ಅಡುಗೆ ಮಾಡಿ ಉಳಿದಂತಹ ಎಣ್ಣೆಯನ್ನು ಮತ್ತೆ ಬಳಕೆ ಮಾಡಿದ್ರೆ ಕ್ಯಾನ್ಸರ್ ಬರುವ ಸಾಧ್ಯತೆ ಇದೆ

0
790

ಸಾಮಾನ್ಯವಾಗಿ ನಾವು ಅಡುಗೆಗೆ ಎಣ್ಣೆಯನ್ನು ಬಳಸುತ್ತೇವೆ ಅದರಲ್ಲೂ ಯವುವುದಾದರು ಕುರುಕಲು ತಿಂಡಿ ಅಂದರೆ ಚಕ್ಕಳಿ. ಕೊಡಬಳೆ. ಹಾಗೂ ಇನ್ನಿತರ ತಿಂಡಿಗಳನ್ನು ಮಾಡಲು ಎಣ್ಣೆಯನ್ನು ಬಳಸುತ್ತೇವೆ ಆದರೆ ಈ ರೀತಿಯ ತಿಂಡಿಗಳನ್ನು ಮಾಡುವಾಗ ಆ ಎಣ್ಣೆಯನ್ನು ಪೂರ್ತಿಯಾಗಿ ಬಳಸುವುದಿಲ್ಲ ಆ ಎಣ್ಣೆ ಇನ್ನು ಕೂಡ ಉಳಿಯುತ್ತದೆ ಇದನ್ನು ಗ್ರಾಮೀಣ ಭಾಗದಲ್ಲಿ ಕಂಟಳೆಣ್ಣೆ ಎಂದು ಕರೆಯುತ್ತಾರೆ ಅಂದರೆ ಕರಿದು ಉಳಿದಿರುವ ಎಣ್ಣೆ ಎಂದರ್ಥ ಇದನ್ನು ಮತ್ತೊಂದು ಅಡುಗೆಗೆ ಬಳಸುತ್ತರೆ ಆದರೆ ಹೀಗೆ ಬಳಸುವುದರಿಂದ ಏನು ಆಗುತ್ತದೆ ಎಂದು ನೋಡೋಣ ಬನ್ನಿ. ಕೊಬ್ಬಿನಲ್ಲಿ ಎರಡು ವಿಧಗಳು ಇವೆ ಅವು ಒಳ್ಳೆಯ ಕೊಬ್ಬು ಕೆಟ್ಟ ಕೊಬ್ಬು. ಒಂದು ಬಾರಿ ಎಣ್ಣೆಯನ್ನು ಕಾಯಿಸಬಹುದು ಆದರೆ ಅದು ಮತ್ತೆ ಮತ್ತೆ ಕಾದಾಗ ಎಣ್ಣೆಯಲ್ಲಿ ಟ್ರಾನ್ಸ್ ಫ್ಯಾಟಿ ಆಸಿಡ್ ಹೆಚ್ಚಾಗುತ್ತದೆ ಇದಕ್ಕೆ ಕಾರಣ ಎಣ್ಣೆ ಬಜ್ಜಿ ಹಿಟ್ಟು ಅಥವಾ ಪೂರಿ ಹಿಟ್ಟಿನಲ್ಲಿರುವ ನೀರಿನ ಅಂಶವನ್ನು ತೆಗೆದು ಹೊರಗೆ ಹಾಕುತ್ತದೆ . ಇಷ್ಟೇ ಅಲ್ಲದೆ ತಳದಲ್ಲಿ ಕರಕಲಾದ ಜಿಡ್ಡು ಸುಟ್ಟ ವಸ್ತುಗಳು ಎಣ್ಣೆಯಲ್ಲಿ ಉಳಿದು ಕೊಂಡಿರುತ್ತದೆ ಆದ್ದರಿಂದ ಎಣ್ಣೆಯನ್ನು ಮತ್ತೆ ಬಳಕೆ ಮಾಡಿದರೆ ಹೆಚ್ಚಿನ ಕೊಬ್ಬು ಶೇಖರವಾಗುತ್ತದೆ ಇದರಿಂದ ಆರೋಗ್ಯಕ್ಕೆ ತುಂಬಾ ಅಪಾಯ ಇದೆ.

