲಿ ಮನೆಯಲ್ಲಿ ಇಟ್ಟುಕೊಳ್ಳಬಾರದು. ಇನ್ನು ಲಕ್ಷ್ಮಿಯನ್ನು ಸಹ ನಾವು ಪ್ರತಿವೊಬ್ಬರ ಮನೆಯಲ್ಲೂ ಪೂಜಿಸುತ್ತೇವೆ ಅಂದರೆ ಕಮಲದಲ್ಲಿ ಕುಳಿತುಕೊಂಡ ಲಕ್ಷ್ಮಿಯನ್ನ ಪೂಜಿಸಬೇಕು. ನಿಂತ ಲಕ್ಶ್ಮಿಯನ್ನ ಪೂಜಿಸಬಾರದು ಯಾಕೆಂದರೆ ಅವಳು ಚಂಚಲೆ ಆದ್ದರಿಂದ ಕುಳಿತ ಲಕ್ಷ್ಮಿಯ ಪೂಜೆಯನ್ನು ನಾವು ಮಾಡಿಕೊಳ್ಳಬೇಕು. ಹಾಗೆಯೇ ಭಾನುವಾರ ಸೂರ್ಯನನ್ನು ಸೋಮವಾರ ಪರಮೇಶ್ವರನನ್ನು ಮಂಗಳವಾರ ಸುಬ್ರಹ್ಮಣ್ಯನನ್ನು ಬುಧವಾರ ವಿನಾಯಕ ಮತ್ತು ಅಯ್ಯಪ್ಪ ಸ್ವಾಮಿಯನ್ನು ಗುರುವಾರ ರಾಘವೇಂದ್ರ ಸ್ವಾಮಿಗಳನ್ನ ಸಾಯಿಬಾಬಾ ಅಂದರೆ ಗುರುಗಳಾದ ದತ್ತಾತ್ರೇಯರನ್ನ ಶ್ರುಕ್ರವಾರ ದೇವಿ ದುರ್ಗೆ ಶಾರದೆಯನ್ನು ಇನ್ನು ಶನಿವಾರ ವೆಂಕಟೇಶ್ವರನನ್ನನು ಇಲ್ಲ ಗ್ರಾಮ ದೇವತೆಗಳನ್ನು ದರ್ಶಿಸಿ ಪೂಜಿಸತಕ್ಕದ್ದು.

ಇನ್ನು ಯಾವುದೇ ದೇವಾಲಯಕ್ಕೆ ಹೋಗಲಿ ನಾವು ಮೊದಲಿಗೆ ದರ್ಶಿಸಬೇಕಾದದ್ದು ಧ್ವಜಸ್ತಂಭವನ್ನ ಹೀಗಾಗಿ ಧ್ವಜಸ್ತಂಭವನ್ನ ಮುಟ್ಟಿ ನಮಸ್ಕರಿಸಿ ಮುಂದೆ ಸಾಗಬೇಕು. ಶಿವಾಲಯಕ್ಕೆ ಹೋದಾಗ ಮೊದಲಿಗೆ ನವಗ್ರಹಗಳನ್ನು ದರ್ಶಿಸಿ ಪೂಜಿಸಿ ಪ್ರಾರ್ಥಿಸಿದ ನಂತರ ಮತ್ತೆ ಹೋಗಿ ಕಾಲು ತೊಳೆದುಕೊಂಡು ಈಶ್ವರನ ದರ್ಶಿಸಿ ಪೂಜಿಸಬೇಕು. ಇನ್ನು ವಿಷ್ಣುವಿನ ಆಲಯಕ್ಕೆ ಹೋದಾಗ ನೇರವಾಗಿ ವಿಷ್ಣುವನ್ನ ಮೊದಲಿಗೆ ದರ್ಶಿಸಿ ನಂತರ ಬೇರೆ ದೇವತೆಗಳನ್ನು ದರ್ಶನ ಮಾಡಬೇಕು. ಯಾವುದೇ ಆಲಯಕ್ಕೆ ದರ್ಶನ ನೀಡಿದಾಗ ಮೊದಲು ಆ ದೇವತೆಯನ್ನ ಆ ದೇವರನ್ನ ಪಾದಗಳ ದರ್ಶನ ಮೊದಲು ಮಾಡಿಕೊಳ್ಳಬೇಕು. ಹಾಗೆಯೇ ಮಹಿಳೆಯರು ಓಂಕಾರವನ್ನು ಜಪಿಸಬಾರದು. ಇನ್ನು ಮುಖ್ಯವಾಗಿ ಪ್ರತಿಯೊಬ್ಬರು ದೇವಾಲಯದಲ್ಲಿ ಪ್ರಕ್ಷಿಣೆಯನ್ನು ಹಾಕುವುದನ್ನು ನೋಡುತ್ತೇವೆ ವಿನಾಯಕನಿಗೆ ಒಂದು ಪ್ರದಕ್ಷಿಣೆ ಹಾಕಿದರು ಅವನು ಸಂತೃಪ್ತಗೊಳ್ಳುತ್ತಾನೆ. ಹೀಗಾಗಿ ವಿನಾಯಕನಿಗೆ ತಪ್ಪದೆ ಒಂದು ಪ್ರದಕ್ಷಿಣೆಯನ್ನು ಹಾಕಬೇಕು. ಹಾಗೆಯೇ ಈಶ್ವರನಿಗೆ ಮೂರು ಪ್ರದಕ್ಷಿಣೆ ವಿಷ್ಣುವಿಗೆ ನಾಲ್ಕು ಹಾಗೆಯೇ ತಾಯಿಗೆ ನಾಲ್ಕು ಪ್ರದಕ್ಷಿಣೆ ಆಲದ ಮರಕ್ಕೆ ಏಳು ಪ್ರದಕ್ಷಿಣೆಯನ್ನು ತಪ್ಪದೇ ಹಾಕಿ ಪ್ರಾರ್ಥಿಸಬೇಕು. ಹೀಗೆ ನಾವು ದೇವಾಲಯಕ್ಕೆ ಹೋದಾಗ ಈ ಮೇಲಿನ ಅನುಕರಣೆಯನ್ನು ತಪ್ಪದೇ ಆಚರಿಸಬೇಕು. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಜೀವನದಲ್ಲಿ ಏನೇ ಸಮಸ್ಯೆಗಳು ಇದ್ದಲ್ಲಿ ಈ ಸಂಖ್ಯೆಗೆ ಕರೆ ಮಾಡಿರಿ ನಿಮಗೆ ಪರಿಹಾರ ಮೂರೇ ದಿನದಲ್ಲಿ ನಿಶ್ಚಿತ 953 51 56490

LEAVE A REPLY

Please enter your comment!
Please enter your name here