ಮಾವಿನ ಹಣ್ಣನ್ನು ಈ ಸಮಯದಲ್ಲಿ ತಿಂದರೆ ನೀವು ಫಿಟ್ ಆಗಬಹುದು

0
527

ಮಾವಿನ ಹಣ್ಣನ್ನು ಈ ಬೇಸಿಗೆ ಕಾಲದಲ್ಲಿ ತಿಂದರೆ ನಿಮ್ಮ ದೇಹದ ಬೊಜ್ಜು ಕರಗಿಸಬಹುದು. ಅದು ಹೇಗೆಂದರೆ ಈ ಲೇಖನವನ್ನು ಸಂಪೂರ್ಣವಾಗಿ ಓದಿ ತಿಳಿಯಿರಿ. ಹಣ್ಣುಗಳ ರಾಜ ಅಂತಾನೆ ಕರೆಯಲ್ಪಡುವ ಮಾವಿನ ರುಚಿಗೆ ಮಾರುಹೋಗದವರಿಲ್ಲ. ಆದರೆ ಇದುವರೆಗೂ ಮಾವಿನ ಹಣ್ಣನ್ನು ತಿಂದರೆ ತೂಕ ಹೆಚ್ಚಾಗುತ್ತದೆ ಅಂತಾ ಕೆಲವರು ಈ ಹಣ್ಣಿನಿಂದ ದೂರ ಇರುತ್ತಿದ್ದರು. ಆದರೆ ಇನ್ನುಮುಂದೆ ನಿಮಗೆ ಇಷ್ಟವಾದ ಮಾವಿನ ಹಣ್ಣನ್ನ ಎಷ್ಟು ಬೇಕಾದರೂ ತಿನ್ನಬಹುದು ಇದು ಒಂದು ಸಂಶೋಧನೆಯಿಂದ ದೃಡಪಟ್ಟಿದೆ. ಇತ್ತೇಚೆಗೆ ಅಮೇರಿಕ ದೇಶದ ಹಾರ್ವಡ್ ವಿಶ್ವವಿದ್ಯಾನಿಲಯದವರು ಮೂವತ್ತಕ್ಕೂ ಹೆಚ್ಚು ದೇಶಗಳಲ್ಲಿ ಅನೇಕ ರೀತಿಯ ಜನರನ್ನು ಸಂಶೋಧನೆಗೆ ಒಳಪಡಿಸಿದಾಗ ಇದರ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಿದಾಗ ಬೇಸಿಗೆ ಕಾಲದಲ್ಲಿ ಮಾವು ಸೇವನೆ ಮಾಡಿದ್ರೆ ಅನವಶ್ಯಕ ದೇಹದ ಕೊಬ್ಬು ಕಡಿಮೆ ಆಗುತ್ತದೆ ಎಂಬುದು ದೃಡಪಟ್ಟಿದೆ.

