ನಿಮ್ಮ ಹೆಸರು R ಅಕ್ಷರದಿಂದ ಶುರು ಆಗುತ್ತೆ ಅಂದ್ರೆ ತಪ್ಪದೇ ತಿಳಿಯಿರಿ

0
930

ಪ್ರತಿಯೊಬ್ಬರ ಜೀವನದಲ್ಲೂ ತಮ್ಮ ಹೆಸರು ಬಹಳಷ್ಟು ಮಹತ್ತರವಾದ ಸ್ಥಾನವನ್ನ ಪಡೆಯುತ್ತದೆ. ಹಾಗೆಯೇ ನಮ್ಮ ಹೆಸರು ಯಾವ ಒಂದು ಅಕ್ಷರದಿಂದ ಶುರುವಾಗುತ್ತೇ ಅನ್ನುವುದು ಅಷ್ಟೇ ಮುಖ್ಯ ಯಾಕೆಂದರೆ ನಮ್ಮ ಹೆಸರನ್ನು ಕೂಗುವ ಮೊದಲು ಆ ಅಕ್ಷರದಿಂದಲೇ ನಮ್ಮನು ಕರೆಯುತ್ತಾರೆ. ಆದ್ದರಿಂದ ನಮ್ಮ ಮೇಲೆ ಅದರ ಪರಿಣಾಮ ಬಹಳಷ್ಟು ಹೆಚ್ಚಾಗಿ ಆಗುತ್ತದೆ. ಆದ್ದರಿಂದ ನಮ್ಮ ಉನ್ನತಿಗೆ ನಮ್ಮ ಹೆಸರೇ ಮುಖ್ಯವಾದ ಕಾರಣ ಆಗಿರುತ್ತೆ. ಆದ್ದರಿಂದ ನಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗಿದೆ ಆ ಅಕ್ಷರದಿಂದ ಶುರುವಾದರೆ ನಮಗೆ ಯಾವ ರೀತಿಯ ಲಾಭಾಗಳಿದಾವೇ ಅಂತ ನಾವು ತಿಳ್ಕೋಬೇಕು ಅದನ್ನ ತಿಳಿದುಕೊಂಡರೆ ನಮಗೆ ಬಹಳಷ್ಟು ಒಳ್ಳೆಯ ಅವಕಾಶಗಳು ಸಹ ದೊರೆಯೋದಕ್ಕೆ ಸಾಧ್ಯವಾಗುತ್ತೆ. ನಾವು ಈ ಲೇಖನದಲ್ಲಿ ಆರ್ ಅಕ್ಷರದ ಬಗ್ಗೆ ಹೇಳಲು ಹೊರಟಿದ್ದೇವೆ. ನಿಮ್ಮ ಹೆಸರು ಆರ್ ಅಕ್ಷರದಿಂದ ಶುರುವಾದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಯಾಕೆಂದರೆ ಆರ್ ಅಕ್ಷರದ ಹೆಸರಿನಿಂದ ಇರುವವರು ಯಾವ ರೀತಿ ಇರುತ್ತಾರೆ ಎಂಬುದು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ಆರ್ ಅಕ್ಷರದವರಿಗೆ ಸಂಖ್ಯಾ ಶಾಸ್ತ್ರದ ಪ್ರಕಾರ ಶುಭ ಸಂಖ್ಯೆ ಎಂದರೆ ಎರಡು. ಎರಡನ್ನ ಚಂದ್ರನ ಸಂಖ್ಯೆ ಅಂತಾನೆ ಕರೆಯುತ್ತಾರೆ.

