ಮಾವಿನ ಎಲೆಗಳು ತಗೊಂಡು ಈ ರೀತಿ ಮಾಡಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ

0
574

ಇವತ್ತಿನ ಲೇಖನದಲ್ಲಿ ಮಾವಿನ ಎಲೆಗಳ ಕೆಲವೊಂದು ಆರೋಗ್ಯಕರ ಲಾಭಗಳ ಬಗ್ಗೆ ತಿಳಿದು ಕೊಳ್ಳೋಣ. ಮಾವಿನ ಹಣ್ಣಿನಂತ ಮಾವಿನ ಎಲೆಗಳಲ್ಲಿ ಸಾಕಷ್ಟು ರೀತಿಯ ಮೆಡಿಸಿನಲ್ ಪ್ರಾಪರ್ಟೀಸ್ ಇದೆ. ಆಯುರ್ವೇದದಲ್ಲಿ ಹಲವಾರು ಔಷಧ ಗಳಲ್ಲಿ ಮಾವಿನ ಎಲೆ ಗಳಾನ್ನು ಬಳಸುತ್ತಾರೆ. ಮಾವಿನ ಎಲೆಗಳಲ್ಲಿ ಸಾಕಷ್ಟು ರೀತಿಯ ವಿಟಮಿನ್ಸ್ ಮತ್ತು ಮಿನರಲ್ಸ್ ಗಳಿವೆ. ಮಾವಿನ ಎಲೆಗಳಲ್ಲಿ ವಿಟಮಿನ್ಸ್ ಗಳಾದ ವಿಟಮಿನ್ ಎ ವಿಟಮಿನ್ ಬಿ ವಿಟಮಿನ್ ಸಿ ಹಾಗೆ ಖನಿಜಾಂಶ ಗಳಾದ ಕಾಪರ್ ಪಸ್ಪರ್ಸ್ ಮಗ್ನೇಶಿಯಂ ಹೆಚ್ಚಾಗಿದೆ. ಈ ಮಾವಿನ ಎಲೆಗಳ ಹೆಲ್ತ್ ಬೆನಿಫಿಟ್ಸ್ ಬಗ್ಗೆ ಹೇಳೋದಾದ್ರೆ ಹೈ ಬ್ಲಡ್ ಪ್ರೆಶರ್ ಇರೋರಿಗೆ ಅಧಿಕ ರಕ್ತದೊತ್ತಡ ಇರೋರಿಗೆ ಮಾವಿನ ಎಲೆಗಳ ಹೆಲ್ಪ್ ಫುಲ್ ಆಗಿದೆ.

ಹಾಗೆ ಡೈಯಬಿಟಿಕ್ ರೋಗಿ ಗಳಿಗು ಈ ಎಲೆಗಳು ಫ್ರೆಂಡ್ಲಿ ಆಗಿದೆ. ಹೈ ಬೀಪಿ ಇರೋರು ಅಧಿಕ ರಕ್ತ ದೊಟ್ಟದ ಇರೋರು ಒಂದು ಲೋಟ ಬಿಸಿನೀರಿಗೆ ಒಂದೆರಡು ಮಾವಿನ ಎಲೆ ನೆನೆಸಿಡಿ ಮರುದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಮಾವಿನ ಎಲೆ ನೀರು ಕುಡಿಯುವುದರಿಂದ ಅಧಿಕ ರಕ್ತ ಒತ್ತಡ ಕಡಿಮೆ ಆಗುತ್ತೆ. ಅದೇ ರೀತಿ ಡಯಾಬಿಟಿಕ್ ರೋಗಿ ಸಹ ಈ ಮಾವಿನ ಎಲೆ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಅವರ ರಕ್ತದಲ್ಲಿ ಶುಗರ್ ಲೆವೆಲ್ ಕಂಟ್ರೋಲ್ ಆಗುತ್ತೆ. ಹಾಗೆ ಇನ್ಸುಲಿನ್ ತನ್ನ ಕೆಲಸವನ್ನು ಹೆಲ್ತ್ ಆಗಿ ನಡೆಸುತ್ತದೆ. ಇನ್ನು ಉಸಿರಾಟ ದ ಎಲ್ಲಾ ರೀತಿಯ ತೊಂದರೆಗೆ ಈ ಮಾವಿನ ಎಲೆಗಳು ರಾಮ ಬಾಣ ಇದ್ದಂತೆ.

