ಪವಾಡ ಮಾಡುವ ಜಗನ್ನಾಥ ಸ್ವಾಮಿ ಬಗ್ಗೆ ತಿಳಿಯಿರಿ

0
439

ನಮ್ಮ ಭಾರತದ ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಅತ್ಯದ್ಭುತ ವಾಸ್ತು ಶ್ಯೆಲಿಯಲ್ಲಿ ನಿರ್ಮಾಣವಾದಂತಹ ಸಾಕಷ್ಟು ಐತಿಹಾಸಿಕ ಸ್ಥಳಗಳು ಹಾಗೂ ದೇವಸ್ಥಾನಗಳಿವೆ. ಅಂತಹ ಅದ್ಬುತ ಇತಿಹಾಸ ಇರುವಂತಹ ಒರಿಸ್ಸಾ ರಾಜ್ಯದಲ್ಲಿರುವ ಇಂದಿಗೂ ಸಹ ಪವಾಡಗಳನ್ನು ಮಾಡುತ್ತಾ ಇರುವ ಪೂರಿ ಜಗನ್ನಾಥ ದೇವಸ್ಥಾನವೂ ಒಂದು. ಇದು ಬಂಗಾಳಕೊಳ್ಳಿಯ ಸಮುದ್ರದ ಸಮೀಪದಲ್ಲಿದೆ. ಇದು ಅತೀ ಪ್ರಾಚೀನ ಪ್ರಮುಖ ಹಿಂದೂ ದೇವಾಲಯವಾಗಿದೆ. ಈ ದೇವಾಲಯ ಕಟ್ಟಿದ ಆಗಿನಿಂದ ಈಗಿನವರೆಗೂ ಎಷ್ಟೋ ಅದ್ಭುತಗಳು ಇಲ್ಲಿ ನಡೆಯುತ್ತಲೇ ಇವೆ. ಅವು ಈಗಿನ ವಿಜ್ಞಾನಕ್ಕೂ ಸವಾಲಾಗಿ ಸಾಕಷ್ಟು ವಿಷಯಗಳಲ್ಲಿ ಜನಗಳಿಗೆ ಆಶ್ಚರ್ಯವನ್ನು ಉಂಟುಮಾಡುತ್ತಿದೆ. ಅದಕ್ಕೆ ಕಾರಣ ಏನೆಂದು ನಾವು ಈಗ ತಿಳಿದುಕೊಳ್ಳೋಣ. ಇಲ್ಲಿ ದೇವಸ್ಥಾನದ ಶಿಖರದ ಮೇಲೆ ದೊಡ್ಡ ಸುದರ್ಶನ ಚಕ್ರವು ಕಾಣಿಸುತ್ತದೆ. ನೀವು ಆ ಪ್ರದೇಶದ ಯಾವುದೇ ಮೂಲೆಯಿಂದ ನೋಡಿದರು ಆ ಚಕ್ರವು ನಿಮ್ಮ ಕಡೆಯೇ ಕಾಣಿಸುತ್ತದೆ. ಆ ದಿನಗಳಲ್ಲಿ ಯಾವ ಟೆಕ್ನಾಲಜಿಯನ್ನು ಬಳಸಿ ಆ ಚಕ್ರವನ್ನು ನಿರ್ಮಿಸಿದ್ದಾರೋ ಗೊತ್ತಿಲ್ಲ. ಇದೊಂದು ಅದ್ಬುತ ಜಗನ್ನಾಥ ದೇವಸ್ಥಾನದ ಗೋಪುರದ ಮೇಲೆ ಒಂದು ದೊಡ್ಡ ಬಾವುಟವನ್ನು ಕಟ್ಟಿರುತ್ತಾರೆ.

