ಪಬ್ ಜಿ ಗೇಮ್ ನಿಂದ ಮೆಂಟಲ್ ಆದ ಯುವಕ

0
704

ಪಬ್ ಜಿ ಗೇಮ್ ಈ ಪಬ್ ಜಿ ಗೇಮ್ ಎಂಬುದು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ ಈಗಂತೂ ಈ ಗೇಮನ್ನು ಸಣ್ಣ ಮಕ್ಕಳಿನಿಂದ ಹಿಡಿದು ವಯೋವೃದ್ಧರ ತನಕ ಈ ಆಟವನ್ನು ಆಡುತ್ತಾ ಇದ್ದಾರೆ. ಸುಮಾರು ಹೀಗೆ ಒಂದು ವರ್ಷದ ಹಿಂದೆ ಬಂದಂತಹ ಈವೊಂದು ಗೇಮ್ ಅಷ್ಟು ಜನಪ್ರಿಯಗೊಳ್ಳುತ್ತದೆ ಎಂಬುದು ಯಾರಿಗೂ ಊಹಿಸಲು ಸಹ ಸಾಧ್ಯವಿರಲಿಲ್ಲ. ಆದರೆ ಈವೊಂದು ಗೇಮ್ ನಿಜಕ್ಕೂ ಇಂದು ಊಹೆಗೆ ಮೀರಿ ಎಲ್ಲಾ ಕಡೆಯಲ್ಲೂ ಪ್ರಸಿದ್ದಿಯನ್ನ ಪಡೆದಿದೆ. ಈ ಮುಂಚೆ ಕ್ಯಾಂಡಿ ಕ್ರಶ್ ಟೆಂಪಲ್ ರನ್ ಹೀಗೆ ಹಲವು ಗೇಮ್ ಗಳಿಗೆ ಜನರು ಒಂದಿಷ್ಟು ಅಡ್ಡಿಕ್ಟ್ ಆಗಿದ್ದರು. ಆದರೂ ಸಹ ಈವೊಂದು ಮೈನ್ಡ್ ಗೇಮ್ ಗಳು ಅಷ್ಟಾಗಿ ಏನು ಜನರರನ್ನು ಸಮಸ್ಯೆಗೆ ಸಿಲುಕಿಸರಲಿರಲಿಲ್ಲ. ಆದರೆ ಇದೀಗ ಪಬ್ ಜಿ ಎನ್ನುವ ಒಂದು ಗೇಮ್ ಸಾಕಷ್ಟು ಸಮಸ್ಯೆಗಳನ್ನು ಉಂಟು ಮಾಡಿರುವುದು ನಿಮಗೆ ತಿಳಿದೇ ಇದೆ.