ಮಾವಿನ ಹಣ್ಣಿನಿಂದ ಆರೋಗ್ಯಕ್ಕೆ ತುಂಬಾ ಅನುಕೂಲಗಳಿವೆ. ಮಾವಿನ ಹಣ್ಣಿನಲ್ಲಿ ಯಾವುದೇ ಕೊಬ್ಬಿನಂಶ ಇರುವುದಿಲ್ಲ. ಜೊತೆಗೆ ಈ ಹಣ್ಣಿನಲ್ಲಿ ಫೈಬರ್ ಇರುವುದರಿಂದ ಜೀರ್ಣಕ್ರಿಯೆಗೆ ಒಳ್ಳೆಯದು ಜೊತೆಗೆ ಕರುಳಿನ ಆರೋಗ್ಯವನ್ನು ವೃದ್ಧಿಸುತ್ತದೆ. ಅಲ್ಲದೆ ಮಾವಿನಲ್ಲಿ ಪೆಕ್ಟಿನ್ ಎಂಬ ಅಂಶ ಇರುವುದರಿಂದ ದೇಹದಲ್ಲಿರುವ ಬೇಡವಾದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಹಾಗೆಯೇ ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ ಇದ್ದು ಇದನ್ನು ಸೇವಿಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಮಾವಿನ ಹಣ್ಣನ್ನು ನಿಮ್ಮ ಡಯಟ್ ನಲ್ಲಿ ಹೀಗೆ ಉಪಯೋಗಿಸಿ. ಕಚ್ಚಾ ಮಾವಿನ ತಿರುಳನ್ನು ನೂರು ಗ್ರಾಂನಷ್ಟು ಸೇವಿಸಿ ಇದು ಕೇವಲ ಅರವತ್ತು ಕ್ಯಾಲೋರಿಯನ್ನ ಹೊಂದಿರುತ್ತದೆ. ಮಾವಿನ ಹಣ್ಣಿನ ಸೀಕರಣೆ ಮಾಡಿ ಮದ್ಯಾಹ್ನ ಊಟದ ಮಧ್ಯೆ ಸೇವಿಸಬೇಡಿ ಕಾರಣ ಅದಕ್ಕೆ ಸಕ್ಕರೆ ಸೇರಿಸುವುದರಿಂದ ಕ್ಯಾಲೋರಿಸ್ ಅಧಿಕವಾಗಿ ದೇಹದಲ್ಲಿ ಕೊಬ್ಬು ಹೆಚ್ಚಾಗಲು ಕಾರಣವಾಗುತ್ತದೆ.

ಸಂಜೆಯ ಸ್ನ್ಯಾಕ್ಸ್ ಗಾಗಿ ಮಾವಿನ ಹಣ್ಣನ್ನು ಉಪಯೋಗಿಸುವುದರಿಂದ ಆರೋಗ್ಯಕ್ಕೂ ಉತ್ತಮ. ಮತ್ತು ತೂಕವನ್ನು ಇಳಿಸಲು ಸಹಾಯಕರಿಯಾಗಿದೆ. ಪ್ಯಾಕೆಟ್ ಗಳಲ್ಲಿ ಸಿಗುವ ಮಾವಿನ ಉತ್ಪನ್ನಗಳನ್ನ ಸೇವಿಸಬೇಡಿ ಯಾಕೆಂದರೆ ಇದರಲ್ಲಿ ಅತೀ ಹೆಚ್ಚು ಸಕ್ಕರೆ ಅಂಶ ಇರುತ್ತದೆ. ಮಾವಿನ ಹಣ್ಣನ್ನು ಸೇವಿಸುವಾಗ ಯಾವುದೇ ಸಿಹಿಕಾರಕಗಳನ್ನ ಸೇವಿಸದಿರಿ. ಮಾವಿನ ಹಣ್ಣುಗಳನ್ನು ಜ್ಯೂಸ್ ಮಾಡಿ ಸೇವಿಸುವುದರ ಬದಲು ಹಣ್ಣನ್ನು ಹಾಗೆ ಕಚ್ಚಿ ತಿಂದರೆ ಉತ್ತಮ. ಸಿಪ್ಪೆ ಸಮೇತ ಮಾವಿನ ಹಣ್ಣನ್ನು ತಿಂದರೆ ಒಳ್ಳೆಯದು. ಸಿಪ್ಪೆಯಲ್ಲಿ ಫೈಟೋ ಕೆಮಿಕಲ್ ಅಂಶ ಇರುವುದರಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗುವುದನ್ನ ತಡೆಯುತ್ತದೆ ಅಂತ ಸಂಶೋಧನೆಯಿಂದ ತಿಳಿದು ಬಂದಿದೆ. ಒಟ್ಟಿನಲ್ಲಿ ಮಾವು ತಿಂದರೆ ದಪ್ಪಗಾಗುತ್ತೇವೆ ಎನ್ನುವ ಚಿಂತೆ ಬಿಡಿ. ರಸಭರಿತ ಮಾವಿನ ಹಣ್ಣುಗಳನ್ನು ತಿಂದು ದೇಹದ ಅನವಶ್ಯಕ ಕೊಬ್ಬು ಇಳಿಸಿಕೊಳ್ಳಿ. ಈ ಲೇಖನವನ್ನು ಶೇರ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿ.

LEAVE A REPLY

Please enter your comment!
Please enter your name here