ಹತ್ತು ದಿನ ಜೀರಿಗೆ ತಿನ್ನಿರಿ ಆಮೇಲೆ ಮ್ಯಾಜಿಕ್ ನೀವೇ ನೋಡಿ

0
928

ಹತ್ತು ದಿನ ತಪ್ಪದೆ ಜೀರಿಗೆ ಸೇವಿಸಿ ಪರಿಣಾಮ ನೀವೇ ನೋಡಿ. ಮಸಾಲೆ ಪದಾರ್ಥಗಳು ಕೇವಲ ನೀವು ತಯಾರಿಸುವ ಅಡಿಗೆಯನ್ನು ಸುವಾಸನೆ ಭರಿತ ಆಗಿ ಇರುವಂತೆ ಮಾಡುವುದಷ್ಟೇ ಅಲ್ಲ ನಿಮ್ಮ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ದೇಹದ ಎಲ್ಲಾ ಅಂಗಗಳ ಆರೋಗ್ಯಕ್ಕೆ ಜೀರಿಗೆ ತುಂಬಾ ಪ್ರಯೋಜನಕಾರಿ ಪ್ರತಿ ನಿತ್ಯ ನೀವು ಸೇವಿಸುವ ಆಹಾರದಲ್ಲಿ ಜೀರಿಗೆ ಬಳಸಿದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ನಿವಾರಣೆ ಆಗುತ್ತದೆ. ಹಾಗಾಗಿ ಕೇವಲ ಹತ್ತು ದಿನ ಪ್ರತಿ ದಿನ ಜೀರಿಗೆ ಸೇವಿಸಿ ನಿಮ್ಮ ಆರೋಗ್ಯದಲ್ಲಿ ಉಂಟಾಗುವ ಮಹತ್ವದ ಬದಲಾವಣೆ ಗಳನ್ನ ಗಮನಿಸಿ ನೀವೇ ಅಚ್ಚರಿ ಪಡುತ್ತೀರಿ.

ಜೀರಿಗೆ ಜೀರ್ಣ ಕ್ರಿಯೆಗೆ ಸಹಕರಿಸುತ್ತದೆ ಪ್ರತಿ ನಿತ್ಯ ಒಂದು ಚಮಚ ಜೀರಿಗೆ ತಿನ್ನುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಾಕಷ್ಟು ಸಮಸ್ಯೆಗಳು ನಿವಾರಣೆ ಆಗುತ್ತದೆ. ಗ್ಯಾಸ್ಟ್ರಿಕ್ ಸಮಸ್ಯೆ ಇಂದ ಬಳಲುವವರು ಜೀರಿಗೆ ರಾಮಬಾಣ. ಜೀರಿಗೆ ಪುಡಿಯನ್ನು ಮಜ್ಜಿಗೆ ಹಾಗೂ ಸ್ವಲ್ಪ ಉಪ್ಪು ಬೆರೆಸಿ ಕುಡಿದರೆ ಜೀರ್ಣ ಶಕ್ತಿ ಹೆಚ್ಚುತ್ತದೆ ಅಲ್ಲದೆ ಮಲಬದ್ಧತೆ ಅನ್ನು ಹೋಗಲಾಡಿಸುತ್ತದೆ. ಜೀರಿಗೆಯಲ್ಲಿ ವಿಟಮಿನ್ ಇ ಅಂಶ ಹೇರಳವಾಗಿ ಇದೆ ಇದು ರಕ್ತದ ಕೊರತೆ ಎಣ್ಣೆ ಅಂಶ ಮೊದಲಾದ ಸಮಸ್ಯೆ ಇಂದ ಮೂಡುವ ಮೊಡವೆ ಗಳನ್ನೂ ನಿವಾರಿಸಿ ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಚರ್ಮದ ಸುಕ್ಕುಗಟ್ಟುವಿಕೆ ಅನ್ನು ಕಡಿಮೆ ಮಾಡುತ್ತದೆ ಅಲ್ಲದೆ ಜೀರಿಗೆ ಪೇಸ್ಟ್ ಅನ್ನು ಮುಖಕ್ಕೆ ಹಚ್ಚುವುದರಿಂದ ವಯಸ್ಸಾದಂತೆ ಕಾಣುವುದನ್ನು ಕಡಿಮೆ ಮಾಡುತ್ತದೆ.