ಇತ್ತೀಚೆಗಷ್ಟೇ ನಮ್ಮ ಸುಪ್ರೀಂಕೋರ್ಟ್ ನಲ್ಲಿ ಟಿಕ್ ಟಾಕ್ ಎಂಬ ಒಂದು ಅಪ್ಲಿಕೇಶನ್ ನನ್ನು ಬಾನ್ ಮಾಡಿದ್ದರು ಏಕೆಂದರೆ ಈ ಒಂದು ಅಪ್ಲಿಕೇಶನ್ ನಿಂದ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂದು ನಿಮಗೆ ತಿಳಿದ ವಿಚಾರ. ಹಾಗೆಯೇ ಬಾನ್ ಮಾಡಿದ ನಂತರ ಹಲವು ನಿಯಮಗಳನ್ನು ಹಾಕಿಕೊಂಡು ನಂತರ ಈವೊಂದು ಟಿಕ್ ಟಾಕ್ ನಲ್ಲಿನ ನಿಷೇಧವನ್ನು ಹಿಂಪಡೆದರು. ಇದೇ ರೀತಿ ಈಗ ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿರುವ ಸುದ್ದಿ ಏನಂತೆಂದರೆ ಪಬ್ ಜಿ ಗೇಮ್ ಅನ್ನು ಸಹ ಸಂಪೂರ್ಣವಾಗಿ ಬಾನ್ ಮಾಡಿ ಎಂದು ಸಾಕಷ್ಟು ಪೋಷಕರು ಇದರಿಂದ ಸಮಸ್ಯೆಗೆ ಗೀಡಾದವರು ಸರ್ಕಾರಕ್ಕೆ ಒತ್ತಾಯ ಮಾಡುತ್ತ ಇದ್ದಾರೆ. ಇದರಲ್ಲಿ ಬಾನ್ ಪಬ್ ಜಿ ಗೇಮ್ ಎಂಬ ಒಂದು ಹಾಶ್ ಟಾಗ್ ನೊಂದಿಗೆ ಸಾಕಷ್ಟು ಜನರು ಒಂದು ತಮ್ಮ ಸ್ವಇಚ್ಛೆಯಿಂದ ಈವೊಂದು ಆಟದ ವಿರುದ್ಧ ಕಿಡಿಕಾರಿದ್ದಾರೆ.
ಆದರೆ ಮತ್ತೊಂದು ಕಡೆ ಜನರು ಹೇಳುವ ಪ್ರಕಾರ ಈ ಗೇಮ್ ಅನ್ನು ಪ್ರತಿನಿತ್ಯ ಆಡುವುದರಿಂದ ನಮಗೆ ಮಾನಸಿಕ ಸಂತೋಷ ಸಿಗುತ್ತದೆ. ಮತ್ತು ನಮ್ಮ ಹಲವು ರೀತಿಯ ಕಷ್ಟಗಳನ್ನು ನಾವು ಮರೆಯುತ್ತೇವೆ ಎಂದು ಒಂದು ವರ್ಗದ ಜನ ತಿಳಿಸಿದ್ದಾರೆ. ಆದರೆ ಏನೇ ಇರಲಿ ಇತ್ತೀಚೆಗೆ ಒಂದು ಘಟನೆ ನಡೆದಿದೆ. ಅದು ಏನಪ್ಪಾ ಅಂದರೆ ಒಬ್ಬ ಶಾಲಾ ವಿದ್ಯಾರ್ಥಿ ಅತೀ ಹೆಚ್ಚು ಅಂಕಗಳನ್ನು ಪಡೆಯುವನು ಈವೊಂದು ಆಟದ ಹುಚ್ಚಿಗೆ ಬಿದ್ದು ಸಾಕಷ್ಟು ಸಮಯ ಈವೊಂದು ಪಬ್ ಜಿ ಆಟವನ್ನು ಆಡುತ್ತಾ ಆಡುತ್ತಾ ಹೆಚ್ಚಿನ ರೀತಿಯಲ್ಲಿ ಮಂಕಾಗಿ ಹೋಗಿದ್ದಾನೆ. ಶಾಲೆಗೆ ಹೋಗುವುದಿಲ್ಲ ಎಂದು ಹಠ ಮಾಡುತ್ತಾನೆ.

ಪ್ರತಿನಿತ್ಯ ಸುಮಾರು ಎಂಟರಿಂದ ಒಂಬತ್ತು ತಾಸು ಈವೊಂದು ಗೇಂನಲ್ಲಿ ಹಲವೊರೊಂದಿಗೆ ಮಾತನಾಡುತ್ತ ಈ ಪಬ್ ಜಿ ಗೇಮನ್ನು ಆಡುತ್ತಾ ಕುಳಿತಿರುತ್ತಾನೆ. ಸಾಕಷ್ಟು ಸಮಯ ಮಂಕಾಗಿ ಕುಳಿತಿರುತ್ತಾನೆ. ಇದನ್ನು ಮಾನಸಿಕ ವ್ಯದ್ಯರಲ್ಲಿ ತೋರಿಸಿದಾಗ ಈತನಿಗೆ ಹಲವು ರೀತಿಯ ಮಾನಸಿಕ ಸಮಸ್ಯೆಗಳು ಇರುವುದು ಕಂಡು ಬಂದಿದೆ. ಹೀಗೆ ನಮ್ಮಲ್ಲಿ ಸಾಕಷ್ಟು ವಿಧವಾದ ಗೇಮ್ ಗಲಿದೆ. ಒಂದು ವರ್ಗದ ಜನರು ಪಬ್ ಜಿ ಗೇಮ್ ಅನ್ನು ನಿಷೇಧ ಮಾಡಿ ಎಂದು ಹೇಳಿದರೆ ಮತ್ತೆ ಕೆಲವರು ಇದರಿಂದ ಸಮಸ್ಯೆ ಇಲ್ಲ ಎಂದು ಹೇಳುತ್ತಾರೆ. ಯಾವಾಗ ಯಾವುದೇ ಆಟವಿರಲಿ ನಾವು ಅದನ್ನು ಹೆಚ್ಚಿನ ಸಮಯ ಅದಕ್ಕೆ ನಮ್ಮ ಒಂದು ಸಮಯವನ್ನು ಕೊಟ್ಟು ನಮ್ಮ ಮನಸ್ಸಿನ ಸ್ಥಿತಿಯನ್ನು ಕಂಟ್ರೋಲ್ ತಪ್ಪಿದರೆ ಮಾತ್ರ ನಮಗೆ ಮಾನಸಿಕ ಸಮಸ್ಯೆ ಉಂಟಾಗುತ್ತದೆ. ನಮ್ಮ ಈವೊಂದು ಆನ್ ಲೈನ್ ಆಟಗಳು ಮತ್ತು ಎಲ್ಲವೂ ಸಹ ಇರುವುದು ನಮ್ಮ ಬೇಜಾರಿನ ಸಮಯದಲ್ಲಿ ಅದನ್ನು ತೊಲಗಿಸಲು. ಆದ್ದರಿಂದ ನಿಮಗೆ ಯಾವುದೇ ಆಟವಿರಲಿ ನಿಯಮಿತವಾಗಿ ಆಟವನ್ನು ಆಡಿರಿ ಮತ್ತು ಹೆಚ್ಚಿನ ಸಮಯ ಅದರಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಬೇಡಿ. ಏಕೆಂದರೆ ಯಾರ ಮನಸ್ಥಿತಿ ಹೇಗಿರುತ್ತದೆ ಎಂದು ನಿಜಕ್ಕೂ ತಿಳಿದಿರಲು ಸಾಧ್ಯವಿಲ್ಲ. ಒಬ್ಬೊಬ್ಬರಿಗೆ ಒಂದೊಂದು ಮನಸ್ಥಿತಿ ಇರುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯ ಪ್ರಭಾವ ಬೀರುತ್ತದೆ.

