ಈ ಟಿಪ್ಸ್ ನಿಮ್ಮ ಜೀವನವನ್ನೇ ಬದಲಾಯಿಸಬಹುದು

0
493

ನಿಮ್ಮಲ್ಲಿ ಕೀಳರಿಮೆ ಮೂಡಿದಾಗ ಈ ಟಿಪ್ಸ್ ಪಾಲಿಸಿ ಅಧ್ಭುತ ಪವಾಡ ಆಗುತ್ತೆ. ತುಂಬಾ ಸಾಧಿಸಿ ಇರೋರನ್ನ ನೋಡೋಕೆ ಚೆನ್ನಾಗಿ ಇರೊರನ್ನ ಜಾಸ್ತಿ ಆಸ್ತಿ ಪಾಸ್ತಿ ಇರೋರನ್ನು ನೋಡಿದಾಗ ಕೆಲವರಿಗೆ ಮುಜುಗರ ಆಗುತ್ತೆ. ಕೆಲವರು ಅವರೂ ನಮ್ಮ ಥರಾನೇ ಮನುಷ್ಯರು ಯೋಗಿ ಪಡೆದದ್ದು ಯೋಗಿಗೆ ಜೋಗಿ ಪಡೆದದ್ದು ಜೋಗಿಗೆ ಅಂತ ನೆಮ್ಮದಿ ಯಾಗಿ ಇರ್ತಾರೆ. ನೀವು ಯಾವ ತರ? ಒಂದು ವೇಳೆ ಅಂತವರನ್ನ ನೋಡಿ ನಿಮ್ಮನ್ನೇ ನೀವೇ ಕೀಳು ಅಂದು ಕೊಳ್ಳುವ ಆಗಿದ್ದರೆ ಇಲ್ಲಿ ನೋಡಿ ನಿಮ್ಮ ಮನಸನ್ನ ಬದಲಾಗಿಸೋಕೆ ಇರುವ ಗುಟ್ಟುಗಳು. ನನ್ನ ತರ ಮತ್ಯಾರು ಇರೋದಕ್ಕೆ ಆಗಲ್ಲ ಹೌದು ರೀ ಎಲ್ಲರೂ ಒಂದೊಂದು ರೀತಿಲಿ ಗ್ರೇಟ್. ನಿಮ್ಮ ತರಹ ಅವರು ಇರೋಕೆ ಆಗಲ್ಲ ಅಂದಮೇಲೆ ಅವರ ಹಾಗೆ ನೀವು ನೀವು ಇಲ್ಲ ಅಂತ ಬೇಜಾರು ಯಾಕೆ ಮಾಡ್ಕೊತೀರಿ. ಭಯ ಅನ್ನೋದು ಯಾರನ್ನು ಬಿಟ್ಟಿಲ್ಲ ಏನನ್ನೋ ಸಾಧಿಸಿದ ವರಿಗೂ ತೃಪ್ತಿ ಇರಲ್ಲ ಅವರಿಗೂ ಅವರದ್ದೇ ಭಯ ಇರುತ್ತೆ. ಹಸಿವು ಬಾಯಾರಿಕೆ ತರ ಭಯ ಕೂಡ ಹಾಗಿರುವಾಗ ನೀವು ಯಾಕೆ ಅವರನ್ನ ನೋಡಿ ಭಯ ಪಡಬೇಕು ಅಲ್ವಾ?