ಈ ಬಾವುಟ ಗಾಳಿಯ ವಿರುದ್ಧ ದಿಕ್ಕಿಗೆ ಹಾರಡುತ್ತದೆ. ಇದೊಂದು ದೊಡ್ಡ ವಿಶೇಷ. ಸಾಮಾನ್ಯವಾಗಿ ಗಾಳಿ ಬೀಸುವ ಕಡೆಗೆ ಬಾವುಟ ಹಾರಡುವುದು ಸರ್ವೇ ಸಾಮಾನ್ಯ ಆದರೆ ಗೋಪುರದ ಮೇಲೆ ಇರುವ ಈ ಬಾವುಟ ವಿರುದ್ಧ ದಿಕ್ಕಿನಲ್ಲಿ ಹಾರುವುದನ್ನು ಇಲ್ಲಿಯವರೆಗೂ ಯಾರಿಂದಲೂ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಈ ಗೋಪುರದ ಮೇಲಿನಿಂದ ಯಾವುದೇ ವಿಮಾನವು ಹಾದು ಹೋಗುವುದಿಲ್ಲ. ಆದರೆ ಇದು ವಿಶೇಷ ಅನಿಸದೆ ಇರಬಹುದು. ಆ ಮಾರ್ಗದಲ್ಲಿ ಹೋಗುವ ವಿಮಾನವನ್ನು ಬೇರೆ ಮಾರ್ಗವಾಗಿ ಕಳುಹಿಸಬಹುದು. ಇದು ಮಾನವನ ಕೈಯಲ್ಲಿ ಇದೆ. ಆದರೆ ಈ ಗೋಪುರದ ಮೇಲೆ ಯಾವುದೇ ಕಾಗೆ ಹದ್ದು ಪಾರಿವಾಳ ಇಂತಹ ಯಾವ ಪಕ್ಷಿಗಳು ಈ ಗೋಪುರದ ಮೇಲಿನಿಂದ ಹಾದು ಹೋಗುವುದಿಲ್ಲ. ಸಾಮಾನ್ಯವಾಗಿ ನಾವು ಸಮುದ್ರ ಅಲೆಗಳ ಏರಿಳಿತಗಳನ್ನು ಬೆಳಗ್ಗೆಯಿಂದ ಸಂಜೆಯವರೆಗೆ ನೋಡುತ್ತೇವೆ ಸಮುದ್ರದ ಮೇಲೆ ಬೀಸುವ ಗಾಳಿ ಭೂಮಿ ಕಡೆ ಬರುತ್ತದೆ. ಆದರೆ ಈ ಪುಣ್ಯಕ್ಷೇತ್ರದ ಬಳಿ ಸಮುದ್ರಕ್ಕೆ ವಿರುದ್ಧ ದಿಕ್ಕಿನಲ್ಲಿ ಗಾಳಿ ಬೀಸುತ್ತದೆ. ಪೂರಿ ಜಗನ್ನಾಥನ ದೇವಸ್ಥಾನದ ಪ್ರಾಂಗಣದಲ್ಲಿ ತಯಾರಿಸಿದ ಪ್ರಸಾದವು ವರ್ಷ ಪೂರ್ತಿ ಇಟ್ಟರು ಕೆಡದೆ ಇರುತ್ತದಂತೆ. ಇಲ್ಲಿ ತಯಾರಿಸಿದ ಪ್ರಸಾದವನ್ನು ಸುಮಾರು ಎರಡರಿಂದ ಇಪ್ಪತ್ತು ಲಕ್ಷ ಜನರಿಗೆ ಹಂಚಬಹುದಂತೆ. ಇಲ್ಲಿ ಪ್ರಸಾದವನ್ನು ಹೆಚ್ಚು ಮಾಡದೆ ಕಡಿಮೆಯೂ ಮಾಡದೆ ಸರಿಯಾಗಿ ಸರಿ ಹೋಗುವ ರೀತಿಯಲ್ಲಿ ಪ್ರಸಾದವನ್ನು ತಯಾರಿಸುತ್ತಾರಂತೆ.