ಜೀರಿಗೆಯನ್ನು ಬಾಯಿಯಲ್ಲಿಯೆ ಹಾಕಿಕೊಂಡು ಚೆನ್ನಾಗಿ ಅಗಿದು ತಿನ್ನುವುದರಿಂದ ಹಳ್ಳು ನೋವು ಕಡಿಮೆ ಆಗುತ್ತದೆ. ಅರ್ಧ ಚಮಚ ಜೀರಿಗೆ ಅನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ ಆರಿಸಿ ಪ್ರತಿ ನಿತ್ಯ ಕುಡಿಯುವುದರಿಂದ ರಕ್ತ ಶುದ್ದಿ ಆಗುತ್ತದೆ. ಅರ್ಧ ಲೋಟ ನೀರಿಗೆ ಅರ್ಧ ಚಮಚ ಜೀರಿಗೆ ಹಾಕಿ ಕುದಿಸಿ ಶೋಧಿಸಿ ಹಾಲು ಬೆರೆಸಿ ಕಷಾಯ ಬೆರೆಸಿ ಕುಡಿದರೆ ಆರೋಗ್ಯ ಸುಧಾರಿಸುತ್ತದೆ. ಜೀರಿಗೆ ನೀರು ಮತ್ತು ಜೀರಿಗೆ ಕಷಾಯ ರಕ್ತದ ಒತ್ತಡವನ್ನು ಸರಿ ಪಡಿಸುತ್ತದೆ. ಬಾಣಂತಿಯರು ಆಹಾರದಲ್ಲಿ ಜೀರಿಗೆಯನ್ನು ಹೆಚ್ಚಾಗಿ ಸೇವಿಸಿದರೆ ಎದೆಯ ಹಾಲು ವೃದ್ಧಿಸುತ್ತದೆ. ಎರಡು ಚಮಚ ಜೀರಿಗೆ ಗೆ ನೀರು ಬೆರೆಸಿ ರಾತ್ರಿ ಪೂರಾ ನೆನೆಸಿಡಿ ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುದಿಸಿ ಕುಡಿಯಿರಿ ಜೊತೆಯಲ್ಲಿ ಜೀರಿಗೆಯನ್ನು ಅಗೆದು ನುಂಗಿ ಹೀಗೆ ಮಾಡಿದರೆ ನಿಮ್ಮ ತೂಕ ಕಡಿಮೆ ಆಗುತ್ತದೆ.

ಜೀರಿಗೆ ನೀರು ಕುಡಿಯುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದರಿಂದ ರಕ್ತದಲ್ಲಿರುವ ಸಕ್ಕರೆ ಅಂಶ ಕಡಿಮೆ ಆಗುತ್ತದೆ. ಜೀರಿಗೆಯನ್ನು ಉರಿದು ಪುಡಿ ಮಾಡಿ ಬಿಸಿ ನೀರಿನಲ್ಲಿಭಾಲಿ ಕುಡಿಯುವುದರಿಂದ ಕೆಮ್ಮು ಕಫ ನಿವಾರಣೆ ಆಗುತ್ತದೆ. ನೋಡಿದಿರಾ ಸ್ನೇಹಿತರೆ ನಾವು ಪ್ರತಿ ನಿತ್ಯ ಬಳಸುವ ಜೀರಿಗೆ ಅಲ್ಲಿ ಎಂತ ಮೆಡಿಸಿನ್ ಗುಣಗಳು ಹೆಚ್ಚಾಗಿ ಇದೆ ಎಂದು. ನೀವು ಕೂಡ ಮೇಲೆ ತಿಳಿಸಿದಂತೆ ಮನೆಮದ್ದು ಬಳಸಿ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಹಾಗೂ ಶೇರ್ ಮಾಡಲು ಮಾತ್ರ ಮರೆಯಬೇಡಿ.

LEAVE A REPLY

Please enter your comment!
Please enter your name here