ಹಲವು ಜನಕ್ಕೆ ಈಗಾಗಲೇ ಪಬ್ ಜಿ ಗೇಮ್ ನಿಂದ ಮಾನಸಿಕ ಸಮಸ್ಯೆಗಳು ಆಗಿರುವುದು ಸಾಕಷ್ಟು ಪ್ರಕರಣಗಳು ಕಂಡು ಬಂದಿದೆ. ಅದಕ್ಕಾಗಿಯೇ ಈವೊಂದು ಪಬ್ ಜಿ ಗೇಮ್ ಅನ್ನು ಸಂಪೂರ್ಣವಾಗಿ ನಿಷೇಧ ಮಾಡಬೇಕೆಂಬುದು ಕೇಂದ್ರ ಸರ್ಕಾರಕ್ಕೆ ಹಲವರು ಒತ್ತಾಯಿಸುತ್ತಿದ್ದಾರೆ. ಆದರೂ ನಿಯಮಿತವಾಗಿ ಆಡಿದರೆ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಕಂಡಿತಾ ನೀವು ಸಹಾ ಈವೊಂದು ಆಟವನ್ನು ಅಡುತ್ತಿದ್ದರೆ ಒಂದು ನಿಗದಿತ ಸಮಯ ಮಾಡಿಕೊಂಡು ಆ ಸಮಯದ ಚೌಕಟ್ಟಿನಲ್ಲಿ ಈ ಆಟವನ್ನು ಆಡಿದರೆ ನಿಮಗೂ ಸಹ ಯಾವುದೇ ಸಮಸ್ಯೆಗಳು ಬರುವುದಿಲ್ಲ. ನಿಮ್ಮ ವಿದ್ಯಾರ್ಥಿಗಳ ಮೊದಲ ಆದ್ಯತೆ ತಮ್ಮ ಓಡಿನೊಳಗೆ ತೊಡಗಿಸಿಕೊಂಡು ಸಿಕ್ಕ ಅಲ್ಪ ಸಮಯದಲ್ಲಿ ಸ್ವಲ್ಪ ಮಾತ್ರವೇ ಆಟವನ್ನು ಆಡಿ ನಿಮ್ಮ ಆರೋಗ್ಯವನ್ನು ಉತ್ತಮವಾಗಿ ಇಟ್ಟುಕೊಂಡು ನಿಮ್ಮ ಭವಿಷ್ಯದ ಮುಂದಿನ ಚಿಂತನೆಗಳ ಬಗ್ಗೆ ಹೆಚ್ಚಿನ ಕನಸುಗಳನ್ನು ಕಾಣುತ್ತ ನಿಮ್ಮ ಜೀವನವನ್ನು ರೂಪಿಸಿಕೊಳ್ಳುವುದು ನಿಮ್ಮ ಕೈಯಲ್ಲಿ ಇದೆ. ಪಬ್ ಜಿ ಆಟ ಆಡುವವರ ಒಂದು ಎಲ್ಲಾ ಸ್ನೇಹಿತರಿಗೂ ಈವೊಂದು ಮಾಹಿತಿಯನ್ನು ಮರೆಯದೇ ಶೇರ್ ಮಾಡಿರಿ.

LEAVE A REPLY

Please enter your comment!
Please enter your name here