ಎಣ್ಣೆಯನ್ನು ಮತ್ತೆ ಬಳಸುವುದರಿಂದ ರಕ್ತ ನಾಳಗಳಲ್ಲಿ ಕೊಬ್ಬು ಶೇಖರಣೆ ಆಗುತ್ತದೆ. ಹೃದಯದ ಸಮಸ್ಯೆಗಳು ಹೆಚ್ಚುತ್ತವೆ. ಹಲವಾರು ರೀತಿಯ ಅನಾರೋಗ್ಯದ ಸಮಸ್ಯೆಗಳು ಸೃಷ್ಟಿಆಗುತ್ತದೆ. ಕೆಮ್ಮು ಕಫ ಕಟ್ಟಿಕೊಳ್ಳುವುದು ಹೆಚ್ಚುತ್ತದೆ. ಮೂಳೆಗಳ ಗಟ್ಟಿತನ ಹೋಗುತ್ತದೆ. ಕರಿದ ಎಣ್ಣೆಯನ್ನು ಮತ್ತೆ ಬಳಸುವುದರಿಂದ ಜ್ಞಾಪಕ ಶಕ್ತಿ ಕೂಡ ಕುಗ್ಗುತ್ತದೆ. ಕರಿದ ಎಣ್ಣೆಯನ್ನು ಮತ್ತೆ ಬಳಸಿ ತಯಾರಿಸಿದ ಆಹಾರವನ್ನು ಸೇವಿಸುವುದರಿಂದ ದೇಹ ಶಕ್ತಿ ಕುಗ್ಗುತ್ತದೆ. ದೇಹದ ತೂಕ ಹೆಚ್ಚಾಗುತ್ತದೆ. ದೇಹದಲ್ಲಿ ಬೊಜ್ಜು ತುಂಬಿಕೊಳ್ಳುತ್ತದೆ. ಆದರೆ ನಾವು ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಬಳಸಲೇ ಬೇಕಾದ ಅನಿವಾರ್ಯ ಬಂದಾಗ ಆ ಎಣ್ಣೆಯನ್ನು ಚೆನ್ನಾಗಿ ಸೋಸಿ ನಂತರ ಬಳಸಬೇಕು.ಆದರೂ ಕೂಡ ಆ ಎಣ್ಣೆ ಆರೋಗ್ಯಯುತ ಆಗಿರುವುದಿಲ್ಲ.

ಹಾಗಾಗಿ ಮೊದಲು ಎಣ್ಣೆಯನ್ನು ಬಳಸುವ ಮುಂಚೆ ಯಾವ ಆಹಾರ ಮಾಡಲು ಎಷ್ಟು ಎಣ್ಣೆ ಬೇಕಾಗುತ್ತದೆ ಎಂದು ನಿಖರವಾಗಿ ತಿಳಿದು ಎಣ್ಣೆಯನ್ನು ಬಳಸಬೇಕು ಒಮ್ಮೆ ಬಳಸಿದ ಎಣ್ಣೆಯನ್ನು ಮತ್ತೆ ಬಳಸದ ಹಾಗೆ ನೋಡಿಕೊಳ್ಳುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಎಣ್ಣೆಯನ್ನು ಮಿತವಾಗಿ ಬಳಸಿ ಎಣ್ಣೆ ಆರೋಗ್ಯಕ್ಕೆ ಒಳ್ಳೆಯದಲ್ಲ ಅದರಲ್ಲೂ ಕರಿದ ಎಣ್ಣೆ ಆರೋಗ್ಯಕ್ಕೆ ಮಾರಕ. ಬಳಕೆ ಮಾಡಲೇ ಬೇಕಾದ ಸಂಧರ್ಭದಲ್ಲಿ ಎಣ್ಣೆಯನ್ನು ಬಳಕೆ ಮಾಡಲೇ ಬೇಕಾದ ಸಂಧರ್ಭ ಬಂದರೆ ಎಣ್ಣೆಯನ್ನು ಚೆನ್ನಾಗಿ ಸೋಸಿ ಮರು ಬಳಕೆ ಮಾಡಿ ಇದು ಅಪಾಯವನ್ನು ಕೊಂಚ ಮಟ್ಟಿಗೆ ತಪ್ಪಿಸುತ್ತದೆ. ಈ ಒಂದು ಆರೋಗ್ಯ ಲೇಖನ ಮರೆಯದೇ ಶೇರ್ ಮಾಡಿರಿ ನಿಮ್ಮ ಎಲ್ಲ ಸ್ನೇಹಿತರಿಗೂ ಮರೆಯದೇ ತಿಳಿಸಿರಿ.

LEAVE A REPLY

Please enter your comment!
Please enter your name here