ಭೂಮಿ ಮೇಲೆ ಹುಟ್ಟಿ ಇರುವ ಮನುಷ್ಯರು ಎಲ್ಲಾ ಒಂದೇ. ಅಯ್ಯೋ ಸೆಲೆಬ್ರಿಟಿಗಳು ಆಕಾಶದಿಂದ ಉದುರುವುದಿಲ್ಲ ನೀವು ಅವರನ್ನ ಪ್ರೀತಿ ಇಂದ ಮಾತನಾಡಿಸಿದರೆ ಅವರು ಖುಷಿಯಾಗಿ ಉತ್ತರ ಕೊಡ್ತಾರೆ. ನಿಮ್ಮನ್ನ ಕೀಳಾಗಿ ಅಂತೂ ನೋಡಲ್ಲ. ನಾಚಿಕೆ ಎಲ್ಲರಿಗೂ ಇರುತ್ತೆ ಯಾರನ್ನ ನೋಡಿ ನೀವು ಹೇಗೆ ಉತ್ತರಿಸುವುದು ಅಂತ ಸಂಕೋಚ ಪಟ್ಟಿರುತ್ತೀರಿ. ಮಜಾ ಏನಂದ್ರೆ ನಿಮ್ಮನ್ನ ಮಾತನಾಡಿಸುವುದು ಹೇಗಪ್ಪಾ ಎಂದು ಕುದಾನೆ ಅವರು ಕೂಡ ಮಾತಾಡಿರಲ್ಲ. ಯಾರಾದ್ರೂ ಒಬ್ರು ಮುನ್ನುಗ್ಗಬೇಕು ಆಗ್ಲೇ ಜನರ ಜೊತೆ ಬೇರೆಯೂಕೆ ಆಗೋದು. ಸುಮ್ಮನೆ ಕೊರಗುವುದು ಬಿಡಿ ಸುಮಸುಮ್ನೆ ಕೊರಗೊಡು ಬಿಟ್ರೆ ಅರ್ಧ ಗೆದ್ದಂತೆ ಚಿಂತೆ ಇಂದಾನೆ ನೀವು ಪೆಕ್ರು ಪೆಕ್ರಾಗಿ ಕಾಣೋದು. ಚಿಂತೆ ಬಿಟ್ಟು ನೋಡಿ ನಿಮ್ಮ ಮೇಲೆ ನಿಮಗೆ ಲವ್ ಆಗತ್ತೆ.

ಅಬ್ಬಬ್ಬಾ ಅಂದ್ರೆ ಏನಾಗುತ್ತೆ ಪ್ರತಿ ಸಲ ಈ ಪ್ರಶ್ನೆ ನೀವು ಕೇಳಿಕೊಂಡಾಗ ಲೂ ನಿಮಗೆ ಧೈರ್ಯ ಹೆಚ್ಚಾಗುತ್ತೆ ಎಲ್ಲರಿಗೂ ಆಗೋದೇ ನಿಮಗೂ ಆಗೋದು ಅದರಲ್ಲಿ ಏನಿದೆ ಹುಟ್ಟಿಸಿದ ದೇವರು ಹುಲ್ಲು ಮೆಯಿಸೋಲ್ವಾ ಅಷ್ಟಾಂತೂ ಸತ್ಯ. ಒಳ್ಳೇದು ಆಗೋ ಬಗ್ಗೆ ಹೆಚ್ಚು ಯೋಚನೆ ಮಾಡಿ ಬರೀ ಕೆಟ್ಟದ್ದೇ ಆಗಲ್ಲ ಜೀವನ ಅಂದಮೇಲೆ ಒಳ್ಳೇದು ಕೆಟ್ಟದ್ದು ಇದ್ದೆ ಇರುತ್ತೆ ಎಷ್ಟು ಒಳ್ಳೆದಾಗಬಹುದು ಅಂತ ಕನಸು ಕಾಣಬೇಕು. ಯಾರಿಗೆ ಗೊತ್ತು ನಾಳೆ ನೀವು ಯಾರು ಕಲ್ಪನೇನೆ ಮಾಡದೆ ಇರೋ ಅಷ್ಟು ಸಾಧನೆನೇ ಮಾಡಬಹುದು. ಒಂದಂತೂ ನಿಜ ನಿಮ್ಮ ಅನುಮತಿ ಇಲ್ಲದೆ ಯಾರು ನಿಮ್ಮನ್ನ ಕೀಳಾಗಿ ಕಾಣವುದು ಸಾಧ್ಯ ಇಲ್ಲ. ನಿಮ್ಮನ್ನ ನೀವು ಇಷ್ಟ ಪಡಿ ಗೌರವಿಸಿ ಬೇರೆಯವರು ನಿಮ್ಮನ್ನ ಗೌರವ ಮತ್ತು ಪ್ರೀತಿ ಇಂದ ನಡೆಸಿ ಕೊಳ್ಳುತ್ತಾರೆ.

LEAVE A REPLY

Please enter your comment!
Please enter your name here