ಬಹಳಷ್ಟು ಪಾಸ್ಸಿಟಿವ್ನೆಸ್ ಮತ್ತು ಶಾಂತತೆಯಿಂದ ಕೂಡಿರುತ್ತಾರೆ ಅಂತಲೂ ಸಹ ಹೇಳಬಹುದು. ಆರ್ ಅಕ್ಷರದಿಂದ ಶುರುವಾಗುವ ವ್ಯಕ್ತಿಗಳು ಆದಷ್ಟು ಮೀಡಿಯಾ ಸಿನಿಮಾ ಮಾಡೆಲಿಂಗ್ ಪತ್ರಿಕೋದ್ಯಮ ಇದೇ ರೀತಿಯ ಹೆಚ್ಚು ಹೆಚ್ಚು ಮೀಡಿಯಾ ರಿಲೇಟೆಡ್ ಪ್ರವೃತ್ತಿಗಳನ್ನ ಆಯ್ಕೆ ಮಾಡಿಕೊಳ್ಳುತ್ತಾರೆ. ಹಾಗೂ ಬಹಳಷ್ಟು ಕಲಾತ್ಮಕ ರೀತಿಯಲ್ಲಿ ಅವರ ಯೋಚನೆ ಇರೋದರಿಂದ ಅವರಿಗೆ ಈ ಕ್ಷೇತ್ರ ಬಹಳಷ್ಟು ಉತ್ತಮ ಅಂತಲೂ ಸಹ ಹೇಳಬಹುದು. ತಮ್ಮ ಕೆರಿಯರ್ ಬಗ್ಗೆ ತಾವು ಈ ಕ್ಷೇತ್ರದಲ್ಲಿ ಸ್ವಲ್ಪ ಹೆಚ್ಚು ಗಮನ ಕೊಟ್ಟರೆ ನೀವು ಬಹಳಷ್ಟು ಉನ್ನತ ಮಟ್ಟಕ್ಕೆ ಹೋಗುತ್ತೀರ ಅನ್ನೋದರಲ್ಲಿ ಎರಡು ಮಾತೇ ಇಲ್ಲ. ಇನ್ನು ಆರ್ ಅಕ್ಷರದಿಂದ ಶುರುವಾಗುವ ವ್ಯಕ್ತಿಗಳು ಬಹಳಷ್ಟು ನಿಷ್ಟಾವಂತರೂ ಬುದ್ಧಿವಂತರು ಸಾಹನುಭೂತಿಗಳು ಅಂತನೇ ಹೇಳಬಹುದು. ಅವರು ತಮ್ಮ ಎದುರಿಗಿರುವ ಇರುವ ವ್ಯಕ್ತಿಗಳೊಂದಿಗೆ ಹೆಚ್ಚು ಒಲವು ಪ್ರೀತಿ ಮತ್ತು ಅಕ್ಕರೆಯಿಂದ ನಡೆದುಕೊಳ್ಳುತ್ತಾರೆ.

ಹಾಗೆ ಯಾವುದೇ ರೀತಿಯಾದ ದುಷ್ಟಚಟಗಳಿರದ ಇವರು ಬೇರೆಯವರನ್ನು ಪ್ರೀತಿ ಮತ್ತು ಆದರದಿಂದ ಕಾಣುತ್ತಾರೆ. ಆದರೆ ಇವರಿಗೆ ಇರುತ್ತಕ್ಕಂತ ಒಂದು ಕೆಟ್ಟ ವಿಷಯ ಏನಂತೆಂದರೆ ತಾವು ಯಾವಾಗಲೂ ಮೊದಲಿರಬೇಕು ಮೊದಲನೇ ಸ್ಥಾನ ನನಗೆ ಇರಬೇಕು ಅನ್ನೋ ಹಠ ಮತ್ತು ಹಂಬಲ ಇವರದ್ದಾಗಿರುತ್ತೆ. ಆದ್ದರಿಂದ ಯಾವುದೇ ಒಂದು ಸವಾಲನ್ನು ಸಹ ಬಹಳಷ್ಟು ಹೆಚ್ಚಾಗಿ ಸ್ವೀಕರಿಸಿ ಆ ಸವಾಲುಗಳಲ್ಲಿ ಮೊದಲು ಬಂದು ತಮ್ಮ ಸ್ಥಾನವನ್ನು ಖಚಿತಪಡಿಸಿಕೊಳ್ಳುತ್ತಾರೆ. ಮತ್ತು ಯಾವುದೇ ಒಂದು ಕಷ್ಟದಲ್ಲೂ ಸಹ ಮುಂದೆ ಬಂದು ನಿಲ್ಲುತ್ತಾರೆ. ಇವರು ಇದ್ದ ಕಡೆ ಶಾಂತಿ ಮತ್ತು ನೆಮ್ಮದಿ ಸದಾ ಕಾಲ ನೆಲೆಸಿರುತ್ತದೆ ಆದ್ದರಿಂದ ಅವರು ಇರುವ ಕಡೆ ಶಾಂತಿ ಮತ್ತು ನಗುವನ್ನ ಸದಾ ಕಾಲ ಹಂಚುತ್ತಾರೆ. ಹಾಗೆಯೇ ಇವರು ಶಾಂತಿಯಿಂದ ಎಲ್ಲರ ಮನಸ್ಸನ್ನ ಗೆದ್ದು ಪ್ರೀತಿಯಿಂದ ಎಲ್ಲರ ಜೊತೆ ಎಲ್ಲರ ನಡುವೆ ಬಾಳುತ್ತಾರೆ. ಇದಿಷ್ಟು ಆರ್ ಅಕ್ಷರದಿಂದ ಹೆಸರಿರುವ ವ್ಯಕ್ತಿತ್ವ. ಈ ಲೇಖನವನ್ನ ಶೇರ್ ಮಾಡಿ ಮತ್ತು ನಿಮ್ಮ ಸ್ನೇಹಿತರಿಗೂ ತಿಳಿಸಿರಿ.

LEAVE A REPLY

Please enter your comment!
Please enter your name here