ಪ್ರಪಂಚದಲ್ಲಿ ಎಲ್ಲಿಯೂ ಈ ರೀತಿ ವಿಚಿತ್ರವಾಗಿ ಏಳು ಮಣ್ಣಿನ ಮಡಿಕೆಯಲ್ಲಿ ಪ್ರಸಾದ ತಯಾರಿಸುವುದಿಲ್ಲ. ಆದರೆ ಈ ಪುಣ್ಯಕ್ಷೇತ್ರದಲ್ಲಿ ಏಳು ಮಣ್ಣಿನ ಮಡಿಕೆಯನ್ನು ಒಂದರ ಮೇಲಂತೆ ಒಂದನ್ನಿಟ್ಟು ಕೆಳಗೆ ಬೆಂಕಿ ಹಾಕುತ್ತಾರೆ. ಕೆಳಗೆ ಬೆಂಕಿ ಇದ್ದರೂ ಸಹ ಮೊದಲು ಮೇಲಿನ ಮಡಿಕೆಯ ಪ್ರಸಾದವೇ ಮೊದಲು ಬೇಯುತ್ತದಂತೆ. ಒಂದರ ನಂತರ ಒಂದು ಕಡೆಯದಾಗಿ ಕೆಳಗೆ ಇರುವ ಮಡಿಕೆಯ ಪ್ರಸಾದ ಬೇಯುತ್ತದಂತೆ. ಈ ರೀತಿಯ ವಿಚಿತ್ರ ಪ್ರಪಂಚದ ಯಾವುದೇ ಭಾಗದಲ್ಲೂ ನೋಡಲಿಕ್ಕೆ ಸಾಧ್ಯವಿಲ್ಲ. ಇಲ್ಲಿ ದೇವಸ್ಥಾನದ ಹತ್ತಿರವೇ ದೊಡ್ಡ ಸಮುದ್ರ ಇರುತ್ತದೆ. ದೇವಸ್ಥಾನ ಪ್ರವೇಶ ಮಾಡಲು ಒಂದು ದೊಡ್ಡ ಪ್ರವೇಶದ್ವಾರ ಇರುತ್ತದೆ. ಇದನ್ನೇ ಸಿಂಹದ್ವಾರ ಎಂತಲೂ ಕರೆಯುತ್ತಾರೆ. ಈ ಪ್ರವೇಶದ್ವಾರ ಪ್ರವೇಶ ಮಾಡಿ ಪ್ರದಕ್ಷಿಣೆ ಮಾಡಿದ ತಕ್ಷಣ ನಿಮಗೆ ಯಾವುದೇ ರೀತಿಯ ಸಮುದ್ರದ ಶಬ್ದಗಳಾಗಲಿ ಗಾಳಿಯಾಗಲಿ ಕೇಳಿಸುವುದಿಲ್ಲವಂತೆ. ಇಲ್ಲಿ ನವತ್ತೈದು ಅಂತಸ್ತು ಇರುವ ಗೋಪುರದ ಮೇಲೆ ಆಗಾಗ ಬಾವುಟವನ್ನು ಅಲ್ಲಿನ ಮುಖ್ಯ ಅರ್ಚಕರು ಮೇಲೆ ಹತ್ತಿ ಬಡಲಾಯಿಸುತ್ತಿರುತ್ತಾರಂತೆ. ಈ ರೀತಿ ಬದಲಾಯಿಸದೆ ಇದ್ದರೆ ಸುಮಾರು ಹದಿನೆಂಟು ವರ್ಷಗಳ ಕಾಲ ದೇವಸ್ಥಾನ ಮುಚ್ಚಬೇಕಾಗುತ್ತದಂತೆ. ಈ ರೀತಿಯ ಅದ್ಬುತಗಳ ಮತ್ತು ವಿಶೇಷತೆ ಹೊಂದಿರುವ ಈ ದೇವಾಲಯ ವಿಷ್ಣು ಭಕ್ತರಿಗೆ ಮತ್ತು ಶ್ರೀಕ್ರಷ್ಣ ಭಕ್ತರಿಗೆ ತುಂಬಾ ಪವಿತ್ರವಾದ ಕ್ಷೇತ್ರವಾಗಿದೆ. ಈ ಲೇಖನವನ್ನು ಶೇರ್ ಮಾಡಿ. ನಿಮ್ಮ ಸಕಲ ಸಮಸ್ಯೆಗಳಿಗೆ ಪರಿಹಾರ ಬೇಕು ಅಂದ್ರೆ ಈ ಸಂಖ್ಯೆಗೆ ಕೊಡಲೇ ಕರೆ ಮಾಡಿರಿ 95351 56490

LEAVE A REPLY

Please enter your comment!
Please enter your name here