ಆಸ್ತಮಾ ಖಾಯಿಲೆ ಇರುವವರು ಈ ಮಾವಿನ ಎಲೆ ಗಳ ರೆಸಿಪಿ ಅನ್ನು ಫಾಲೋ ಮಾಡ್ತಾ ಇದ್ದರೆ ಆಸ್ತಮಾ ಖಾಯಿಲೆ ಬೇಗ ಗುಣ ಆಗುತ್ತೆ ಹಾಗೆ ಕಿವಿ ನೋವು ಇದ್ದಾಗಲೂ ಈ ಮಾವಿನ ಎಲೆಗಳನ್ನು ಬಳಸಬಹುದು. ಕಿವಿಯಲ್ಲಿ ತುಂಬಾ ನೋವಿದ್ದಾಗ ಒಂದೆರಡು ಹನಿ ಮಾವಿನ ಎಲೆಗಳ ರಸ ಲೈಟ್ ಆಗಿ ಬಿಸಿ ಮಾಡಿ ಈ ಎರಡು ಹಾನಿಯನ್ನು ನೋವಿರುವ ಕಿವಿಯಲ್ಲಿ ಹಾಕಿದರೆ ಕಿವಿ ನೋವು ಕಡಿಮೆ ಆಗುತ್ತೆ. ಹಾಗೆ ಕೆಲವೊಮ್ಮೆ ಸುಟ್ಟ ಗಾಯಗಳು ಬೇಗ ವಾಸಿ ಆಗಲ್ಲ ಈ ಸುಟ್ಟ ಗಾಯಗಳ ಮೇಲೆ ಮಾವಿನ ಎಲೆಗಳನ್ನು ಸುಟ್ಟು ಅದರ ಎಲೆಗಳ ಭೂದಿಯನ್ನು ಹಚ್ಚುವುದರಿಂದ ಈ ಸುಟ್ಟ ಗಾಯಗಳು ಬೇಗ ವಾಸಿ ಆಗುತ್ತೆ. ಸುಟ್ಟ ಗಾಯಗಳಿಗೆ ಈ ಮಾವಿನ ಎಲೆಗಳು ಹೀಲರ್ ರೀತಿ ಕೆಲಸ ಮಾಡುತ್ತೆ ಹಾಗೆ ನಮ್ಮ ದೇಹದಲ್ಲಿ ಯೂರಿಕ್ ಆಸಿಡ್ ಹೆಚ್ಚು ಆದರೆ ಸಾಕಷ್ಟು ರೀತಿಯ ಖಾಯಿಲೆ ಗಳಿಗೆ ದಾರಿ ಮಾಡುತ್ತೆ. ಈ ಯೂರಿಕ್ ಆಸಿಡ್ ಕಡಿಮೆ ಮಾಡುವ ಗುಣ ಈ ಮಾವಿನ ಎಲೆಯಲ್ಲಿ ಇದೆ ಹಾಗೆ ಪ್ರತಿ ಒಬ್ಬರ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಒತ್ತಡ ಅಥವಾ ಸ್ಟ್ರೆಸ್ ಇದ್ದೆ ಇರುತ್ತೆ ಈ ಸ್ಟ್ರೆಸ್ ಕಡಿಮೆ ಮಾಡುವ ಗುಣ ಈ ಮಾವಿನ ಎಲೆ ಯಲ್ಲಿ ಇರುತ್ತೆ. ಈ ಮಾವಿನ ಎಲೆಯ ಟೀ ಅನ್ನು ನಾವು ಕುಡಿಯುತ್ತಾ ಇದ್ದರೆ ನಮಗೆ ಆಗುವ ಸ್ಟ್ರೆಸ್ ಕಡಿಮೆ ಆಗುತ್ತೆ.

ಇನ್ನು ಕಿಡ್ನಿ ಸ್ಟೋನ್ ಇರುವವರಿಗೂ ಸಹ ಮಾವಿನ ಎಲೆಗಳು ಹೆಲ್ಪ್ ಆಗಿವೆ. ಈ ಮಾವಿನ ಎಳೆಯ ರೆಸಿಪಿಯನ್ನು ತಮ್ಮ ಡಯಟ್ ನಲ್ಲಿ ಆಡ್ ಮಾಡಿಕೊಂಡರೆ ಕಿಡ್ನಿ ಸ್ಟೋನ್ ಕರಗುತ್ತೆ. ಮಾವಿನ ಎಲೆಯ ಟೀ ಕುಡಿದರೆ ಸಹ ಕಿಡ್ನಿ ಸಂಬಂಧಿಸಿದ ಖಾಯಿಲೆ ಗುಣ ಆಗುತ್ತೆ. ಹಾಗೆ ಗಂಟಲು ನೋವು ಇರುವಾಗಲೂ ಸಹಾ ಮಾವಿನ ಎಲೆ ಟೀ ಮಾಡಿ ಕುಡಿಯಿರಿ ಅದರಿಂದ ಗಾರ್ಗಲ್ ಮಾಡುವುದರಿಂದಲೂ ಗಂಟಲು ನೋವು ಕಡಿಮೆ ಆಗುತ್ತೆ ಹಾಗೆ ಈ ಮಾವಿನ ಎಲೆಗಳು ನಮ್ಮ ಹಲ್ಲಿನ ಆರೋಗ್ಯ ಕಾಪಾಡುತ್ತದೆ. ನಮ್ಮ ಹಲ್ಲಿನಲ್ಲಿ ಇರುವ ಗಳೀಜನ್ನು ಹೊರ ಹಾಕುತ್ತೆ. ಅಷ್ಟೆ ಅಲ್ಲ ಬಾಯಿ ನಲ್ಲಿನಿರುವ ದುರ್ಗಂಧ ದೂರ ಮಾಡುತ್ತೆ. ಇನ್ನು ಅತಿಸಾರ ಬೇಧಿ ಆದಾಗ ಮಾವಿನ ಎಲೆಗಳ ಪೌಡರ್ ಮಾಡಿ ಇಟ್ಟುಕೊಂಡರೆ ಅರ್ದ ಟೇಬಲ್ ಸ್ಪೂನ್ ಈ ಪೌಡರ್ ಒಂದು ಲೋಟ ಬಿಸಿ ನೀರಲ್ಲಿ ಹಾಕಿ ಕುಡಿದರೆ ಅತಿಸಾರ ಬೇಧಿ ಗುಣ ಆಗುತ್ತೆ. ಇಲ್ಲ ಅಂದರೆ ಇದರ ಕಷಾಯ ಮಾಡಿ ನೂ ಕುಡಿಯಬಹುದು. ಇವೆಲ್ಲವೂ ಮಾವಿನ ಎಲೆಗಳ ಆರೋಗ್ಯಕರ ಲಾಭಗಳು.

LEAVE A REPLY

Please enter your comment!
Please enter your name here